Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ನಿಮ್ಮ ಮಕ್ಕಳಲ್ಲಿ ಕೃತಜ್ಞತಾ ಮನೋಭಾವವನ್ನು ಬೆಳೆಸೋದು ಮುಖ್ಯ ಯಾಕೆ?
ಪುಟ್ಟ ಮಕ್ಕಳು ಒಂದು ರೀತಿ ಮಣ್ಣಿನ ಮುದ್ದೆ ಇದ್ದ ಹಾಗೆ, ಹೇಗೆ ಮಣ್ಣು ಹದವಾಗಿರುವಾಗ ಅದರಿಂದ ಸುಂದರವಾದ ಮೂರ್ತಿಯನ್ನು ತಯಾರಿಸಲಾಗುತ್ತದೆಯೋ, ಅದೇ ರೀತಿ ಪುಟ್ಟ ಮಕ್ಕಳಿಗೆ ಚಿಕ್ಕಂದಿನಲ್ಲಿ ನಾವು ಒಳ್ಳೆಯ ಮೌಲ್ಯಗಳನ್ನು ತುಂಬಿದರೆ ಅವರು ದೊಡ್ಡವರಾದ ಮೇಲೆ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ. ಸಣ್ಣ ಮಕ್ಕಳಲ್ಲಿ ಕೃತಜ್ಞತಾ ಮನೋಭಾವವನ್ನು ತುಂಬುವುದು ತುಂಬಾನೇ ಮುಖ್ಯ. ಹಾಗಾದ್ರೆ ಮಕ್ಕಳಿಗೆ ಕೃತಜ್ಞತಾ ಮನೋಭಾವವನ್ನು ಕಲಿಸಿ ಕೊಡೋದು ಹೇಗೆ? ಇದು ಯಾಕೆ ಮುಖ್ಯ ಅನ್ನೋದನ್ನು ತಿಳಿಯೋಣ.
1. ಮಕ್ಕಳಿಗೆ ಧನ್ಯವಾದ ಹೇಳುವುದನ್ನು ಕಲಿಸಿ
ಧನ್ಯವಾದ ಸಲ್ಲಿಸೋದು ಒಂದು ರೀತಿಯ ಕೃತಜ್ಞತಾ ಭಾವ. ನಮಗೆ ಯಾರಾದರೂ ಸಹಾಯ ಮಾಡಿದಾಗ, ನಾವು ಬೇರೆಯವರಿಂದ ಏನನ್ನಾದರೂ ಪಡೆದುಕೊಂಡಾಗ, ನಾನು ಒಬ್ಬರಿಂದ ಏನನ್ನಾದರೂ ಕಲಿತುಕೊಂಡಾಗ ಅವರಿಗೆ ಧನ್ಯವಾದ ಸಮರ್ಪಣೆ ಮಾಡಬೇಕು ಎಂಬುವುದನ್ನು ಮಕ್ಕಳಿಗೆ ಹೇಳಿ ಕೊಡಿ. ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಈ ಗುಣಗಳನ್ನು ರೂಢಿಸಿಕೊಂಡರೆ ತುಂಬಾನೇ ಒಳ್ಳೆಯದು. ದೊಡ್ಡವರಾದ ಮೇಲೆ ಈ ಗುಣ ತನ್ನಿಂದ ತಾನಾಗಿಯೇ ರೂಢಿಯಾಗುತ್ತದೆ.

2. ಪೋಷಕರು ಮಕ್ಕಳಿಗೆ ಮಾದರಿಯಾಗಬೇಕು
ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು ಎಂಬ ಗಾದೆ ಮಾತುಗಳಿದೆ. ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬೇಕು ಎಂಬ ಆಸೆ ಇರುತ್ತದೆ. ಅವರಲ್ಲಿ ಕೃತಜ್ಞತಾ ಭಾವ ಬೆಳೆಯಬೇಕೆಂದು ಆಸೆ ಪಡುತ್ತೇವೆ. ನಿಮ್ಮ ಮಕ್ಕಳಲ್ಲಿ ಈ ಗುಣ ಬೆಳೆಯ ಬೇಕೆಂದರೆ ನಿಮ್ಮಲ್ಲೂ ಈ ಗುಣ ಇರಲೇಬೇಕು.
