Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಜನಿಸಿದ ಮಗುವಿಗೆ ಸ್ಕ್ರೀನಿಂಗ್ ಮಾಡಿಸಲೇಬೇಕು, ಏಕೆ, ಯಾವಾಗ ಮಾಡಿಸಬೇಕು?
ಗರ್ಭಿಣಿಯನ್ನು ಹೆರಿಗೆ ರೂಂಗೆ ಕರೆದುಕೊಂಡು ಹೋಗುವಾಗ ತಾಯಿ- ಮಗು ಆರೋಗ್ಯವಾಗಿರಲಿ ಎಂದು ಮನೆಯವರು ದೇವರಲ್ಲಿ ಬೇಡುತ್ತಿರುತ್ತಾರೆ, ವೈದ್ಯರು ಬಂದು ಮಗು-ತಾಯಿ ಆರಾಮವಾಗಿದ್ದಾರೆ ಎಂದು ಹೇಳುವವರೆಗೆ ಸಮಧಾನ ಇರುವುದಿಲ್ಲ. ಹೆರಿಗೆಯಾದ ಬಳಿಕ ಮಗು ಆರೋಗ್ಯವಾಗಿದೆಯೇ ಎಂದು ವೈದ್ಯರು ಪರೀಕ್ಷೆ ಮಾಡುತ್ತಾರೆ. ಹೀಗೆ ಪರೀಕ್ಷೆ ಮಾಡಿದಾಗ ಮಗುವಿಗೆ ಏನಾದರೂ ದೊಡ್ಡ ಸಮಸ್ಯೆವಿದ್ದರೆ ಮೇಲ್ನೋಟಕ್ಕೆ ಅದು ತಿಳಿಯದೆ ಹೋಗಬಹುದು, ಇದರ ಬಗ್ಗೆ ತಿಳಿಯಬೇಕೆಂದರೆ ಸ್ಕ್ರೀನಿಂಗ್ ಪರೀಕ್ಷೆ ಮಾಡಿಸಬೇಕು.

ಮಗು ಜನಿಸಿದ ಮೇಲೆ ಈ ರೀತಿ ಸ್ಕ್ರೀನಿಂಗ್ ಮಾಡುವವರು ತುಂಬಾ ಕಡಿಮೆ. ಕೆಲವು ವೈದ್ಯರು ಸಲಹೆ ನೀಡುತ್ತಾರೆ, ಕೆಲವರು ನೀಡುವುದಿಲ್ಲ, ಇದರಿಂದಾಗಿ ಸಮಸ್ಯೆಯೇನಾದರೂ ಇದ್ದರೆ ತುಂಬಾ ತಡವಾಗಿ ತಿಳಿದು ಬರುತ್ತದೆ. ಆದ್ದರಿಂದ ನವಜಾತ ಶಿಶುವನ್ನು ಸ್ಕ್ರೀನಿಂಗ್ ಮಾಡುವುದರಿಂದ ಏನಾದರೂ ಸಮಸ್ಯೆಯಿದ್ದರೆ ಮೊದಲೇ ತಿಳಿದು ಬರುವುದು. ಮಗು ಜನಿಸಿದ ಎಷ್ಟು ದಿನವಾದ ಮೇಲೆ ಸ್ಕ್ರೀನಿಂಗ್ ಮಾಡಬೇಕು ಎಂದು ನೋಡೋಣ ಬನ್ನಿ:
ಮಗುವಿಗೆ ಯಾವಾಗ ಸ್ಕ್ರೀನಿಂಗ್ ಮಾಡಿದರೆ ಒಳ್ಳೆಯದು?
ಸಾಮಾನ್ಯವಾಗಿ ಮಗು ಜನಿಸಿದ 72 ಗಂಟೆಯ ಒಳಗಾಗಿ ಅಥವಾ 7 ದಿನದೊಳಗೆ ಸ್ಕ್ರೀನಿಂಗ್ ಮಾಡಬೇಕು. ಹೀಲ್ ಪ್ರಿಕ್ ಮೂಲಕ ಬ್ಲಡ್ ಸ್ಯಾಂಪಲ್ ಕಲೆಕ್ಟ್ ಮಾಡಿ ಅದನ್ನು ಫಿಲ್ಟರ್ ಪೇಪರ್ ಕಾರ್ಡ್‌ನಲ್ಲಿ ಹಾಕಿ ರೂಂನ ಉಷ್ಣತೆಯಲ್ಲಿ ಒಣಗಿಸಿ ನಂತರ ಸೀಲ್ ಮಾಡಿ ಲ್ಯಾಬ್‌ಗೆ ಕಳುಹಿಸಿ ಪರೀಕ್ಷೆ ಮಾಡಲಾಗುವುದು.
