Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಹೈಪರ್ ಆಕ್ಟೀವ್ ಮಕ್ಕಳಿಗೆ ಇಂತಹ ಆಟಗಳನ್ನು ಆಡಿಸಿದ್ರೆ ಅವರ ಕೌಶಲ್ಯಗಳು ಹೆಚ್ಚಾಗುತ್ತೆ!
ಎಲ್ಲಾ ಮಕ್ಕಳು ಒಂದೇ ರೀತಿ ಇರೋದಿಲ್ಲ. ಕೆಲವೊಂದು ಮಕ್ಕಳು ತುಂಬಾನೇ ಆಕ್ಟೀವ್ ಆಗಿ ಇರ್ತಾರೆ. ಕೂತಲ್ಲಿ ಕೂರೋದಿಲ್ಲ. ಪ್ರತಿ ಕ್ಷಣ ಆಟ ಆಡುತ್ತಾನೆ ಇರುತ್ತಾರೆ. ತಂದೆ- ತಾಯಿಗೆ ಇಂತಹ ಮಕ್ಕಳನ್ನು ನಿಯಂತ್ರಿಸೋದು ಕಷ್ಟ ಸಾಧ್ಯ. ಮಕ್ಕಳು ಆಕ್ಟೀವ್ ಆಗಿದ್ರೆ ಖಂಡಿತ ಅವರಿಗೆ ಪ್ರೋತ್ಸಾಹ ನೀಡಲೇಬೇಕು. ನಿಮ್ಮ ಮಗು ಹೈಪರ್ ಆಕ್ಟೀವ್ ಆಗಿದ್ಯಾ ಅನ್ನೋದನ್ನು ಗುರುತಿಸೋದು ಪೋಷಕರ ಕರ್ತವ್ಯ ಕೂಡ ಹೌದು.
ಹೈಪರ್ ಆಕ್ಟೀವ್ ಮಗುವನ್ನು ಗುರುತಿಸೋದು ಹೇಗೆ?
ನಿಮ್ಮ ಮಗು ಹೈಪರ್ ಆಕ್ಟೀವ್ ಆಗಿದೆ ಅಂತ ಗುರುತಿಸೋದು ಸುಲಭ. ಯಾಕಂದ್ರೆ ಹೈಪರ್ ಆಕ್ಟೀವ್ ಮಕ್ಕಳು ಯಾರಿರ್ತಾರೋ ಅವರು ತಂದೆ-ತಾಯಿ ಹೇಳಿದ ಮಾತನ್ನು ಕೇಳೋದಿಲ್ಲ. ಒಂದು ವೇಳೆ ಪೋಷಕರು ಅವರಿಗೆ ಯಾವುದಾದರೂ ವಿಚಾರವನ್ನು ಕೇಳೋದಕ್ಕೆ ಒತ್ತಡ ಹಾಕಿದ್ರೆ ಅವರು ಬಹುಬೇಗನೇ ಕೋಪಗೊಳ್ಳುತ್ತಾರೆ, ಆತಂಕಕ್ಕೆ ಒಳಗಾಗುತ್ತಾರೆ. ಇನ್ನೂ ಹೈಪರ್ ಆಕ್ಟೀವ್ ಆಗಿರೋ ಮಕ್ಕಳು ನೀವು ಬೇರೆಯವರ ಜೊತೆಗೆ ಮಾತನಾಡುತ್ತಿರಬೇಕಾದರೆ ಮಧ್ಯೆ ಬಂದು ತೊಂದರೆ ಮಾಡುತ್ತಾರೆ. ಹೈಪರ್ ಆಕ್ಟೀವ್ ಮಕ್ಕಳ ಮತ್ತೊಂದು ಗುಣ ಅಂದ್ರೆ ಅವರು ಯಾವಾಗ್ಲೂ ಎನರ್ಜಿಟಿಕ್ ಆಗಿ ಇರ್ತಾರೆ.

