Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಈ ಮಗು ಎಷ್ಟು ಮುದ್ದಾಗಿದೆ ಅಲ್ವಾ, ಆದರೆ ಗಾಜು, ಸೋಫಾ, ಗೋಡೆ ಸುಣ್ಣ ಎಲ್ಲಾ ತಿನ್ನುತ್ತೆ!: ಮಗುವಿಗೆ ಪಿಕಾ ಕಾಯಿಲೆ
ಈ ತಾಯಿ ನನ್ನ ಮಗಳಲ್ಲಿರುವ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡಿ ಎಂದು ಬೇಡುತ್ತಿದ್ದಾಳೆ, ತನ್ನ ಮೂರು ವರ್ಷದ ಮಗಳು ಒಂದು ಕ್ಷಣ ಕಣ್ಣು ತಪ್ಪಿದರೂ ಮನೆಯಲ್ಲಿರುವ ವಸ್ತುಗಳನ್ನು ತಿನ್ನುತ್ತಾಳೆ, ಸೋಫಾ, ಗೋಡೆಯ ಸುಣ್ಣ, ಗಾಡು ಹೀಗೆ ಏನು ಸಿಗುತ್ತೋ ಅದನ್ನು ತಿನ್ನುತ್ತಿದ್ದಾಳೆ, ಈ ಕಾಯಿಲೆಯಿಂದ ಮಗಳನ್ನು ಕಾಪಾಡಿ ಎಂದು ಕೇಳುತ್ತಿದ್ದಾಳೆ.

ಗೋಡೆ, ಗಾಜು ಎಲ್ಲಾ ತಿನ್ನುವ ಮಗು
ಈ ಮಗು ನೋಡಿ ಎಷ್ಟೊಂದು ಮುದ್ದಾಗಿದ್ದಾಳೆ, ಇವಳಿಗೆ ಪಿಕಾ ಕಾಯಿಲೆ, ಅಂದರೆ ವಿಚಿತ್ರ ವಸ್ತುಗಳನ್ನು ತಿನ್ನುವ ಕಾಯಿಲೆ ಇದೆಯಿದೆ, 3 ವರ್ಷದ ಈಕೆಯನ್ನು ನೊಡಿಕೊಳ್ಳುವುದೇ ತಾಯಿಗೆ ದೊಟ್ಡ ಸಾಹಸವಾಗಿದೆ, ಒಂದು ಕ್ಷಣ ಕಣ್ಣು ತಪ್ಪುವಂತಿಲ್ಲ, ಗೋಡೆ ಅಂಟಿಸಿದ ಪ್ಲಾಸ್ಟರ್, ಸೋಫಾದೊಳಗಿರುವ ಸ್ಪಾಂಜ್ ಇವುಗಳನ್ನು ತಿನ್ನುವುದನ್ನು ನೋಡಿ ಆಘಾತವಾಗಿದ್ದಾರೆ. ಒಂದು ತಾಯಿ ನೋಡುತ್ತಾಳೆ, ಅಲ್ಲಿದ್ದ ಆ ಮಗುವಿನದ್ದೇ ಫೋಟೋ ಒಡೆದು ಅದರ ಗಾಜು ತಿನ್ನಲು ಮುಂದಾಗಿರುತ್ತಾಳೆ, ಅಷ್ಟೊತ್ತಿಗೆ ತಾಯಿ ಸ್ಟ್ಯಾಸಿ ಹಿರೆನೆ ನೋಡಿದ ಕಾರಣ ಏನೂ ತೊಂದರೆಯಾಗಿಲ್ಲ.
ಪಿಕಾ ಕಾಯಿಲೆ
ಈ ಪುಟ್ಟ ಮಗು ರಾತ್ರಿಯಲ್ಲಿ ಎದ್ದು ನಡೆಯುತ್ತದೆಯಂತೆ, ಹೀಗೆ ರಾತ್ರಯಲ್ಲಿ ನಡೆಯುವಾಗ ಅದರದ್ದೇ ಬಟ್ಟೆ, ಬ್ಲ್ಯಾಂಕೆಟ್ ಕಚ್ಚಿ ತಿನ್ನುವುದಂತೆ, ಮನೆಯ ಎಲ್ಲಾ ವಸ್ತುಗಳನ್ನೂ ತಿನ್ನುತ್ತಾಳೆ, ಹೇಳುವುದಾದರೆ ಇಡೀ ಮನೆಯನ್ನೇ ತಿನ್ನುತ್ತಿದ್ದಾಳೆ. ಆಹಾರ ನೀಡಿದರೆ ತಿನ್ನಲು ಇಷ್ಟಪಡಲ್ಲ, ಆದರೆ ಈ ಬಗೆಯ ವಸ್ತುಗಳನ್ನು ತಿನ್ನಲು ತುಂಬಾನೇ ಆಸಕ್ತಿ ತೋರಿಸುತ್ತಾಳೆ.
ಮನೆಯಲ್ಲಿ ಗಾಜಿನ ವಸ್ತುಗಳನ್ನು ಆಕೆಗೆ ಸಿಗುವಂತೆ ಇಡುವಂತಿಲ್ಲ, ಇಟ್ಟರೆ ಅದನ್ನು ಒಡೆದು ತಿನ್ನಲು ನೋಡುತ್ತಾಳೆ, ಫುಲ್ ಟೈಂ ಮಗುವನ್ನು ಗಮನಿಸುವುದೇ ಕೆಲವಾಗಿದೆ ಎಂದು ತಾಯಿ ಹೇಳುತ್ತಾರೆ.
