Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೇಸಿಗೆಯಲ್ಲಿ ಬೇಬಿ ಕೇರ್ ಪ್ರಾಡಕ್ಟ್‌ಗಳನ್ನು ಖರೀದಿಸುವಾಗ ಈ ತಪ್ಪು ಮಾಡದಿರಿ!
ಶಿಶುವು ತುಂಬಾನೇ ಸೂಕ್ಷ್ಮವಾಗಿರೋದ್ರಿಂದ ಮಕ್ಕಳಿಗೆ ನಾವು ಯಾವುದಾದರೂ ವಸ್ತುಗಳನ್ನು ನೀಡುವಾಗ ಅಥವಾ ಯಾವುದಾದರೂ ಹೊಸ ಪ್ರಾಡಕ್ಟ್‌ಗಳನ್ನು ಪರಿಚಯ ಮಾಡುವಾಗ ಜಾಗರೂಕತೆಯಿಂದ ಇರಬೇಕು. ಅದ್ರಲ್ಲೂ ಈ ಬೇಸಿಗೆಯಲ್ಲಿ ಮಕ್ಕಳ ತ್ವಚೆಯನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ಇಂತಹ ಸಂದರ್ಭದಲ್ಲಿ ಕೆಲವೊಂದು ಕ್ರೀಮ್‌ಗಳನ್ನು ಮಕ್ಕಳ ತ್ವಚೆಗೆ ಬಳಕೆ ಮಾಡಲಾಗುತ್ತದೆ. ಹಾಗಾದ್ರೆ ಬೇಬಿಕೇರ್ ಪ್ರಾಡಕ್ಟ್‌ಗಳನ್ನು ಖರೀದಿ ಮಾಡುವಾಗ ಪೋಷಕರು ಯಾವೆಲ್ಲಾ ಅಂಶಗಳನ್ನು ಗಮನದಲ್ಲಿಡಬೇಕು ಅನ್ನೋದನ್ನು ತಿಳಿಯೋಣ.

1. ಕೆಮಿಕಲ್ ಬಳಕೆಯ ಬಗ್ಗೆ ತಿಳಿದುಕೊಳ್ಳಿ
ಮಗುವಿನ ತ್ವಚೆ ಸೂಕ್ಷ್ಮವಾಗಿರೋದ್ರಿಂದ ಯಾವುದೇ ಪ್ರಾಡಕ್ಟ್ ಬಳಕೆ ಮಾಡುವಾಗ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಹೀಗಾಗಿ ಯಾವುದೇ ಪ್ರಾಡಕ್ಟ್ ಖರೀದಿಸುವಾಗ ಅದ್ರಲ್ಲಿ ಯಾವೆಲ್ಲಾ ಕೆಮಿಕಲ್ ಬಳಕೆ ಮಾಡಿದ್ದಾರೆ ಅನ್ನೋದನ್ನು ಚೆಕ್ ಮಾಡಿ. ಯಾಕಂದ್ರೆ ಕೆಲವೊಂದು ಕೆಮಿಕಲ್ ನಿಮ್ಮ ಮಗುವಿನ ತ್ವಚೆಗೆ ಅಲರ್ಜಿಯುಂಟು ಮಾಡಬಹುದು. ಇದಿಷ್ಟೇ ಅಲ್ಲ, ಆದಷ್ಟು ಬ್ರಾಂಡೆಂಡ್ ಪ್ರಾಡೆಕ್ಟ್‌ಗಳನ್ನೇ ನಿಮ್ಮ ಮಗುವಿಗಾಗಿ ಖರೀದಿಸಿ. ಸಾಧ್ಯವಾದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.
