Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಮಗುವನ್ನು ಪ್ರೀ ಸ್ಕೂಲ್‌ಗೆ ಕಳುಹಿಸುವಾಗ ಈ ಅಂಶಗಳನ್ನು ಗಮನಿಸಲೇಬೇಕು !
ಮಕ್ಕಳನ್ನು ಪ್ರೀ ಸ್ಕೂಲ್‌ಗೆ ಕಳುಹಿಸೋದಕ್ಕೆ ಪೋಷಕರಿಗೆ ಒಂದು ರೀತಿಯ ಸಂಭ್ರಮ. ಇದರ ಜೊತೆಗೆ ಒಂದು ರೀತಿಯ ಭಯ ಕೂಡ ಇರುತ್ತೆ. ಮಕ್ಕಳು ಶಾಲೆಯಲ್ಲಿ ಏನು ಮಾಡ್ತಾರೆ, ಹೇಗಿರ್ತಾರೋ ಅಂತ. ಹೀಗಾಗಿ ಪೋಷಕರು ಮಕ್ಕಳಿಗಾಗಿ ಒಂದು ಉತ್ತಮ ಪ್ರೀ ಸ್ಕೂಲ್‌ಗಾಗಿ ಹುಡುಕಾಡುತ್ತಿರುತ್ತಾರೆ. ಪೋಷಕರೇ ನಿಮ್ಮ ಮಗುವನ್ನು ಪ್ರೀ ಸ್ಕೂಲ್‌ಗೆ ಕಳುಹಿಸುವಾಗ ತುಂಬಾನೇ ಜಾಗರೂಕರಾಗಿರ್ಬೇಕು. ಹಾಗಾದ್ರೆ ಮಕ್ಕಳನ್ನು ಪ್ರೀ ಸ್ಕೂಲ್‌ಗೆ ಕಳುಹಿಸುವಾಗ ಗಮನಿಸಬೇಕಾದ ಅಂಶಗಳು ಯಾವುದು ಅನ್ನೋದನ್ನು ತಿಳಿಯೋಣ.

1. ನೈರ್ಮಲ್ಯ
ನಿಮ್ಮ ಮಗುವನ್ನು ಪ್ರೀ ಸ್ಕೂಲ್‌ಗೆ ಕಳುಹಿಸುವಾಗ ಮೊದಲಿಗೆ ಗಮನಿಸಬೇಕಾದ ಅಂಶವೆಂದರೆ ಶಾಲೆಯ ಸ್ವಚ್ಛತೆಯ ಬಗ್ಗೆ ಗಮನ ಕೊಡಿ. ಯಾಕಂದ್ರೆ ಮಕ್ಕಳಿಗೆ ವಯಸ್ಸಿನಲ್ಲಿ ಏನು ಗೊತ್ತಾಗೋದಿಲ್ಲ. ಒಂದು ವೇಳೆ ಶಾಲೆಯ ವಾತಾವರಣ ಸ್ವಚ್ಛವಾಗಿರದಿದ್ದರೆ ಅದರಿಂದ ಮಗುವಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಕಾಯಿಲೆಗಳು ಬರಬಹುದು. ಹೀಗಾಗಿ ಆ ಶಾಲೆಯಲ್ಲಿ ಪ್ರತಿನಿತ್ಯ ಸ್ವಚ್ಛತೆಯನ್ನು ಕೈಗೊಳ್ಳುತ್ತಾರಾ? ಡೀಪ್ ಕ್ಲೀನಿಂಗ್ ಮಾಡುತ್ತಾರಾ ಅನ್ನೋ ಬಗ್ಗೆ ತಿಳಿದುಕೊಳ್ಳಿ.
2. ಮೂಲ ಸೌಕರ್ಯ
ಮೊದಲಿಗೆ ನಿಮ್ಮ ಮಗುವನ್ನು ಕಳುಹಿಸುವ ಶಾಲೆಯಲ್ಲಿ ಮೂಲ ಸೌಕರ್ಯಗಳು ಸರಿಯಾಗಿದೆಯಾ ಅನ್ನೋದನ್ನು ನೋಡಿಕೊಳ್ಳಿ. ಮಕ್ಕಳನ್ನು ನೋಡಿಕೊಳ್ಳೋದಕ್ಕೆ ಎಷ್ಟು ಜನ ಇರುತ್ತಾರೆ? ಅಲ್ಲಿ ಬೆಂಚುಗಳು ಹೇಗಿದೆ? ಮಕ್ಕಳಿಗೆ ಅಪಾಯ ಉಂಟು ಮಾಡುವ ಹಾಗೆ ಯಾವುದಾದರೂ ವಸ್ತುಗಳನ್ನು ಇಡಲಾಗಿದ್ಯಾ? ಅನ್ನೋ ಬಗ್ಗೆ ಗಮನ ಕೊಡುವುದು ಪೋಷಕರ ಕರ್ತವ್ಯ.
