Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪೋಷಕರೇ, ಮಕ್ಕಳು ನಿದ್ದೆಯಲ್ಲಿ ಕೈ, ಕಾಲು ಎತ್ತಿ ಹಾಕೋದ್ಯಾಕೆ ಗೊತ್ತೆ?
ಚಿಕ್ಕ ಮಕ್ಕಳನ್ನು ಮಲಗಿಸೋದಕ್ಕೆ ಹರ ಸಾಹಸ ಪಡಬೇಕಾಗುತ್ತದೆ. ಆದರೆ ಕೆಲವೊಂದು ಸಲ ಮಕ್ಕಳನ್ನು ನಾವು ಹಿಡಿದುಕೊಂಡಿದ್ದಂತೆ ಅಲ್ಲೇ ನಿದ್ದೆ ಮಾಡುತ್ತಾರೆ. ಇನ್ನೂ ಕೆಲವು ಮಕ್ಕಳ ಆಟವಾಡುತ್ತಾ, ಅಳುತ್ತಾ ಅಲ್ಲಿಗೆ ನಿದ್ದೆ ಹೋಗುತ್ತಾರೆ. ಸಾಮಾನ್ಯವಾಗಿ ಮಕ್ಕಳು ಮಲಗಿದ್ದಾಗ ನೀವು ಅವರನ್ನು ಗಮನಿಸಿರಬಹುದು ನಿದ್ದೆಯಲ್ಲಿ ಒದೆಯುವುದು, ಕೈಕುಲುಕುವುದು, ಇದ್ದಕ್ಕಿದ್ದ ಹಾಗೇ ಎದ್ದು ಬಿಡುತ್ತಾರೆ. ಅಷ್ಟಕ್ಕು ಮಕ್ಕಳು ನಿದ್ದೆಯಲ್ಲಿ ಹೀಗೆಲ್ಲಾ ಮಾಡೋದ್ಯಾಕೆ? ಇದರ ಹಿಂದಿನ ಕಾರಣವೇನು ಗೊತ್ತಾ? ತಿಳಿದುಕೊಳ್ಳೋಣ.

ಮಕ್ಕಳು ನಿದ್ದೆಯಲ್ಲಿದ್ದಾಗ ಒದಿಯೋದ್ಯಾಕೆ?
1. ಸಿಕ್ಕಾಪಟ್ಟೆ ಸುಸ್ತಾದಾಗ
ಮಕ್ಕಳು ಕೆಲವೊಂದು ಸಲ ಸಿಕ್ಕಾಪಟ್ಟೆ ಸುಸ್ತಾದಾಗ ಹಾಗೆಯೇ ನಿದ್ದೆ ಹೋಗುತ್ತಾರೆ. ಇದನ್ನು ಸುಖ ನಿದ್ದೆ ಅಂತ ಹೇಳೋದಿಕ್ಕಾಗೋದಿಲ್ಲ.ಆಟ, ಅಳು ಇತ್ಯಾದಿ ಚಟುವಟಿಕೆಗಳನ್ನು ಮಾಡುತ್ತಿದ್ದಾಗ ಸುಸ್ತಾದಂತಹ ಅನುಭವವಾಗುತ್ತದೆ. ಇಂತಹ ಸಂದರ್ಭದಲ್ಲಿ ಮಕ್ಕಳು ನಿದ್ದೆ ಹೋದಾಗ ನಿದ್ದೆಯಲ್ಲಿಯೂ ಕೂಡ ಅವರು ಹಗಲಿನಲ್ಲಿ ಮಾಡುತ್ತಿದ್ದ ಚಟುವಟಿಯನ್ನೇ ಮಾಡಲಾರಂಭಿಸುತ್ತಾರೆ. ಹೀಗಾಗಿ ಅವರು ನಿದ್ದೆಯಲ್ಲಿ ಕೈ, ಕಾಲುಗಳನ್ನು ಎತ್ತಿ ಹಾಕುತ್ತಿರುತ್ತಾರೆ.
