ಪೋಷಕರೇ, ಮಕ್ಕಳಿಗೆ ಸಂಬಂಧಿಸಿದ ಈ ವಿಷಯಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಡಿ

ಇತ್ತೀಚಿನ ದಿನಗಳಲ್ಲಿ ಸೋಶೀಯಲ್ ಮಿಡಿಯಾ ಎಂಬುದು ಪ್ರತಿಯೊಬ್ಬರಿಗೂ ಕೈಗೆಟಕುವ ರೀತಿಯಲ್ಲಿದ್ದು, ಹೊಸ ಜನರೇಷನ್‌ ನ ಪೋಷಕರು ತಮ್ಮ ಮಕ್ಕಳ ಪ್ರತಿ ಬೆಳವಣಿಗೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಪ್ರವೃತ್ತಿ ಹೊಂದಿದ್ದಾರೆ. ಆದರೆ ಹೀಗೆ ತಮ್ಮ ಮಕ್ಕಳಿಗೆ ಸಂಬಂಧಪಟ್ಟ ಎಲ್ಲಾ ವಿಚಾರಗಳನ್ನು ಸಾರ್ವಜನಿಕಗೊಳಿಸುವುದು ಎಷ್ಟು ಸರಿ? ಇದರಿಂದ ಮಕ್ಕಳಿಗಾಗುವ ಸಮಸ್ಯೆ ಎಂತಹುದು ಎಂದು ಎಂದಾದರೂ ಯೋಚಿಸಿದ್ದೀರಾ?.

ಹೌದು, ಸೋಶೀಯಲ್ ಮೀಡಿಯಾದಲ್ಲಿ ನಿಮ್ಮ ಮಕ್ಕಳ ಪ್ರತಿಯೊಂದು ವಿಚಾರವನ್ನೂ ಹಂಚಿಕೊಳ್ಳುವುದರಿಂದ, ಸೈಬರ್ ಕ್ರೈಮ್, ಮಕ್ಕಳ ಅಪಹರಣ ಮೊದಲಾದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆದ್ದರಿಂದ ನಿಮ್ಮ ಮಕ್ಕಳನ್ನು ಸುರಕ್ಷಿತವಾಗಿರಿಸಲು ಎನೆಲ್ಲಾ ಪೋಸ್ಟ್ ಮಾಡಬಾರದು ಎಂಬುದು ಇಲ್ಲಿದೆ.

ಸಾಮಾಜಿಕ ಮಾಧ್ಯಮದಲ್ಲಿ ಮಕ್ಕಳ ಬಗ್ಗೆ ಪೋಸ್ಟ್ ಮಾಡಬಾರದ ವಿಚಾರಗಳನ್ನು ಈ ಕೆಳಗೆ ನೀಡಲಾಗಿದೆ:

ಮಗುವಿರುವ ಸ್ಥಳ:

ಮಗುವಿರುವ ಸ್ಥಳ:

ಇದು ಅತ್ಯಂತ ಮುಖ್ಯವಾದ ವಿಚಾರ. ನಿಮ್ಮ ಮಗುವಿರುವ ಸ್ಥಳ, ಅದರ ಶಾಲೆಯ ವಿಳಾಸ ಅಥವಾ ಟ್ಯೂಷನ್ ಸೆಂಟರ್ ಜಾಗ ಯಾವುದನ್ನೂ ಸಹ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಲು ಬಿಡಬೇಡಿ ಜೊತೆಗೆ ನೀವೂ ಮಾಡಬೇಡಿ. ಇದರಿಂದ ನಿಮ್ಮ ಖಾಸಗಿ ಮಾಹಿತಿಗಳು ಸಾರ್ವಜನಿಕವಾಕಬಹುದು. ರಸ್ತೆಯ ಗುರುತು, ಮನೆ ಸಂಖ್ಯೆಗಳು, ಮತ್ತು ಅಪಾರ್ಟ್ಮೆಂಟ್ ವಿಳಾಸಗಳು ನಿಮಗೆ ಯಾವುದೇ ದೊಡ್ಡ ವಿಚಾರದಂತೆ ತೋರಬಹುದು ಆದರೆ, ಮಗುವಿನ ಸುರಕ್ಷತೆಯ ದೃಷ್ಟಿಯಿಂದ ಇದು ಬಹಳ ಮುಖ್ಯವಾಗುತ್ತದೆ. ನಿಮಗೆ ಹಾನಿ ಮಾಡಬಯಸುವವರು ನಿಮ್ಮ ಚಲನವಲನಗಳನ್ನು ಸದಾ ಗಮನಿಸುತ್ತಲೇ ಇರುತ್ತಾರೆ, ಆದ್ದರಿಂದ ಜಾಗರೂಕರಾಗಿರಿ.

