Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕ್ಕಳು ಕಣ್ಣರಳಿಸಿ ನೋಡೋದ್ಯಾಕೆ? ಮಕ್ಕಳ ದೃಷ್ಟಿಯ ಬಗ್ಗೆ ಪೋಷಕರು ತಿಳಿದುಕೊಳ್ಳಲೇ ಬೇಕಾದ ವಿಚಾರಗಳು
ಚಿಕ್ಕಂದಿನಲ್ಲಿ ಮಕ್ಕಳು ಕಣ್ಣರಳಿಸಿ ನೋಡೋದ್ಯಾಕೆ? ಇದರ ಹಿಂದಿನ ಕಾರಣಗಳೇನು?
ಮಕ್ಕಳು ಕಣ್ಣರಳಿಸಿ ನೋಡೋದ್ಯಾಕೆ? ಮಕ್ಕಳ ದೃಷ್ಟಿಯ ಬಗ್ಗೆ ಪೋಷಕರು ತಿಳಿದುಕೊಳ್ಳಲೇ ಬೇಕಾದ ವಿಚಾರಗಳು ನಿಮ್ಮ ಮಕ್ಕಳು ಕಣ್ಣರಳಿಸಿ ನೋಡುತ್ತಾರಾ? ಮಕ್ಕಳ ದೃಷ್ಟಿಯ ಬಗ್ಗೆ ಪೋಷಕರು ಈ ವಿಚಾರಗಳನ್ನು ತಿಳಿದುಕೊಳ್ಳಲೇಬೇಕು
ಮಕ್ಕಳು ಚಿಕ್ಕಂದಿನಿಂದ ದೊಡ್ಡವರಾಗುವರೆಗೆ ಹಲವಾರು ಬದಲಾವಣೆಗಳನ್ನು ನಾವು ಅವರಲ್ಲಿ ಗುರುತಿಸುತ್ತೇವೆ. ಅವರ ನಗು, ಅವರ ಅಳು, ಅವರು ಮಾಡುವ ಪ್ರತಿಯೊಂದು ಚಟುವಟಿಕೆಗಳು ನಮಗೆ ಹೊಸತು ಅನ್ನಿಸದೇ ಇರೋದಿಲ್ಲ. ಅದ್ರಲ್ಲೂ ಮೊದಲ ಮಗುವಿನ ಪೋಷಕರಾದರೆ ಅವರಿಗೆ ಮಕ್ಕಳು ಏನೇ ಮಾಡಿದರು ಅವರ್ಯಾಕೆ ಹೀಗೆ ಮಾಡುತ್ತಿದ್ದಾರೆ ಅನ್ನೋ ಪ್ರಶ್ನೆ ಕಾಡದೇ ಇರೋದಿಲ್ಲ. ಅದ್ರಲ್ಲೂ ಮುಖ್ಯವಾಗಿ ಮಕ್ಕಳು ಕಣ್ಣರಳಿಸಿ ಒಂದೇ ವಸ್ತುವಿನ ಕಡೆಗೆ ದಿಟ್ಟಿಸಿ ನೋಡುತ್ತಿರೋದನ್ನು ಖಂಡಿತ ನೀವು ಗಮನಿಸಿರುತ್ತೀರಿ. ಹಾಗಾದ್ರೆ ಪುಟ್ಟ ಮಕ್ಕಳು ಕಣ್ಣರಳಿಸಿ ಒಂದೇ ಕಡೆ ನೋಡೋದ್ಯಾಕೆ? ಇದರ ಹಿಂದಿನ ಕಾರಣ ಏನು ಅನ್ನೋದನ್ನ ತಿಳಿಯೋಣ.

ಮಕ್ಕಳ ದೃಷ್ಟಿಯ ಬಗ್ಗೆ ಮೊದಲು ತಿಳಿದುಕೊಳ್ಳೋಣ :
* ಮಕ್ಕಳ ಕಣ್ಣಿಗೆ ಅತಿಯಾದ ಬೆಳಕು ಬೀಳದಂತೆ ನೋಡಿಕೊಳ್ಳುವುದು ಪೋಷಕರಾದ ನಿಮ್ಮ ಕರ್ತವ್ಯ. ಯಾಕಂದ್ರೆ ಮಕ್ಕಳ ಕಣ್ಣಿಗೆ ತೀವ್ರ ಬೆಳಕನ್ನು ತಡೆದುಕೊಳ್ಳುವ ಶಕ್ತಿ ಇರೋದಿಲ್ಲ.
* ಮಕ್ಕಳು ತಮಗೆ ಹತ್ತಿರವಿರುವ ವಸ್ತುಗಳ ಮೇಲೆ ಬೇಗನೆ ದೃಷ್ಟಿ ಹಾಯಿಸುತ್ತಾರೆ. ಹೆಚ್ಚಾಗಿ ಅವರು ದೂರಕ್ಕೆ ನೋಡೋದಿಲ್ಲ ಯಾಕಂದ್ರೆ ಅವರ ಮಧ್ಯಂತರ ದೃಷ್ಟಿ ಆಗಷ್ಟೇ ಬೆಳವಣಿಗೆ ಆಗುತ್ತಿರುತ್ತದೆ.
