Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೆರಿಗೆಯ ಬಳಿಕ ದೈಹಿಕ ಆಸಕ್ತಿ ಕಡಿಮೆಯಾಗಿದೆಯೇ? ದಾಂಪತ್ಯದಲ್ಲಿ ಮಾಧುರ್ಯ ಹೆಚ್ಚಿಸುವುದು ಹೇಗೆ?
ತಾಯ್ತನದ ಬಗ್ಗೆ ಕೆಲವೊಂದು ಫ್ಯಾಂಟಸಿ ವೀಡಿಯೋಗಳನ್ನು ನೋಡುವಾಗ ಅರೇ.. ತಾಯ್ತನ ಎಂಬುವುದು ಇಷ್ಟೊಂದು ಸುಲಭವೇ ಎಂದನಿಸದೆ ಇರಲ್ಲ. ಆದರೆ ತಾಯ್ತನ ಎಂಬುವುದು ಸುಲಭದ ಕಾರ್ಯ ಅಲ್ಲವೇ ಅಲ್ಲ, ಗರ್ಭಿಣಿಯಾದಾಗ ಅವಳ ದೇಹದಲ್ಲಿ ತುಂಬಾನೇ ಬದಲಾವಣೆಯಾಗುತ್ತದೆ, ಹೆರಿಗೆಯಾದ ಮೇಲೂ ಶರೀರದಲ್ಲೂ ಅನೇಕ ಬದಲಾವಣೆ ಉಂಟಾಗುವುದು, ಹಾರ್ಮೋನ್‌ಗಳು ಬದಲಾಗುವುದು. ಮಗುವಾದ ಮೇಲೆ ಹೆಂಡತಿ ಸಂಪೂರ್ಣ ಬದಲಾಗಿದ್ದಾಳೆ, ಅವಳು ನನ್ನತ್ತ ಆಸಕ್ತಿ ತೋರುತ್ತಿಲ್ಲ ಎಂದು ಕೆಲ ಪುರುಷರಿಗೆ ಫೀಲ್ ಆಗಲಾರಂಭಿಸುವುದು.

ಹೆರಿಗೆಯ ಬಳಿಕ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುವುದೇ?
ಅಧ್ಯಯನ ವರದಿ ಪ್ರಕಾರ ತುಂಬಾ ಮಹಿಳೆಯರಿಗೆ ಹೆರಿಗೆಯ ಬಳಿಕ ಕೆಲವು ತಿಂಗಳಿನವರೆಗೆ ಲೈಂಗಿಕ ಆಸಕ್ತಿ ಉಂಟಾಗುವುದಿಲ್ಲ. ಹೆರಿಗೆಯಾಗಿ 3-4 ತಿಂಗಳಾದ ಮೇಲೆ ಎಲ್ಲವೂ ಮೊದಲಿನಂತಾಗುವುದು. ಕೆಲವರಿಗಂತೂ ಹೆರಿಗೆಯಾಗಿ 6 ತಿಂಗಳಾದರೂ ಲೈಂಗಿಕ ಆಸಕ್ತಿ ಉಂಟಾಗುವುದಿಲ್ಲ. ಹೆರಿಗೆಯ ಬಳಿಕ ಮೊದಲ ಕೆಲವು ತಿಂಗಳಾದರೆ ಒಕೆ, ಆದರೆ 6 ತಿಂಗಳು ಕಳೆದರೂ ಪತ್ನಿ ಆಸಕ್ತಿ ತೋರಿಸುತ್ತಿಲ್ಲ ಎಂದಾದರೆ ಪತಿಗೆ ಅತೃಪ್ತಿ ಉಂಟಾಗುವುದು. ಲೈಂಗಿಕ ಅತೃಪ್ತಿಯಿಂದಾಗಿ ಇಬ್ಬರ ನಡುವೆ ಬಾಂಧವ್ಯದಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡಬಹುದು.
