Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಮಕ್ಕಳಿಗೆ ಚಾಕಲೇಟ್ ಒಳ್ಳೆಯದಲ್ಲ ಎಂಬುವುದು ತಪ್ಪು, ಇಷ್ಟೆಲ್ಲಾ ಒಳಿತೂ ಇದೆ!
ಮಕ್ಕಳಿಗೆ ಚಾಕಲೇಟ್ ಒಳ್ಳೆಯಲ್ಲ ಎಂಬುವುದು ಎಲ್ಲಾ ಪೋಷಕರಿಗೆ ಇರುವ ದೊಡ್ಡ ತಪ್ಪು ಕಲ್ಪನೆ. ಚಾಕಲೇಟ್ ಕೊಡಿಸಿದರೆ ಮಕ್ಕಳ ಹಲ್ಲು ಹಾಳಾಗುತ್ತದೆ, ಹೊಟ್ಟೆ ಹಾಳಾಗುತ್ತದೆ, ಸರಿಯಾಗಿ ಊಟ ಮಾಡಲ್ಲ ಎಂಬ ಚಿಂತೆ ಪೋಷಕರದ್ದು. ಆದರೆ ನಿಜವಾಗಲೂ ಚಾಕಲೇಟ್ ಮಕ್ಕಳಿಗೆ ಅಷ್ಟೊಂದು ಕೆಡಕು ಮಾಡುತ್ತದೆಯೇ? ಎಂದು ನೋಡಿದರೆ ಹುಹುಂ ಇಲ್ಲ...
ನಿಮಗೆ ಮಕ್ಕಳಿಗೆ ಚಾಕಲೇಟ್ ಎಷ್ಟು ಕೊಡಿಸಬೇಕು ಹಾಗೂ ಯಾವ ಬಗೆಯ ಚಾಕಲೇಟ್ ಕೊಡಿಸಬೇಕು ಎಂದು ಗೊತ್ತಿದ್ದರೆ ಮಕ್ಕಳಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ, ಅವರು ಆರಾಮವಾಗಿ ಚಾಕಲೇಟ್ ಎಂಜಾಯ್ ಮಾಡಬಹುದು.

ಯಾವ ಬಗೆಯ ಚಾಕಲೇಟ್ ಒಳ್ಳೆಯದು?
ತುಂಬಾ ಸಕ್ಕರೆಯಂಶವಿರುವ ಚಾಕಲೇಟ್ ಕೊಡಿಸಬೇಡಿ, ಬದಲಿಗೆ ಪ್ರೊಟೀನ್ ಹಾಗೂ ಆರೋಗ್ಯಕರ ಅಂಶಗಳನ್ನು ಹೊಂದಿರುವ ಹಲವಾರು ಚಾಕಲೇಟ್ ಮಾರುಕ್ಟಟೆಯಲ್ಲಿದೆ, ಸ್ವಲ್ಪ ದುಬಾರಿ ಅನಿಸಿದರೂ ಅವುಗಳನ್ನು ಕೊಡಿಸಿ. ಕಡಿಮೆ ಬೆಲೆಗೂ ಕೊಬ್ಬರಿ ಮಿಠಾಯಿ, ಬೆಲ್ಲದ ಮಿಠಾಯಿಗಳು ಬರುತ್ತದೆ ಅಂಥವುಗಳನ್ನು ಕೊಡಿಸಬಹುದು. ಇನ್ನು ಮಕ್ಕಳಿಗೆ ಡಾರ್ಕ್ ಚಾಕಲೇಟ್ ಅತ್ಯುತ್ತಮವಾದ ಆಯ್ಕೆ ಆಗಿದೆ.
ಚಾಕಲೇಟ್ ಎಷ್ಟು ಕೊಡಿಸಬೇಕು?
ನೀವು ಪ್ಯಾಕೆಟ್ ಲೆಕ್ಕದಲ್ಲಿ ಚಾಕಲೇಟ್ ಕೊಡಿಸುವುದು, ಮಕ್ಕಳು ಅಳುತ್ತಿದ್ದಾರೆ ಎಂದು ಚಾಕಲೇಟ್ ಕೊಡಿಸುವುದು ಇವೆಲ್ಲಾ ಖಂಡಿತವಾಗಲೂ ತಪ್ಪೇ.. ಅವರಿಗೆ ಚಾಕಲೇಟ್ ಅನ್ನು ಮಿತಿಯಲ್ಲಿ ಕೊಡಿಸುವುದರಿಂದ ಯಾವುದೇ ತೊಂದರೆ ಉಂಟಾಗಲ್ಲ.