ನಿಮ್ಮ ಮಗು ಹೈಪರ್ ಆಕ್ಟೀವ್ ಆಗಿದ್ರೆ ನೀವು ಚಿಂತಿಸಬೇಕಾದ ಅವಶ್ಯಕತೆ ಇಲ್ಲ. ಯಾಕಂದ್ರೆ ಮಕ್ಕಳ ಮೆದುಳು ಚುರುಕಾಗಿದ್ದಾಗ ಅವರು ಹೈಪರ್ ಆಕ್ಟೀವ್ ಆಗುತ್ತಾರೆ. ಹೈಪರ್ ಆಕ್ಟೀವ್ ಆಗಿದ್ದಾರೆ ಅನ್ನೋ ಕಾರಣಕ್ಕೆ ಅವರನ್ನು ಕೆಟ್ಟ ಮಗು ಅಂತ ಹೇಳೋದಿಕ್ಕಾಗೋದಿಲ್ಲ. ಹೈಪರ್ ಆಕ್ಟೀವ್ ಮಕ್ಕಳ ಕಡೆಗೆ ಪೋಷಕರು ಹೆಚ್ಚಿನ ಗಮನ ನೀಡಬೇಕು. ಅವರ ಎನರ್ಜಿಯನ್ನು ಉತ್ತಮ ಕೌಶಲ್ಯವನ್ನು ಬೆಳೆಸುವ ಕಡೆಗೆ ತಿರುಗಿಸೋದು ಪೋಷಕರ ಕರ್ತವ್ಯ. ಅಷ್ಟಕ್ಕು ಹೈಪರ್ ಆಕ್ಟೀವ್ ಮಕ್ಕಳಿಗೆ ಯಾವ ರೀತಿಯ ಆಟ ಅಥವಾ ಚಟುವಟಿಕೆಗಳನ್ನು ಮಾಡಿಸಬೇಕು ಅನ್ನೋದನ್ನು ತಿಳಿಯೋಣ.
1. ಕರಾಟೆ
ಹೈಪರ್ ಆಕ್ಟೀವ್ ಮಕ್ಕಳಿಗೆ ಕರಾಟೆ ಕಲಿಸೋದು ತುಂಬಾನೇ ಒಳ್ಳೆಯದು. ಯಾಕಂದ್ರೆ ಅವರು ತಮ್ಮ ಸಂಪೂರ್ಣ ಎನರ್ಜಿಯನ್ನು ಕರಾಟೆ ಮಾಡೋದಕ್ಕೆ ಉಪಯೋಗಿಸಬಹುದು. ದು ಅವರ ಏಕಾಗ್ರತೆಯ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಅವರ ಮನಸ್ಸನ್ನು ಶಾಂತಗೊಳಿಸುತ್ತದೆ. ಇನ್ನೂ ಕರಾಟೆ ಹೊರತಾಗಿ ಯಾವುದಾದರೂ ಸಮರ ಕಲೆಗಳನ್ನು ಕಲಿಸೋದು ಕೂಡ ಉತ್ತಮ. ಸಮರ ಕಲೆಗಳು ಮೆದುಳಿನಲ್ಲಿನ ನರಗಳ ಜಾಲಗಳನ್ನು ಬಲಪಡಿಸುತ್ತದೆ. ಅಷ್ಟೇ ಅಲ್ಲ, ಇದರಿಂದ ಹೈಪರ್ ಆಕ್ಟೀವ್ ಮಕ್ಕಳು ಸ್ವಯಂ ನಿಯಂತ್ರಣವನ್ನು ಸಾಧಿಸಬಹುದು ಎಂದು ಅಧ್ಯಾಯನದಿಂದ ಸಾಬೀತಾಗಿದೆ.