ವೈಯಕ್ತಿಕ ವಿವರಗಳು:

ವೈಯಕ್ತಿಕ ವಿವರಗಳು:

ಮಗುವಿನ ವೈಯಕ್ತಿಕ ಗುರತುಗಳು, ವೈದ್ಯಕೀಯ ದಾಖಲೆಗಳನ್ನು ತಿಳಿಸುವ ಯಾವುದೇ ವಿವರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಬೇಡಿ. ಇದನ್ನೇ ಕಾಯುತ್ತಿರುವ ಇಂಟರ್ನೆಟ್ ಹ್ಯಾಕರ್ಸ್‌ಗಳು ಈ ಮಾಹಿತಿಗಳನ್ನು ದುರುಪಯೋಗಪಡಿಸಿಕೊಳ್ಳಬಹುದು. ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಮಗುವಿನ ಜನ್ಮ ದಿನಾಂಕ ಅಥವಾ ಹುಟ್ಟಿದ ಸ್ಥಳ ಮತ್ತು ಪೂರ್ಣ ಹೆಸರಿನಂತಹ ಮಾಹಿತಿಯನ್ನು ನೀಡುವುದು ಸೂಕ್ತವಲ್ಲ, ಏಕೆಂದರೆ ಇದೇ ಮಾಹಿತಿಗಳಿಂದ ನಕಲಿ ಖಾತೆ ಸೃಷ್ಟಿಸುವ ಸಾಧ್ಯತೆ ಇದೆ. ಆದ್ದರಿಂದ ವೈಯಕ್ತಿಕ ವಿವರಗಳನ್ನು ಶೇರ್ ಮಾಡಬೇಡಿ.

ವಿವಸ್ತ್ರಗೊಳಿಸಿರುವಂತಹ ಫೋಟೋಗಳು:

ವಿವಸ್ತ್ರಗೊಳಿಸಿರುವಂತಹ ಫೋಟೋಗಳು:

ಸ್ನಾನದ ಸಮಯದಲ್ಲಿ ಮಕ್ಕಳು ಬಟ್ಟೆಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಿರುತ್ತದೆ. ಕೆಲವೊಮ್ಮೆ ಅರೆನಗ್ನ ಸ್ಥಿತಿಯಲ್ಲಿ ಅಥವಾ ಯಾವುದೇ ಬಟ್ಟೆಯಿಲ್ಲದೇ ಇರಬಹುದು. ಅಂತಹ ಸಮಯದಲ್ಲಿ ನಿಮ್ಮ ಮೋಜಿಗಾಗಿ ಈ ಫೋಟೋಗಳನ್ನು ತೆಗೆದು ಸೋಶೀಯಲ್ ಮೀಡಿಯಾಗೆ ಹಾಕವುದು ಒಳ್ಳೆಯದಲ್ಲ, ಅದು ಯಾವ ವಯಸ್ಸಿನ ಮಗುವಾದರೂ ಸರಿಯೇ, ಇಂತಹ ಫೋಟೋಗಳು ಸಾಮಾಜಿಕ ಮಾಧ್ಯಮಗಳಿಗೆ ಸರಿಯಲ್ಲ. ಹೀಗೆ ಮಾಡುವುದರಿಂದ ನಿಮ್ಮ ಮಕ್ಕಳು ಆನ್‌ಲೈನ್ ಭಕ್ಷಕರ ಬಾಯಿಗೆ ಆಹಾರವಾಗಬಹುದು. ಜೊತೆಗೆ ಇನ್ನೊಬ್ಬರ ಮಕ್ಕಳ ಫೋಟೋಗಳನ್ನು ಅವರ ಅನುಮತಿಯಿಲ್ಲದೆ ಪೋಸ್ಟ್ ಮಾಡುವುದನ್ನು ತಪ್ಪಿಸಿ, ಏಕೆಂದರೆ ಇದು ಕೆಲವು ರಾಜ್ಯಗಳಲ್ಲಿ ಕಾನೂನುಬಾಹಿರವಾಗಿರುತ್ತದೆ.

