Latest Updates
-
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ
ಮಕ್ಕಳು ಆಕ್ಟೀವ್ ಆಗ್ಬೇಕಾ? ಹಾಗಾದ್ರೆ ಬರಿಗಾಲಿನಲ್ಲಿ ನಡೆಯೋದನ್ನು ಅಭ್ಯಾಸ ಮಾಡಿಸಿ!
ಪಾದಗಳು ಮಾನವ ದೇಹದ ಅತ್ಯಂತ ಸಂವೇದನಾಶೀಲ ಭಾಗಗಳಲ್ಲಿ ಒಂದಾಗಿದೆ. ನಮ್ಮ ಪಾದದ ಅಡಿ ತುಂಬಾನೇ ಸೂಕ್ಷ್ಮವಾಗಿರುತ್ತದೆ. ಸದ್ಯ ನಾಮಗೆಲ್ಲಾ ಚಪ್ಪಲಿಗೆ ಹೊಂದಿಕೊಂಡು ಅಭ್ಯಾಸ ಆಗಿರೋದ್ರಿಂದ ಬರಿಗಾಲಿನಲ್ಲಿ ಹೊರಗಡೆ ನಡೆಯೋದಕ್ಕೆ ನಮ್ಮಿಂದ ಸಾಧ್ಯವಾಗೋದಿಲ್ಲ. ಆದ್ರೆ ನಿಮಗೊತ್ತಾ ಬರಿಗಾಲಿನಲ್ಲಿ ನಡೆಯೋದ್ರಿಂದ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಂತೆ. ನಮ್ಮ ಪಾದವು 26 ಮೂಳೆಗಳು ಮತ್ತು 35 ಕೀಲುಗಳ ದಟ್ಟವಾದ ವಿನ್ಯಾಸವನ್ನು ಹೊಂದಿದೆ. ಹಾಗೂ ಇದು ಅಸ್ಥಿರಜ್ಜುಗಳ ಸಹಾಯವನ್ನು ಪಡೆದುಕೊಳ್ಳುತ್ತದೆ.
ಇನ್ನೂ ಪುಟ್ಟ ಮಕ್ಕಳಲ್ಲಿ ಕಾಲು ದೊಡ್ಡವರಂತೆ ಬೆಳವಣಿಗೆ ಆಗಿರೋದಿಲ್ಲ. ನಡೆಯಲು ಪ್ರಾರಂಭಿಸಿದಾಗ ಚಿಕ್ಕ ಮಕ್ಕಳು ಚಪ್ಪಟೆ ಪಾದವನ್ನು ಹೊಂದಿರುತ್ತಾರೆ. ಮಕ್ಕಳ ಪಾದಗಳಲ್ಲಿ ಸ್ನಾಯುಗಳು, ಮೂಳೆಗಳು ಮತ್ತು ಅಸ್ಥಿರಜ್ಜುಗಳು ಬೆಳವಣಿಗೆಯಲ್ಲಿರುತ್ತದೆ. ಹಾಗೂ ಮಗುವಿನ ಪಾದವು ಕೊಬ್ಬಿನಿಂದ ತುಂಬಿರುತ್ತದೆ ಮತ್ತು ಹೆಚ್ಚು ಮೃದುವಾಗಿರುತ್ತದೆ. ಅಷ್ಟಕ್ಕು ಮಕ್ಕಳು ಬರಿಗಾಲಿನಲ್ಲಿ ನಡೆಯೋದ್ರಿಂದ ಏನೆಲ್ಲಾ ಲಾಭಗಳಿದೆ ಅನ್ನೋದನ್ನು ತಿಳಿಯೋಣ.
ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ?
ಮಕ್ಕಳು ನಡೆಯಲು ಕಲಿಯುವ ಸಂದರ್ಭದಲ್ಲಿ ಅವರು ಬರಿಗಾಲಿನಲ್ಲಿ ನಡೆಯುವುದು ತುಂಬಾನೇ ಒಳ್ಳೆಯದು. ಏಕೆಂದರೆ ಮಕ್ಕಳ ಪುಟ್ಟ ಪಾದಗಳು ಭೂಮಿಯೊಂದಿಗೆ ಸಂಪರ್ಕ ಹೊಂದಿದಾಗ ದೇಹದಲ್ಲಿರುವ ಬಿಳಿ ರಕ್ತ ಕಣಗಳು ಕಡಿಮೆಯಾಗುತ್ತದೆ. ಕೆಂಪು ರಕ್ತ ಕಣಗಳು ಹೆಚ್ಚಾಗುತ್ತದೆ. ಇದರಿಂದ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಕ್ಕಳಿಗೆ ಕಾಲಿನಲ್ಲಿ ಏನಾದರೂ ಸಮಸ್ಯೆ ಇದ್ದರೆ ಒತ್ತಾಯ ಪೂರ್ವಕವಾಗಿ ನಡೆಸೋದಕ್ಕೆ ಹೋಗಬೇಡಿ. ಇಲ್ಲದಿದ್ದರೆ ಬರಿಗಾಲಿನಲ್ಲಿ ನಡೆದರೆ ಒಳ್ಳೆಯದು.
