Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮಕ್ಕಳನ್ನು ಹಾಸ್ಟೆಲ್ ಗೆ ಹಾಕುತ್ತಿದ್ದೀರಾ? ಈ ಬಗ್ಗೆಯೂ ತಿಳಿದಿರಲಿ
ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಹಾಸ್ಟೆಲ್ ಗೆ ಹಾಕೋದಕ್ಕೆ ಆಸಕ್ತಿ ತೋರುತ್ತಾರೆ. ಮನೆಯಲ್ಲಿದ್ರೆ ಹೇಳುವ ಮಾತನ್ನು ಕೇಳೋದಿಲ್ಲ. ಹೀಗಾಗಿ ಹಾಸ್ಟೆಲ್ ನಲ್ಲಿದ್ರೆ ಚೆನ್ನಾಗಿ ಓದಿಕೊಳ್ತಾನೆ ಅಂತ ತಿಳಿದುಕೊಂಡಿರುತ್ತಾರೆ. ಇನ್ನೂ ಕೆಲವು ಮಕ್ಕಳಿಗೆ ಹಾಸ್ಟೆಲ್ ಅನಿವಾರ್ಯವಾಗಿರುತ್ತದೆ.
ಮನೆಯಿಂದ ಶಾಲೆ/ಕಾಲೇಜು ತುಂಬಾನೇ ದೂರವಿದ್ದಾಗ ಕೆಲ ಮಕ್ಕಳಿಗೆ ಹಾಸ್ಟೆಲ್ ನಲ್ಲಿ ಇರೋದು ಅನಿವಾರ್ಯವಾಗಿ ಬಿಡುತ್ತೆ. ಆದ್ರೆ ನಿಮಗೊತ್ತಾ ನಿಮ್ಮ ಮಕ್ಕಳನ್ನು ಹಾಸ್ಟೆಲ್ ಗೆ ಹಾಕೋದ್ರಿಂದ ಅವರಿಗೆ ಯಾವ ರೀತಿ ತೋಂದರೆಯಾಗುತ್ತೆ? ಭವಿಷ್ಯದ ದೃಷ್ಟಿಯಿಂದ ಏನೆಲ್ಲಾ ಅಪಾಯಗಳನ್ನು ಎದುರಿಸಬೇಕಾಗುತ್ತೆ ಅನ್ನೋದನ್ನು ತಿಳಿಯೋಣ.

1. ಮನೆಯ ಊಟದ ನೆನಪಾಗುತ್ತೆ
ನಮಗೆ ಎಷ್ಟೇ ಒಳ್ಳೆಯ ಊಟ ಕೊಟ್ರು ಕೂಡ ಅದು ಮನೆಯೂಟದ ರುಚಿಯನ್ನು ಕೊಡೋದಿಲ್ಲ. ಮನೆಯೂಟಕ್ಕೆ ಸರಿಸಾಟಿ ಮತ್ತೊಂದಿಲ್ಲ. ಹಾಸ್ಟೆಲ್ ಸೇರಿಕೊಂಡ ನಂತರ ಹೆಚ್ಚಿನ ಮಕ್ಕಳಿಗೆ ಅಲ್ಲಿನ ಊಟ ಮೈಗೆ ಹತ್ತೋದಿಲ್ಲ. ನಾಲಿಗೆಗೆ ರುಚಿಸೋದು ಇಲ್ಲ. ಹೀಗೆ ಊಟ ಸರಿಯಾಗಿ ಮಾಡದೇ ಮಕ್ಕಳು ಸೊರಗಿ ಹೋಗುತ್ತಾರೆ.
2. ಕೆಟ್ಟ ಚಟಗಳನ್ನು ಕಲಿಯುತ್ತಾರೆ
ಹಾಸ್ಟೆಲ್ ಜೀವನ ವಿದ್ಯಾರ್ಥಿಗಳಿಗೆ ಒಂದು ರೀತಿ ಸ್ವತಂತ್ರ ಸಿಕ್ಕ ಹಾಗೆ. ಮನೆಯಲ್ಲಿ ಪ್ರತಿಯೊಂದು ವಿಚಾರಕ್ಕೂ ನಿರ್ಬಂಧಗಳನ್ನು ಹೇರುತ್ತಾರೆ. ಆದರೆ ಹಾಸ್ಟೆಲ್ ನಲ್ಲಿ ಹೇಳುವವರು ಕೇಳುವವರು ಇರೋದಿಲ್ಲ. ಹೀಗಾಗಿ ಬೇರೆ ಮಕ್ಕಳೊಂದಿಗೆ ಸೇರಿಕೊಂಡು ಅವರು ಕೆಟ್ಟ ಚಟಗಳ ದಾಸರಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ.