ಮಕ್ಕಳಿಗೆ ಚಾಕಲೇಟ್ ಕೊಡಿಸುವುದರಿಂದ ದೊರೆಯುವ ಪ್ರಯೋಜನಗಳು
1. ಮಕ್ಕಳಿಗೆ ಊಟವಾದ ಬಳಿಕ ಸ್ವಲ್ಪ ಚಾಕಲೇಟ್ ಕೊಡುವುದರಿಂದ ಅವರಿಗೆ ತುಂಬಾನೇ ಸಂತೋಷವಾಗುವುದು.
ಅವರ ದೇಹದಲ್ಲಿ ಎಂಡೋಪ್ರಿನ್ಸ್ ಹಾರ್ಮೋನ್ ಬಿಡುಗಡೆಯಾಗುತ್ತದೆ, ಮಕ್ಕಳು ಖುಷಿಯಾಗಿ ಇರುತ್ತಾರೆ. ಹಾಗಂತ ಅಳುತ್ತಿದ್ದಾರೆ ಎಂದು ಕೊಡಬೇಡಿ, ಅದು ಕೆಟ್ಟ ಅಭ್ಯಾಸವಾಗುವುದು, ಹುಷಾರ್!
2. ಅವರ ಗಣಿತ ಜ್ಞಾನ ಹೆಚ್ಚಿಸುತ್ತದೆ
ನೀವು ಚಾಕಲೇಟ್ ನೀಡಿದಾಗ ಅವರು ಅದನ್ನು ಲೆಕ್ಕ ಮಾಡಲು ಕಲಿಯುತ್ತಾರೆ, ಅಲ್ಲದೆ ಚಾಕಲೇಟ್‌ನಲ್ಲಿ ಫ್ಲೇವೋನಾಲ್ಸ್ ಅಂಶವಿರುತ್ತದೆ, ಅದು ಅವರಲ್ಲಿ ಲೆಕ್ಕದ ಜ್ಞಾನ ಹೆಚ್ಚಿಸುತ್ತದೆ. ಅಲ್ಲದೆ ಮಕ್ಕಳಲ್ಲಿ ಸುಸ್ತು ಕಡಿಮೆ ಮಾಡಲು ಸಹಕಾರಿ.
3. ದೇಹಕ್ಕೆ ಅಗ್ಯತವಾಗ ಶಕ್ತಿ ದೊರೆಯುತ್ತದೆ
ಮಕ್ಕಳಿಗೆ ತುಂಬಾನೇ ಶಕ್ತಿ ಬೇಕು, ಅವರು ಸದಾ ಕುಣಿಯುತ್ತಲೇ ಇರುತ್ತಾರೆ, ಅವರಿಗೆ ಪೋಷಕಾಂಶಗಳ ಅಗ್ಯತವಿರುತ್ತದೆ. ಒಳ್ಳೆಯ ಚಾಕಲೇಟ್ ಅವರ ದೇಹಕ್ಕೆ ಸ್ವಲ್ಪ ಶಕ್ತಿಯನ್ನು ತುಂಬುವುದು.
4. ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಚಾಕಲೇಟ್ ಅದರಲ್ಲೂ ಡಾರ್ಕ್ ಚಾಕಲೇಟ್ ಪುಟ್ಟ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಚಾಕಲೇಟ್ ಕೆಟ್ಟ ಕೊಲೆಸ್ಟ್ರಾಲ್ ವಿರುದ್ಧ ಹೋರಾಡುತ್ತದೆ! ಆದ್ದರಿಂದ ಮಕ್ಕಳು ಅಪರೂಪಕ್ಕೆ ಚಾಕಲೇಟ್ ಸವಿಯಲು ಬಿಡಿ.
5. ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ
ಮಕ್ಕಳಿಗೂ ಮಾನಸಿಕ ಒತ್ತಡವಿರುತ್ತದೆ. ಪ್ರತಿದಿನವೂ ಅವರು ಕಲಿಯುತ್ತಿರುತ್ತಾರೆ, ಇನ್ನು ಶಾಲೆಗೆ ಹೋಗುವಾಗ ಅವರ ಮೇಲೆ ಕಲಿಕೆಯ ಒತ್ತಡ ಇರುತ್ತದೆ. ಚಾಕಲೇಟ್ ತಿನ್ನಲು ಕೊಟ್ಟಾಗ ಮಕ್ಕಳಿಗೆ ತುಂಬಾನೇ ಖುಷಿತಯಾಗುವುದು, ಅವರ ಮಾನಸಿಕ ಒತ್ತಡ ಕೂಡ ಕಡಿಮೆಯಾಗುವುದು.
6. ಚಾಕಲೇಟ್ ಜೊತೆ ಆಟವಾಡುತ್ತಾರೆ
ನೀವು ಮಕ್ಕಳಿಗೆ ಚಾಕಲೇಟ್ ಕೊಟ್ಟರೆ ಅವರು ಚಾಕಲೇಟ್ ಜೊತೆ ಅಥವಾ ಅದರ ಕವರ್ ಜೊತೆ ಆಟ ಆಡುತ್ತಾರೆ, ಇದರಿಂದ ಮಕ್ಕಳಿಗೆ ಒಳ್ಳೆಯ ಟೈಂಪಾಸ್ ಅನಿಸುವುದು, ಅವರು ಖುಷಿಯಿಂದ ಇರುತ್ತಾರೆ. ಅಲ್ಲದೆ ಅದನ್ನು ಬಳಸಿ ಕೆಲ ಮಕ್ಕಳು ತುಂಬಾ ಕ್ರಿಯೇಟಿವ್ ಆಗಿ ಆಟಿಕೆಗಳನ್ನು ಮಾಡುತ್ತಾರೆ, ಈ ರೀತಿ ಮಕ್ಕಳಲ್ಲಿರುವ ಕೌಶಲ್ಯ ಹೆಚ್ಚಿಸುತ್ತದೆ.
ಎಂಥ ಚಾಕಲೇಟ್ ಆಯ್ಕೆ ಮಾಡಬೇಕು?
- ನೀವು ಬಳಸುವ ಚಾಕಲೇಟ್ ಕೆಫೀನ್ ಫ್ರೀ ಆಗಿರಬೇಕು
- ಕಡಿಮೆ ಕೊಬ್ಬಿನಂಶ, ಸಕ್ಕರೆಯಂಶ, ಹಾಲಿನ ಅಂಶವಿರುವ ಚಾಕಲೇಟ್ ಖರೀದಿಸಬೇಕು
- ಡಾರ್ಕ್ ಚಾಕಲೇಟ್ ಒಳ್ಳೆಯದು
ಹಲ್ಲು ಹಾಳಾಗದಿರಲು ಏನು ಮಾಡಬೇಕು?
ಮಕ್ಕಳಿಗೆ ಚಾಕಲೇಟ್ ಕೊಟ್ಟ ಮೇಲೆ ಅವರಿಗೆ ಬಾಯಿ ಮುಕ್ಕಳಿಸಲು ಹೇಳಿ, ತುಂಬಾ ಚಿಕ್ಕ ಮಗುವಾದರೆ (ಎರಡು ವರ್ಷ ಕೆಳಗಿನದ್ದು) ನೀವೇ ಅವರ ಬಾಯಿ ಸ್ವಚ್ಛಗೊಳಿಸಬೇಕು.
ತುಂಬಾ ಚಾಕಲೇಟ್ ಕೊಡಬೇಡಿ
ಚಾಕಲೇಟ್ ಅಂತಲ್ಲ, ಯಾವುದೇ ಆಗಲಿ ಅತಿಯಾದರೆ ಒಳ್ಳೆಯದಲ್ಲ ಅಲ್ವೇ? ಆದ್ದರಿಂದ ಮಕ್ಕಳಿಗೆ ಚಾಕಲೇಟ್ ಮಿತಿಯಲ್ಲಿ ನೀಡಿ, ಮಕ್ಕಳನ್ನು ಖುಷಿಯಾಗಿಡಿ...



Click it and Unblock the Notifications

