Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪೋಷಕರೇ, ಅಪ್ಪಿತಪ್ಪಿಯೂ ಮಕ್ಕಳಿಗೆ ಇಂತಹ ಮಾತುಗಳನ್ನು ಹೇಳಬೇಡಿ
ಪೋಷಕರು ಬಳಸುವ ಪದಗುಚ್ಛಗಳು ಮತ್ತು ಮಕ್ಕಳಿಗೆ ಹೇಳುವ ವಿಷಯಗಳು ಮಗುವಿನ ಮೇಲೆ ಶಾಶ್ವತವಾದ ಪರಿಣಾಮವನ್ನು ಬೀರುತ್ತದೆ. ಅದು ನಕಾರಾತ್ಮಕವಾಗಿಯಾದರೂ ಇರಬಹುದು ಅಥವಾ ಒಳ್ಳೆಯ ರೀತಿಯಲ್ಲಾದರೂ ಇರಬಹುದು. ಆದ್ದರಿಂದ ಮಗುವಿನ ಜೊತೆ ಮಾತನಾಡುವಾಗ ಅಥವಾ ಮಕ್ಕಳು ಸುತ್ತಮುತ್ತಲಿರುವಾಗ ತುಂಬಾ ಜಾಗರೂಕರಾಗಿರುವುದು ಮುಖ್ಯ.
ಮಕ್ಕಳು ಪೋಷಕರ ಮಾತನ್ನು ತಕ್ಷಣವೇ ಅಳವಡಿಸಿಕೊಂಡು ಬಿಡುತ್ತಾರೆ. ಇದು ಅವರ ಭವಿಷ್ಯದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಆದ್ದರಿಂದ ನಿಮ್ಮ ಮಕ್ಕಳೊಂದಿಗೆ ಸಂವಹನ ನಡೆಸಲು ಸರಿಯಾದ ಪದಗಳನ್ನು ಆಯ್ಕೆ ಮಾಡುವುದು ತುಂಬಾ ಮುಖ್ಯ. ಅದೇ ರೀತಿ ಕೆಲವು ಮಾತನ್ನು ಮಕ್ಕಳೆದುರು ಹೇಳಲೇಬಾರದು. ಅಂತಹ ಮಾತುಗಳ ಬಗ್ಗೆ ಇಲ್ಲಿ ನೋಡೋಣ.
ನಿಮ್ಮ ಮಕ್ಕಳಿಗೆ ಹೇಳಬಾರದಂತಹ ಮಾತುಗಳನ್ನು ಈ ಕೆಳಗೆ ನೀಡಲಾಗಿದೆ:

"ನಮ್ಮಿಂದ ಅದನ್ನು ಎಂದಿಗೂ ಖರೀದಿಸಲಾಗುವುದಿಲ್ಲ":
ನಿಮ್ಮ ಮಕ್ಕಳು ತಮ್ಮ ಕನಸುಗಳು ಅಥವಾ ಆಕಾಂಕ್ಷೆಗಳು ಹಣದ ಮೇಲೆಯೇ ನಿಂತಿದೆ ಎಂದು ಭಾವಿಸುವಂತೆ ಮಾಡಬಾರದು. ಬದಲಾಗಿ, ಅದಕ್ಕಾಗಿ ಕಷ್ಟಪಡುವಂತೆ ಮಾಡಿ. ಹಣವು ಕಠಿಣ ಪರಿಶ್ರಮದ ಮೂಲಕ ಗಳಿಸಬಹುದಾದ ದೊಡ್ಡ ಮೌಲ್ಯವಾಗಿದೆ ಎಂದು ನಿಮ್ಮ ಮಕ್ಕಳು ತಿಳಿದುಕೊಳ್ಳಬೇಕು. ಮೊದಲೇ ಮಕ್ಕಳಲ್ಲಿ ಹಣದಿಂದಲೇ ಸಾಧ್ಯ, ಅಸಾಧ್ಯಗಳ ಬಗ್ಗೆ ಭಾವನೆ ಮೂಡಿಬಿಟ್ಟರೆ, ಮುಂದೆ ಅದು ಅವರ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುವುದು.

"ನಾವು ನಿನಗಾಗಿ ಎಲ್ಲವನ್ನೂ ಮಾಡುತ್ತೇನೆ":
ಈ ಮಾತನ್ನು ಹೇಳುವುದರಿಂದ ನೀವು ಅವರಿಗಾಗಿ ಮಾಡುವ ಪ್ರತಿಯೊಂದು ಕೆಲಸವೂ ಉಪಕಾರಕ್ಕೆ ಅಥವಾ ಯಾವುದೋ ಕಟ್ಟುಪಾಡಿಗಾಗಿ ಮಾಡುತ್ತಿದ್ದೀರಾ ಎಂಬ ಭಾವನೆ ಬರುತ್ತದೆಯೇ ಹೊರತು, ಪ್ರೀತಿಯಿಂದಲ್ಲ ಎಂದು ಅನಿಸಿ ಬಿಡುತ್ತದೆ. ಮಕ್ಕಳ ಮೇಲಿನ ಪೋಷಕರ ಪ್ರೀತಿಯು ನಿಸ್ವಾರ್ಥವಾಗಿರಬೇಕು. ಅವರ ಮೇಲಿರುವ ಪ್ರೀತಿಗಾಗಿ ಎಲ್ಲವನ್ನು ಮಾಡುತ್ತಿದ್ದೇವೆ, ಇದರ ಹಿಂದೆ ಯಾವುದೇ ಉದ್ದೇಶವಿಲ್ಲ ಎಂಬುದು ಅವರಿಗೆ ಮನವರಿಕೆಯಾಗಬೇಕೆಂದರೆ ಇಂತಹ ಮಾತುಗಳನ್ನಾಡಬೇಡಿ, ಬದಲಾಗಿ ಹೇಳದೆಯೇ ಅವರನ್ನು ಖುಷಿಯಾಗಿಡಿ.

