Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮಕ್ಕಳ ಪೋಷಣೆಯ ಹಂತದಲ್ಲಿ ಎದುರಾಗೋ ಒತ್ತಡವನ್ನು ನಿವಾರಿಸೋದು ಹೇಗೆ? ಇಲ್ಲಿದೆ ಟಿಪ್ಸ್
ಮಕ್ಕಳನ್ನು ಸಾಕಿ ದೊಡ್ಡವರನ್ನಾಗಿ ಮಾಡೋದಂದ್ರೆ ಸುಲಭದ ಕೆಲಸ ಅಲ್ವೇ ಅಲ್ಲ. ಆ ಮಗು ಹುಟ್ಟಿದಾಗಿನಿಂದ ಹಿಡಿದು ಅದು ಬೆಳೆದು ದೊಡ್ಡವರಾಗುವ ತನಕ ಪೋಷಕರು ಮಗುವಿನ ಕಣ್ಣಲ್ಲಿ ಕಣ್ಣಿಟ್ಟು ಸಾಕಬೇಕಾಗುತ್ತದೆ. ಈ ಮಧ್ಯೆ ಅನೇಕ ಬಾರಿ ಅವರು ದು:