ಹೆರಿಗೆಯ ಬಳಿಕ ಮಹಿಳೆಯರಲ್ಲಿ ಅನೇಕ ಕಾರಣಗಳಿಂದ ಲೈಂಗಿಕ ಆಸಕ್ತಿ ಕಡಿಮೆಯಾಗಬಹುದು
* ಹಾರ್ಮೋನ್‌ಗಳಲ್ಲಾದ ಬದಲಾವಣೆ
* ಸುಸ್ತು
* ನಿದ್ದೆ ಕಡಿಮೆಯಾಗಿರುವುದು
* ಬದಲಾದ ದೇಹದ ಆಕೃತಿಯಿಂದಾಗಿ ಕೀಳೆರಿಮೆ
ಹೀಗೆ ಅನೇಕ ಕಾರಣಗಳಿಂದಾಗಿ ಲೈಂಗಿಕ ಆಸಕ್ತಿ ಕಡಿಮೆಯಾಗಬಹುದು.
ದಾಂಪತ್ಯವನ್ನು ಮೊದಲಿನಂತಾಗಿಸಲು ಏನು ಮಾಡಬೇಕು?
ತಾಯಿಯಾದ ಮೇಲೆ ದೈಹಿಕವಾಗಿ, ಮಾನಸಿಕವಾಗಿ ಅವಳಲ್ಲಿ ತುಂಬಾ ಬದಲಾವಣೆಗಳಾಗಿರುತ್ತದೆ. ಎಷ್ಟೋ ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆಯುತ್ತಾಳೆ, ಅವಳ ದೇಹ ತುಂಬಾ ಬಳಲಿರುತ್ತಾರೆ, ಆವಾಗ ಪತಿ ಅವಳ ಬಳಿ ಬಂದರೆ ಅವಳಲ್ಲಿ ಯಾವುದೇ ಆಸಕ್ತಿ ಇರುವುದಿಲ್ಲ.
ಅವಳಿಗೆ ಪತಿಯ ಬೆಂಬಲ ಅಗ್ಯತವಾಗಿರುತ್ತದೆ
ಪತಿ ಪತ್ನಿಗೆ ಮಾನಸಿಕ ಬೆಂಬಲ ನೀಡಬೇಕಾಗುತ್ತದೆ: ಅವಳಿಂದ ದೈಹಿಕ ಸುಖ ಬಯಸುವ ಮುನ್ನ ಅವಳಿಗೆ ಮಾನಸಿಕ ಬೆಂಬಲ ನೀಡಬೇಕಾಗುತ್ತದೆ. ಅಂದರೆ ಮಗುವಿನ ಜವಾಬ್ದಾರಿ ಸಂಪೂರ್ಣ ಅವಳಿಗೆ ನೀಡದೆ, ಮಗುವನ್ನು ಸಮಧಾನ ಮಾಡುವುದು, ಮಗುವಿನ ಆರೈಕೆಯಲ್ಲಿ ಸಹಾಯ ಮಾಡುವುದು ಮಾಡಬೇಕಾಗುತ್ತದೆ. ಇದರಿಂದ ಅವಳಿಗೂ ವಿಶ್ರಾಂತಿ ಸಿಗುವುದರಿಂದ ದೇಹದ ಆಯಾಸ ಕಡಿಮೆಯಾಗುವುದು. ಆವಾಗ ಅವಳಿಗೆ ನಿಮ್ಮ ಬೇಕು-ಬೇಡಗಳ ಕಡೆ ಗಮನ ಹರಿಸಲು ಸಾಧ್ಯವಾಗುವುದು.