"ಮಗುವಿನಂತೆ ವರ್ತಿಸುವುದನ್ನು ನಿಲ್ಲಿಸು":
ಮಗು ಮಗುವಿನಂತೆ ವರ್ತಿಸುವುದು ತಪ್ಪಲ್ಲ. ಅವರು ತಪ್ಪು ಮಾಡಿದರೂ ಪರವಾಗಿಲ್ಲ. ಮಕ್ಕಳು ಅಳುವುದು ಸಹಜ. ಪಾಲಕರು ಕೆಲವೊಮ್ಮೆ ತಮ್ಮ ಮಕ್ಕಳ ಮೇಲೆ ಸ್ವಲ್ಪ ಹೆಚ್ಚು ಕಠೋರವಾಗಿ, ಮಗುವಾಗಿ ವರ್ತಿಸುವುದನ್ನು ನಿಲ್ಲಿಸು ಎಂದು ಹೇಳುತ್ತೀರಿ. ಇದು ಸರಿಯಲ್ಲ. ಚಿಕ್ಕ ವಯಸ್ಸಿನಲ್ಲಿ ಮಗುವಿನ ಮೇಲೆ ಒಂದು ನಿರ್ದಿಷ್ಟ ನಡವಳಿಕೆಯನ್ನು ಜಾರಿಗೊಳಿಸುವುದು ಅವರನ್ನು ಬಿಗಿಯಾಗಿ ಮತ್ತು ಸಂಪ್ರದಾಯವಾದಿಯನ್ನಾಗಿ ಮಾಡುತ್ತದೆ.

"ನೀನು ಇದನ್ನು ಎಂದಿಗೂ ಮಾಡಲು ಸಾಧ್ಯವಿಲ್ಲ":
ನಿಮ್ಮ ಮಗುವಿಗೆ ಹೇಳಬಹುದಾದ ಕೆಟ್ಟ ವಿಷಯ ಇದು. ಇದು ತಕ್ಷಣವೇ ಮಕ್ಕಳನ್ನು ವಿವಿಧ ರೀತಿಯಲ್ಲಿ ಅಸಮರ್ಥರೆಂದು ಭಾವಿಸುವಂತೆ ಮಾಡುತ್ತದೆ. ಅವರ ಆತ್ಮವಿಶ್ವಾಸ ಕುಂದಿಸಿಬಿಡುತ್ತದೆ. ಪಾಲಕರು ತಮ್ಮ ಮಕ್ಕಳನ್ನು ಪ್ರೇರೇಪಿಸಬೇಕು ಮತ್ತು ಅವರು ಜೀವನದಲ್ಲಿ ಮುನ್ನಡೆಯಲು ಅವರ ಮೈಲಿಗಲ್ಲುಗಳನ್ನು ಹಾಕಿಕೊಡಬೇಕೇ ಹೊರತು, ಅವರನ್ನು ಹೀಯಾಳಿಸುವುದು ಸರಿಯಲ್ಲ.

ನಿಮ್ಮ ಸಂಗಾತಿಯ ಬಗ್ಗೆ ಏನಾದರೂ ಕೆಟ್ಟದು:
ಏನೇ ಇರಲಿ, ನಿಮ್ಮ ಮಕ್ಕಳ ಮುಂದೆ ನಿಮ್ಮ ಸಂಗಾತಿಯ ಬಗ್ಗೆ ನಕಾರಾತ್ಮಕವಾಗಿ ಮಾತನಾಡದಿರಲು ಪ್ರಯತ್ನಿಸಿ. ಪಾಲಕರು ತಮ್ಮ ಮಕ್ಕಳ ಮುಂದೆ ಇತರರನ್ನು ಹೇಗೆ ಪರಿಗಣಿಸುತ್ತಾರೆ ಎಂಬುದರ ಬಗ್ಗೆ ಜಾಗರೂಕರಾಗಿರಬೇಕು. ಮಕ್ಕಳ ಮುಂದೆ ಜಗಳವಾಡುವುದನ್ನು ಅಥವಾ ನಿಮ್ಮ ಸಂಗಾತಿಯೊಂದಿಗೆ ಕಠಿಣ ಸ್ವರದಲ್ಲಿ ಮಾತನಾಡುವುದನ್ನು ತಪ್ಪಿಸಲು ಪ್ರಯತ್ನಿಸಿ. ನಿಮ್ಮ ಮಕ್ಕಳು ಪ್ರೀತಿಯನ್ನು ಅನುಭವಿಸಬೇಕು, ಪ್ರೀತಿಯೇ ಎಲ್ಲದಕ್ಕೂ ಬುನಾದಿ ಎಂಬುದನ್ನು ನಂಬಬೇಕು.



Click it and Unblock the Notifications
