Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಗರ್ಭಪಾತಕ್ಕೆ ಅನುಮತಿ ಕೋರಿದ ಗರ್ಭಿಣಿಗೆ ಕೋರ್ಟ್ ನೀಡಿತ್ತು ಮಹತ್ವದ ತೀರ್ಪು
24 ತಿಂಗಳ ಗರ್ಭಿಣಿಯೊಬ್ಬರು ಮಗುವನ್ನು ಗರ್ಭಪಾತ ಮಾಡಿಸಲು ಅನುಮತಿ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಮುಖ್ಯ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ನ್ಯಾಯಾಧೀಶರಾದ ಜೆಬಿ ಪ್ರದಿವಾಲ ಮತ್ತು ಮನೋಜ್ ಮಿಶ್ರ ಅವರ ನ್ಯಾಯ ಪೀಠವು ಮಗುವಿಗೆ ಏನಾದರೂ ದಯಹಿಕ ನ್ಯೂನತೆಯಿದ್ದರೆ ಅಥವಾ ತಾಯಿಯ ಪ್ರಾಣಕ್ಕೆ ಅಪಾಯವುದ್ದರೆ ಅಂಥ ಸಂದರ್ಭದಲ್ಲಿ ಮಾತ್ರ ಗರ್ಭಪಾತಕ್ಕೆ ಅನುಮತಿ ನೀಡಲಾಗುವುದು. ಇಲ್ಲದಿದ್ದರೆ ತಾಯಿಗೆ ಆರೋಗ್ಯವಾಗಿರುವ ಭ್ರೂಣವನ್ನು ತೆಗೆಯುವ ಯಾವುದೇ ಹಕ್ಕಿಲ್ಲ ಎಂಬ ತೀರ್ಪು ನೀಡಿದೆ.

ಆ ಮಹಿಳೆ ನನಗೆ ಈ ಮಗುವನ್ನು ಸಾಕಲು ಶಕ್ತಿಯಿಲ್ಲದ ಕಾರಣ ಮಗುವನ್ನು ಗರ್ಭಪಾತ ಮಾಡಿಸಲು ಅನುಮತಿ ಕೋರಿದ್ದಳು, ಆದರೆ ಕೋರ್ಟ್ ಆರೋಗ್ಯಕರವಾಗಿರುವ ಮಗುವನ್ನು ಗರ್ಭಪಾತ ಮಾಡಲು ಅನುಮತಿ ನೀಡದೆ ಆ ಮಗುವನ್ನು ಹೆರಿಗೆಯಾದ ಬಳಿಕ ಬೇಕಾದರೆ ಅನಾಥಾಶ್ರಮಕ್ಕೆ ನೀಡಬಹುದು ಎಂದು ಹೇಳಿದೆ. ಹೆರಿಗೆಯನ್ನು ಏಮ್ಸ್‌ನಲ್ಲಿಯೇ ಆಗುವಂತೆ ಆದೇಶ ನೀಡಲಾಗಿದೆ.
ಭಾರತದ ಕಾನೂನಿನಲ್ಲಿ ಗರ್ಭಪಾತಕ್ಕೆ ಅನುಮತಿ ಇದೆಯೇ?
ಭಾರತದಲ್ಲಿ ಗರ್ಭಪಾತಕ್ಕೆ ಅನುಮತಿಯಿದೆ. 1971ರ ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಕಾಯ್ದೆ ಪ್ರಕಾರ ಮಹಿಳೆಗೆ ಸುರಕ್ಷಿತ ಗರ್ಭಪಾತಕ್ಕೆ ಅನುಮತಿ ನೀಡಿದೆ.
ಕೆಲವೊಂದು ಸಂದರ್ಭದಲ್ಲಿ ಮಹಿಳೆ 24 ವಾರಗಳ ಗರ್ಭಿಣಿಯಾದರೂ ಗರ್ಭಪಾತ ಮಾಡಿಸಬಹುದು. ಇನ್ನು ತಾಯಿಯ ಪ್ರಾಣಕ್ಕೆ ಅಪಾಯವಿದ್ದಾಗ ಅಥವಾ ಮಗುವಿನಲ್ಲಿ ನ್ಯೂನತೆಯಿದ್ದಾಗ ಯಾವುದೇ ತಿಂಗಳಿನಲ್ಲಿ ಗರ್ಭಪಾತ ನೀಡಲು ಅನುಮತಿ ಇದೆ.