ಪೋಷಕರಲ್ಲಿ ಒಳ್ಳೆಯ ಗುಣಗಳಿದ್ದಾಗ ಮಕ್ಕಳು ಅದನ್ನೇ ನೋಡಿಕೊಂಡು ಬೆಳೆಯುತ್ತಾರೆ. ಹಾಗೂ ಅದನ್ನೇ ಕಲಿತುಕೊಳ್ಳುತ್ತಾರೆ. ಮಕ್ಕಳು ನಾಲ್ಕು ವರ್ಷಗಳವರೆಗೆ ಏನೆಲ್ಲಾ ಕಲಿಯುತ್ತಾರೋ ಅದು ಪೋಷಕರಿಂದಲೇ ಬಳುವಳಿಯಾಗಿ ಬಂದಿರುತ್ತದೆ. ಹೀಗಾಗಿ ಪೋಷಕರು ಯಾವಾಗಲು ಮಕ್ಕಳಿಗೆ ಮಾದರಿಯಾಗಬೇಕು.
3. ಕೃತಜ್ಞತಾ ಪುಸ್ತಕವನ್ನು ನೀಡಿ
ಎಲ್ಲಾ ವಿಚಾರಗಳನ್ನು ಒಂದೇ ವಿಧಾನದಿಂದ ಕಲಿಯೋದಕ್ಕೆ ಆಗೋದಿಲ್ಲ. ಕೆಲವು ವಿಚಾರಗಳನ್ನು ಒಬ್ಬರನ್ನು ನೋಡಿ ಕಲಿಯಬೇಕು, ಕೆಲವನ್ನು ಕೇಳಿ ತಿಳಿದುಕೊಳ್ಳಬೇಕು. ಇನ್ನೂ ಕೆಲವನ್ನು ಓದಿ ತಿಳಿದುಕೊಳ್ಳಬೇಕು. ಹೀಗಾಗಿ ನಿಮ್ಮ ಮನೆಯ ಪಾಠದ ಜೊತೆಗೆ ಮಕ್ಕಳಿಗೆ ಕೃತಜ್ಞತೆಗೆ ಸಂಬಂಧಿಸಿದ ಕತೆ ಪುಸ್ತಕಗಳನ್ನು ಓದಲು ಕೊಡಿ. ಇದು ಅವರಿಗೆ ಮನ ಮುಟ್ಟುವಂತೆ ಅರ್ಥೈಸುತ್ತದೆ. ಪುಸ್ತಕದಿಂದ ಕೂಡ ಅವರು ಕೃತಜ್ಞತೆಗೆ ಸಂಬಂಧಿಸಿದ ಹಲವಾರು ಜೀವನ ಪಾಠಗಳನ್ನು ಕಲಿಯಬಹುದು.
4. ಮಕ್ಕಳನ್ನು ಸ್ವಯಂ ಸೇವಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ
ನಿಮ್ಮ ಮಗುವನ್ನು ಸ್ವಯಂ ಸೇವಾ ಚಟುವಟಿಕೆ ಹಾಗೂ ದಾನಗಳಲ್ಲಿ ತೊಡಗಿಸಿಕೊಳ್ಳಿ. ಆಗ ಅವರಿಗೆ ಬೇರೆಯವರ ಕಷ್ಟದ ಅರಿವಾಗುತ್ತದೆ. ದಾನ ಮಾಡುವುದರಿಂದ ಬೇರೆ ಮಕ್ಕಳು ಚಿಕ್ಕ-ಪುಟ್ಟ ವಸ್ತುಗಳಿಗಾಗಿ ಎಷ್ಟೆಲ್ಲಾ ಕಷ್ಟ ಪಡುತ್ತಿದ್ದಾರೆ ಎಂಬುವುದರ ಅರಿವಾಗುತ್ತದೆ. ಹೀಗಾಗಿ ಚಿಕ್ಕಂದಿನಲ್ಲೇ ಪ್ರತಿಯೊಂದು ವಸ್ತುವಿನ ಮಹತ್ವವನ್ನು ತಿಳಿದುಕೊಳ್ಳುತ್ತಾರೆ. ಇನ್ನೂ ಆದಷ್ಟು ಅವರ ಹುಟ್ಟು ಹಬ್ಬವನ್ನು ಅನಾಥ ಆಶ್ರಮ, ವೃದ್ಧ ಆಶ್ರಮದಲ್ಲಿ ಆಚರಣೆ ಮಾಡಿ.
