Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಓದಿದೆಲ್ಲಾ ನೆನಪಲ್ಲಿ ಉಳಿಯಬೇಕಾದರೆ ಏನು ಮಾಡಬೇಕು? ವಿದ್ಯಾರ್ಥಿಗಳಿಗೆ ಟಿಪ್ಸ್!
ಮನೆಯಲ್ಲಿ ಮಕ್ಕಳಿದ್ದರೆ ಪೋಷಕರಿಗೆ ಸವಾಲುಗಳ ಮೇಲೆ ಸವಾಲುಗಳು ಎದುರಾಗುತ್ತದೆ. ಅವರನ್ನು ಸಾಕುವುದು, ಓದಿಸುವುದು, ಶಾಲೆಗೆ ಕಳುಹಿಸಿವುದು, ಅವರ ಆರೋಗ್ಯ, ಬೆಲವಣಿಗೆ ಮೇಲೆ ಗಮನವಿಡುವುದುದು, ಅವರ ವ್ಯಕ್ತಿತ್ವ ರೂಪಿಸುವುದು ಕೂಡ ಪೋಷಕರ ಕೆಲಸವಾಗಿರುತ್ತೆ. ಆದ್ರೆ ಹೇಗೆ ಮಕ್ಕಳನ್ನು ನೋಡಿಕೊಳ್ಳಬೇಕು? ಅವರಿಗೆ ಯಾವ ರೀತಿಯ ತಿಳುವಳಿಕೆ ನೀಡಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿರುತ್ತೆ.
ಹಾಗೆ ಮಕ್ಕಳ ಅತೀ ದೊಡ್ಡ ಸಮಸ್ಯೆ ಅಂದ್ರೆ ಅದು ಓದಿಸುವುದು. ಇತ್ರೀಚಿಗೆ ಎಲ್ಲಾ ಪೋಷಕರ ದೊಡ್ಡ ತಲೆನೋವಿನ ವಿಚಾರವಿದು. ಅದ್ರೆ ಓದಿದ ನಂತರ ಅದು ಎಷ್ಟು ತಲೆಯಲ್ಲಿ ಉಳಿಯುತ್ತದೆ ಎಂಬುದು ಕೂಡ ದೊಡ್ಡ ಪ್ರಶ್ನೆಯೇ. ಏಕೆಂದರೆ ಓದಿದನೆಲ್ಲಾ ನೆನಪಿನಲ್ಲಿ ಇಟ್ಟುಕೊಳ್ಳುವುದು ಬಹುಮುಖ್ಯ. ನೆನಪಿನಲ್ಲಿ ಯಸವುದು ಉಳಿಯದಿದ್ದರೆ ಓದಿಯೂ ಪ್ರಯೋಜನವಿಲ್ಲದಂತಾಗುತ್ತದೆ.

ಹಾಗಾದ್ರೆ ವಿದ್ಯಾರ್ಥಿಗಳು ಓದಿದ್ದೆಲ್ಲ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದರೆ ಏನು ಮಾಡಬೇಕು. ಇದಕ್ಕೆ ಏನು ಮಾಡಬೇಕು ಎಂಬ ಕುರಿತ ಕೆಲವು ಟಿಪ್ಸ್ ಇಲ್ಲಿದೆ ನೋಡಿ.
ಮನೆಯಲ್ಲಿ ಒಂದು ಜಾಗ ಗುರುತು ಮಾಡುವುದು
ಹೌದು ಮನೆಯಲ್ಲಿ ಎಲ್ಲಿ ಬೇಕಾದರು ಕುಳಿತು ಓದಬಾರದು. ನೀವು ಓದಲೆಂದೇ ಒಂದೇ ಜಾಗ ಆಯ್ಕೆ ಮಾಡಿಕೊಳ್ಳಬೇಕು. ದಿನಕ್ಕೆ ಒಂದೊಂದು ಕಡೆ ಓದಲು ಆರಂಭಿಸಿದರೆ ನಿಮಗೆ ಓದಿರುವುದು ನೆನಪಿನಲ್ಲಿ ಉಳಿಯುವುದಿಲ್ಲ. ಆದರೆ ಒಂದೇ ಕಡೆಗಳಲ್ಲಿ ನೀವು ನಿತ್ಯವೂ ಓದಲು ಆರಂಭಿಸಿದರೆ ಆ ಜಾಗದಲ್ಲಿ ಕುಳಿತ ತಕ್ಷಣವೇ ನಿಮ್ಮ ಮೆದುಳು ಇದು ಓದಿನ ಸಮಯ ಎನ್ನುವುದನ್ನು ಅರಿತುಕೊಳ್ಳುತ್ತದೆ. ಹಾಗೆ ಓದಿನ ಕಡೆಯೇ ಹೆಚ್ಚಿನ ಗಮನ ಹರಿಸುತ್ತದೆ. ಈ ಜಾಗ ಆದಷ್ಟು ಶಾಂತವಾಗಿ, ಗಾಳಿ, ಬೆಳಕು ಬರುವಂತಿರಲಿ.
