Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಪೋಷಕರು ಈ 6 ತಪ್ಪು ಮಾಡಿದರೆ ಮಕ್ಕಳ ಭವಿಷ್ಯ ಹಾಳಾಗುತ್ತೆ
ಪೋಷಕರ ಜವಾಬ್ದಾರಿ ನಿಭಾಯಿಸುವುದು ಅಷ್ಟು ಸುಲಭವಲ್ಲ. ಮಕ್ಕಳನ್ನು ಬೆಳೆಸುವುದು ಅಷ್ಟು ಸುಲಭವಲ್ಲ, ಬರೀ ಅವರ ಬೇಕು-ಬೇಡಗಳನ್ನು ನೋಡಿದರೆ ಸಾಲದು ಅವರನ್ನು ಉತ್ತಮ ರೀತಿಯಲ್ಲಿ ಬೆಳೆಸುವ ಜವಾಬ್ದಾರಿ ಪೋಷಕರ ಮೇಲಿರಲಿದೆ. ಎಲ್ಲಾ ಪೋಷಕರಿಗೆ ತಮ್ಮ ಮಕ್ಕಳು ತುಂಬಾ ಒಳ್ಳೆಯ ಗುಣಗಳನ್ನು ಹೊಂದಿರಬೇಕು, ಓದಿ ಉನ್ನತ ಸ್ಥಾನಕ್ಕೇರಬೇಕೆಂಬ ಆಸೆ ಇರುತ್ತದೆ, ಆದರೆ ತಮಗರಿಯದೆ ಕೆಲವೊಂದು ತಪ್ಪುಗಳನ್ನು ಮಾಡುವ ಮಕ್ಕಳ ಭವಿಷ್ಯಕ್ಕೆ ಮುಳುವಾಗುತ್ತಾರೆ.

ಮಕ್ಕಳ ದೃಷ್ಟಿಯಲ್ಲಿ ಕೆಟ್ಟ ಪೋಷಕರಾಗುತ್ತಾರೆ. ಬಹುತೇಕ ಪೋಷಕರು ಈ ತಪ್ಪುಗಳನ್ನು ಮಾಡುತ್ತಾರೆ ಕೂಡ, ಆದರೆ ಎಷ್ಟೋ ಜನರಿಗೆ ತಾವು ಮಾಡುತ್ತಿರುವುದು ತಪ್ಪು ಎಂದು ಅರಿವಿಗೆ ಬಂದಿರುವುದೇ ಇಲ್ಲ, ನಾವು ಸರಿಯಾಗಿಯೇ ಇದ್ದೇವೆ, ಈಗೆಲ್ಲಾ ಮಾಡಿದಿದ್ದರೆ ನಮ್ಮ ಕಂಟ್ರೋಲ್‌ಗೆ ತರಲು ಕಷ್ಟ ಎಂದು ಭಾವಿಸುತ್ತಾರೆ, ಆದರೆ ಆ ರೀತಿ ಮಾಡುವುದರಿಂದ ಅವರ ಆತ್ಮವಿಶ್ವಾಸ ಕುಗ್ಗಿಸುತ್ತೇವೆ, ಅವರಲ್ಲಿರುವ ಸಾಮರ್ಥ್ಯ ಕಡೆಗಣಿಸುತ್ತೇವೆ, ಕೊನೆಗೆ ನಾವು ಭಯಪಟ್ಟಂತೆಯೇ ನಮ್ಮ ಮಕ್ಕಳು ಆಗುವುದನ್ನು ನೋಡಬೇಕಾಗುತ್ತದೆ. ಆದ್ದರಿಂದ ಪೋಷಕರೇ ಮಕ್ಕಳ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ
ಹೋಲಿಕೆ ಮಾಡುವುದು
ಇದನ್ನು ಬಹುತೇಕ ಪೋಷಕರು ಮಾಡುತ್ತಾರೆ. ಯಾವುದೇ ಕಾರಣಕ್ಕೆ ನಿಮ್ಮ ಮಗುವನ್ನು ಇತರ ಮಗುವಿನ ಜೊತೆ ಹೋಲಿಕೆ ಮಾಡಬೇಡಿ. ಈ ರೀತಿಯ ಹೋಲಿಕೆ ನಿಮ್ಮ ಮಕ್ಕಳ ಆತ್ಮವಿಶ್ವಾಸ ತುಂಬಾನೇ ಕಡಿಮೆ ಮಾಡುತ್ತದೆ.