2. ಮಕ್ಕಳ ನಿದ್ದೆ ಅವರ ಜೈವಿಕ ಗಡಿಯಾರಕ್ಕೆ ಹೋಲದಿದ್ದಾಗ
ಸಾಮಾನ್ಯವಾಗಿ ಮನುಷ್ಯರು ನಿದ್ದೆ ಮಾಡೋದಕ್ಕೆ ಒಂದೇ ಸಮಯವನ್ನು ಪಾಲನೆ ಮಾಡುತ್ತಾರೆ. ರಾತ್ರಿ ಸಾಮಾನ್ಯವಾಗಿ ಒಂದೇ ಸಮಯದಲ್ಲಿ ನಿದ್ದೆ ಮಾಡ್ತೀವಿ. ಕೆಲವೊಂದು ಸಲ ಮೂವತ್ತು ನಿಮಿಷ ಹೆಚ್ಚು ಕಡಿಮೆ ಆಗಬಹುದಷ್ಟೇ. ದೊಡ್ಡರಿಗೆ ಹೋಲಿಕೆ ಮಾಡಿದ್ರೆ ಮಕ್ಕಳು ಹೆಚ್ಚು ಹೊತ್ತು ಮಲಗುತ್ತಾರೆ. ಆದರೆ ಕೆಲವೊಂದು ಸಲ ಹೊತ್ತಲ್ಲದ ಹೊತ್ತಿನಲ್ಲಿ ಮಕ್ಕಳು ನಿದ್ದೆ ಮಾಡುತ್ತಾರೆ. ಇಂತಹ ವೇಳೆ ಅವರ ನಿದ್ದೆ ಹಾಗೂ ಜೈವಿಕ ಗಡಿಯಾರಕ್ಕೆ ಹೋಲಿಕೆ ಆಗೋದಿಲ್ಲ. ಈ ವೇಳೆ ನಿದ್ದೆಯ ಸಂದರ್ಭದಲ್ಲಿ ಕಿರಿ ಕಿರಿ ಅನುಭವಿಸಬೇಕಾಗುತ್ತದೆ.
3. ಹಿತವಾದ ನಿದ್ದೆ ಸಾಧ್ಯವಾಗದೇ ಇದ್ದಾಗ
ನಮಗೆಲ್ಲಾ ಗೊತ್ತಿರುವ ಹಾಗೆ ಮಕ್ಕಳು ನಾಲ್ಕರಿಂದ ಆರು ತಿಂಗಳವರೆಗೆ ಸರಿಯಾಗಿ ನಿದ್ದೆ ಮಾಡೋದಿಲ್ಲ. ಒಂದು ವೇಳೆ ನಿದ್ದೆ ಮಾಡಿದರೂ ಕೂಡ ಕ್ಷಣ ಮಾತ್ರದಲ್ಲೇ ಎದ್ದು ಮತ್ತೆ ಅಳೋದಕ್ಕೆ ಶುರು ಮಾಡುತ್ತಾರೆ. ಈ ನಾಲ್ಕರಿಂದ ಆರು ತಿಂಗಳ ಅವಧಿಯಲ್ಲಿ ಅವರು ಹಿತವಾದ ನಿದ್ದೆಯನ್ನು ಮಾಡಿರೋದಿಲ್ಲ. ನಿದ್ದೆಯಲ್ಲೂ ಕೂಡ ಒದ್ದಾಟ ಪಡುತ್ತಾರೆ. ಒಂದು ವರ್ಷದವರೆಗೂ ಮಕ್ಕಳಲ್ಲಿ ಇಂತಹ ಲಕ್ಷಣಗಳು ಕಂಡು ಬರೋದು ಸಾಮಾನ್ಯ.
4. ವಯಸ್ಸಿಗೆ ತಕ್ಕ ಹಾಗೇ ನಿದ್ದೆಯ ಅವಧಿ ಬದಲಾಗುತ್ತದೆ
ಮಕ್ಕಳು ಚಿಕ್ಕದಿನಿಂದ ದೊಡ್ಡದಾದಂತೆ ಅವರು ಮಲಗುವ ಅವಧಿ ಬದಲಾಗುತ್ತಾ ಸಾಗುತ್ತದೆ. ಸಾಮಾನ್ಯವಾಗಿ ಈಗತಾನೇ ಹುಟ್ಟಿದ ಮಕ್ಕಳು 14-17 ಗಂಟೆಯವರೆಗೆ ನಿದ್ದೆ ಮಾಡುತ್ತಾರೆ. ಇನ್ನೂ ನಾಲ್ಕರಿಂದ ಹನ್ನೊಂದು ತಿಂಗಳ ಮಕ್ಕಳು 12-15 ತಿಂಗಳವರೆಗೂ ಮಲಗುತ್ತಾರೆ. ಮಕ್ಕಳ ನಿದ್ದೆಯ ಅವಧಿ ಬದಲಾಗುವುದು ಕೂಡ ನಿದ್ದೆಯಲ್ಲಿ ಕಿರಿಕಿರಿ ಅನುಭವಿಸಲು ಕಾರಣವಾಗುತ್ತದೆ.