ನಿದ್ರೆ ಬಿಟ್ಟು ಓದಲೇಬಾರದು?
ಕೆಲವರು ಹೆಚ್ಚು ಹೊತ್ತು ಓದುತ್ತಾರೆ. ಪರೀಕ್ಷಾ ಸಮಯದಲ್ಲಿ ರಾತ್ರಿ ಎಲ್ಲಾ ಓದುವವರು ಇದ್ದಾರೆ. ಆದ್ರೆ ಹೀಗೆ ಮಾಡಬಾರದು, ನೀವು ಓದುತ್ತಿದ್ದರೆ ನಿಮ್ಮ ಮೆದುಳು ಕೂಡ ಎಚ್ಚರವಾಗಿರಬೇಕು, ನಿದ್ರೆ ಇಲ್ಲದೆ, ಅರ್ಧ ನಿದ್ರೆಯಲ್ಲಿ ಓದಲು ಕುಳಿತರೆ ಓದಿರುವುದು ಬೆಳಗ್ಗೆ ಎದ್ದಾಗ ನೆನಪಿನಲ್ಲಿ ಉಳಿಯುವುದಿಲ್ಲ. ಹೀಗಾಗಿ ದಿನದಲ್ಲಿ 40ರಿಂದ 50 ನಿಮಿಷ ಓದಿದರೆ ಸಾಕು. ಗಂಟೆಗಳ ಕಾಲ ಓದುವ ಅನಿವಾರ್ಯತೆ ಇಲ್ಲ.
ಓದುವುದಕ್ಕಿಂತ ಬರೆಯುವುದು ಉತ್ತಮ
ಯಾವುದೇ ವಿಚರವನ್ನು ಪದೇ ಪದೇ ಓದುವುದಕ್ಕಿಂತ ಅದನ್ನು ಬರೆಯುವುದು ಉತ್ತಮ. ಒಂದು ಬಾರಿ ಓದುವುದು ನಾಲ್ಕು ಬಾರಿ ಬರೆಯುವುದಕ್ಕೆ ಸಮ. ಹೀಗಾಗಿ ಒಮ್ಮೆ ಓದಿದನ್ನು ಒಮ್ಮೆ ಬರೆಯಬೇಕು. ಹೀಗೆ ಮಾಡಿದರೆ ನೀವು ಓದಿದ್ದೆಲ್ಲ ನೆನಪಿಟ್ಟುಕೊಳ್ಳಬಹುದು.
ಓದಲು ಯಾವ ಸಮಯ ಒಳ್ಳೆಯದು
ನಾವು ಓದಿದ್ದು ಚೆನ್ನಾಗಿ ನೆನಪಿನಲ್ಲಿ ಉಳಿಯಬೇಕಾದರೆ ಓದುವ ಸಮಯವನ್ನ ನಿಗಧಿ ಮಾಡಬೇಕು, ಅಂದರೆ ಬೆಳಗ್ಗೆ ಅಥವಾ ಸಂಜೆಯ ಸಮಯ ಓದಲ ಒಳ್ಳೆಯ ಸಮಯವಂತೆ. ಅದ್ರಲ್ಲು ಬೆಳಗ್ಗೆ 8 ಗಂಟೆಯ ಒಳಗೆ ಹಾಗೆ ಸಂಜೆ 6 ಗಂಟೆಯ ನಂತರ ಓದಲು ಅತ್ಯುತ್ತಮ ಸಮಯ. ಈ ಸಮಯದಲ್ಲಿ ಮನಸ್ಸು ಶಾಂತವಾಗಿರುತ್ತದೆ.



Click it and Unblock the Notifications