Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಬೇಸಿಗೆಯಲ್ಲಿ ಮಗುವಿಗೆ ಬೆವರು ಕಜ್ಜಿ ಬಾರದಿರಲು ಈ ರೀತಿ ಆರೈಕೆ ಮಾಡಬೇಕು ನೋಡಿ
ಈ ವರ್ಷ ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಬೇಸಿಗೆಯಲ್ಲಿ ಸೆಕೆಯನ್ನು ನಮಗೇ ಸಹಿಸಿಕೊಳ್ಳಲು ಕಷ್ಟವಾಗುವುದು, ಅಂಥದ್ದರಲ್ಲಿ ಚಿಕ್ಕ ಮಕ್ಕಳಿಗೆ ಅದರಲ್ಲೂ ಒಂದು ವರ್ಷದ ಕೆಳಗಿನ ಮಕ್ಕಳಿಗೆ ತುಂಬಾನೇ ಕಷ್ಟವಾಗುವುದು. ಅವರಿಗೆ ಯಲ್ಲಿ ಕೆಂಪು ಬೊಬ್ಬೆಗಳು ಬರುವುದು, ಮಕ್ಕಳಿಗೆ ಬೆವರು ಕಜ್ಜಿಯಾಗುವುದು, ಆದ್ದರಿಂದ ನೀವು ಈ ಬಗ್ಗೆ ತುಂಬಾನೇ ಜಾಗ್ರತೆವಹಿಸಬೇಕು.

ಬೇಸಿಗೆಯಲ್ಲಿ ಕಂಡು ಬರುವ ಸಮಸ್ಯೆಗಳು
ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು
ಬೇಧಿ
ವಾಂತಿ
ಸನ್‌ಬರ್ನ್
ಹಾರ್ಟ್‌ಸ್ಟ್ರೋಕ್
ಕೀಟಗಳ ಕಡಿತ
ತ್ವಚೆಗಳಲ್ಲಿ ಬೆವರು ಕಜ್ಜಿ ಅಥವಾ ಬೊಬ್ಬೆ ಬರುವುದು
ಬೇಸಿಗೆಯಲ್ಲಿ ಮಗುವಿಗೆ ಸ್ನಾನ ಮಾಡುವಾಗ ಈ ಜಾಗ್ರತೆವಹಿಸಬೇಕು
ನೀವು ಬೇಸಿಗೆಯ ಒಂದು ಬಾರಿ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸ್ನಾನ ಮಾಡಿಸಿ. ಕೆಲವರು ಮಕ್ಕಳನ್ನು ತುಂಬಾಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡಿಸುತ್ತಾರೆ. ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿದರೆ ಮಗು ತುಂಬಾ ಹೊತ್ತು ನಿದ್ದೆ ಮಾಡುತ್ತದೆ ಎಂದು ಅಜ್ಜಿಂದಿರು ಹೇಳುವುದನ್ನು ಕೇಳಿ ತುಂಬಾನೇ ಬಿಸಿ ಬಿಸಿ ನೀರು ಮೈಗೆ ಹಾಕಲಾಗುವುದು, ಆದರೆ ಬೇಸಿಗೆಯಲ್ಲಿ ನೀವು ಮಗುವಿನ ಮೈಗೆ ತುಂಬಾ ಬಿಸಿ ಬಿಸಿಯಾದ ನೀರು ಹಾಕಬೇಡಿ. ಉಗುರು ಬೆಚ್ಚಗಿನ ನೀರು ಹಾಕಿದರೆ ಸಾಕು, ಅಲ್ಲದೆ ರಾತ್ರಿ ಮಗುವಿಗೆ ಸ್ಪಾಂಜ್ ಬಾತ್ ಅಥವಾ ಸ್ವಲ್ಪ ನೀರು ಮೈಗೆ ಹಾಕುವುದರಿಂದ ಮಗು ಸುಖವಾಗಿ ನಿದ್ದೆ ಮಾಡುತ್ತದೆ.
ಮಗುವನ್ನು ಚೆನ್ನಾಗಿ ಒರೆಸಬೇಕು
ಸ್ನಾನದ ಬಳಿಕ ಮಗುವಿನ ಮೈಯನ್ನು ಚೆನ್ನಾಗಿ ಒರೆಸಬೇಕು. ಅದರಲ್ಲೂ ಕುತ್ತಿಗೆ, ಕಂಕುಳ, ಕೈ, ತೊಡೆಗಳನ್ನು ಒರೆಸಬೇಕು. ಮೃದುವಾದ ಬಟ್ಟೆಯಿಂದ ಒರೆಸಿ.
ಮಗುವನ್ನು ಬಿಸಿಲಿನಲ್ಲಿ ಹಿಡಿಯಬೇಡಿ
ಬೇಸಿಗೆಯಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮಗುವನ್ನು ನೇರವಾಗಿ ಬಿಸಿಲಿನಲ್ಲಿ ಹಿಡಿಯಬೇಡಿ. ಹೊರಗಡೆ ಹೋಗುವಾಗ ಮಗುವಿಗೆ ತಲೆ ಮೇಲೆ ತೆಳು ಕಾಟನ್ ಬಟ್ಟೆ ಹಾಕಿ. ಕೊಡೆಯನ್ನು ಹಿಡಿಯಿರಿ. ನೇರವಾಗಿ ಬಿಸಿಲಿನಲ್ಲಿ ಹಿಡಿದು ತಿರುಗಾಡಬೇಡಿ, ಸಾಧ್ಯವಾದರೆ ಆ ಹೊತ್ತಿನಲ್ಲಿ ಮಕ್ಕಳ ಜೊತೆಗೆ ಹೊರಗಡೆ ಹೋಗಬೇಡಿ.
