Latest Updates
-
ತೆಲಂಗಾಣ ಬಿಸಿಲ ಬೇಗೆ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ -
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ -
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ
ನಿಮ್ಮ ಮಗುವಿಗೂ ಬೆರಳು ಚೀಪೋ ಅಭ್ಯಾಸ ಇದ್ಯಾ? ಹಾಗಾದ್ರೆ ಈ ರೀತಿ ಮಾಡಿ
ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದಂತೆ ಕೆಲವೊಂದು ಅಭ್ಯಾಸಗಳನ್ನು ರೂಢಿಸಿಕೊಳ್ಳೋದು ಸಾಮಾನ್ಯ. ಅವುಗಳಲ್ಲಿ ಬೆರಳು ಚೂಪುವ ಅಭ್ಯಾಸ ಕೂಡ ಒಂದು. ಮಕ್ಕಳು ಮಲಗಿದ್ದಾಗ ಅಥವಾ ಸುಮ್ಮನೆ ಏನನ್ನಾದರೂ ಮಾಡುತ್ತಿರುವಾಗಲೂ ಬೆರಳು ಚೂಪುವುದನ್ನು ಬಿಡೋದೇ ಇಲ್ಲ. ಕೆಲವೊಂದು ಸಲ ಪೋಷಕರು ಮಕ್ಕಳ ಈ ಅಭ್ಯಾಸವನ್ನು ಬಿಡಿಸೋದಕ್ಕೆ ಎಷ್ಟು ಪ್ರಯತ್ನಿಸಿದರೂ ಕೂಡ ಆ ಪ್ರಯತ್ನದಲ್ಲಿ ಸೋತು ಹೋಗುತ್ತಾರೆ. ಏನು ಮಾಡಿದ್ರು ಕೂಡ ಈ ಅಭ್ಯಾಸ ಮಾತ್ರ ಬಿಟ್ಟು ಹೋಗೋದೇ ಇಲ್ಲ. ಅಷ್ಟಕ್ಕು ಮಕ್ಕಳು ಬೆರಳು ಚೀಪೋದು ಯಾಕೆ? ಈ ಅಭ್ಯಾಸವನ್ನು ಬಿಡಿಸೋದು ಹೇಗೆ ಅನ್ನೋದನ್ನು ತಿಳಿಯೋಣ.

ಮಕ್ಕಳು ಬೆರಳು ಚೀಪೋದು ಯಾಕೆ?
ಹೆಬ್ಬೆರಳು ಅಥವಾ ಬೆರಳು ಚೀಪೋದು ಮಕ್ಕಳಲ್ಲಿ ಕಂಡು ಬರುವ ಸಾಮಾನ್ಯ ಪ್ರಕ್ರಿಯೆಯಾಗಿದೆ. ಕೆಲವು ಮಕ್ಕಳು ಹುಟ್ಟಿದ ನಂತರ ಈ ಅಭ್ಯಾಸ ರೂಢಿಸಿಕೊಂಡರೆ ಇನ್ನೂ ಕೆಲವರಿಗೆ ಹುಟ್ಟುವ ಮೊದಲೇ ಈ ಅಭ್ಯಾಸ ಇರುತ್ತದೆ. ಯಾಕಂದ್ರೆ ಮಕ್ಕಳಿಗೆ ಬೆರಳು ಚೀಪೋದು ಒಂದು ರೀತಿಯಲ್ಲಿ ಭದ್ರತೆಯ ಭಾವನೆಯನ್ನು ನೀಡುತ್ತಂತೆ. ಕೆಲವು ಮಕ್ಕಳಿಗೆ ಬೆರಳು ಚೀಪೋದು ಹಿತವಾದ ಅನುಭವವನ್ನು ಕೊಟ್ಟರೆ ಇನ್ನೂ ಕೆಲವು ಮಕ್ಕಳು ನಿದ್ದೆಗೂ ಮೊದಲು ಈ ರೀತಿ ಮಾಡುವುದು ರೂಢಿಯಾಗಿರುತ್ತೆ. ಕೆಲವೊಂದು ಸಲ ನಿದ್ದೆಯಲ್ಲೂ ಮಕ್ಕಳು ಬೆರಳು ಚೀಪೋದನ್ನು ನಾವು ಗಮನಿಸಿರ್ತೀವಿ.
ಮಕ್ಕಳು ಯಾವಾಗ ಬೆರಳು ಚೀಪೋ ಅಭ್ಯಾಸವನ್ನು ಬಿಡುತ್ತಾರೆ?