* ನೀವು ಶಿಶುವನ್ನು ಮೊದಲ ಎರಡು ತಿಂಗಳು ಸರಿಯಾಗಿ ಗಮನಿಸಿ ಆ ಸಮಯದಲ್ಲಿ ಅವರು ಹೆಚ್ಚಾಗಿ ಅತ್ತ- ಇತ್ತ ಕಣ್ಣಾಡಿಸುತ್ತಿರುತ್ತಾರೆ.
* ಮಕ್ಕಳಿಗೆ ಮೂರು ತಿಂಗಳು ತುಂಬುತ್ತಿದ್ದಂತೆ ಅವರು 8 ರಿಂದ 12 ಇಂಚು ದೂರವಿರುವ ವಸ್ತುಗಳನ್ನು ನೋಡೋದಕ್ಕೆ ಶುರು ಮಾಡ್ತಾರೆ.
* ಮಕ್ಕಳಿಗೆ ಐದು ತಿಂಗಳು ತುಂಬಿದ ನಂತರವಷ್ಟೇ ಅವರು ಹೆಚ್ಚು ದೂರದ ವಸ್ತುಗಳನ್ನು ಗರುತಿಸೋದಕ್ಕೆ ಶಕ್ತರಾಗುತ್ತಾರೆ.
ಮಕ್ಕಳು ಕಣ್ಣರಳಿಸಿ ನೋಡಲು ಕಾರಣವೇನು?
ಮಕ್ಕಳು ಚಿಕ್ಕದಿರುವಾಗ ಒಂದು ಕಡೆ ದೃಷ್ಟಿ ಇಟ್ಟರೆ ತುಂಬಾ ಹೊತ್ತು ಅಲ್ಲೇ ಅವರ ದೃಷ್ಟಿ ನೆಟ್ಟಿರುತ್ತದೆ. ಅದು ಮನುಷ್ಯರು ಅಥವಾ ಒಂದು ವಸ್ತುವು ಕೂಡ ಆಗಿರಬಹುದು. ಸಣ್ಣ ವಯಸ್ಸಿನಲ್ಲಿ ಮಕ್ಕಳ ದೃಷ್ಟಿ ಹೆಚ್ಚಾಗಿ ಅಭಿವೃದ್ಧಿ ಆಗಿರೋದಿಲ್ಲ. ಹೀಗಾಗಿ ಆಕರ್ಷಕ ವಸ್ತುಗಳನ್ನೇ ಹೆಚ್ಚಾಗಿ ನೋಡೋದಕ್ಕೆ ಇಷ್ಟ ಪಡುತ್ತಾರೆ. ಚಲಿಸುವ ವಸ್ತುಗಳು, ಫ್ಯಾನ್, ವಾಹನಗಳು ಅಥವಾ ಮನುಷ್ಯರ ಮುಖವನ್ನೇ ಅವರು ನೋಡುತ್ತಿರುತ್ತಾರೆ. ಮಕ್ಕಳಿಗೆ ಆರರಿಂದ ಎಂಟು ತಿಂಗಳು ತುಂಬಿದ ಮೇಲೆ ಅವರ ಕಣ್ಣಿನ ದೃಷ್ಟಿ ನಿಧಾನವಾಗಿ ಅಭಿವೃದ್ಧಿಯಾಗುತ್ತದೆ.
ಯಾವುದರ ಮೇಲೆ ಮಕ್ಕಳು ಹೆಚ್ಚಾಗಿ ದೃಷ್ಟಿ ಇಡುತ್ತಾರೆ?
1. ಚಲಿಸುವ ವಸ್ತುಗಳು
ನೀವು ಮಕ್ಕಳನ್ನು ಗಮನಿಸಿರ್ಬಹುದು ಅವರ ಕಣ್ಣು ಹೆಚ್ಚಾಗಿ ಚಲಿಸುವ ಫ್ಯಾನ್‌ನ ಮೇಲಿರುತ್ತದೆ. ಒಂದೇ ಸಮನೆ ಅವರು ಚಲಿಸುವ ಫ್ಯಾನ್ ನೋಡುತ್ತಿರುತ್ತಾರೆ. ಇದರಿಂದ ಅವರ ಮೆದುಳಿಗೂ ಒಳ್ಳೆಯದು. ಜೊತೆಗೆ ಅವರ ದೃಷ್ಟಿಯೂ ಅಭಿವೃದ್ಧಿಯಾಗುತ್ತದೆ. ಹೀಗಾಗಿ ಮಕ್ಕಳು ಏನಾದರೂ ಫ್ಯಾನ್ ಕಡೆಗೆ ದೃಷ್ಟಿ ಇಟ್ಟರೆ ಪೋಷಕರು ಭಯ ಪಡುವ ಅಗತ್ಯವಿಲ್ಲ.