2. ನೈಸರ್ಗಿಕ ವಸ್ತುಗಳನ್ನು ಬಳಕೆ ಮಾಡಿರೋದನ್ನು ಖಾತರಿ ಪಡಿಸಿ
ನೈಸರ್ಗಿಕ ವಸ್ತುಗಳನ್ನು ಮಕ್ಕಳ ತ್ವಚೆಗೆ ಬಳಕೆ ಮಾಡಿದರೆ ಉತ್ತಮ. ಈಗ ಮಾರುಕಟ್ಟೆಯಲ್ಲಿ ನೈಸರ್ಗಿಕ ಪ್ರಾಡಕ್ಟ್‌ನಿಂದ ತಯಾರಿಸಿದ ಅನೇಕ ಬೇಬಿ ಕೇರ್ ಪ್ರಾಡಕ್ಟ್‌ಗಳು ಲಭ್ಯವಿದೆ. ಅದರಲ್ಲಿ ಕೆಲವೊಂದು ಪ್ರಾಡಕ್ಟ್‌ಗಳು ಹೆಸರಿಗೆ ಮಾತ್ರ ನೈಸರ್ಗಿಕ ಪ್ರಾಡಕ್ಟ್ ಎಂದು ಹಾಕಲಾಗಿರುತ್ತದೆ. ಆದರೆ ಹೆಚ್ಚಾಗಿ ಕೆಮಿಕಲ್ ಬಳಕೆ ಮಾಡಿ ಅದನ್ನು ತಯಾರು ಮಾಡಲಾಗಿರುತ್ತದೆ. ಹೀಗಾಗಿ ಆದಷ್ಟು ಸಾವಯಾವ ವಸ್ತುಗಳಿಂದ ತಯಾರಿಸಿದ ಪ್ರಾಡಕ್ಟ್ ಬಳಕೆ ಮಾಡಿ.
3. ಚರ್ಮರೋಗ ತಜ್ಞರು ಅನುಮೋದಿಸಿದ ಪ್ರಾಡಕ್ಟ್ ಖರೀದಿಸಿ
ನಾವು ಬೇಬಿಕೇರ್ ಪ್ರಾಡಕ್ಟ್‌ಗಳನ್ನು ಖರೀದಿಸುವಾಗ ಅದು ಚರ್ಮ ರೋಗ ತಜ್ಞರಿಂದ ಅನುಮೋದಿಸಲಾದ ಪ್ರಾಡಕ್ಟ್ ಆಗಿದ್ಯ ಎಂದು ಮೊದಲು ಪರೀಕ್ಷಿಸಿಕೊಳ್ಳಿ. ಕೆಲವೊಂದು ಸಲ ಬ್ರಾಂಡೆಡ್ ಪ್ರಾಡಕ್ಟ್ ಎಂದು ಖರೀದಿ ಮಾಡುತ್ತೇವೆ. ಇಂತಹ ಸಂದರ್ಭದಲ್ಲಿ ಲೇಬಲ್ ಪರೀಕ್ಷಿಸುವುದರ ಜೊತೆಗೆ ಆ ಪ್ರಾಡಕ್ಟ್‌ಗೆ ಇರುವ ಸಮೀಕ್ಷೆಯನ್ನು ಗಣನೆಗೆ ತೆಗೆದುಕೊಳ್ಳೋದು ತುಂಬಾನೇ ಮುಖ್ಯವಾಗುತ್ತದೆ.
4. ಕೃತಕ ಪರಿಮಳ ಇರುವ ವಸ್ತುಗಳನ್ನು ಖರೀದಿಸಬೇಡಿ
ಕೆಲವೊಂದು ಬೇಬಿಕೇರ್ ಪ್ರಾಡಕ್ಟ್‌ಗಳಿಗೆ ಕೃತಕ ಪರಿಮಳವನ್ನು ಹಾಕಲಾಗಿರುತ್ತದೆ. ಇದರಿಂದ ನಿಮ್ಮ ಮಗುವಿಗೆ ಅಲರ್ಜಿಯಾಗುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೇ, ಕೆಲವೊಂದು ಸಲ ಅತಿಯಾದ ಪರಿಮಳವು ನಿಮ್ಮ ಮಗುವಿಗೆ ತಲೆನೋವು ಉಂಟುಮಾಡಬಹುದು. ಹೀಗಾಗಿ ಆದಷ್ಟು ಸೌಮ್ಯವಾದ ಪರಿಮಳ ಹೊಂದಿರುವ ಪ್ರಾಡಕ್ಟ್ ಬಳಕೆ ಮಾಡಿ.
5. ಎಸ್‌ಪಿಎಫ್ 30 ಕ್ಕಿಂತ ಅಧಿಕವಿರಬಾರದು
ಎಸ್‌ಪಿಎಫ್ ಎಂದರೆ ಸನ್ ಪ್ರೊಟೆಕ್ಷನ್ ಫ್ಯಾಕ್ಟರ್ ಮೂವತ್ತಕ್ಕಿಂತ ಅಧಿಕವಾಗಿದ್ರೆ ಒಳ್ಳೆಯದು ಎಂದು ಅನೇಕರು ನಂಬಿದ್ದಾರೆ. ಆದರೆ ಇದು ಒಳ್ಳೆಯದಲ್ಲ. ಮಗುವಿನ ಸೂಕ್ಷ್ಮ ತ್ವಚೆಗೆ ಎಸ್‌ಪಿಎಫ್ 30ರವರೆಗಿದ್ದರೆ ಸಾಕು. ಎಸ್‌ಪಿಎಫ್ ಹೆಚ್ಚಾದಂತೆ ಅದು ರಂಧ್ರಗಳನ್ನು ಮುಚ್ಚಿ ಹಾಕುತ್ತದೆ. ಇದರಿಂದ ಮಗುವಿನ ಮೈಮೇಲೆ ಕಜ್ಜಿಯಾಗುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳಿಗೆ ಎಸ್‌ಪಿಎಫ್ 30ಕ್ಕಿಂತ ಕಡಿಮೆ ಇರುವ ಸನ್‌ಸ್ಕ್ರೀನ್ ಬಳಕೆ ಮಾಡಿ.