3. ಇತರ ವಿದ್ಯಾರ್ಥಿಗಳೊಂದಿಗೆ ಬೆರೆಯೋದು ಕಷ್ಟವಾಗುತ್ತದೆ
ಇಷ್ಟು ವರ್ಷ ಮನೆಯಲ್ಲಿ ನಿಮ್ಮ ಮಕ್ಕಳನ್ನು ತುಂಬಾನೇ ಮುದ್ದಾಗಿ ಸಾಕಿರುತ್ತೀರಿ. ಹೀಗಾಗಿ ಅವರಿಗೆ ಬೇರೆಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕೋದು ಹೇಗಂತ ಗೊತ್ತಿರೋದಿಲ್ಲ. ಹೀಗಾಗಿ ರೂಂ ನಲ್ಲಿ ಸ್ನೇಹಿತರ ಜೊತೆಗೆ ಮನಸ್ಥಾಪ ಉಂಟಾಗಬಹುದು. ಆಗ ಅವರು ತುಂಬಾನೇ ನೋವು ಅನುಭವಿಸುತ್ತಾರೆ. ಅವರಿಗೆ ಮನೆಯ ನೆನಪು ಕಾಡುತ್ತದೆ.
4. ಓದಿಗೆ ಅಡ್ಡಿಯುಂಟಾಗಬಹುದು
ಹಾಸ್ಟೆಲ್ ನಲ್ಲಿ ಒಬ್ಬರಿಗೆ ಒಂದು ಕೋಣೆಯನ್ನು ನೀಡೋದಿಲ್ಲ. 3-4 ಜನ ಒಂದೇ ಕೋಣೆಯಲ್ಲಿ ಇರಬೇಕಾಗುತ್ತದೆ. ಈ ವೇಳೆ ಎಲ್ಲರೂ ಒಂದೇ ರೀತಿ ಇರೋದಿಲ್ಲ. ಒಬ್ಬರ ಗುಣ ಒಂದೊಂದು ರೀತಿ ಇರುತ್ತದೆ. ನಿಮ್ಮ ಮಗ/ಮಗಳು ಓದುವ ಸಂದರ್ಭದಲ್ಲಿ ಇತರರು ಅವರಿಗೆ ತೊಂದರೆ ಮಾಡುವ ಸಾಧ್ಯತೆಯೂ ಹೆಚ್ಚಾಗಿದೆ. ಹೀಗಾಗಿ ಅವರ ಓದಿಗೆ ಅಡ್ಡಿಯುಂಟಾಗುತ್ತದೆ.
5. ಕಳ್ಳತನ ಹೆಚ್ಚಾಗಿರುತ್ತದೆ
ಹಾಸ್ಟೆಲ್ ನಲ್ಲಿ ಮಕ್ಕಳು ಬೇರೆ ಬೇರೆ ಜಾಗಗಳಿಂದ ಬಂದಿರುತ್ತಾರೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಮನಸ್ಥಿತಿ ಇರುತ್ತದೆ. ಕೆಲವು ಮಕ್ಕಳು ಕಳ್ಳತನ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ನಿಮ್ಮ ಮಗು ಪುಸ್ತಕ, ಬಟ್ಟೆ, ಬ್ಯಾಗ್ ಹೀಗೆ ಯಾವುದಾದರೂ ಅಗತ್ಯ ವಸ್ತುಗಳನ್ನು ಕಳೆದುಕೊಳ್ಳಬಹುದು. ಇದು ಅವರ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
6. ಮನೆಯ ನೆನಪು ಕಾಡುತ್ತದೆ
ಇಷ್ಟು ದಿನಗಳ ಕಾಲ ಮನೆಯಲ್ಲಿ ಇದ್ದು, ಏಕಾಏಕಿ ಹಾಸ್ಟೆಲ್ ಗೆ ಹಾಕಿದಾಗ ಮಕ್ಕಳು ತುಂಬಾನೇ ಚಿಂತಾಕ್ರಾಂತರಾಗುತ್ತಾರೆ. ಹಾಸ್ಟೆಲ್ ನಲ್ಲಿ ತನ್ನವರು ಯಾರು ಇಲ್ಲ ಅನ್ನೋ ಭಾವನೆ ಅವರನ್ನು ಕಾಡೋದಕ್ಕೆ ಶುರು ಆಗುತ್ತದೆ. ಅಪ್ಪ- ಅಮ್ಮ, ಒಡಹುಟ್ಟಿದವರ ನೆನಪು ಸದಾ ಕಾಡುತ್ತಾ ಇರುತ್ತದೆ. ಮೊದ ಮೊದಲು ಹಾಸ್ಟೆಲ್ ಗೆ ಹೋದಾಗ ಮಕ್ಕಳು ತುಂಬಾನೇ ದುಃಖಿಸುತ್ತಾರೆ.