ಸ್ನಾಯುವಿನ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ
ಶಿಶುಗಳು ಬರಿಗಾಲಿನಲ್ಲಿ ನಡೆಯೋದ್ರಿಂದ ಅವರ ಪಾದದ ಸ್ನಾಯುಗಳನ್ನು ಅಭಿವೃದ್ಧಿ ಪಡಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನದಿಂದ ಸಾಭೀತಾಗಿದೆ. ಬರಿಗಾಲಿನಲ್ಲಿ ನಡೆಯೋದ್ರಿಂದ ಚಲನೆಯ ಭಂಗಿಗಳು ಉತ್ತಮವಾಗುತ್ತದೆ.
ಮಗು ಹುಟ್ಟುವ ಸಮಯದಲ್ಲಿ ನಿಮ್ಮ ಮಗುವಿನ ಪುಟ್ಟ ಪಾದಗಳ ಮೂಳೆಗಳು ತುಂಬಾ ಮೃದುವಾಗಿರುತ್ತವೆ. ಮಕ್ಕಳು ಬೆಳೆದಂತೆ ನಿಧಾನವಾಗಿ ಮೂಳೆ ಗಟ್ಟಿಯಾಗುತ್ತದೆ. ಇನ್ನೂ ನಿಧಾನವಾಗಿ ಪಾದಗಳಲ್ಲಿನ ಕೀಲುಗಳು, ಸ್ನಾಯುಗಳು ಮತ್ತು ಅಸ್ಥಿರಜ್ಜುಗಳು ಬೆಳೆಯುತ್ತವೆ. ಇನ್ನೂ ಕೆಲವೊಮ್ಮೆ ಬರಿಗಾಲಿನಲ್ಲಿ ನಡೆಯುವುದು ಮಗುವಿನ ಸ್ನಾಯುವಿನ ಬೆಳವಣಿಗೆಗೆ ತುಂಬಾನೇ ಒಳ್ಳೆಯದು.

ಮಕ್ಕಳಲ್ಲಿ ಚುರುಕುತನ ಮತ್ತು ಜಾಗೃತಿ ಮೂಡಿಸುತ್ತದೆ
ನಿಮ್ಮ ಮಗುವಿನ ಪುಟ್ಟ ಪಾದವು ನೆಲದೊಂದಿಗೆ ನೇರ ಸಂಪರ್ಕದಲ್ಲಿರುವಾಗ ನಿಮ್ಮ ಮಗುವಿನ ಮೆದುಳಿನ ಮೂಲಕ ಮಾಹಿತಿಯನ್ನು ಪಡೆಯುತ್ತದೆ. ಮತ್ತು ಮಗುವಿನ ದೇಹವು ಸಮತೋಲನಕ್ಕೆ ಹೇಗೆ ಹೊಂದಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ.
ಇನ್ನೂ ಪಾದರಕ್ಷೆಗಳನ್ನು ಧರಿಸುವುದರಿಂದ ಮಗುವಿನ ಪಾದಗಳಿಗೆ ರಕ್ಷಣೆ ಇರುತ್ತದೆ. ಅಂದರೆ ನಿಮ್ಮ ಮಗುವಿಗೆ ಸಮತೋಲನವನ್ನು ಸಾಧಿಸಲು ಕಷ್ಟ ಆಗುತ್ತದೆ. ಏಕೆಂದರೆ ಆಗ ಮೆದುಳಿನಿಂದ ಮಾಹಿತಿ ಪಡೆಯೋದಕ್ಕೆ ಸಾಧ್ಯವಿಲ್ಲ. ಮಕ್ಕಳು ಹುಲ್ಲು, ಮರಳು, ಮತ್ತು ಮಣ್ಣಿನಲ್ಲಿ ನಡೆಯೋದ್ರಿಂದ ಅವರ ವಿಶ್ವಾಸ ಮತ್ತಷ್ಟು ಹೆಚ್ಚಾಗುತ್ತದೆ.
