Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತಾಯಂದಿರೇ ಬೇಸಿಗೆ ಕಾಲದಲ್ಲಿ ಮಗುವಿನ ಪೋಷಣೆ ಈ ರೀತಿ ಇರಲಿ
ಬೇಸಿಗೆ ಕಾಲ ಬಂದ್ರೆ ಸಾಕು ಸಿಕ್ಕಾಪಟ್ಟೆ ಸೆಕೆ. ಮನೆಯೊಳಗಡೆ ಇರೋದಕ್ಕೂ ಆಗೋದಿಲ್ಲ. ಮನೆಯಿಂದ ಹೊರಗಡೆ ಹೋಗೋದಕ್ಕೂ ಆಗೋದಿಲ್ಲ. ಎಷ್ಟು ನೀರು ಕುಡಿದ್ರೂ ಕೂಡ ದಣಿವು ನಿಲ್ಲೋದಿಲ್ಲ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಈಗ ತಾನೇ ಭೂಮಿಗೆ ಬಂದಿರೋ ಕಂದಮ್ಮನ ಆರೈಕೆ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ.
ಮಕ್ಕಳ ಚರ್ಮ ತುಂಬಾನೇ ಸೂಕ್ಷ್ಮ. ಬೇಸಿಗೆಯಲ್ಲಿ ಅವರಿಗೆ ಯಾವುದೇ ರೀತಿ ತೊಂದರೆ ಆಗದ ಹಾಗೇ ನೋಡಿಕೊಳ್ಳಬೇಕು. ಮಕ್ಕಳನ್ನು ಹೀಗೆ ನೋಡಿಕೊಂಡರೆ ಉತ್ತಮ ಹಾಗೇ ನೋಡಿಕೊಂಡರೆ ಉತ್ತಮವೆಂದು ಅನೇಕ ಜನ ನಮಗೆ ಸಲಹೆ ನೀಡುತ್ತಾರೆ. ಆದರೆ ಬೇಸಿಗೆಯಲ್ಲಿ ಮಕ್ಕಳಿಗೆ ನಿಜವಾಗಿಯೂ ಬೇಕಾಗಿರೋದು ಏನು? ಬೇಸಿಗೆಯಲ್ಲಿ ಅವರ ಆರೈಕೆ ಹೇಗಿರಬೇಕು ಅನ್ನೋದನ್ನ ತಿಳಿಯೋಣ.

1. ಅನಾರೋಗ್ಯದಿಂದ ಮಕ್ಕಳನ್ನು ರಕ್ಷಿಸಿ
ಆರು ತಿಂಗಳವರೆಗೆ ಮಕ್ಕಳು ತಾಯಿಯ ಎದೆಹಾಲು ಕುಡಿಯುವುದರಿಂದ ಮಕ್ಕಳಿಗೆ ಯಾವುದೇ ರೀತಿ ಸಮಸ್ಯೆ ಇರೋದಿಲ್ಲ. ಇದರ ನಂತರ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮಾಡಬೇಕಾಗುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯು ಸಾಕಷ್ಟು ಬಲವಾಗಿ ಬೆಳೆಯುವವರೆಗೆ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಮಕ್ಕಳಿಗೆ ಹೆಚ್ಚು ಬೆವರಲು ಬಿಡಬೇಡಿ. ವೈದ್ಯರು ಶಿಫಾರಸ್ಸು ಮಾಡಿದಂತೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೂರಕ ಆಹಾರಗಳನ್ನೇ ಮಕ್ಕಳಿಗೆ ನೀಡಿ.
2. ಮಗುವಿನ ಕೋಣೆಯಲ್ಲಿ ಸರಿಯಾದ ತಾಪಮಾನ ಕಾಪಾಡಿ
ಮಗುವಿನ ಕೋಣೆಯಲ್ಲಿ ಎಸಿ ಇದ್ದರೆ ಅದನ್ನು ಅತೀ ಹೆಚ್ಚು ಹಾಗೂ ಅತೀ ಕಡಿಮೆ ತಾಪಮಾನದಲ್ಲಿ ಇಡಬೇಡಿ. ಮಗುವಿನ ಆರೋಗ್ಯಕ್ಕೆ ತಕ್ಕಂತೆ ತಾಪಾಮಾನವನ್ನು ಸೆಟ್ ಮಾಡಿ. ಒಂದು ವೇಳೆ ನೀವು ಏರ್ ಕೂಲರ್ ಅನ್ನು ಬಳಸುತ್ತಿದ್ದರೆ ಅದು ಸ್ವಚ್ಛವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಮಗುವಿನ ಒದ್ದೆಯಾದ ತಲೆಯನ್ನು ಎಸಿಗೆ ಒಡ್ಡಬಾರದು ಮತ್ತು ಒದ್ದೆಯಾದ ಬಟ್ಟೆಯಿಂದ ಮಗುವಿನ ತಲೆ ಒರೆಸಬೇಡಿ. ಒಣಗಿನ ಶುದ್ಧ ಬಟ್ಟೆಯನ್ನೇ ಬಳಸಿ. ಮಗುವಿನ ಕೋಣೆಯನ್ನು ಸ್ವಚ್ಛವಾಗಿಡಿ.
