Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಹೋಂವರ್ಕ್ ಮಾಡುತ್ತಿದ್ದ ಯುಕೆಜಿ ಮಗು ಕೆಳಗೆ ಬಿದ್ದು ಪೆನ್ನು ಚುಚ್ಚಿ ಸಾವು: ವಿಧಿಯೇ ನೀನೆಷ್ಟು ಕ್ರೂರಿ
ತೆಲಂಗಾಣದಲ್ಲಿ ನಡೆದ ಈ ದುರ್ಘಟನೆಗೆ ನಿರ್ಲಕ್ಷ್ಯ ಎಂದು ಹೇಳಲು ಸಾಧ್ಯವಿಲ್ಲ, ವಿಧಿಯ ಕ್ರೂರ ಆಟವಷ್ಟೇ.. ಮಂಚದ ಮೇಲೆ ಕೂತು ಹೋಂವರ್ಕ್ ಮಾಡುತ್ತಿರುವ ಮುದ್ದಿನ ಮಗಳು ಬಾರದ ಲೋಕಕ್ಕೆ ಹೋಗುತ್ತಾಳೆ ಎಂದು ಆ ತಂದೆ-ತಾಯಿ ಊಹಿಸಲು ಹೇಗೆ ತಾನೆ ಸಾಧ್ಯ?
ಏನಾದರೂ ಚೂಪಾದ ವಸ್ತುವಿನ ಜೊತೆ ಆಡುವಾಗ ಜೋಪಾನ ಎಂದು ಹೇಳುತ್ತೇವೆ, ಆದರೆ ಈ ಪುಟ್ಟ ಕಂದಮ್ಮನ ಪ್ರಾಣಕ್ಕೆ ಕುತ್ತು ಬಂದಿರುವುದು ಪೆನ್ನಿನಿಂದ. ಈ ಮೃತ ಬಾಲಕಿಯ ಹೆಸರು ರಿಯಾಂಶಿಕಾ.

ತೆಲಂಗಾಣದ ಭದ್ರಾಚಲಂ ನಗರದಲ್ಲಿದೆ ಈ ಪುಟಾಣಿಯ ಕುಟುಂಬ. ಯುಕೆಜಿ ಓದುತ್ತಿರುವ ಈ ಪುಟ್ಟ ಕಂದಮ್ಮ ಎಂದಿನಂತೆ ಅಂದು ಕೂಡ ಶಾಲೆಗೆ ಖುಷಿ-ಖುಷಿಯಿಂದ ಬಂದಿದೆ. ನಂತರ ಎಂದಿನಂತೆ ಹೋಂವರ್ಕ್ ಮುಗಿಸಲು ಮಂಚದ ಮೇಲೆ ಕೂತಿದೆ. ಮಕ್ಕಳು ಹೋಂವರ್ಕ್ ಮಾಡಲು ಸುಮ್ಮನೆ ಕೂರಲ್ಲ ಅಲ್ವಾ? ಅದರಂತೆ ಈ ಮಗು ಕೂಡ ಆಟವಾಡುತ್ತಾ ಹೋಂವರ್ಕ್ ಮಾಡುವಾಗ ಮಂಚದಿಂದ ಕೆಳಗೆ ಬಿದ್ದಿದೆ. ಆದರೆ ಬೀಳುವಾಗ ಮಗುವಿನ ಕೈಯಲ್ಲಿರುವ ಪೆನ್ನಿನ ತುದಿ ಮಗುವಿನ ತಲೆಯೊಳಗೆ ಚುಚ್ಚಿಕೊಂಡಿದೆ.
ಆ ಮಗುವನ್ನು ಮನೆಯವರು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರು, ಸರ್ಜರಿ ಮಾಡಿದರೂ ಮಗು ಬದುಕಿಳಿಯಲಿಲ್ಲ, ಮಗುವಿನ ಭವಿಷ್ಯ ಬೆಳಗಬೇಕಾಗಿದ್ದ ಮಗುವಿನ ಜೀವ ತೆಗೆದಿದ್ದು ಮಾತ್ರ ವಿಧಿಯ ಕ್ರೂರ ಆಟ ಎಂದು ಹೇಳದೆ ಇನ್ನೇನು ಹೇಳಲು ಸಾಧ್ಯ?