ಮಕ್ಕಳಲ್ಲಿ ಸಂವೇದನಾಶೀಲತೆ ಹೆಚ್ಚಾಗುತ್ತದೆ
ಮಕ್ಕಳು ಚಿಕ್ಕವರಿರುವಾಗ ಅವರಲ್ಲಿ ಹೊಸತನ್ನು ಕಲಿಯುವ ಆಸಕ್ತಿ ಹೆಚ್ಚಾಗಿರುತ್ತದೆ. ಸಿಕ್ಕಿದ್ದನ್ನೆಲ್ಲಾ ಮುಟ್ಟುತ್ತಾರೆ, ಆಟ ಆಡುತ್ತಾರೆ. ಆಟದ ಸಾಮಾನುಗಳನ್ನು ಎಸೆಯುತ್ತಾರೆ. ಕೆಲವೊಂದು ಬಾರಿ ಸಿಕ್ಕ ವಸ್ತುಗಳನ್ನು ಬಾಯಿಗೂ ಹಾಕಿಕೊಳ್ಳುತ್ತಾರೆ. ಒಟ್ಟಿನಲ್ಲಿ ನಿಂತಲ್ಲಿ ನಿಲ್ಲೋದಿಲ್ಲ. ಒಟ್ಟಿನಲ್ಲಿ ಮಕ್ಕಳು ಆಕ್ಟೀವ್ ಆಗಿರುತ್ತಾರೆ.
ಮಕ್ಕಳಲ್ಲಿ ಒಟ್ಟು 200,000 ಅಧಿಕ ನರಗಳು ಪಾದದ ಅಡಿಯಲ್ಲಿ ಇರುತ್ತಂತೆ. ಹೀಗಾಗಿ ಅವರ ಚಟುವಟಿಕೆಗಳು ಹೆಚ್ಚಾದಂತೆ ಅವರ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅದ್ರಲ್ಲೂ ಬರೀಗಾಲಿಯಲ್ಲಿ ನಡೆಯೋದ್ರಿಂದ ಅಪಾಯದಿಂದ ಹಿಡಿದು ಪ್ರತಿಯೊಂದು ವಿಚಾರದ ಬಗ್ಗೆ ಅವರಿಗೆ ಮನವರಿಕೆ ಆಗುತ್ತದೆ.
ಮಕ್ಕಳನ್ನು ಆದಷ್ಟು ಹೊರಗಡೆ ಕರೆದುಕೊಂಡು ಹೋಗಿ
ನಡೆಯುವ ಮಕ್ಕಳನ್ನು ಮನೆಯ ಒಳಗಡೆ ಕೂಡಿ ಹಾಕಬೇಡಿ. ಪೋಷಕರು ಆದಷ್ಟು ಮಕ್ಕಳನ್ನು ಹೊರಗಡೆ ಕರೆದುಕೊಂಡು ಹೋಗಿ. ಹೊರಗಡೆ ಕೂಡ ಕೆಲವೊಂದು ಸಲ ಚಪ್ಪಲಿ ಇಲ್ಲದೆ ನಡೆದಾಡುವುದನ್ನು ಅಭ್ಯಾಸ ಮಾಡಿಸಿ. ಪಾರ್ಕ್ ಗೆ ಕರೆದುಕೊಂಡು ಹೋಗಿ, ರಸ್ತೆಯಲ್ಲಿ ವಾಕಿಂಗ್ ಮಾಡಿಸಿ. ಇದರಿಂದ ಅವರ ನಡಿಗೆಗೆ ತುಂಬಾನೇ ಸಹಾಯಕಾರಿ ಆಗುತ್ತದೆ.
ಮಕ್ಕಳನ್ನು ಸೂಕ್ಷ್ಮವಾಗಿ ಸಾಕುವುದು ಕೂಡ ಒಳ್ಳೆಯದಲ್ಲ. ಚಿಕ್ಕಂದಿನಿಂದಲೇ ಅವರು ಸ್ಟ್ರಾಂಗ್ ಆಗಿ ಇದ್ದರೆ ಅವರ ಬೆಳವಣಿಗೆಗೆ ಇದು ಸಹಾಯವಾಗುತ್ತದೆ.



Click it and Unblock the Notifications