ಅವಳ ದೇಹದ ಬದಲಾವಣೆ ಬಗ್ಗೆ ತಮಾಷೆ ಮಾಡಬೇಡಿ
ಅವಳ ದೇಹದಲ್ಲಿ ಹಲವಾರು ಬದಲಾವಣೆಯಾಗಿದೆ ಎಂದರೆ ನಿಮ್ಮ ಮಗುವಿಗೆ ತಾಯಿಯಾಗಿರುವುದರಿಂದ ಈ ಬದಲಾವಣೆಯಾಗಿದೆ ಎಂಬುವುದನ್ನು ಮರೆಯಬೇಡಿ. ಅವಳಿಗೆ ಬಾಡಿ ಶೇಮ್ ತಮಾಷೆಗೆ ಮಾಡಿದರೂ ಅದು ಅವಳ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಬಹುದು. ಆದ್ದರಿಂದ ಅವಳ ದೇಹದ ಬದಲಾವಣೆಯ ಬಗ್ಗೆ ಅವಳಲ್ಲಿಯೇ ಕೀಳೆರಿಮೆ ಇದ್ದರೆ ನೀವು ಧೈರ್ಯ ತುಂಬುವ ಮಾತುಗಳಿಂದ ಅವಳ ಮನಸ್ಸಿನಲ್ಲಿ ಧನಾತ್ಮಕ ಬದಲಾವಣೆ ತರಬೇಕಾಗಿದೆ.
ಮಾನಸಿಕವಾಗಿ ಹತ್ತಿರವಾಗಿ
ಹೆರಿಗೆಯ ಬಳಿಕ ಅನೇಕ ಕಾರಣಗಳಿಂದ ಪ್ರಾರಂಭದಲ್ಲಿ ಲೈಂಗಿಕ ಆಸಕ್ತಿ ಬರದಿದ್ದರೆ ಅದೇನೂ ದೊಡ್ಡ ತಪ್ಪು ಎಂಬಂತೆ ಭಾವಿಸಬೇಡಿ. ಒಬ್ಬರಿಗೊಬ್ಬರು ಮಾನಸಿಕವಾಗಿ ಹತ್ತಿರವಾಗಿ. ದಾಂಪತ್ಯ ಗಟ್ಟಿಯಾಗಲೂ ಲೈಂಗಿಕ ತೃಪ್ತಿ ತುಂಬಾ ಅವಶ್ಯಕವಾಗಿರುತ್ತದೆ, ಆದರೆ ಮಾನಸಿಕವಾಗಿ ಇಬ್ಬರೂ ಹತ್ತಿರವಾಗಿದ್ದರೆ ಇದು ಅಷ್ಟು ಮುಖ್ಯವಾಗುವುದಿಲ್ಲ. ದೈಹಿಕವಾಗಿ ದೂರವಾಗಿರುವುದು ನಿರಂತರವಲ್ಲ, ಕೆಲವು ತಿಂಗಳುಗಳಲ್ಲಿ ಎಲ್ಲವೂ ಸರಿಹೋಗುವುದು.
ಹೆಚ್ಚೆಂದರೆ 6-8 ವರ್ಷಗಳವರೆಗೆ ಈ ಅಂತರವಿರುತ್ತದೆ, ನಂತರ ಎಲ್ಲವೂ ಸರಿ ಹೋಗಬಹುದು, ಅದರ ಬಳಿಕವೂ ನಿಮಗೆ ಲೈಂಗಿಕ ಆಸಕ್ತಿ ಬರದಿದ್ದರೆ ನಿಮ್ಮ ವೈದ್ಯರ ಬಳಿ ನಿಮ್ಮ ಸಮಸ್ಯೆ ಹೇಳಲು ಹಿಂಜರಿಯಬೇಡಿ. ದೈಹಿಕವಾಗಿ ಒಂದಾಗದಿದ್ದರೂ ಒಂದು ಬಿಸಿ ಅಪ್ಪುಗೆ, ಕಿಸ್ ಎಲ್ಲವೂ ನಿಮ್ಮ ದಾಂಪತ್ಯ ಜೀವನದಲ್ಲಿ ಮಾಧುರ್ಯ ತುಂಬುವುದು, ಅಲ್ಲದೆ ಲೈಂಗಿಕ ಆಸಕ್ತಿ ಹೆಚ್ಚಿಸುವಂತೆ ಮಾಡುವುದು. ಆದ್ದರಿಂದ ದೈಹಿಕ ಸಂಪರ್ಕ ಇಲ್ಲದಿರುವ ಸಮಯದಲ್ಲಿ ಎಮೋಷನಲ್ ಆಗಿಯೂ ದೂರವಿರಲು ಪ್ರಯತ್ನಿಸಬೇಡಿ...



Click it and Unblock the Notifications
