Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ವಯಸ್ಸಾದ ಮೇಲೆ ತಂದೆಯಾಗೋದ್ರಿಂದ ಏನೆಲ್ಲಾ ಪ್ರಯೋಜನಗಳಿದೆ?
30 ವರ್ಷದೊಳಗಡೆ ಮದುವೆಯಾಗಿ ಬೇಗನೆ ಮಕ್ಕಳು ಮಾಡಿಕೊಳ್ಳಬೇಕು ಇಲ್ಲದಿದ್ದರೆ ಆ ಮೇಲೆ ಸಮಸ್ಯೆಯಾಗಿತ್ತೆ ಅಂತಾರೆ. ಯಾಕಂದ್ರೆ 30 ವರ್ಷದ ನಂತರ ಪುರುಷರಾಗಲಿ ಅಥವಾ ಮಹಿಳೆಯರಿಗಾಗಲಿ ಮಕ್ಕಳಾಗುವ ಸಾಮರ್ಥ್ಯ ಕಡಿಮೆ ಇರುತ್ತಂತೆ. ಇನ್ನೊಂದು ವಿಚಾರ ಅಂದ್ರೆ ಮಕ್ಕಳು ಯೌವನಕ್ಕೆ ಬರುವಷ್ಟರಲ್ಲಿ ಪೋಷಕರು ಮುದುಕರಾಗುತ್ತಾರೆ. ಹೀಗಾಗಿ ಬೇಗನೆ ಮದುವೆಯಾಗಿ, ಮಕ್ಕಳು ಮಾಡ್ಕೊಂಡ್ರೆ ಒಳ್ಳೆಯದು ಅಂತ ಹೇಳಲಾಗುತ್ತದೆ.
ಆದ್ರೆ ಇತ್ತೀಚಿಗೆ ಟ್ರೆಂಡ್ ಬದಲಾಗುತ್ತಿದೆ. ಹೆಚ್ಚಿನ ಪುರುಷರು 40 ವರ್ಷದ ನಂತರ ಮಕ್ಕಳನ್ನು ಪಡೆಯುತ್ತಿದ್ದಾರೆ. ಅದ್ರಲ್ಲೂ ಹೆಚ್ಚಿನ ಸೆಲೆಬ್ರಿಟಿಗಳಂತೂ 40 ವರ್ಷದ ನಂತರ ತಂದೆ ಅಥವಾ ತಾಯಿಯಾಗ್ತಿದ್ದಾರೆ. ಇತ್ತೀಚಿಗೆ ನಟ, ನೃತ್ಯಗಾರ ಪ್ರಭುದೇವ ತಮ್ಮ 50 ನೇ ವಯಸ್ಸಿನಲ್ಲಿ ಮತ್ತೊಮ್ಮೆ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಅಷ್ಟಕ್ಕು ವಯಸ್ಸಾದ ಮೇಲೆ ತಂದೆಯಾಗೋದ್ರಿಂದ ಏನು ಪ್ರಯೋಜನಗಳಿದೆ ಅನ್ನೋದನ್ನು ತಿಳಿಯೋಣ.

ಜೀವನದ ಅನುಭಗಳು ಹೆಚ್ಚಾಗಿರುತ್ತದೆ
ಒರ್ವ ಮನುಷ್ಯನಿಗೆ ಜೀವನ ಅನುಭವಗಳು ತುಂಬಾನೇ ಮುಖ್ಯವಾಗುತ್ತದೆ. ಜೀವನ ಅನುಭವಗಳೇ ಆತನಿಗೆ ಬದುಕಿನ ಪಾಠವನ್ನು ಕಲಿಸುತ್ತದೆ. ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ ಮಕ್ಕಳಾದರೆ ಅವರಿಗೆ ಜೀವನ ಅನುಭವಗಳು ಕಡಿಮೆ ಇರುತ್ತದೆ. ಕೆಲವೊಂದು ಪರಿಸ್ಥಿತಿಗಳನ್ನು ಅವರಿಂದ ಎದುರಿಸೋದಕ್ಕೆ ಸಾಧ್ಯವಾಗೋದಿಲ್ಲ.