ಅತ್ಯಾಚಾರದಿಂದ ಗರ್ಭಿಣಿಯಾದಾಗ: ಮಹಿಳೆ ಅತ್ಯಾಚಾರದಿಂದ ಗರ್ಭಿಣಿಯಾದರೆ ಆ ಗರ್ಭವನ್ನು ತೆಗೆದು ಹಾಕಲು ಅನುಮತಿ ನೀಡಲಾಗುವುದು.
ಅಪ್ರಾಪ್ತೆ ಗರ್ಭಿಣಿಯಾದರೆ ಆ ಗರ್ಭವನ್ನು ತೆಗೆಸಲು ಅನುಮತಿ ನೀಡಲಾಗುವುದು.
ಯಾವ ಸಮಯದಲ್ಲಿ ಗರ್ಭಪಾತ ಸುರಕ್ಷಿತವಲ್ಲ?
ಗರ್ಭಿಣಿಯಾಗಿ 4 ತಿಂಗಳಾದರೆ ಗರ್ಭಪಾತ ಆ ಮಹಿಳೆಯ ಆರೋಗ್ಯದ ದೃಷ್ಟಿಯಿಂದ ಅಷ್ಟು ಸುರಕ್ಷಿತವಲ್ಲ. ಹಾಗಾಗಿ ಬಹುತೇಕ ವೈದ್ಯರು 3 ತಿಂಗಳ ನಂತರ ಗರ್ಭಪಾತಕ್ಕೆ ಸಮ್ಮತಿಸುವುದಿಲ್ಲ. ಆದರೆ ಅತ್ಯಾಚಾರದಿಂದ ಗರ್ಭಿಣಿಯಾಗಿದ್ದರೆ ಅಥವಾ ಮಗುವಿನಲ್ಲಿ ನ್ಯೂನ್ಯತೆ, ಗರ್ಭ ಬೆಳೆಯುತ್ತಿದ್ದಂತೆ ತಾಯಿಯ ಪ್ರಾಣಕ್ಕೆ ಅಪಾಯವಿದ್ದಾಗ 24 ವಾರಗಳಾದರೂ ಗರ್ಭಪಾತಕ್ಕೆ ಅನುಮತಿಯಿದೆ.
ಈ ಹಿಂದೆ ಬರೀ 20 ವಾರಗಳ ಒಳಗೆ ಮಾತ್ರ ಗರ್ಭಪಾತಕ್ಕೆ ಅನುಮತಿ ನೀಡಲಾಗಿತ್ತು, ಆದರೆ 2021 ಗರ್ಭಪಾತ ಕಾಯ್ದೆ ಪ್ರಕಾರ 24 ವಾರದ ಒಳಗೆ ಗರ್ಭಪಾತಕ್ಕೆ ಅನುಮತಿ ನೀಡಿದೆ, ಅದು ಕೆಲವು ವಿಶೇಷ ಸಂದರ್ಭಗಳಲ್ಲಿ ಅಷ್ಟೇ ಈ ಅನುಮತಿ ಸಿಗುವುದು, ಇಲ್ಲದಿದ್ದರೆ ಆ ಮಹಿಳೆ ಮಗುವಿಗೆ ಜನ್ಮ ನೀಡಿ ಆ ಮಗುವನ್ನು ಬೇಕಾದರೆ ಅನಾಥಾಶ್ರಮಕ್ಕೆ ನೀಡಬಹುದು, ಆದರೆ ಗರ್ಭಪಾತ ಮಾಡಿ ಕೊಲ್ಲುವ ಹಕ್ಕು ಅವಳಿಗಿಲ್ಲ.



Click it and Unblock the Notifications