2. ಕ್ರೀಡಾ ಚಟುವಟಿಕೆಗಳನ್ನು ಅಭ್ಯಾಸ ಮಾಡಿಸಿ
ನಿಮ್ಮ ಹೈಪರ್ ಆಕ್ಟೀವ್ ಮಗುವನ್ನು ಮೂರು ಹೊತ್ತು ಮನೆಯೊಳಗಡೆ ಕೂರಿಸಬೇಡಿ. ಪ್ರತಿದಿನ ಹೊರಾಂಗಣ ಆಟವನ್ನು ಅಭ್ಯಾಸ ಮಾಡಿಸಿ. ಇದರಿಂದ ಅವರು ತಮ್ಮ ಎನರ್ಜಿಯನ್ನು ಹೊರಗಿನ ಆಟ ಆಡೋದಕ್ಕೆ ಬಳಸಿಕೊಳ್ಳಬಹುದು. ಫುಟ್‌ಬಾಲ್, ಬ್ಯಾಸ್ಕೆಟ್‌ಬಾಲ್, ವಾಲಿಬಾಲ್ ಮತ್ತು ಬ್ಯಾಡ್ಮಿಂಟನ್ ಯಾವುದೇ ಆಗಲಿ ಅವರ ಆಯ್ಕೆಯ ಆಟವನ್ನೇ ಆಡಿಸಿ. ಇಂತಹ ಕ್ರೀಡೆಗಳು ಮಕ್ಕಳಲ್ಲಿ ಉತ್ಸಾಹ, ಕ್ರೀಡಾ ಮನೋಭಾವವನ್ನು ಬೆಳೆಸೋದಕ್ಕೆ ಸಹಾಯ ಮಾಡುತ್ತದೆ.
3. ಹಾಡು ಕೇಳುವ ಅಭ್ಯಾಸ ಮಾಡಿಸಿ
ಹೈಪರ್ ಆಕ್ಟಿವ್ ಮಗುವನ್ನು ನಿಭಾಯಿಸುವ ಒಂದು ಮಾರ್ಗವೆಂದರೆ ಕ್ರೀಡೆಗಳಲ್ಲಿ ಅವರನ್ನು ತಲ್ಲೀನರಾಗುವಂತೆ ಮಾಡುವುದು. ಆದರೆ ಎಲ್ಲಾ ಸಮಯದಲ್ಲೂ ಆಟ ಆಡಿಸೋದಕ್ಕೆ ಆಗೋದಿಲ್ಲ. ಆಟೋಟ ಚಟುವಟಿಕೆಗಳನ್ನು ಬಿಟ್ಟು ಉಳಿದ ಸಮಯದಲ್ಲಿ ಅವರನ್ನು ನಿಯಂತ್ರಿಸೋದು ಕಷ್ಟ. ಅವರು ತಮ್ಮ ಸ್ಥಿರತೆಯನ್ನು ಕಳೆದುಕೊಂಡು ಬಿಡುತ್ತಾರೆ.
ಇಂತಹ ಸಂದರ್ಭದಲ್ಲಿ ನಿಮ್ಮ ಹೈಪರ್ ಆಕ್ಟೀವ್ ಮಗುವಿಗೆ ಸಂಗೀತ ಕೇಳುವ ಅಭ್ಯಾಸವನ್ನು ಮಾಡಿಸಿ. ಇದು ನಿಮ್ಮ ಮಗುವಿನ ಮನಸ್ಸನ್ನು ಶಾಂತಗೊಳಿಸಲು ನೆರವಾಗುತ್ತದೆ. ಬೇರೆ ಬೇರೆ ಹಾಡುಗಳನ್ನು ಕೇಳಿಸಿ, ಅದ್ರಲ್ಲಿ ಅವರಿಗೆ ಇಷ್ಟವಾದ ಹಾಡನ್ನು ಆಯ್ಕೆ ಮಾಡೋದಕ್ಕೆ ಹೇಳಿ. ಒಂದು ವೇಳೆ ಅವರು ಸಂಗೀತದ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಅನ್ನಿಸಿದ್ರೆ ಸಂಗೀತ ಅಭ್ಯಾಸ ಮಾಡೋದನ್ನು ಕಲಿಸಿ. ಅಥವಾ ಯಾವುದಾದರೂ ವಾದ್ಯ ನುಡಿಸೋದನ್ನು ಅಭ್ಯಾಸ ಮಾಡಿಸಿ.