3. ಆಟ ಆಡುವ ಜಾಗ
ಮಕ್ಕಳು ಎಂದ ಮೇಲೆ ಆಟ ಇರಲೇಬೇಕಲ್ವಾ? ಆದರೆ ದೊಡ್ಡ ದೊಡ್ಡ ನಗರಗಳಲ್ಲಿ ಜಾಗದ ಕೊರತೆ ಇರೋದ್ರಿಂದ ಪ್ಲೇ ಏರಿಯಾಗಳನ್ನು ಇಟ್ಟಿರುವುದಿಲ್ಲ. ಕೆಲವೊಂದು ಕಡೆ ಪ್ಲೇ ಏರಿಯಾಗಳು ಇದ್ದರೂ ಕೂಡ ಚಿಕ್ಕದಾಗಿರುತ್ತದೆ. ಇದು ಮಕ್ಕಳಿಗೆ ಆಟವಾಡಲು ಇಕ್ಕಟ್ಟಾಗುತ್ತದೆ. ಹೀಗಾಗಿ ನೀವು ಕಳುಹಿಸುವ ಶಾಲೆಯಲ್ಲಿ ಆಡ ಆಡುವ ಜಾಗ ಹಿರಿದಾಗಿರುವಂತೆ ನೋಡಿಕೊಳ್ಳಿ.
4. ಮಗುವಿಗೆ ಕಲಿಸುವ ವಿಧಾನದ ಬಗ್ಗೆ ತಿಳಿದುಕೊಳ್ಳಿ
ಈ ವಯಸ್ಸಿನಲ್ಲಿ ಮಗುವಿನ ಮನಸ್ಸು ಹಾಗೂ ಬುದ್ಧಿ ತುಂಬಾನೇ ಸೂಕ್ಷ್ಮವಾಗಿರುತ್ತದೆ. ಜೊತೆಗೆ ಎಲ್ಲಾ ಮಕ್ಕಳ ಕಲಿಯುವ ಸಾಮರ್ಥ್ಯ ಒಂದೇ ರೀತಿ ಇರುವುದಿಲ್ಲ. ಹೀಗಾಗಿ ಎಲ್ಲಾ ಮಕ್ಕಳಿಗೆ ಒಂದೇ ರೀತಿ ಕಲಿಸಿದರೆ ಪ್ರಯೋಜನವಿಲ್ಲ. ಇಲ್ಲಿ ಮಕ್ಕಳಿಗೆ ಕಲಿಸುವಾಗ ಯಾವ ರೀತಿ ಕೌಶಲ್ಯಗಳನ್ನು ಬಳಸುತ್ತಾರೆ ಎಂದು ಮೊದಲು ತಿಳಿಯಿರಿ. ಇದರಿಂದ ಮಗುವಿಗೆ ಬರೆಯಲು ಹಾಗೂ ಓದಲು ಸಾಧ್ಯವಾಗುತ್ತಾ ಅನ್ನೋದ್ರ ಬಗ್ಗೆ ಮಾಹಿತಿ ಪಡೆದುಕೊಳ್ಳಿ.
5. ಶಿಕ್ಷಕರ ಬಗ್ಗೆ ಮಾಹಿತಿ ಪಡೆದುಕೊಳ್ಳಿ
ಮಕ್ಕಳ ಅಭಿವೃದ್ಧಿಯ ಹಿಂದೆ ಪೋಷಕರು ಮಾತ್ರವಲ್ಲದೇ ಶಿಕ್ಷಕರ ಪಾತ್ರ ಕೂಡ ಅಷ್ಟೇ ಇರುತ್ತದೆ. ಹೀಗಾಗಿ ನೀವು ನಿಮ್ಮ ಮಗುವನ್ನು ದಾಖಲಿಸುವ ಪ್ರೀ ಸ್ಕೂಲ್‌ನಲ್ಲಿ ಶಿಕ್ಷಕರು ಹೇಗಿದ್ದಾರೆ ಅನ್ನೋದನ್ನು ತಿಳಿದುಕೊಳ್ಳಿ. ಅವರು ತರಬೇತಿ ಪಡೆದ ಶಿಕ್ಷಕರಾ? ಮಕ್ಕಳ ಜೊತೆಗೆ ಹೇಗಿರುತ್ತಾರೆ? ಪುಟ್ಟ ಮಗುವಿಗೆ ಅರ್ಥವಾಗುವಂತೆ ಕಲಿಸುವ ಕೌಶಲ್ಯ ಅವರಿಗಿದ್ಯಾ? ಅನ್ನೋದ್ರ ಬಗ್ಗೆ ಮಾಹಿತಿ ಪಡೆಯಿರಿ.