ಕೆಲ ಮಕ್ಕಳು ಈ ಅಭ್ಯಾಸವನ್ನು ಬೆಳಸಿಕೊಂಡರೂ ಕೂಡ ತಮ್ಮಷ್ಟಕ್ಕೆ ತಾವೇ ಈ ಅಭ್ಯಾಸವನ್ನು ಬಿಟ್ಟು ಬಿಡುತ್ತಾರೆ. 6 ರಿಂದ 7 ತಿಂಗಳ ವಯಸ್ಸಿನಲ್ಲಿ ಅಥವಾ 2 ರಿಂದ 4 ವರ್ಷದ ಸಮಯದಲ್ಲಿ ಈ ಅಭ್ಯಾಸವನ್ನು ಮಕ್ಕಳು ಬಿಟ್ಟು ಬಿಡುತ್ತಾರೆ. ಆದರೆ ಎಲ್ಲಾ ಮಕ್ಕಳ ವಿಚಾರದಲ್ಲಿ ಹೀಗಾಗೋದಿಲ್ಲ. ಕೆಲವು ಮಕ್ಕಳು ಜಪ್ಪಯ್ಯ ಅಂದ್ರು ಈ ಅಭ್ಯಾಸವನ್ನು ಬಿಡೋದೇ ಇಲ್ಲ.
ಬೆರಳು ಚೀಪೋ ಅಭ್ಯಾಸವನ್ನು ಬಿಡಬೇಕಂದ್ರೆ ಏನು ಮಾಡ್ಬೇಕು?
1. ಬೆರಳಿಗೆ ಉಗುರು ಬಣ್ಣವನ್ನು ಹಚ್ಚಿ
ಕೆಲವೊಂದು ಮಕ್ಕಳು ಎರಡು ಅಥವಾ ಮೂರು ವರ್ಷದ ನಂತರವು ಈ ಅಭ್ಯಾಸಕ್ಕೆ ಅಂಟಿ ಕೊಂಡಿರುತ್ತಾರೆ. ಈ ಸಮಯದಲ್ಲಿ ಮಕ್ಕಳ ಉಗುರಿಗೆ ಉಗುರು ಬಣ್ಣವನ್ನು ಹಚ್ಚಿರಿ. ಆಗ ನಿಮ್ಮ ಮಗು ಬೆರಳನ್ನು ಚೂಪಿದರೆ ಕಹಿಯಾದಂತೆ ಅನುಭವವಾಗುತ್ತದೆ. ಇದರಿಂದಾಗಿ ಕೆಲ ಮಕ್ಕಳು ಈ ಅಭ್ಯಾಸವನ್ನು ಬಿಟ್ಟು ಬಿಡುವ ಸಾಧ್ಯತೆ ಇದೆ.
2. ಯಾವ ಸಮಯದಲ್ಲಿ ಈ ರೀತಿ ಮಾಡುತ್ತಾರೆಂದು ಗಮನಿಸಿ
ಕೆಲ ಮಕ್ಕಳು ನಿದ್ದೆಗೂ ಮೊದಲು ಬೆರಳು ಚೂಪಲು ಶುರು ಮಾಡುತ್ತಾರೆ. ನಂತರ ಹಾಗೆಯೇ ನಿದ್ದೆ ಹೋಗುತ್ತಾರೆ. ಬೆರಳು ಚೀಪೋದು ಅವರಿಗೆ ಹಿತವಾದ ಅನುಭವ ನೀಡುವ ಸಾಧ್ಯತೆ ಇದೆ. ಹೀಗಾಗಿ ಈ ಅಭ್ಯಾಸವನ್ನು ತಪ್ಪಿಸಲು ಮಲಗುವ ಸಮಯದಲ್ಲಿ ಕೊಂಚ ಬಿಸಿಯಾದ ಹಾಲನ್ನು ನೀಡಿ. ಆಗ ಆ ಅಭ್ಯಾಸವನ್ನು ನಿಲ್ಲಿಸಬಹುದು. ಇನ್ನೂ ಕೆಲವು ಮಕ್ಕಳು ಆತಂಕ, ಕೋಪ, ಅಳು ಬಂದಾಗ ಈ ರೀತಿ ಬೆರಳು ಚೀಪೋ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಹೀಗಾಗಿ ಇಂತಹ ಸಮಯದಲ್ಲಿ ಅವರ ಗಮನವನ್ನು ಬೇರೆ ಕಡೆಗೆ ಕೊಂಡೊಯ್ಯುವಂತೆ ಮಾಡಿ.
