Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಗುವಾದ ಮೇಲೆ ವೃತ್ತಿ ಜೀವನಕ್ಕೆ ತಿಲಾಂಜಲಿ ಇಟ್ಟಿದ್ದೀರಾ? ಹಾಗಾದ್ರೆ ಈ ಲೇಖನ ಓದಿ!
ಸಾಮಾನ್ಯವಾಗಿ ಹೆಣ್ಣು ಮಕ್ಕಳು ಹುಟ್ಟಿನಿಂದ ಕಷ್ಟಗಳನ್ನೇ ಅನುಭವಿಸಿರುತ್ತಾರೆ. ಹುಡುಗರಿಗೆ ಇರುವಷ್ಟು ಸ್ವಾತಂತ್ರವು ಅವರಿಗೆ ಇರೋದಿಲ್ಲ. ಆದರೂ ಕಷ್ಟಪಟ್ಟು ಓದಿ ಒಂದೊಳ್ಳೆ ಕಂಪನಿಯಲ್ಲಿ ನೌಕರಿ ಪಡೆದುಕೊಳ್ಳುತ್ತಾರೆ. ಇನ್ನೇನು ಚೆನ್ನಾಗಿ ಸಂಪಾದನೆ ಮಾಡುತ್ತಿದ್ದೀನಿ ಅನ್ನೋ ಸಮಯದಲ್ಲಿ ಮನೆಯವರೆಲ್ಲಾ ಸೇರಿ ಮದುವೆ ಮಾಡಿಸಿ ಬಿಡುತ್ತಾರೆ. ಇಲ್ಲೇ ನೋಡಿ ಮಹಿಳೆಯರಿಗೆ ನಿಜವಾದ ಸಮಸ್ಯೆ ಮಹಿಳೆಯರಿಗೆ ಶುರುವಾಗೋದು.

ಈಗಷ್ಟೇ ವೃತ್ತಿ ಜೀವನದಲ್ಲಿ ಒಂದೊಳ್ಳೆ ಅಭಿವೃದ್ಧಿ ಕಾಣುತ್ತಿದೆ. ಕೈ ತುಂಬಾ ಸಂಭಳ ಬರುತ್ತಿದೆ ಅನ್ನುವಾಗ ಮನೆಯವರೆಲ್ಲಾ ಮೊಮ್ಮಗು ಬೇಕೆಂದು ಹಠ ಹಿಡಿಯುತ್ತಾರೆ. ಇಂತಹ ಪರಿಸ್ಥಿತಿ ಬಂದಾಗ ಮಹಿಳೆಯರಿಗೆ ಅಡಕತ್ತರಿಯಲ್ಲಿ ಸಿಲುಕಿಕೊಂಡ ಅನುಭವವಾಗುತ್ತದೆ. ಅತ್ತೆ ಕೆಲಸನಾ? ಅಥವಾ ಮಗುನಾ? ಅನ್ನೋ ಗೊಂದಲ ಶುರುವಾಗುತ್ತದೆ. ಮಗುವಾದ್ರೆ ಹೆಚ್ಚಿನ ಹೆಣ್ಣು ಮಕ್ಕಳು ನೌಕರಿಗೆ ಟಾಟಾ ಬಾಯ್ ಬಾಯ್ ಹೇಳಲೇಬೇಕು. ಪರಿಸ್ಥಿತಿ ಹೀಗಿರುವಾಗ ಹೆಣ್ಣು ಮಕ್ಕಳ ಆಯ್ಕೆ ಯಾವುದಾಗಿರಬೇಕು ಅನ್ನೋದಕ್ಕೆ ಉತ್ತರ ಕಂಡುಕೊಳ್ಳೋಣ.
ಮಗುವಿನ ಭವಿಷ್ಯಕ್ಕಾಗಿ ತನ್ನ ಭವಿಷ್ಯ ಹಾಳು ಮಾಡಿಕೊಳ್ಳೋದು ಸರಿನಾ?