6. ಶಾಲೆಗೆ ಒಳ್ಳೆಯ ಹೆಸರಿದ್ಯಾ ಎಂದು ತಿಳಿದುಕೊಳ್ಳಿ
ಇತ್ತೀಚಿನ ದಿನಗಳಲ್ಲಿ ಹಾದಿಗೊಂದು ಬೀದಿಗೊಂದರಂತೆ ಶಾಲೆಯನ್ನು ತೆರೆಯಲಾಗ್ತಿದೆ. ಹೀಗಾಗಿ ನಿಮ್ಮ ಮಗುವನ್ನು ಶಾಲೆಗೆ ಕಳುಹಿಸುವ ಮೊದಲು ಆ ಶಾಲೆಗೆ ಒಳ್ಳೆಯ ಹೆಸರಿದ್ಯಾ ಅನ್ನೋದನ್ನು ತಿಳಿಯಿರಿ. ಎಷ್ಟು ವರ್ಷಗಳಿಂದ ಆ ಶಾಲೆಯನ್ನು ನಡೆಸಿಕೊಂಡು ಬರಲಾಗ್ತಿದೆ? ಮಕ್ಕಳಿಗೆ ಕಲಿಕಾ ಸಾಮರ್ಥ್ಯ ಹೇಗಿದೆ ಅನ್ನೋದನ್ನು ಅರ್ಥ ಮಾಡಿಕೊಳ್ಳಿ.
7. ಪೋಷಕರ ಜೊತೆಗಿನ ಸಂವಹನ ಬಗ್ಗೆ ತಿಳಿದುಕೊಳ್ಳಿ
ಒಂದು ಶಾಲೆ ಎಂದ ಮೇಲೆ ಪೋಷಕರು ಹಾಗೂ ಶಿಕ್ಷಕರ ಮಧ್ಯೆ ಸಂವಹನ ತುಂಬಾನೇ ಮುಖ್ಯವಾಗುತ್ತದೆ. ಮಕ್ಕಳ ಚಟುವಟಿಕೆಯ ಬಗ್ಗೆ ಶಿಕ್ಷಕರು ಆಗಾಗ್ಗೆ ಪೋಷಕರಿಗೆ ವರದಿ ಸಲ್ಲಿಸುತ್ತಿರಬೇಕು. ಶಿಕ್ಷಕರು ಹಾಗೂ ಪೋಷಕರು ಜೊತೆಗೂಡಿ ಮೀಟಿಂಗ್ ಮಾಡಬೇಕು. ಶಾಲೆಯಲ್ಲಿ ಇದನ್ನೆಲ್ಲಾ ಮಾಡಲಾಗುತ್ತಿದ್ಯಾ ಅನ್ನೋದನ್ನು ತಿಳಿಯಿರಿ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ಕೊಡುವ ಶಾಲೆಯನ್ನೇ ನೀವು ಆರಿಸಿ.
ಶಾಲೆ ಮಗುವಿನ ಉಜ್ವಲ ಭವಿಷ್ಯವನ್ನು ಕಟ್ಟುವ ದೇವಾಲಯವಿದ್ದಂತೆ. ಹೀಗಾಗಿ ನಿಮ್ಮ ಮಗುವಿಗಾಗಿ ಶಾಲೆಯನ್ನು ಆರಿಸುವಾಗ ನಿರ್ಲಕ್ಷ್ಯ ಬೇಡ. ನಿಮ್ಮ ಮಗುವಿಗಾಗಿ ಉತ್ತಮ ಶಾಲೆಯನ್ನೇ ಆರಿಸಿ.



Click it and Unblock the Notifications