4. ಈಜುವುದು
ಹೈಪರ್ ಆಕ್ಟಿವ್ ಮಕ್ಕಳಿಗೆ ಈಜು ಉತ್ತಮ ವ್ಯಾಯಾಮವಾಗಿದೆ. ಇದು ಹೆಚ್ಚುವರಿ ಶಕ್ತಿಯನ್ನು ಬಿಡುಗಡೆ ಮಾಡಲು, ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ದಿನ ನಿತ್ಯ ಈಜಾಡೋದ್ರಿಂದ ನಿಮ್ಮ ಮಗುವಿನಲ್ಲಿರೋ ಚಡಪಡಿಕೆ ಕಡಿಮೆ ಆಗುತ್ತದೆ. ಇದರಿಂದ ನಿಮ್ಮ ಮಗುವಿನ ಸ್ವಾಭಿಮಾನ ಕೂಡ ಹೆಚ್ಚಾಗಬಹುದು ಎಂದು ಅಧ್ಯಯನಗಳು ಸಾಬೀತು ಪಡಿಸಿದೆ.
ನಿಮಗೊತ್ತಾ ಪ್ರಸಿದ್ಧ ಈಜುಗಾರ ಮತ್ತು ಒಲಂಪಿಕ್ ಚಿನ್ನದ ಪದಕ ವಿಜೇತ ಮೈಕೆಲ್ ಫೆಲ್ಪ್ಸ್ 9 ನೇ ವಯಸ್ಸಿನವರೆಗೂ ತುಂಬಾನೇ ಹೈಪರ್ ಆಕ್ಟೀವ್ ಆಗಿದ್ದಂತೆ. ಆದ್ರೆ ಈಜಾಡೋ ಅಭ್ಯಾಸ ಮಾಡಿದ ನಂತರ ಅವರ ಮನಸ್ಸನ್ನು ಶಾಂತಗೊಳಿಸಲು ಮತ್ತು ಮೊದಲ ಬಾರಿಗೆ ಮನಸ್ಸನ್ನು ನಿಯಂತ್ರಣದಲ್ಲಿರಲು ಸಹಾಯ ಮಾಡಿತಂತೆ.
5. ಮನಸ್ಸಿನ ಸ್ಥಿರತೆಗಾಗಿ ಚೆಸ್ ಆಡಿಸಿ
ನಿಮ್ಮ ಮಗುವನ್ನು ಸಕ್ರಿಯ ದೈಹಿಕ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಕೂಡ ಒಂದು ರೀತಿಯಲ್ಲಿ ಉತ್ತಮ ಆಯ್ಕೆ. ಇದ್ರ ಜೊತೆಗೆ ಅವರ ಮನಸ್ಸನ್ನು ಸ್ಥಿರವಾಗಿ ಇಟ್ಟುಕೊಳ್ಳೋದಕ್ಕೆ ಚೆಸ್ ನಂತಹ ಆಟಗಳನ್ನು ಆಡಿಸಬಹುದು. ಪಜಲ್ ಆಟ, ಲುಡೋ, ಚೆಸ್ ಇತ್ಯಾದಿ. ಇದರಿಂದಾಗುವ ದೊಡ್ಡ ಪ್ರಯೋಜನವೆಂದರೆ ನಿಮ್ಮ ಮಗುವಿನ ಆಲೋಚನಾ ಕೌಶಲ್ಯ ಮತ್ತು ಏಕಾಗ್ರತೆಯ ಶಕ್ತಿಯನ್ನು ಸುಧಾರಿಸುತ್ತದೆ.
ಒಟ್ಟಿನಲ್ಲಿ ನಿಮ್ಮ ಮನೆಯಲ್ಲಿ ಹೈಪರ್ ಆಕ್ಟೀವ್ ಮಕ್ಕಳಿದ್ದರೆ ಅವರಿಂದ ಈ ಚಟುವಟಿಕೆಗಳನ್ನು ಮಾಡಿಸೋದನ್ನು ಖಂಡಿತ ಮರೀಬೇಡಿ.



Click it and Unblock the Notifications