3. ಉಡುಗೊರೆಯನ್ನು ನೀಡಿ
ಮಕ್ಕಳಿಗೆ ಮೂರರಿಂದ ಮೂರುವರೆ ವರ್ಷ ತುಂಬಿದ ನಂತರ ಕೊಂಚ ತಿಳುವಳಿಕೆ ಬರುತ್ತದೆ. ಈ ವಯಸ್ಸಿನಲ್ಲೂ ಬೆರಳು ಚೀಪೋ ಅಭ್ಯಾಸವನ್ನು ಬಿಡದಿದ್ದರೆ ಅವರಿಗಾಗಿ ಕೆಲ ಉಡುಗೊರೆಗಳನ್ನು ಕೊಡುವುದಾಗಿ ಹೇಳಿ. ಮಕ್ಕಳು ಇಷ್ಟ ಪಡುವ ಸ್ಟಿಕ್ಕರ್ಸ್, ಚಿಕ್ಕ ಆಟದ ಸಮಾನು ಅಥವಾ ಚಾಕಲೇಟ್ ನೀಡುವ ಮೂಲಕ ಅವರನ್ನು ಈ ಅಭ್ಯಾಸದಿಂದ ಹೊರ ತರಬಹುದು.
4. ಫಿಂಗರ್ ಗಾರ್ಡ್‌ಗಳನ್ನು ಬಳಸಿ
ಐದು ಬೆರಳುಗಳಲ್ಲಿ ಮಕ್ಕಳು ಯಾವ ಬೆರಳುಗಳನ್ನಾದರೂ ಚೂಪುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಎಲ್ಲಾ ಮಕ್ಕಳು ಹೆಬ್ಬೆರಳನ್ನು ಚೂಪುತ್ತಾರೆ ಅಂತ ಹೇಳೋದಿಕ್ಕಾಗೋದಿಲ್ಲ. ಮಾರುಕಟ್ಟೆಯಲ್ಲಿ ಮಕ್ಕಳ ಬೆರಳಿಗೆ ಹಾಕವಂತಂಹ ಫಿಂಗರ್ ಗಾರ್ಡ್‌ಗಳು ಲಭ್ಯವಿದೆ. ಅದನ್ನು ನಿಮ್ಮ ಮಗುವಿನ ಬೆರಳಿಗೆ ಹಾಕಿ. ಈ ಫಿಂಗರ್ ಗಾರ್ಡ್‌ಗಳು ಕೆಮಿಕಲ್ ಮುಕ್ತವಾಗಿದ್ದು, ನಿಮ್ಮ ಮಗುವಿಗೆ ಯಾವ ರೀತಿಯಿಂದಲೂ ತೊಂದರೆ ಆಗೋದಿಲ್ಲ.
5. ದಂತ ವೈದ್ಯರ ಬಳಿ ಕರೆದುಕೊಂಡು ಹೋಗಿ
ಬೆರಳು ಚೂಪುವ ಅಭ್ಯಾಸ ಒಳ್ಳೆಯದಲ್ಲ. ಏಕೆಂದರೆ ಇದರಿಂದ ನಿಮ್ಮ ಮಗುವಿನ ಹಲ್ಲಿಗೂ ಸಮಸ್ಯೆ ಉಂಟಾಗುತ್ತದೆ. ಒಂದೇ ಸಮನೆ ಬೆರಳು ಚೂಪುತ್ತಿದ್ದರೆ ಹಲ್ಲುಗಳು ಒಂದು ಕಡೆಗೆ ವಾಲಿ ಬಿಡುತ್ತದೆ. ಹೀಗಾಗಿ ಮಕ್ಕಳು ಈ ಅಭ್ಯಾಸವನ್ನು ಬಿಡುತ್ತಿಲ್ಲ ಎಂದಾದರೆ ಅವರನ್ನು ದಂತ ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ಹಾಗೂ ಅವರ ಹಲ್ಲಿನ ಆರೋಗ್ಯದ ಕಡೆಗೆ ಗಮನ ನೀಡಿ. ನಂತರ ಸೂಕ್ತ ಪರಿಹಾರ ಕಂಡುಕೊಳ್ಳಿ.
ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಈ ಎಲ್ಲಾ ಅಭ್ಯಾಸಗಳಿರೋದು ಸಾಮಾನ್ಯ. ಹಾಗಂತ ಭಯ ಪಟ್ಟುಕೊಳ್ಳಬೇಡಿ. ಈ ಅಭ್ಯಾಸವನ್ನು ಯಾವ ರೀತಿ ನಾಜೂಕಾಗಿ ಬಿಡಸಬಹುದು ಎಂದು ಪರಿಹಾರ ಕಂಡುಕೊಳ್ಳಿ.



Click it and Unblock the Notifications