ಸಾಕಷ್ಟು ನೀರು ಕೊಡಿ
0-6 ತಿಂಗಳಿನ ಮಗುವಿಗೆ ಎದೆ ಹಾಲನ್ನು ಆಗಾಗ ಕುಡಿಸಿ, 6 ತಿಂಗಳು ಕಳೆದಿರುವ ಮಗುವಿಗೆ ನೀರು ಕೊಡಿ, ತಾಜಾ ಹಣ್ಣಿನ ಜ್ಯೂಸ್ ನೀಡಿ. ಮಗುವಿನಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ. ಮಗುವಿಗೆ ಆಹಾರ ನೀಡುವಾಗ ಕೂಡ ದ್ರವಾಂಶದ ಆಹಾರ ನೀಡಿ.
ಸಡಿಲವಾದ ಹತ್ತಿಯ ಬಟ್ಟೆ ಹಾಕಿ ಕೊಡಿ
ಮಗುವಿಗೆ ಬಿಗಿಯಾದ ಉಡುಪು ಹಾಕಬೇಡಿ, ತೆಳುವಾದ ಹತ್ತಿಯ ಬಟ್ಟೆ ಹಾಕಿ ಕೊಡಿ, ಸಡಿಲವಾದ ಉಡುಪು ಸೆಕೆಯನ್ನು ತಡೆಯುವಲ್ಲಿ ಸಹಕಾರಿಯಾಗಿದೆ.
ಎಣ್ಣೆಯ ಮಸಾಜ್ ಒಳ್ಳೆಯದು
ಮಗುವಿಗೆ ಎಣ್ಣೆಯ ಮಸಾಜ್ ಮಾಡಿ, ಇದು ಮಗುವಿನಲ್ಲಿ ಬೆವರು ಕಜ್ಜಿಯಾಗುವುದು, ಮೈಯಲ್ಲಿ ಬೊಬ್ಬೆ ಹೇಳುವುದನ್ನು ತಡೆಗಟ್ಟಲು ಸಹಕಾರಿ. ಎಳ್ಳೆಣ್ಣೆಯ ಮಸಾಜ್ ಒಳ್ಳೆಯದು, ತೆಂಗಿನೆಣ್ಣೆ ಜೊತೆಗೆ ಸ್ವಲ್ಪ ಎಳ್ಳೆಣ್ಣೆ ಸೇರಿಸಿ ಮಸಾಜ್ ಮಾಡಿ, ಚಳಿಗಾಲ, ಮಳೆಗಾಲದಲ್ಲಿ ಸಾಸಿವೆಯೆಣ್ಣೆಯ ಮಸಾಜ್ ಒಳ್ಳೆಯದು.
ಡಯಾಪರ್ ಧರಿಸಿದಾಗ ಉಂಟಾಗುವ ಗುಳ್ಳೆಗಳು
ಈ ಬೇಸಿಗೆಯಲ್ಲಿ ಡಯಾಪರ್ ಹಾಕುವುದರಿಂದ ಆ ಭಾಗದಲ್ಲಿ ಕೆಂಪಾಗುವುದು, ಕಜ್ಜಿ ಉಂಟಾಗುವುದು, ಗಾಯವಾಗುವುದು ಈ ರೀತಿಯ ಸಮಸ್ಯೆ ಕಂಡು ಬರುವುದು, ಆದ್ದರಿಂದ ನೀವು ಮನೆಯಲ್ಲಿ ಇರುವಾಗ ಬಟ್ಟೆ ಕಟ್ಟಿಕೊಡಿ, ಡಯಾಪರ್ ಬಳಸಬೇಡಿ, ಬಟ್ಟೆ ಸ್ವಲ್ಪ ಬದಲಾಯಿಸಬೇಕು, ಆದರೆ ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಎಸಿ ಅಥವಾ ಫ್ಯಾನ್ ಬಳಸಿ
ಮಗುವಿಗೆ ಎಸಿ ತುಂಬಾ ಹಾಕಿದರೆ ಶೀತವಾಗಬಹುದು, ಆದ್ದರಿಂದ ಎಸಿಯನ್ನು 24-26 ಡಿಗ್ರಿಯಲ್ಲಿ ಇಡಿ. ಫ್ಯಾನ್ ಕೂಡ ಮೆಲ್ಲನೆ ಹಾಕಬಹುದು.
ಮಗುವಿಗೆ ಬೇಸಿಗೆಯಲ್ಲಿ ಹೀಟ್ ಗುಳ್ಳೆಗಳು ಆಗುವುದನ್ನು ತಡೆಗಟ್ಟುವುದು ಹೇಗೆ?
ಮಗುವಿಗೆ ಸಡಿಲವಾದ ಹತ್ತಿಯ ಬಟ್ಟೆ ಧರಿಸಿ, ಮಗುವನ್ನು ಮಲಗಿಸಿದ ಮೇಲೆ ದಪ್ಪ ಬ್ಲಾಂಕೆಟ್ ಹಾಕಬೇಡಿ
ಬಿಸಿಲಿನಲ್ಲಿ ಮಗುವನ್ನು ಹಿಡಿಯಬೇಡಿ
ಮಗು ತುಂಬಾ ಬೆವರುತ್ತಿದ್ದರೆ ಗಮನಿಸಿ, ಎಸಿ ಅಥವಾ ಫ್ಯಾನ್ ಹಾಕಿಕೊಡಿ.
ಸ್ವಲ್ಪ ಬಿಸಿ ಇರುವ ನೀರನ್ನು ಮೈಗೆ ಹಾಕಿ.



Click it and Unblock the Notifications