6. ಅಲೋವೆರಾ ಜೆಲ್ ಬಳಸಬಹುದು
ಅಲೋವೆರಾ ಚಿಕ್ಕವರಿಂದ ಹಿಡಿದು ದೊಡ್ಡವರ ತ್ವಚೆಗೂ ಇದು ತುಂಬಾನೇ ಒಳ್ಳೆಯದು. ಇದು ಚರ್ಮವನ್ನು ಮೋಸ್ಚರ್ ಮಾಡುತ್ತದೆ. ಇದನ್ನು ತ್ವಚೆಗೆ ಹಾಕಿದ ತಕ್ಷಣ ಇದು ಅಂಟಿಕೊಳ್ಳುವುದಿಲ್ಲ. ಬದಲಾಗಿ ಆದಷ್ಟು ಬೇಗೆ ಒಣಗುತ್ತದೆ. ಇನ್ನೂ ಮಾರ್ಕೆಟ್‌ನಲ್ಲಿ ಸಿಗುವ ಅಲೋವೆರಾ ಜೆಲ್‌ಗಿಂತ ಮನೆಯಲ್ಲೇ ಸಿಗುವ ನೈಸರ್ಗಿಕ ಅಲೋವೆರಾ ಬಳಸಿದರೆ ಇನ್ನೂ ಒಳ್ಳೆಯದು.
7. ಕ್ಲೆನ್ಸರ್ ಬಳಕೆ ಮಾಡುವಾಗ ಗಮನಿಸಿ
ಬೇಸಿಗೆ ಎಂದರೆ ಸಾಮಾನ್ಯವಾಗಿ ಬೆವರುತ್ತೇವೆ. ಮಕ್ಕಳಿಗೆ ಕ್ಲೆನ್ಸರ್‌ಗಳನ್ನು ಆಯ್ಕೆ ಮಾಡುವಾಗ ಸಂಶ್ಲೇಷಿತ ಬಣ್ಣಗಳು, ಸುಗಂಧ ದ್ರವ್ಯಗಳು ಮತ್ತು ಪ್ಯಾರಾಬೆನ್‌ಗಳನ್ನು ಹೊಂದಿರದ ಕ್ಲೆನ್ಸರ್ ಅನ್ನು ಆಯ್ಕೆ ಮಾಡುವುದು ಮುಖ್ಯ. ಈ ಪದಾರ್ಥಗಳು ಚರ್ಮದಿಂದ ತೇವಾಂಶವನ್ನು ಹೊರಹಾಕುತ್ತವೆ. ಆದ್ದರಿಂದ ಸಿಟ್ರಸ್ ಹಣ್ಣುಗಳು ಅಥವಾ ಪುದೀನಾದಿಂದ ತಯಾರಿಸಿದ ಕ್ಲೆನ್ಸರ್‌ಗಳನ್ನು ಬಳಸಿ. ಇದು ಮಗುವಿಗೆ ತ್ವಚೆಗೆ ತುಂಬಾನೇ ಒಳ್ಳೆಯದು.
ಈ ಬೇಸಿಗೆಯಲ್ಲಿ ಚರ್ಮದ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಹೀಗಂತ ಮಕ್ಕಳ ತ್ವಚೆಗೆ ಒಟ್ಟಾರೆ ಯಾವುದೋ ಪ್ರಾಡಕ್ಟ್‌ಗಳನ್ನು ಬಳಕೆ ಮಾಡದಿರಿ. ಯಾವುದೇ ಪ್ರಾಡಕ್ಟ್ ಆಯ್ಕೆ ಮಾಡುವಾಗ ಈ ಅಂಶಗಳನ್ನು ಗಮನಿಸಿದರೆ ಉತ್ತಮ.



Click it and Unblock the Notifications