ಆದರೆ ವಯಸ್ಸಾದ ಮೇಲೆ ಮಕ್ಕಳಾದರೆ ಅವರಿಗೆ ಜೀವನದ ಅನುಭವಗಳು ಹೆಚ್ಚಾಗಿರುತ್ತದೆ. ಜೀವನದ ಆಳ, ಅಗಲಗಳನ್ನು ಕಂಡಿರುತ್ತಾರೆ. ಅಷ್ಟೇ ಅಲ್ಲ, ಕಷ್ಟಗಳನ್ನು ಯಾವ ರೀತಿ ಎದುರಿಸಬೇಕು ಅನ್ನೋದು ಕೂಡ ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಈ ಮೂಲಕ ತಮ್ಮ ಜೀವನ ಅನುಭವಗಳನ್ನು ಮಕ್ಕಳಿಗೆ ಧಾರೆ ಎರೆಯೋದಕ್ಕೆ ಸಾಧ್ಯವಾಗುತ್ತದೆ.
ಮಕ್ಕಳ ಜೀವಿತಾವಧಿ ಹೆಚ್ಚಾಗಿರುತ್ತದೆ
2012 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನದ ಪ್ರಕಾರ ತಂದೆಯ ವಯಸ್ಸು ಮತ್ತು ಕ್ರೋಮೋಸೋಮ್‌ಗಳ ನಡುವಿನ ಸಂಪರ್ಕವು ಸಂತಾನದ ದೀರ್ಘಾವಧಿಯ ಜೀವಿತಾವಧಿಗೆ ಕಾರಣವಾಗಬಹುದು. ಹೀಗಾಗಿ ಮಕ್ಕಳ ಜೀವಿತಾವಧಿ ಅಧಿಕವಾಗಿರುತ್ತೆ ಎಂದು ಸಾಭೀತಾಗಿದೆ.
ಮಕ್ಕಳು ಬುದ್ಧಿವಂತರಾಗಿರುತ್ತಾರೆ!
ಒಂದು ಅಧ್ಯಯನದ ಪ್ರಕಾರ ಪುರುಷರು ವಯಸ್ಸಾದ ಮೇಲೆ ಮಕ್ಕಳು ಮಾಡ್ಕೊಂಡ್ರೆ ಆ ಮಕ್ಕಳ ಐಕ್ಯೂ ಪವರ್ ಉತ್ತಮವಾಗಿರುತ್ತಂತೆ. ಹಾಗೂ ಆ ಮಕ್ಕಳು ತಮ್ಮ ಆಸಕ್ತಿಗಳ ಕಡೆಗೆ ಹೆಚ್ಚಿನ ಗಮನವನ್ನು ಕೊಡ್ತಾರಂತೆ. ಇನ್ನೂ ಈ ಮಕ್ಕಳು ಕಲಿಕೆಯಲ್ಲೂ ಮುಂದಿರುತ್ತಾರಂತೆ. ಸಾಮಾಜಿಕವಾಗಿ ಹೊಂದಿಕೊಳ್ಳುವ ದೃಷ್ಟಿಯಿಂದ ಗಮನಿಸಿದ್ರೆ ಇವರು ಯಾವುದೇ ಕಾರಣಕ್ಕೂ ವಿಚಲಿತರಾಗಿ ಇರೋದಿಲ್ಲ.