ಮಹಿಳೆಯರು ಎಷ್ಟು ದೊಡ್ಡ ಕೆಲಸದಲ್ಲಿದ್ದರೂ ಕೂಡ ಆರೇಳು ತಿಂಗಳು ದಾಟಿತು ಅನ್ನುವಾಗ ಕೆಲಸ ಬಿಟ್ಟು ಮನೆಯಲ್ಲಿ ಕೂರುತ್ತಾರೆ. ಇದಾದ ಬಳಿಕ ಹೆರಿಗೆ ಆದ ಮೇಲೆ ಮತ್ತೆ ಆರು ತಿಂಗಳು ಮಗುವನ್ನು ಬಿಟ್ಟು ಹೋಗೋ ಹಾಗಿಲ್ಲ. ಇನ್ನೇನು ಕೆಲಸಕ್ಕೆ ಹೋಗ್ಬೇಕು ಅನ್ನುವಾಗ ಮನೆಯವರಿಂದ ಅಪಸ್ವರ ಕೇಳಿ ಬರುತ್ತದೆ. ಹೀಗಾಗಿ ಅನೇಕ ಹೆಣ್ಣು ಮಕ್ಕಳು ಇದೇ ಸಮಯದಲ್ಲಿ ತಮ್ಮ ಭವಿಷ್ಯಕ್ಕೆ ಎಳ್ಳು ನೀರು ಬಿಡುತ್ತಾರೆ. ನಂತರ ಮಕ್ಕಳ ಆರೈಕೆ ಮಾಡಿಕೊಂಡು ಜೀವನ ಪೂರ್ತಿ ತನ್ನ ಭವಿಷ್ಯದ ಬಗ್ಗೆ ಯೋಚಿಸುತ್ತಾ ಕೊರಗುವ ಮಹಿಳೆಯರು ನಮ್ಮ ಮಧ್ಯೆ ಅನೇಕ ಜನ ಇದ್ದಾರೆ.
ಮಗುವಾದ ಮೇಲೆ ವೃತ್ತಿ ಜೀವನದಲ್ಲಿ ಮುನ್ನಡೆಯಬೇಕೆಂದರೆ ಏನು ಮಾಡ್ಬೇಕು?
ತನ್ನ ವೃತ್ತಿ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಆಸೆ ಅನೇಕ ಮಹಿಳೆಯರಿಗೆ ಇರುತ್ತದೆ. ಆದರೆ ಕೆಲವೊಂದು ಸಲ ಕುಟುಂಬಸ್ಥರೇ ಸೊಸೆಯ ಆಸೆಗೆ ಅಡ್ಡಿ ಪಡಿಸುತ್ತಾರೆ. ನಮ್ಮ ಪ್ರಕಾರ ಗಂಡ, ಅತ್ತೆ, ಮಾವ ಸೊಸೆಗೆ ಬೆನ್ನೆಲುಬಾಗಿ ನಿಲ್ಲಬೇಕು. ಮಗುವಿನ ಜವಾಬ್ದಾರಿಯನ್ನು ಅತ್ತೆ-ಮಾವ ತೆಗೆದುಕೊಂಡು ಸೊಸೆಯನ್ನು ಕೆಲಸಕ್ಕೆ ಕಳುಹಿಸಬೇಕು. ಸೊಸೆ ಸಾಧ್ಯವಾದಷ್ಟು ಬೇಗ ಮನೆ ಕೆಲಸ ಮುಗಿಸಿ ಕೆಲಸಕ್ಕೆ ತೆರಳಬೇಕು. ಒಂದು ವೇಳೆ ಕೊಂಚ ಅನುಕೂಲವಿದ್ದರೆ ಮನೆ ಕೆಲಸದವರನ್ನೂ ನೇಮಿಸಬಹುದಲ್ಲವೇ? ಕೇವಲ ಮಗುವಿನ ಕಾರಣಕ್ಕೆ ಆಕೆಯ ಭವಿಷ್ಯಕ್ಕೆ ತಿಲಾಂಜಲಿ ಇಡೋದು ಎಷ್ಟು ಸರಿ.