ಯಾವೆಲ್ಲಾ ಸ್ಕ್ರೀನಿಂಗ್ ಮಾಡಲೇಬೇಕು?
ಮಗು ಜನಿಸಿದಾಗ ಕಿವಿ ಕೇಳುತ್ತಿದೆಯೇ ಎಂಬ ಸ್ಕ್ರೀನಿಂಗ್ ಮಾಡಬೇಕು. ಜನಿಸಿದ ಸಾವಿರ ಮಕ್ಕಳಲ್ಲಿ 1-2 ಮಕ್ಕಳಲ್ಲಿ ಈ ಬಗೆಯ ನ್ಯೂನತೆ ಕಂಡು ಬರುವುದು. ಮಕ್ಕಳಿಗೆ ಕಿವಿ ಕೇಳದಿರುವ ಸಮಸ್ಯೆಯಿದ್ದರೆ ಅವರ ಮಾತಿನ ಮೇಲೆ, ಭಾಷೆ ಮೇಲೆ ಪರಿಣಾಮ ಬೀರುವುದು. ಅದೇ ಪ್ರಾರಂಭದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ಕೊಡಿಸಿದರೆ ಹೆಚ್ಚಿನ ತೊಂದರೆಗಳನ್ನು ತಡೆಗಟ್ಟಬಹುದು.
ಆದ್ದರಿಂದ ಮಗು ಜನಿಸಿದಾಗ ಇದರ ಬಗ್ಗೆ ಸ್ಕ್ರೀನಿಂಗ್ ಮಾಡಬೇಕು. OAE (Oto acoustic emissions) ಪರೀಕ್ಷೆ ಮಾಡಿಸಿದರೆ ಮಗುವಿಗೆ ಏನಾದರೂ ಶ್ರವಣ ದೋಷವಿದ್ದರೆ ಗೊತ್ತಾಗುವುದು. ಶ್ರವಣದೋಷವಿದ್ದರೆ 6 ತಿಂಗಳ ಮೊದಲೇ ಚಿಕಿತ್ಸೆ ನೀಡುವುದರಿಂದ ಮಗುವಿಗೆ ಈ ದೋಷ ನಿವಾರಣೆಯಾಗುವ ಸಾಧ್ಯತೆ ಹೆಚ್ಚಿರುವುದರಿಂದ ಮಗು ಜನಿಸಿದಾಗ ಈ ಪರೀಕ್ಷೆ ಮಾಡಿಸಿ.
ಹೃದಯ ಸಂಬಂಧಿಸಿದ ಸಮಸ್ಯೆಯೇನಾದರೂ ಇದೆಯೇ ಎಂದು ಪರೀಕ್ಷೆ ಮಾಡಿಸಿ
ಶೇ. 2ರಷ್ಟು ಮಕ್ಕಳು ಹೃದಯ ಸಂಬಂಧಿ ಸಮಸ್ಯೆ ಹೊಂದಿರುತ್ತಾರೆ. ಆದ್ದರಿಂದ ಮಗು ಜನಿಸಿದಾಗ ಈ ಪರೀಕ್ಷೆ ಮಾಡಿಸುವುದು ಕೂಡ ಒಳ್ಳೆಯದು. ಕೆಲವೊಮ್ಮೆ ಮಗುವಿಗೆ ಹೃದಯದ ಸಮಸ್ಯೆ ಇರುವುದು ಗೊತ್ತೇ ಆಗುವುದಿಲ್ಲ. ಮಗುವಿನ ಆರೋಗ್ಯದಲ್ಲಿ ಏನಾದರೂ ಸಮಸ್ಯೆಯಿದ್ದಾಗ ಆವಾಗ ವೈದ್ಯರಿಗೆ ಡೌಟ್ ಬಂದು ಪರೀಕ್ಷೆ ಮಾಡಲಾಗುವುದು. ಆದ್ದರಿಂದ ಮೊದಲೇ ಪರೀಕ್ಷೆ ಮಾಡಿಸಿದರೆ ಸಮಸ್ಯೆ ಪ್ರಾರಂಭದಲ್ಲಿಯೇ ಗೊತ್ತಾಗುವುದರಿಂದ ಚಿಕಿತ್ಸೆ ಬೇಗನೆ ಪ್ರಾರಂಭಿಸುವುದು.