ತಂದೆಯಾಗಲು ಭಾವನಾತ್ಮಕವಾಗಿ ಸಿದ್ಧವಾಗಿರುತ್ತಾರೆ
ಒಂದು ಅಧ್ಯಯನದ ಪ್ರಕಾರ ವಯಸ್ಸಾದ ಮೇಲೆ ತಂದೆಯಾದರೆ ಅಂತಹ ಪೋಷಕರು ಭಾವನಾತ್ಮಕವಾಗಿ ತಂದೆಯಾಗಲು ಸಿದ್ಧವಾಗಿರುತ್ತಾರಂತೆ. ಅವರು ಇಷ್ಟು ವರ್ಷಗಳ ಕಾಲ ತಂದೆಯಾಗೋದಕ್ಕಾಗಿ ಪರಿತಪಿಸುತ್ತಿರುತ್ತಾರೆ. ಮಕ್ಕಳು ಬೇಕು ಅನ್ನೋ ಬಯಕೆ ಎಷ್ಟೋ ವರ್ಷಗಳಿಂದ ಅವರನ್ನು ಕಾಡುತ್ತಿತ್ತು. ಹೀಗಾಗಿ ಮಕ್ಕಳಾದಾಗ ಅವರು ಭಾವನಾತ್ಮಕವಾಗಿ ಎಲ್ಲದಕ್ಕೂ ಸಿದ್ಧರಾಗಿ ಇರುತ್ತಾರೆ.
ಆರ್ಥಿಕವಾಗಿ ಸಬಲರಾಗಿ ಇರುತ್ತಾರೆ
ಮಕ್ಕಳ ಜವಾಬ್ದಾರಿ ನಿಭಾಯಿಸೋದು ಅಂದ್ರೆ ನಾವು ಅಂದುಕೊಂಡಷ್ಟು ಸುಲಭವೇನಲ್ಲ. ಹೆಂಡತಿ ಗರ್ಭಿಣಿಯಾಗೋದ್ರಿಂದ ಹಿಡಿದು ಮಕ್ಕಳು ದೊಡ್ಡವರಾಗಿ ಅವರ ಕಾಲ ಮೇಲೆ ಅವರು ನಿಂತುಕೊಳ್ಳೋವರೆಗೂ ಖರ್ಚು ಇದ್ದೇ ಇರುತ್ತೆ. ಅನೇಕ ಪೋಷಕರು ವಿಶೇಷವಾಗಿ ಅಪ್ಪಂದಿರು ಈ ಸಮಯದಲ್ಲಿ ಹಲವಾರು ಆರ್ಥಿಕ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಆದರೆ ವಯಸ್ಸಾದ ಮೇಲೆ ತಂದೆಯಾದರೆ ಈ ರೀತಿ ಸಮಸ್ಯೆ ಎದುರಾಗೋದಿಲ್ಲ.
ಯಾಕಂದ್ರೆ ಸುಮಾರು 40 ವರ್ಷ ವಯಸ್ಸಿನಲ್ಲಿ ಆ ಪುರುಷ ಆರ್ಥಿಕವಾಗಿ ಸಬಲನಾಗಿರುತ್ತಾನೆ. ಮನೆ, ಕಾರು, ಆಸ್ತಿ ಮಾಡಿರುತ್ತಾರೆ. ಹೇಳಿಕೊಳ್ಳುವ ಮಟ್ಟಿಗೆ ದೊಡ್ಡ ಸಾಲಗಳು ಇರೋದಿಲ್ಲ. ಹೀಗಾಗಿ ಮಕ್ಕಳಾದ ಮೇಲೆ ಹೆಚ್ಚಿನವರಿಗೆ ಈ ರೀತಿ ಯಾವುದೇ ಆರ್ಥಿಕ ಸಮಸ್ಯೆ ಎದುರಾಗೋದಿಲ್ಲ.
ವಯಸ್ಸಾದ ಮೇಲೆ ಮಕ್ಕಳು ಮಾಡಿಕೊಳ್ಳೋದಕ್ಕೆ ಪ್ರತಿಯೊಬ್ಬರಿಗೆ ಬೇರೆ ಬೇರೆ ಕಾರಣಗಳು ಇರುತ್ತದೆ. ಆದರೆ ವಯಸ್ಸಾದ ಮೇಲೆ ಮಕ್ಕಳಾದ್ರೆ ಇಷ್ಟೆಲ್ಲಾ ಪ್ರಯೋಜನಗಳು ಇದೆ. ಹಾಗಂತ ನಾವು ಇದಕ್ಕೆ ಪ್ರೋತ್ಸಾಹ ನೀಡುತ್ತಿಲ್ಲ.



Click it and Unblock the Notifications
