Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
1 ವರ್ಷದೊಳಗಿನ ಮಕ್ಕಳಿಗೆ ಯಾವ ರೀತಿಯ ತರಕಾರಿಯನ್ನು ನೀಡಬೇಕು?
ತರಕಾರಿ ಅಂದ್ರೆ ಸಾಕು ಹೆಚ್ಚಿನ ಜನ ಮೂಗು ಮುರಿಯುತ್ತಾರೆ. ಅದೇ ಮಾಂಸಾಹಾರ ಅಂದ್ರೆ ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಮಾಂಸಾಹಾರಕ್ಕೆ ಹೋಲಿಸಿದ್ರೆ ಸೊಪ್ಪು ಹಾಗೂ ತರಕಾರಿಗಳು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಅದ್ರಲ್ಲೂ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಕೆಲವೊಂದು ತರಕಾರಿಗಳನ್ನು ತಿನ್ನೋದನ್ನು ಅಭ್ಯಾಸ ಮಾಡಿಸಬೇಕು. ಅಷ್ಟಕ್ಕು ಆರು ತಿಂಗಳಿನಿಂದ ಒಂದು ವರ್ಷದ ಮಕ್ಕಳಿಗೆ ಯಾವ ರೀತಿಯ ತರಕಾರಿಗಳನ್ನು ಕೊಟ್ಟರೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಅನ್ನೋದನ್ನು ತಿಳಿದುಕೊಳ್ಳೋಣ.
ಹೆಚ್ಚಿನ ಮಕ್ಕಳಿಗೆ ಆರು ತಿಂಗಳ ನಂತರ ಘನ ಪದಾರ್ಥಗಳನ್ನು ನೀಡಲಾಗುತ್ತದೆ. ಈ ವಯಸ್ಸಿನಲ್ಲಿ ಅವರ ಜೀರ್ಣಾಂಗ ವ್ಯವಸ್ಥೆ ಅಭಿವೃದ್ಧಿಯ ಹಂತದಲ್ಲಿರುತ್ತದೆ. ಹೀಗಾಗಿ ಮಕ್ಕಳಿಗೆ ನೀವು ನೀಡುವ ಆಹಾರಗಳು ನುಂಗಲು ಮತ್ತು ಜೀರ್ಣಿಸಿಕೊಳ್ಳಲು ಸಾಧ್ಯವಾಗುವಂತಿರಬೇಕು. ಈ ಏಳು ತರಕಾರಿಗಳು ಒಂದು ವರ್ಷದೊಳಗಿನ ಮಕ್ಕಳಿಗೆ ತುಂಬಾನೇ ಒಳ್ಳೆಯದು. ಮಕ್ಕಳಿಗೆ ದಿನನಿತ್ಯದ ಆಹಾರವಾಗಿ ನೀಡಿದ್ರೆ ಯಾವುದೇ ರೀತಿ ತೊಂದರೆ ಆಗೋದಿಲ್ಲ.