3. ಸೂರ್ಯನ ಸುಡು ಬಿಸಿಲಿನಿಂದ ಮಗುವನ್ನು ರಕ್ಷಿಸಿ
ಮಗುವಿನ ಚರ್ಮವು ತುಂಬಾನೇ ಸೂಕ್ಷ್ಮವಾಗಿರುತ್ತದೆ. ಸೂರ್ಯನ ಬಿಸಿಲಿನ ತಾಪಕ್ಕೆ ಬೇಗನೆ ಹಾನಿಯಾಗುತ್ತದೆ. ಹೀಗಾಗಿ ಮನೆಯಿಂದ ಹೊರಗಡೆ ಹೋಗುವಾಗ ಮಗುವಿನ ಆರೋಗ್ಯಕ್ಕೆ ಉತ್ತಮವೆನಿಸುವ ಸನ್‌ಸ್ಕ್ರೀನ್ ಬಳಸಿ. ಇದರ ಜೊತೆಗೆ ಮಗುವಿನ ತಲೆಗೆ ಕ್ಯಾಪ್ ಬಳಸೋದನ್ನ ಮರೀಬೇಡಿ.
4. ಮಗುವಿಗೆ ಹತ್ತಿ ಬಟ್ಟೆಗಳನ್ನೇ ಹಾಕಿ
ಬೇಸಿಗೆ ಕಾಲದಲ್ಲಿ ಹತ್ತಿ ಅಥವಾ ಕಾಟಾನ್ ಬಟ್ಟೆಗಳು ತುಂಬಾನೇ ಒಳ್ಳೆಯದು. ಇದು ಮಕ್ಕಳನ್ನು ತಪ್ಪಾಗಿರುವಂತೆ ಮಾಡುತ್ತದೆ. ಇನ್ನೂ ಆದಷ್ಟು ಸಡಲವಾದ ಬಟ್ಟೆಗಳನ್ನೇ ಧರಿಸಿ. ಇದರಿಂದ ಮಕ್ಕಳು ಸರಾಗವಾಗಿ ಉಸಿರಾಡಬಹುದು.
5. ಸೊಳ್ಳೆಯಿಂದ ಮಕ್ಕಳನ್ನು ದೂರವಿಡಿ
ಬೇಸಿಗೆಯಲ್ಲಿ ಎಲ್ಲರಂತೆ ನಿಮ್ಮ ಮಗುವಿನ ಆರೈಕೆ ತುಂಬಾನೇ ಮುಖ್ಯವಾಗುತ್ತದೆ. ಇನ್ನೂ ಸೊಳ್ಳೆಗಳನ್ನು ಮಕ್ಕಳ ಕೋಣೆಯ ಒಳಗಡೆ ಸುಳಿಯೋದಕ್ಕೆ ಬಿಡಬೇಡಿ. ಸೊಳ್ಳೆ ಪರದೆಯನ್ನು ಅಳವಡಿಸಿ. ಮಕ್ಕಳ ಚರ್ಮ ಸೂಕ್ಷ್ಮವಾಗಿರೋದ್ರಿಂದ ಮಕ್ಕಳ ಚರ್ಮಕ್ಕೆ ಹೆಚ್ಚಿನ ಹಾನಿಯನ್ನು ಮಾಡುತ್ತದೆ. ಮಗುವಿನಿಂದ ಸೊಳ್ಳೆಗಳಿಂದ ದೂರವಿಡಲು ಏರ್ ಕಂಡೀಷನಿಂಗ್ ಅಥವಾ ಏರ್ ಕೂಲರ್‌ಗಳ ತಾಪಮಾನವನ್ನು 25 ° ಸೆಲ್ಸಿಯಸ್ಸ್‌ನಷ್ಟು ಇರಿಸಿ.