ಮುಜುಗರದ ಕ್ಷಣಗಳು:

ಮುಜುಗರದ ಕ್ಷಣಗಳು:

ಅನಾರೋಗ್ಯದಿಂದಿರುವ ಮಗುವಿನ ಫೋಟೋವನ್ನು ಪೋಸ್ಟ್ ಮಾಡುವುದರಿಂದ ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್‌ಗಳು ಮತ್ತು ಸಹಾನುಭೂತಿಯನ್ನು ಪಡೆಯಬಹುದು, ಆದರೆ ಇದು ನಿಮ್ಮ ಮಗುವಿನ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಒಮ್ಮೆ ಯೋಚಿಸಿ. ಇದು ಭವಿಷ್ಯದಲ್ಲಿ ಮಕ್ಕಳಿಗೆ ಮುಜುಗರವನ್ನುಂಟು ಮಾಡಬಹುದು. ಆದ್ದರಿಂದ ಮುಂದಿನ ಬಾರಿ ನಿಮ್ಮ ಮಗು ಹುಷಾರಿಲ್ಲದೇ, ಹಾಸಿಗೆಯಲ್ಲಿರುವಾಗ, ಇಂಜೆಕ್ಷನ್ ತೆಗೆದುಕೊಳ್ಳುವಾಘ ಅಥವಾ ಆಸ್ಪತ್ರೆಯ ಗೌನ್‌ನಲ್ಲಿ ಕುಳಿತಾಗ ಧೈರ್ಯದಿಂದ ಫೋಟೋ ತೆಗೆಯುವ ಮುನ್ನ ಈ ಪ್ರಶ್ನೆಯನ್ನು ನಿಮಗೇ ನೀವೇ ಕೇಳಿಕೊಳ್ಳಿ.

ವರ್ತನೆಯ ಸಮಸ್ಯೆಗಳು:

ವರ್ತನೆಯ ಸಮಸ್ಯೆಗಳು:

ಕೆಲವು ನಡವಳಿಕೆಯ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವುದು ಮಗುವಿನ ದೌರ್ಬಲ್ಯವನ್ನು ಬಹಿರಂಗಪಡಿಸಬಹುದು. ನೆನಪಿಡಿ ಸಾಮಾಜಿಕ ಮಾಧ್ಯಮವು ಮಕ್ಕಳ ಅವಮಾನಕ್ಕಾಗಿ ಇರುವುದಲ್ಲ, ನೀವು ಏನು ಹಂಚಿಕೊಳ್ಳುತ್ತೀರಿ ಎಂಬುದರ ಬಗ್ಗೆ ಗಮನವಿರಲಿ. ಇದು ಹಾಸಿಗೆ ಒದ್ದೆಯಾಗುವ ಸಮಸ್ಯೆಯಾಗಲಿ ಅಥವಾ ಓದಲು ಪಡುವ ತೊಂದರೆಗಳನ್ನು ಎತ್ತಿ ತೋರಿಸುವ ವೇದಿಕೆಯಲ್ಲ. ಈ ರೀತಿ ಅವರ ದೌರ್ಬಲ್ಯವನ್ನು ಬಹಿರಂಗಪಡಿಸುವುದರಿಂದ ಮುಂದೆ ಸಮಸ್ಯೆಗಳಾಗಬಹುದು. ಆದ್ದರಿಂದ ಇಂತಹ ವಿಚಾರ ಹಂಚಿಕೊಳ್ಳುವ ಮೊದಲು ನಿಮ್ಮ ದೊಡ್ಡ ಮಕ್ಕಳ ಸಲಹೆ ತೆಗೆದುಕೊಳ್ಳಿ, ಇದರಿಂದ ಏನಾದರೂ ಮುಜುಗರವಾಗುವುದೇ ಎಂದು.

ಗ್ರೂಪ್ ಫೋಟೋ:

ಗ್ರೂಪ್ ಫೋಟೋ:

ಪ್ರತಿಯೊಬ್ಬ ಪೋಷಕನು ತಮ್ಮ ಮಗುವಿನ ಚಿತ್ರಗಳನ್ನು ಅಥವಾ ಫೋಟೋಗಳನ್ನು ಇಂಟರ್ನೆಟ್ ಅಥವಾ ಸೋಶೀಯಲ್ ಮೀಡಿಯಾದಲ್ಲಿ ಹಾಕುವುದನ್ನು ಇಷ್ಟಪಡುವುದಿಲ್ಲ. ಆದ್ದರಿಂದ ಪೋಸ್ಟ್ ಮಾಡುವ ಮೊದಲು ನಿಮ್ಮ ಪೋಷಕರ ಒಪ್ಪಿಗೆ ತೆಗೆದುಕೊಳ್ಳುವುದು ಉತ್ತಮ.

English summary

Things to Never Share about your Kids on Social Media Channels in kannada

Here we talking about Things to never share about your Kids on Social Media Channels in kannada, read on
X
Desktop Bottom Promotion