ಆಟಿಸಂನ ಗಂಭೀರ ಲಕ್ಷಣ
ತಾಯಿ ಮಗುವಿನ ಈ ವರ್ತನೆಯನ್ನು ಚಿಕ್ಕ ಮಗುವಿರುವಾಗಲೇ ಗಮನಿಸುತ್ತಾರೆ. ಆದರೆ ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ, ಸಾಮಾನ್ಯವಾಗಿ ಮಕ್ಕಳು ಚಿಕ್ಕ ಪ್ರಾಯದಲ್ಲಿ ಸಿಕ್ಕಿದ್ದನ್ನು ಬಾಯಿಗೆ ಹಾಕುತ್ತದೆ ಅಲ್ವಾ? ಅದೇ ರೀತಿ ಅಂದುಕೊಂಡಿದ್ದರು. ಆದರೆ ಮಗುವಿಗೆ ಒಂದು ವರ್ಷ ಕಳೆಯುತ್ತಿದ್ದಂತೆ ಮಗುವಿನ ವರ್ತನೆ ಅವರ ಆತಂಕಕ್ಕೆ ಕಾರಣವಾಯ್ತು.
ಅವರು ವೈದ್ಯರಿಗೆ ತೋರಿಸಿದಾಗ ಮಗುವಿಗೆ ಪಿಕಾ ಕಾಯಿಲೆ ಇದೆ, ಅಂದರೆ ವಿಚಿತ್ರವಾದ ತಿನ್ನುವ ಅಭ್ಯಾಸ. 2024ರಲ್ಲಿ ಮತ್ತೆ ಪರೀಕ್ಷೆ ಮಾಡಿದಾಗ ಆ ಮಗುವಿಗೆ ಆಟಿಸಂ ಇರುವುದು ಗೊತ್ತಾಯ್ತು. ಮಗು ಸಿಕ್ಕ ವಸ್ತುಗಳನ್ನೆಲ್ಲಾ ಬಾಯಿ ಹಾಕುತ್ತಿತ್ತು, ಆವಾಗ ನನಗೆ ಅದು ಸಹಜ ವರ್ತನೆಯಂತೆ ತೋರಲಿಲ್ಲ, ಹಾಗಾಗಿ ವೈದ್ಯರ ಬಳಿ ಪರೀಕ್ಷೆ ಮಾಡಿಸಿದಾಗ ಅದು ಆಟಿಸಂ ಲಕ್ಷಣ ಎಂಬುವುದು ತಿಳಿದು ಬಂತು.
ಆಟಿಸಂ ಇರುವ ಮಕ್ಕಳಲ್ಲಿ ಕೆಲವರಲ್ಲಿ ಈ ವರ್ತನೆ ಕಂಡು ಬರುವುದು, ಅವರಿಗೆ ಇಂಥ ವಸ್ತುಗಳನ್ನು ತಿನ್ನುವ ಬಯಕೆ ಉಂಟಾಗುವುದು, ಇದು ಗಂಭೀರ ಆಟಿಸಂ ಲಕ್ಷಣವಾಗಿದೆ. ಈ ರೀತಿ ಆಟಿಸಂ ಇರುವ ಮಕ್ಕಳು ಸರಿಯಾಗಿ ಮಾತನಾಡಲ್ಲ, ವರ್ತನೆಯಲ್ಲಿಯೂ ಬದಲಾವಣೆ ಕಂಡು ಬರುವುದು.
ಆಟಿಸಂ ಸಮಸ್ಯೆ ಮಗುವಿನ ನಿದ್ದೆ ಮೇಲೂ ಪರಿಣಾಮ ಬೀರುತ್ತಿದೆ, ಮಗು ಬೇಗನೆ ನಿದ್ದೆಯಿಂದ ಏಳುವುದು, ಅಲ್ಲದೆ ನಿದ್ದೆಯಲ್ಲಿ ನಡೆಯುತ್ತದೆ. ಅಲ್ಲದೆ ಮಗು ಹೀಗೆ ಸಿಕ್ಕ ವಸ್ತು ತಿನ್ನುವುದರಿಂದ ಗಾಜು ಮುಂತಾದ ವಸ್ತು ತಿಂದು ಅಪಾಯ ತಂದುಕೊಳ್ಳಬಹುದೇ ಎಂಬ ಭಯ ತಾಯಿಯನ್ನು ಕಾಡುತ್ತಿದೆ, ಹೀಗಾಗಿ ಈ ಸಮಸ್ಯೆಯಿಂದ ಹೊರತರುವುದು ಹೇಗೆ ಎಂದು ಸಹಾಯ ಕೇಳುತ್ತಿದ್ದಾಳೆ. ಮಗುವಿನ ಈ ಸಮಸ್ಯೆ ಈಗ ಅವರು ರಬ್ಬರ್ ವಸ್ತುಗಳನ್ನು ನೀಡುತ್ತಾರೆ, ಕಚ್ಚಿದರೂ ಕಟ್ ಆಗಬಾರದು, ಅಲ್ಲದೆ ಆಹಾರ ವಸ್ತುಗಳನ್ನು ಭಿನ್ನವಾಗಿ ಮಾಡಿ ಕೊಡುತ್ತಾರಂತೆ, ಪಿಜ್ಜಾವನ್ನು ಮಗು ಜಗಿದು ಎಳೆಯುತ್ತಾ ಇರುತ್ತದೆಯಂತೆ, ಈಗ ಈ ಆಟಿಸಂ ಸಮಸ್ಯೆಗೆ ಏನಾದರೂ ಪರಿಹಾರವಿದೆಯೇ ಎಂದು ತಾಯಿ ಕೇಳುತ್ತಿದ್ದಾರೆ.



Click it and Unblock the Notifications