6. 10 ರಿಂದ 2 ಗಂಟೆಯವರೆಗೆ ಮಗುವನ್ನು ಹೊರಗಡೆ ತರಬೇಡಿ.
10 ರಿಂದ 2 ಗಂಟೆಯ ಸಮಯದಲ್ಲಿ ಸೂರ್ಯನ ಶಾಖ ತುಂಬಾನೇ ಖಾರವಾಗಿ ಇರುತ್ತದೆ. ಹೀಗಾಗಿ ಇಂತಹ ಸಮಯದಲ್ಲಿ ಮಗುವಿನೊಂದಿಗೆ ಹೊರಗಡೆ ಬರಲೇಬೇಡಿ. ಒಂದು ವೇಳೆ ಹೊರಗಡೆ ಬರಬೇಕೆಂದರೆ ಸೂಕ್ತ ಕ್ರಮಗಳನ್ನು ಕೈಗೊಳ್ಳಿ. ಸೂರ್ಯನ ಕಿರಣಗಳು ಮಗುವಿನ ತ್ವಚೆಗೆ ಹೆಚ್ಚಿನ ಪ್ರಮಾಣದ ಹಾನಿ ಮಾಡುವ ಸಾಧ್ಯತೆ ಇದೆ.
7. ಮಗುವಿನ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಿ
ನಿಮ್ಮ ಮಗುವಿಗೆ ಇನ್ನೂ ಎದೆ ಹಾಲು ಕೊಡುತ್ತಿದ್ದರೆ ಉಳಿದ ಸಮಯದಲ್ಲಿ ಮಗುವಿಗೆ ಹೈಡ್ರೀಕರಿಸಿದ ಆಹಾರವನ್ನು ಹೆಚ್ಚಾಗಿ ನೀಡಿ. ಬೇಸಿಗೆ ಕಾಲದಲ್ಲಿ ಇಂತಹ ಆಹಾರದ ಅಗತ್ಯವಿದೆ. ಘನ ಆಹಾರವನ್ನು ಸೇವಿಸುವ ಮಕ್ಕಳಿಗೆ ಸರಿಯಾದ ಸಮಯಕ್ಕೆ ನೀರು ಹಾಗೂ ಹಣ್ಣು, ತರಕಾರಿಯಂತಹ ಪೋಷಕಾಂಶಯುಕ್ತ ಆಹಾರವನ್ನು ನೀಡಿ.
8. ಮಗುವಿಗೆ ಉತ್ತಮ ಗುಣಮಟ್ಟದ ನೀರನ್ನು ನೀಡಿ
ಆರು ತಿಂಗಳು ಹಾಗೂ ಅದಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಮಕ್ಕಳಿಗೆ ಚೆನ್ನಾಗಿ ಕುದಿಸಿ ಆರಿಸಿದ ಆರೋಗ್ಯಕರ ನೀರನ್ನೇ ನೀಡಬೇಕು. ಬೇಸಿಗೆಯಲ್ಲಿ ಮಗುವನ್ನು ತಂಪಾಗಿರುವಂತೆ ನೋಡಿಕೊಳ್ಳಬೇಕು. ಆದರೆ ಇದರಿಂದ ಮಗುವಿನ ಆರೋಗ್ಯಕ್ಕೆ ಯಾವುದೇ ರೀತಿ ಧಕ್ಕೆ ಉಂಟಾಗಬಾರದು. ಇನ್ನೂ ಬಾಟಲ್ ನೀರು ಆದರೆ ನಿರ್ಜಲೀಕರಣದ ಚಿಹ್ನೆಯನ್ನು ಪರೀಕ್ಷಿಸಿ ಆ ನೀರನ್ನು ಮಗುವಿಗೆ ನೀಡಿ.
ಮಕ್ಕಳು ತುಂಬಾನೇ ಸೂಕ್ಷ್ಮ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸೋದು ಪೋಷಕರ ಕರ್ತವ್ಯ. ಅದ್ರಲ್ಲೂ ಬೇಸಿಗೆಯಲ್ಲಿ ಮಕ್ಕಳನ್ನು ವಿಶೇಷವಾಗಿ ಆರೈಕೆ ಮಾಡಬೇಕು.



Click it and Unblock the Notifications