1. ಕ್ಯಾರೆಟ್
ಕ್ಯಾರೆಟ್ ಮಕ್ಕಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹೀಗಾಗಿ ನೀವು ಮಕ್ಕಳಿಗೆ ಘನ ಆಹಾರ ಶುರು ಮಾಡಿದ ತಕ್ಷಣ ಕ್ಯಾರೆಟ್ ನೀಡಬಹುದು. ಮೊದಲಿಗೆ ಕ್ಯಾರೆಟ್ ಅನ್ನು ಚೆನ್ನಾಗಿ ಬೇಯಿಸಿ ನಂತರ ಮಕ್ಕಳಿಗೆ ಕೊಡಬೇಕು. ಕ್ಯಾರೆಟ್ ನಲ್ಲಿ ವಿಟಮಿನ್ ಎ ಅಂಶವಿದ್ದು ಇದು ಮಕ್ಕಳ ಕಣ್ಣು ಹಾಗೂ ಚರ್ಮದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
2. ಬಟಾಣಿ
ಬಟಾಣಿಯು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಅದ್ರಲ್ಲೂ ಇದ್ರಲ್ಲಿ ಪ್ರೋಟಿನ್ ಮತ್ತು ವಿಟಮಿನ್ ಬಿ1 ಇರೋದ್ರಿಂದ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಬಟಾಣಿ ಉತ್ತಮವಾಗಿದೆ. ಬಟಾಣಿಯು ಮಕ್ಕಳ ಬೆಳವಣಿಗೆಗೂ ಸಹಾಯಕಾರಿಯಾಗಿದೆ. ವಿಟಮಿನ್ B1 ಆರೋಗ್ಯಕರ ಮೆದುಳಿನ ಬೆಳವಣಿಗೆ ಮತ್ತು ಕಾರ್ಯ ನಿರ್ವಹಿಸೋದಕ್ಕೆ ಸಹಕಾರಿಯಾಗಿದೆ. ಮಕ್ಕಳಿಗೆ ಬಟಾಣಿ ಕೊಡೋ ಮೊದಲು ಅದನ್ನು ಚೆನ್ನಾಗಿ ಬೇಯಿಸಬೇಕು. ನಂತರ ಅದನ್ನು ಪ್ಯೂರಿ ರೀತಿ ಮಾಡಿಕೊಳ್ಳಿ. ಹೀಗೆ ಕೊಟ್ಟರೆ ಮಕ್ಕಳು ತುಂಬಾನೇ ಎಂಜಾಯ್ ಮಾಡಿ ತಿನ್ನುತ್ತಾರೆ.
3. ಪಾಲಕ್ ಸೊಪ್ಪು
ಪಾಲಕ್ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಪಾಲಕ್ ಪೌಷ್ಠಿಕಾಂಶ ಸಮೃದ್ಧವಾದ ಒಂದು ಸೊಪ್ಪಾಗಿದ್ದು ವಿಟಮಿನ್ ಎ, ಬಿ 2, ಬಿ 6, ಬಿ 9, ಕೆ, ಪೊಟ್ಯಾಸಿಯಮ್ ಮತ್ತು ಕಬ್ಬಿಣಾಂಶ ಸಮೃದ್ಧವಾಗಿದೆ. ಮೊದಲಿಗೆ ಪಾಲಕ್ ಅನ್ನು ಚೆನ್ನಾಗಿ ಬೇಯಿಸಿ ಪ್ರೂರಿ ರೀತಿ ತಯಾರಿಸಿ ನಂತರ ನಿಮ್ಮ ಮಗುವಿಗೆ ನೀಡಿ.
4. ಗೆಣಸು
ಗೆಣಸು ತಿನ್ನೋದಕ್ಕೆ ತುಂಬಾನೇ ರುಚಿಕರವಾಗಿದೆ. ಹಾಗೂ ಇದ್ರಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ. ಇನ್ನೂ ಪುಟ್ಟ ಮಕ್ಕಳಿಗೆ ಗೆಣಸು ಸುಲಭವಾಗಿ ಜೀರ್ಣವಾಗುತ್ತದೆ. ಆದರೆ ಮಕ್ಕಳಿಗೆ ಇದನ್ನು ಕೊಡೋ ಮೊದಲು ಚೆನ್ನಾಗಿ ಬೇಯಿಸಿ ಪ್ಯೂರಿ ರೀತಿ ಮಾಡಿಕೊಳ್ಳಬೇಕು. ಕೊಂಚ ಸಮಯ ನಿಮ್ಮ ಮಗುವಿಗೆ ಈ ರೀತಿ ತಿನ್ನೋದನ್ನು ಅಭ್ಯಾಸ ಮಾಡಿಸಿ. ಒಂದು ವೇಳೆ ಮಗುವಿಗೆ ರುಚಿ ಇಷ್ಟವಾದರೆ ಮತ್ತು ಅದರ ಜೀರ್ಣಾಂಗ ವ್ಯವಸ್ಥೆಗೆ ಸರಿ ಹೊಂದಿದರೆ ನಿಯಮಿತವಾಗಿ ನೀಡಬಹುದು. ಬೀಟಾ-ಕ್ಯಾರೋಟಿನಿ, ವಿಟಮಿನ್ ಸಿ, ಪೊಟ್ಯಾಸಿಯಮ್ಸ ಮತ್ತು ಆಹಾರದ ಫೈಬರ್, ಸಿಹಿ ಆಲೂಗಡ್ಡೆಗಳಲ್ಲಿ ಕಂಡುಬರುವ ಪೋಷಕಾಂಶಗಳಾಗಿವೆ.