5. ಹಸಿವು
ಮೊದಲ ಆರು ತಿಂಗಳುಗಳ ಕಾಲ ಶಿಶುವಿಗೆ ಎದೆ ಹಾಲು ಬಿಟ್ಟು ಬೇರೇನನ್ನೂ ನೀಡಲಾಗೋದಿಲ್ಲ. ಅದು ಕೂಡ ಆಗಾಗ್ಗೆ ಎದೆ ಹಾಲು ನೀಡುತ್ತಲೇ ಇರಬೇಕು. ಇದು ಮಕ್ಕಳ ಬೆಳವಣಿಗೆಗೆ ತುಂಬಾನೇ ಒಳ್ಳೆಯದು. ಒಂದು ವೇಳೆ ನೀವು ದಿನನಿತ್ಯದಂತೆ ಮಗುವಿಗೆ ಎದೆಹಾಲು ಕುಡಿಸುವುದನ್ನು ಮರೆತು ಬಿಟ್ಟರೆ ಮಗುವಿಗೆ ಹಸಿವನ್ನು ತಡೆದುಕೊಳ್ಳಲಾಗೋದಿಲ್ಲ. ಆಗ ಮಗುವಿಗೆ ಸರಿಯಾಗಿ ನಿದ್ದೆ ಆಗೋದಿಲ್ಲ. ಇಂತಹ ಸಂದರ್ಭದಲ್ಲಿ ಮಕ್ಕಳು ನಿದ್ದೆಯಲ್ಲೇ ತಮ್ಮ ಬೆರಳನ್ನು ಚೀಪುತ್ತಾರೆ. ಮಕ್ಕಳು ಈ ರೀತಿ ಮಾಡುತ್ತಿದ್ದರೆ ಅವರಿಗೆ ಹಸಿವಾಗಿದೆ ಎಂದರ್ಥ.
6. ಪೋಷಕರು ಬಿಟ್ಟು ಹೋಗುವ ಆಂತಕ
ಹೆಚ್ಚಿನ ಮಕ್ಕಳನ್ನು ನೀವು ಗಮನಿಸಿರಬಹುದು. ಮಕ್ಕಳನ್ನು ತಾಯಿ ಅಥವಾ ಪೋಷಕರು ಬಿಟ್ಟು ಹೋದರೆ ಅವರು ಅಳುತ್ತಾರೆ, ಚೀರಾಡುತ್ತಾರೆ. ಕಾರಣ ಅವರಿಗೆ ಪೋಷಕರಿಂದ ದೂರಾಗುವ ಭಯವಿರುತ್ತದೆ. ಇದು ಸಾಮಾನ್ಯ ಹಾಗೂ ಇದು ಕೂಡ ಮಕ್ಕಳ ಅಭಿವೃದ್ಧಿ ಹಂತವೆಂದು ಹೇಳಬಹುದು. ಸಾಮಾನ್ಯವಾಗಿ ಆರು ತಿಂಗಳ ನಂತರ ಮಕ್ಕಳಲ್ಲಿ ನೀವು ಈ ನಡವಳಿಕೆಯನ್ನು ಗುರುತಿಸುತ್ತೀರಿ. ಈ ಕಾರಣದಿಂದಲೂ ಕೂಡ ಅವರು ನಿದ್ದೆಯಲ್ಲಿ ಕೈ ,ಕಾಲು ಎತ್ತಿ ಹಾಕುವಂತಹ ಚಟುವಟಿಕೆಗಳನ್ನು ಮಾಡುತ್ತಾರೆ.
ಈ ಎಲ್ಲಾ ಚಟುವಟಿಕೆಗಳನ್ನು ಮಕ್ಕಳು ನಿದ್ದೆಯಲ್ಲಿರಬೇಕಾದರೆ ಸಾಮಾನ್ಯವಾಗಿರುತ್ತದೆ. ಇದಕ್ಕಾಗಿ ಭಯ ಪಡುವ ಅವಶ್ಯಕತೆ ಇಲ್ಲ. ಇದು ಮಕ್ಕಳ ಬೆಳವಣಿಗೆಯ ಹಂತದಲ್ಲಿ ನಡೆಯುವ ಸಾಮಾನ್ಯ ಚಟುವಟಿಕೆಯಷ್ಟೇ.



Click it and Unblock the Notifications