ವರ್ಕ್‌ಫ್ರಮ್ ಹೋಮ್ ಆಯ್ಕೆ ತೆಗೆದುಕೊಳ್ಳಿ
ಕೊರೋನಾ ಬಂದಪ್ಪಳಿಸಿದಾಗಿನಿಂದ ಅನೇಕ ಜನ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಇದು ಒಂದು ರೀತಿಯ ಉಳಿತಾಯದ ಜೊತೆಗೆ ಮನೆಯವರ ಒಟ್ಟಿಗೆ ಕಾಲ ಕಳೆಯೋದಕ್ಕೂ ಅನುಕೂಲವಾಗುತ್ತದೆ. ಇದೇ ರೀತಿ ಮಹಿಳೆಯರು ಕೂಡ ಮಗುವಾದ ಆರು ತಿಂಗಳ ನಂತರ ಆಫಿಸ್‌ನಲ್ಲಿ ವರ್ಕ್‌ಫ್ರಮ್ ಹೋಮ್ ಆಯ್ಕೆಯನ್ನು ತೆಗೆದುಕೊಳ್ಳಬಹುದು. ಇದರಿಂದ ಕೆಲಸ ಮಾಡಿದ ಹಾಗೆಯೂ ಆಗುತ್ತದೆ. ಇದರ ಜೊತೆಗೆ ಮಗುವಿನ ಜೊತೆ ಇದ್ದ ಹಾಗೆಯೂ ಆಗುತ್ತದೆ.
ಕೆಲಸದ ಜೊತೆಗೆ ಮನೆಗೂ ಸಮಯ ಮೀಸಲಿಡಿ
ಮಹಿಳೆ ಕೆಲಸಕ್ಕೆ ಹೋಗೋವಾಗ ಮನೆಯಲ್ಲಿ ಮಗುವನ್ನು ನೋಡಿಕೊಳ್ಳೋದಕ್ಕೆ ಎಷ್ಟು ಜನ ಇದ್ದರೂ ಕೂಡ ತನ್ನ ಕರ್ತವ್ಯಗಳನ್ನು ಆಕೆ ನಿಭಾಯಿಸಲೇಬೇಕು. ಕೆಲಸಕ್ಕೆ ಹೋಗಿ ದುಡ್ಡು ಸಂಪಾದನೆ ಮಾಡುತ್ತಿದ್ದೀನಿ ಎಂಬ ಧಿಮಾಕು ಇರಬಾರದು. ಮನೆಯಲ್ಲಿ ಸಾಧ್ಯವಾದಷ್ಟು ಚಿಕ್ಕ-ಪುಟ್ಟ ಕೆಲಸಗಳನ್ನು ಮಾಡಲೇಬೇಕು. ಇನ್ನೂ ರಜಾ ದಿನಗಳಲ್ಲಿ ಕುಟುಂಬಸ್ಥರ ಜೊತೆಗೆ ಸಮಯ ಕಳೆಯಬೇಕು. ಒಟ್ಟಿನಲ್ಲಿ ಕೆಲಸದ ಜೊತೆ ಜೊತೆಗೆ ಕುಟುಂಬದ ಮೌಲ್ಯಗಳಿಗೂ ಬೆಲೆ ಕೊಡೋದು ಮಹಿಳೆಯಾದವಳ ಕರ್ತವ್ಯ.
ಮಗುವಾದ ಮೇಲೆ ಜೀವನವೇ ಹಾಳಾಯ್ತು ಎಂದು ನೊಂದುಕೊಳ್ಳುವುದು ತಪ್ಪು. ಅದರ ಬದಲಾಗಿ ಮಗುವಿನ ಜೊತೆಯಲ್ಲೇ ಕೆಲಸವನ್ನು ಹೇಗೆ ನಿಭಾಯಿಸಬಹುದು ಎಂಬ ಕಲೆಯನ್ನು ರೂಢಿಸಿಕೊಳ್ಳಿ. ಆಗ ಬದುಕು ನಿಜವಾಗಿಯೂ ಸುಂದರವಾಗಿರುತ್ತದೆ.



Click it and Unblock the Notifications