ಹೊಟ್ಟೆಯ ಸ್ಕ್ರೀನಿಂಗ್
ಮಗುವಿಗೆ ಹೊಟ್ಟೆಯಲ್ಲಿ ಏನಾದರೂ ಸಮಸ್ಯೆಯಿದ್ದರೆ ಹೊಟ್ಟೆ ಸ್ಕ್ರೀನಿಂಗ್ ಮಾಡುವುದರಿಂದ ತಿಳಿದು ಬರುತ್ತದೆ. ಈ ಸ್ಕ್ರೀನಿಂಗ್ ಮಗುವಿನ ಆರೋಗ್ಯದ ಮೇಲೆ ತಿಳಿಯಲು ಸಹಕಾರಿ.
ಎಲ್ಲಾ ಮಕ್ಕಳಿಗೂ ಈ ರೀತಿಯ ಸ್ಕ್ರೀನಿಂಗ್ ಅಗ್ಯತವಿದೆಯೇ?
ಏನಾದರೂ ಆರೋಗ್ಯ ಸಮಸ್ಯೆಯ ಲಕ್ಷಣಗಳು ಕಂಡು ಬಂದಾಗ ಸ್ಕ್ರೀನಿಂಗ್ ಮಾಡಿಸಬೇಕೆ ಅಥವಾ ಹುಟ್ಟಿದ ಎಲ್ಲಾ ಮಕ್ಕಳಿಗೂ ಸ್ಕ್ರೀನಿಂಗ್ ಮಾಡಿಸಬೇಕೆ? ಎಂಬ ಗೊಂದಲ ಕೆಲ ಪೋಷಕರಲ್ಲಿ ಇರುತ್ತದೆ. ಆದರೆ ಜನಿಸಿದಾಗಲೇ ಮಗುವಿನ ಆರೋಗ್ಯದ ಬಗ್ಗೆ ತಿಳಿಯಲು ಸ್ಕ್ರೀನಿಂಗ್ ಮಾಡಿಸುವುದು ಒಳ್ಳೆಯದು. ಏಕೆಂದರೆ ಕಿವಿ ಕೇಳಿಸದಿರುವುದು ಅಥವಾ ಮತ್ತಿತರ ಆರೋಗ್ಯ ಸಮಸ್ಯೆ ಕೆಲವೊಮ್ಮೆ ಪ್ರಾರಂಭದಲ್ಲಿ ಪೋಷಕರಿಗೆ ತಿಳಿಯುವುದೇ ಇಲ್ಲ, ಮಗುವಿಗೆ 6 ತಿಂಗಳು ಕಳೆಯುತ್ತಿದ್ದಂತೆ ತಿಳಿದು ಬರುವುದು. ಅದೇ ಪ್ರಾರಂಭದಲ್ಲಿಯೇ ಚಿಕಿತ್ಸೆ ನೀಡಿದರೆ ಮಗು ಬೇಗನೆ ಗುಣಮುಖವಾಗಬಹುದು ಅಥವಾ ಮಗುವಿನ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರಿಗೆ ತಿಳಿದು ಬರುವುದರಿಂದ ಆ ಮಗುವಿನ ಆರೈಕೆ ಹೇಗೆ ಮಾಡಬೇಕು ಎಂದು ವೈದ್ಯರು ಪೋಷಕರಿಗೆ ತಿಳಿಸುತ್ತಾರೆ.
ಆದ್ದರಿಂದ ಎಲ್ಲಾ ಮಗುವಿಗೆ ಕಿವಿ, ಹೊಟ್ಟೆ ಹಾಗೂ ಹೃದಯದ ಸ್ಕ್ರೀನಿಂಗ್ ಮಾಡಿಸಬೇಕು.



Click it and Unblock the Notifications