7. ಖರ್ಚು ಅಧಿಕ
ಮಕ್ಕಳನ್ನು ಮನೆಯಿಂದಲೇ ಶಾಲೆಗೆ ಕಳುಹಿಸೋದಕ್ಕೂ ಹಾಸ್ಟೆಲ್ ಗೆ ಹಾಕಿ ಓದಿಸೋದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮೊದಲಿಗೆ ನಾವು ಖರ್ಚಿನ ವಿಚಾರಕ್ಕೆ ಬರೋದಾದರೆ ಹಾಸ್ಟೆಲ್ ನಲ್ಲಿ ಓದಿಸಿದ ಮಕ್ಕಳಿಗೆ ದ್ವಿಗುಣ ಖರ್ಚು ಮಾಡಬೇಕಾಗುತ್ತದೆ. ಪ್ರತಿ ತಿಂಗಳು ಇಂತಿಷ್ಟು ಹಣವನ್ನು ಹಾಸ್ಟೆಲ್ ಗೆ ಪಾವತಿ ಮಾಡಬೇಕು. ಇನ್ನೂ ಶಾಲೆ, ಸಮವಸ್ತ್ರಕ್ಕಾಗಿ ವಾಪಾಸ್ಸ್ ಖರ್ಚು ಮಾಡಬೇಕು. ಅದೇ ಮನೆಯಿಂದಲೇ ಶಾಲೆಗೆ ಹೋದರೆ ಹಾಸ್ಟೆಲ್ ಗೆ ತಗುಲುವ ವೆಚ್ಚವನ್ನು ಉಳಿಸಬಹುದು.
8. ಕಾಳಜಿ ಮಾಡುವವರು ಯಾರೂ ಇರೋದಿಲ್ಲ
ಮಕ್ಕಳು ಮನೆಯಲ್ಲಿ ಅಮ್ಮನ ಆರೈಕೆಯಲ್ಲಿ ಮುದ್ದಾಗಿ ಬೆಳೆಯುತ್ತಾರೆ. ಪ್ರತಿಯೊಂದು ಕೆಲಸವನ್ನು ಅಮ್ಮನೇ ಮಾಡಿಕೊಡುತ್ತಾಳೆ. ಏಕಾಏಕಿ ಹಾಸ್ಟೆಲ್ ಗೆ ಹೋದಾಗ ಅವರಿಗೆ ಎಲ್ಲಾ ಕೆಲಸಗಳನ್ನು ಮಾಡುವುದಕ್ಕೂ ಕಷ್ಟ ಆಗುತ್ತದೆ. ಜೊತೆಗೆ ಅಮ್ಮನ ನೆನಪು ಇನ್ನಿಲ್ಲದಂತೆ ಕಾಡುತ್ತದೆ. ಮನೆಯವರಂತೆ ಅವರನ್ನು ಪ್ರೀತಿ, ಕಾಳಜಿ, ಅಕ್ಕರೆಯಿಂದ ನೋಡಿಕೊಳ್ಳುವವರು ಯಾರೂ ಇರೋದಿಲ್ಲ.
ಮಕ್ಕಳನ್ನು ಹಾಸ್ಟೆಲ್ ಗೆ ಹಾಕೋದ್ರಿಂದ ಅವರು ಈ ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಂತ ಹಾಸ್ಟೆಲ್ ಗೆ ಹೋದ ಎಲ್ಲಾ ಮಕ್ಕಳು ಹಾಳಾಗುತ್ತಾರೆ ಅಂತಾನೂ ಹೇಳೋದಿಕ್ಕಾಗೋದಿಲ್ಲ. ಅದು ಅವರವರ ಮನಸ್ಥಿತಿಗೆ ಬಿಟ್ಟಿದ್ದು.



Click it and Unblock the Notifications