5. ಕೃತಜ್ಞತೆ ಸಲ್ಲಿಸುವ ಅಭ್ಯಾಸ ಕುಟುಂಬದಿಂದಲೇ ಶುರುವಾಗಲಿ
ಮನೆಯಲ್ಲಿಯೂ ಕೂಡ ಒಬ್ಬರಿಗೊಬ್ಬರು ಕೃತಜ್ಞತೆ ಸಲ್ಲಿಸೋದು ತುಂಬಾನೇ ಮುಖ್ಯವಾಗುತ್ತದೆ. ಪೋಷಕರು ಇದನ್ನು ರೂಢಿಸಿಕೊಳ್ಳಬೇಕು. ನಿಮಗೆ ಯಾರಾದರೂ ಸಹಾಯ ಮಾಡಿದರೆ ಅವರಿಗೆ ಥ್ಯಾಂಕ್ಯು ಹೇಳೋದನ್ನು ಮರೀಬೇಡಿ. ಗೃಹಿಣಿಯರು ಮನೆಯಲ್ಲಿ ಯಾವುದೇ ಸ್ವಾರ್ಥವಿಲ್ಲದೇ ಎಲ್ಲಾ ಕೆಲಸವನ್ನು ಮಾಡುತ್ತಾರೆ. ವಾರಕ್ಕೆ ಒಂದು ಸಲ ಎಲ್ಲರೂ ಸೇರಿ ಅವರಿಗೆ ಧನ್ಯವಾದ ಸಲ್ಲಿಸಿ. ಈ ಎಲ್ಲಾ ಅಭ್ಯಾಸಗಳು ಮಕ್ಕಳಿಗೂ ಬಳವಳಿಯಾಗಿ ಬರುತ್ತದೆ.
ಮಕ್ಕಳು ಕೃತಜ್ಞತೆ ಸಲ್ಲಿಸೋದನ್ನು ಕಲಿಯೋದು ಮುಖ್ಯ ಯಾಕೆ?
* ಮಕ್ಕಳ ಮಾನಸಿಕ ಯೋಗಕ್ಷೇಮ ವೃದ್ಧಿಯಾಗುತ್ತದೆ
* ಒಟ್ಟಾರೆಯಾಗಿ ನೈತಿಕ ಅಭಿವೃದ್ಧಿಯಾಗುತ್ತದೆ
* ಕೆಟ್ಟ ವಿಚಾರಗಳು ಅವರ ಹತ್ತಿರ ಸುಳಿಯೋದಿಲ್ಲ
* ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳುತ್ತಾರೆ
ಮಕ್ಕಳು ಚಿಕ್ಕದಿರುವಾಗಲೇ ಈ ಸಣ್ಣ ಸೂಕ್ಷ್ಮಗಳನ್ನು ಅವರ ಮನಸ್ಸಿಗೆ ಮುಟ್ಟುವ ಹಾಗೆ ತಿಳಿ ಹೇಳಬೇಕು. ಹಾಗೂ ಅಂತಹ ಗುಣಗಳನ್ನು ಅವರು ಬೆಳೆಸಿಕೊಳ್ಳುವಂತೆ ಪ್ರೇರೇಪಣೆ ನೀಡಿ. ಇಲ್ಲದಿದ್ದರೆ ದೊಡ್ಡದಾದ ಮೇಲೆ ಇಂತಹ ಮೌಲ್ಯಗಳನ್ನು ರೂಡಿಸಿಕೊಳ್ಳುವಂತೆ ಮಾಡೋದು ಕಷ್ಟ.



Click it and Unblock the Notifications