ಎಲ್ಲಾ ಮಕ್ಕಳು ಒಂದೇ ರೀತಿ ಇರಬೇಕೆಂದು ನೀವು ಭಾವಿಸುವುದೇ ತಪ್ಪು, ನಿಮ್ಮ ಮಗು 100ಕ್ಕೆ 100 ಅಂಕ ತೆಗೆಯದಿದ್ದರೆ ಏನಂತೆ ಬೇರೆ ಏನೋ ಕೌಶಲ್ಯ ಇರಬಹುದು, ಅದನ್ನು ಗುರುತಿಸಿ. ಒಂದು ವೇಳೆ ಅವರು ಜಸ್ಟ್ ಪಾಸ್ ಆಗುವಷ್ಟೇ ಬುದ್ಧಿವಂತಿಕೆ ಹೊಂದಿರಲಿ, ಅಂದ ಮಾತ್ರ ಅವರು ದಡ್ಡರಲ್ಲ. ಪ್ರತಿಯೊಂದು ಹಂತದಲ್ಲಿ ಅವರನ್ನು ಹುರಿದುಂಬಿಸಿ. ಇದರಿಂದ ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳುವುದನ್ನು ಕಲಿಯುತ್ತಾರೆ.
ಅವರನ್ನು ಮೂದಲಿಸಬೇಡಿ
ಮಕ್ಕಳು ಚಿಕ್ಕ ಪುಟ್ಟ ತಪ್ಪುಗಳನ್ನು ಮಾಡಿದಾಗ ಅವರನ್ನು ಜೋರು ಮಾಡಲೇಬೇಕು, ಹಾಗಂತ ಅವರ ಮನಸ್ಸಿಗೆ ನೋವಾಗುವಂಥ ಪದಗಳನ್ನು ಬಳಸಬೇಡಿ. ನಿನ್ನಿಂದ ಏನೂ ಸಾಧ್ಯವಿಲ್ಲ, ನೀನು ಹೀಗೇ ಅಂತ ಗೊತ್ತು ಅಂತೆಲ್ಲಾ ಹೇಳಬೇಡಿ. ನಿಮ್ಮ ಈ ಮಾತುಗಳೇ ಅವರನ್ನು ಕುಗ್ಗಿಸಿ ಬಿಡುತ್ತದೆ, ನೀವೇ ಹೇಳುವಾಗ ಅವರಿಗೂ ನನ್ನಿಂದ ಏನೂ ಸಾಧ್ಯವಿಲ್ಲ, ನಾನು ಇಷ್ಟೇ ಎಂಬ ಭಾವನೆ ಮೂಡುತ್ತದೆ ಆದ್ದರಿಂದ ಈ ರೀತಿ ಹೇಳಲು ಹೋಗಬೇಡಿ.