5. ಚೀನಿ ಕಾಯಿ
ಚೀನಿಕಾಯಿ ಆರೋಗ್ಯದ ದೃಷ್ಟಿಯಿಂದ ಎಷ್ಟು ಒಳ್ಳೆಯದೋ ತಿನ್ನೋದಕ್ಕೂ ಕೂಡ ಅಷ್ಟೇ ರುಚಿಕರವಾಗಿದೆ. ಬೇಯಿಸಿದಾಗ ತುಂಬಾನೇ ಮೃದು ಹಾಗೂ ಸಿಹಿಯಾಗಿರುತ್ತೆ. ಇದನ್ನು ಬೇಯಿಸಿ ಸಿಪ್ಪೆ ತೆಗೆದು ಮಕ್ಕಳಿಗೆ ನೀಡಬೇಕು. ಇದು ದೀರ್ಘಾವಧಿಯ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಅದಲ್ಲದೇ ಇದ್ರಲ್ಲಿ ವಿಟಮಿನ್ ಸಿ, ಬಿ 6, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೈಬರ್‌ನಂತಹ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿದೆ.
6. ಬ್ರೋಕೊಲಿ
ಬ್ರೋಕೊಲಿ ನೋಡೋದಕ್ಕೆ ಹೂಕೋಸಿನಂತಿದ್ದರೂ ದಟ್ಟವಾದ ಪೋಷಕಾಂಶವನ್ನು ಹೊಂದಿರುವ ತರಕಾರಿಯಾಗಿದೆ. ಇದ್ರಲ್ಲಿ ಬೀಟಾ-ಕ್ಯಾರೋಟಿನ್, ವಿಟಮಿನ್‌ಗಳು B6, B9, C ಮತ್ತು K ಸಮೃದ್ಧವಾಗಿದೆ. ಆರು ತಿಂಗಳಿನ ಮಕ್ಕಳಿಗೆ ಇದನ್ನು ಚೆನ್ನಾಗಿ ಬೇಯಿಸಿ ಪ್ಯೂರಿಯಂತೆ ತಯಾರಿಸಿ ಕೊಡಿ. ಇನ್ನೂ ಸ್ವಲ್ಪ ದೊಡ್ಡವರಿಗೆ ಅಂದ್ರೆ ಹಲ್ಲು ಬೆಳೆದಿರೋ ಮಕ್ಕಳಿಗೆ ಚೆನ್ನಾಗಿ ಬೇಯಿಸಿ ಕೊಟ್ಟರೆ ತಿನ್ನಬಹುದು.
7. ಟೊಮೆಟೋ
ಟೊಮೆಟೋ ಲೈಕೋಪೀನ್, ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಯಂತಹ ಹಲವಾರು ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿದೆ. ಟೊಮೆಟೊವನ್ನು ನಿಮ್ಮ ಮಗುವಿಗೆ ಟೊಮೆಟೊ ಸೂಪ್ ತಯಾರಿಸಿ ಕೊಡಬಹುದು. ಟೊಮೆಟೋವನ್ನು ಬೇಯಿಸಿ ಕೂಡ ಕೊಡಬಹುದು. ಇನ್ನೂ ಮಕ್ಕಳು ಆಹಾರವನ್ನು ಚೆನ್ನಾಗಿ ಜಗಿಯುವ ಹಾಗಿದ್ದರೆ ಅದನ್ನು ಸಣ್ಣಗೆ ತುಂಡು ಮಾಡಿ ಕೊಡಿ. ಇದು ಮಕ್ಕಳಿಗೆ ಜಗಿಯಲು ಸುಲಭವಾಗುತ್ತದೆ.
ಒಂದು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಭಯವಿಲ್ಲದೇ ಈ ತರಕಾರಿಗಳನ್ನು ನೀಡಬಹುದು. ಆದರೆ ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ಕೊಡಬೇಕು.



Click it and Unblock the Notifications