2. ಆಕರ್ಷಕ ಮುಖವನ್ನು ನೋಡುತ್ತಾರೆ
ಮಕ್ಕಳು ಹೆಚ್ಚಾಗಿ ಅವರನ್ನು ಯಾರು ಹಿಡಿದುಕೊಂಡಿರುತ್ತಾರೋ ಅವರ ಮುಖವನ್ನೇ ದಿಟ್ಟಿಸಿ ನೋಡುತ್ತಾರೆ. ಅವರ ಮುಖದಲ್ಲಿ ವಿಶೇಷವಾಗಿ ಏನಾದರೂ ಕಂಡರೆ ಅದನ್ನು ಮುಟ್ಟಲು ಪ್ರಯತ್ನಿಸುತ್ತಾರೆ. ವಿಶೇಷವಾಗಿ ಮಹಿಳೆಯ ಕಿವಿಯೋಲೆ, ಮೂಗು ಬೊಟ್ಟು, ಬಿಂದಿಯನ್ನು ಎಳೆಯಲು ಪ್ರಯತ್ನಿಸುತ್ತಾರೆ. ಕಾರಣ ಇದೆಲ್ಲಾ ಅವರಿಗೆ ಹೊಸತು ಅನ್ನಿಸುತ್ತದೆ.
3. ಬಣ್ಣ ಬಣ್ಣದ ವಸ್ತುಗಳ ಕಡೆಗೆ ಆಕರ್ಷಿತರಾಗುತ್ತಾರೆ
ಮಕ್ಕಳಿಗೆ ಬಣ್ಣದ ಬಣ್ಣದ ವಸ್ತುಗಳು ಇಷ್ಟವಾಗುತ್ತದೆ. ಕಲರ್‌ಫುಲ್ ಆಗಿ ಏನೇ ಇದ್ದರೂ ಕೂಡ ಅದನ್ನು ಅವರು ಇಷ್ಟ ಪಡುತ್ತಾರೆ. ಕೊಂಚ ದೊಡ್ಡವರಾದರೆ ಅದೇ ಬೇಕು ಎಂದು ಅವರು ಹಠ ಹಿಡಿಯುತ್ತಾರೆ. ಒಂದು ವೇಳೆ ನೀವು ಅವರಿಂದ ಅದನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರೆ ಅಳುತ್ತಾರೆ. ಹೀಗೆ ಬಣ್ಣಬಣ್ಣವಾಗಿ ಏನೇ ಕಂಡರೂ ಅದನ್ನು ಅವರು ದಿಟ್ಟಿಸಿ ನೋಡುತ್ತಾರೆ.
4. ಸುಮ್ಮನೇ ಏನನ್ನೋ ನೋಡಿ ನಗುತ್ತಾರೆ
ಕೆಲವೊಂದು ಸಾರಿ ಮಕ್ಕಳು ಮೇಲೆ ನೋಡಿ ನಗುತ್ತಿರುತ್ತಾರೆ. ಮಕ್ಕಳು ಯಾಕೆ ಹೀಗೆ ಮಾಡುತ್ತಾರೆ ಅನ್ನೋ ಪ್ರಶ್ನೆ ಪೋಷಕರನ್ನು ಕಾಡುತ್ತಿರಬಹುದು. ಇನ್ನೂ ಕೆಲವು ಸಾರಿ ಸುಮ್ಮನೇ ಒಂದು ಕಡೆ ನೋಡಿ ಅಲ್ಲೇ ಮೈ ಮರೆಯುತ್ತಾರೆ. ಅವರ ದೃಷ್ಟಿ ಬೇರೆಲ್ಲೂ ಹೋಗದೇ ಒಂದೇ ವಸ್ತುವನ್ನು ದಿಟ್ಟಿಸಿ ನೋಡುತ್ತಾರೆ. ಇದಕ್ಕಾಗಿ ಪೋಷಕರು ಭಯ ಪಡುವ ಅಗತ್ಯವಿಲ್ಲ. ಯಾಕಂದ್ರೆ ಮಕ್ಕಳ ದೃಷ್ಟಿ ಅಭಿವೃದ್ಧಿಯಾಗುತ್ತಿದೆ ಎಂದರ್ಥ.
ಹೀಗಾಗಿ ಮಕ್ಕಳು ಕಣ್ಣರಳಿಸಿ ನೋಡುತ್ತಿದ್ದರೆ ಪೋಷಕರು ಭಯ ಪಡುವ ಅಗತ್ಯವೇ ಇಲ್ಲ. ಇದು ಮಕ್ಕಳ ಸಹಜ ಗುಣ. ಬೆಳೆಯುತ್ತಿರುವ ಸಂದರ್ಭದಲ್ಲಿ ಮಕ್ಕಳಲ್ಲಿ ಈ ಎಲ್ಲಾ ಬದಲಾವಣೆಗಳು ನಡೆಯೋದು ಸಾಮಾನ್ಯ.



Click it and Unblock the Notifications