ತುಂಬಾನೇ ಕಂಟ್ರೋಲ್ ಮಾಡಬೇಡಿ
ಲಂಗುಲಗಾಮು ಬೇಕು ಹಾಗಂತ ತುಂಬಾನೇ ಕಂಟ್ರೋಲ್ ಮಾಡುವುದು ಸರಿಯಲ್ಲ. ಈ ರೀತಿ ಮಾಡಲಾರಂಭಿಸಿದಾಗ ಅವರಿಗೆ ಉಸಿರು ಕಟ್ಟಿದಂತಾಗುವುದು. ಒಂದು ವೇಳೆ ನೀವು ಕಂಟ್ರೋಲ್ ಮಾಡುವುದಾದರೆ ಏಕೆ ಈ ರೀತಿ ಮಾಡುತ್ತಿದ್ದೀರಿ ಎಂಬುವುದನ್ನು ಮನವರಿಕೆ ಮಾಡಿಸುವುದು ಒಳ್ಳೆಯದು. ನೀವು ಸಿಕ್ಕಾಪಟ್ಟೆ ಕಂಟ್ರೋಲ್ ಮಾಡಲಾರಂಭಿಸಿದರೆ ನೀವು ಬೇಡ ಎಂಬುವುದನ್ನು ಅವರಿಗೆ ಮಾಡಬೇಕೆನಿಸುವುದು, ಆದ್ದರಿಂದ ತುಂಬಾ ಕಂಟ್ರೋಲ್ ಮಾಡಬೇಡಿ.
ನಿಮ್ಮ ಮಕ್ಕಳ ಲುಕ್ ಬಗ್ಗೆ ನೆಗೆಟಿವ್ ಆಗಿ ಕಮೆಂಟ್ ಮಾಡಬೇಡಿ
ನೀವು ಪೋಷಕರಾಗಿ ಅವರ ಲುಕ್ ಬಗ್ಗೆ ಕಮೆಂಟ್ ಮಾಡಬೇಡಿ. ಅದು ಅವರ ಮನಸ್ಸಿಗೆ ತುಂಬಾನೇ ನೋವಾಗುತ್ತೆ. ಆದ್ದರಿಂದ ಅವರ ಲುಕ್ ಬಗ್ಗೆ ಮಾತ್ರ ಯಾವುದೇ ಕಮೆಂಟ್ ಮಾಡಬೇಡಿ.
ಅವರ ಉತ್ಸಾಹ ಕುಗ್ಗಿಸಬೇಡಿ
ನಿಮ್ಮ ಮಕ್ಕಳು ಏನಾದರೂ ಮಾಡಲು ಹೊರಟಾಗ ಅವರ ಉತ್ಸಾಹ ಕುಗ್ಗಿಸುವ ಪ್ರಯತ್ನ ಮಾಡಬೇಡಿ. ಅವರು ಮಾಡುವ ಮೊದಲೇ ನಿನ್ನಿಂದ ಸಾಧ್ಯವಿಲ್ಲ, ನೀನು ಅದೆನ್ನೆಲ್ಲಾ ಮಾಡೋಕೆ ಆಗಲ್ಲ ಎಂದಲ್ಲ ಹೇಳಲು ಬಿಡಬೇಡಿ, ನಿನ್ನಿಂದ ಸಾಧ್ಯ ಎಂದು ಹುರಿದುಂಬಿಸುವುದಷ್ಟೇ ಪೋಷಕರಾಗಿ ನಿಮ್ಮ ಕರ್ತವ್ಯ.
ಮಕ್ಕಳ ತಪ್ಪು ಸಮರ್ಥಿಸಬೇಡಿ
ಕೆಲ ಪೋಷಕರು ಇದನ್ನು ತುಂಬಾ ಮಾಡುತ್ತಾರೆ, ತಮ್ಮ ಮಕ್ಕಳು ತಪ್ಪು ಮಾಡಿದ್ದಾರೆ ಎಂದು ಗೊತ್ತಿರುತ್ತದೆ, ಆದರೂ ನಮ್ಮ ಮಕ್ಕಳು ಮಾಡಿದ್ದೇ ಸರಿ ಎಂದು ವಾದಿಸುತ್ತಾರೆ. ಈ ರೀತಿ ಮಾಡಬೇಡಿ, ಈ ರೀತಿಯ ಸಮರ್ಥನೆಯಿಂದ ಅವರ ಬದುಕು ನಾಶವಾಗಲು ನೀವು ಕಾರಣವಾಗುತ್ತೀರಿ.



Click it and Unblock the Notifications