ಮಕ್ಕಳಿಗೆ ಚೂಪಾದ ವಸ್ತುಗಳ ಜೊತೆ ಆಡಲು ಬಿಡಬೇಡಿ
ಪೆನ್ನು ಜೊತೆ ಆಡುವಾಗ ನಾವ್ಯಾರು ಗಮನ ನೀಡುವುದಿಲ್ಲ, ಇನ್ನು ಜಾಗ್ರತೆವಹಿಸಬೇಕು, ಪೆನ್ನಿನಲ್ಲಿ ಬರೆಯುವಾಗ ಅವರ ಜೊತೆ ಕೂರಿ, ನಂತರ ತೆಗೆದಿಲು ಹೇಳಿ ಬಳಿಕ ಆಟವಾಡಲು ಹೇಳಿ. ಇನ್ನು ಚೂಪಾದ ವಸ್ತುಗಳ ಜೊತೆಗೆ ಆಡಲು ಬಿಡಬೇಡಿ.
ಮಕ್ಕಳ ವಿಷಯದಲ್ಲಿ ಪೋಷಕರು ಎಷ್ಟು ಜಾಗ್ರತೆವಹಿಸಿದರೂ ಸಾಲದು
ಇಲ್ಲಿ ಪೋಷಕರದ್ದು ನಿರ್ಲಕ್ಷ್ಯ ಎಂದು ಹೇಳಲು ಸಾಧ್ಯವಿಲ್ಲ, ಮಗು ಎಂದಿನಂತೆ ಹೋಂವರ್ಕ್ ಮಾಡಲು ಕೂತಿದೆ, ಓದುವ ಮಗುವಿಗೆ ಪೆನ್ನು, ಪೆನ್ಸಿಲ್ ಹಿಡಿಯಬೇಡ ಎಂದು ಹೇಳಲು ಸಾಧ್ಯವೇ? ಆದರೆ ಇಂಥದ್ದೆಲ್ಲಾ ಕೇಳಿದ ಮೇಲೆ ಪೆನ್ನು ಬರೆದು ಆದರೆ ತೆಗೆದಿಡಲು ಹೇಳಿ, ಅದರಲ್ಲಿ ಆಟ ಆಡಿಕೊಂಡು ಕೂರಲು ಬಿಡದಿರಿ.
ಕೆಲವೊಂದು ಪೆನ್ನಿನ ತುದಿ ತುಂಬಾನೇ ಶಾರ್ಪ್ ಇರುತ್ತದೆ
ತುಂಬಾ ಚೂಪಾದ ಪೆನ್ನು ಬದಲಿಗೆ ತುದಿ ರೌಂಡ್ ಆಗಿರುವುದು ಸಿಗುತ್ತದೆ, ಅಂಥ ಪೆನ್ನು ಆಯ್ಕೆ ಮಾಡಿದರೆ ಇನ್ನೂ ಒಳ್ಳೆಯದು, ಪೆನ್ನು ತುಂಬಾ ಚಿಕ್ಕ ಮಕ್ಕಳಿಗೆ ಕೊಡುವುದಕ್ಕಿಂತ ಪೆನ್ಸಿಲ್ ನೀಡಿ, ಅದು ಮುರಿದು ಹೋಗುತ್ತದೆ.
ಆದರೆ ಇಮಥ ಘಟನೆ ನೋಡುವಾಗ ಸಾವು ಬಂದಾಗ ಸಾವಿಗೆ ಒಂದು ನೆಪವಷ್ಟೇ ಎಂದನಿಸುವುದು ಅಲ್ವಾ?



Click it and Unblock the Notifications
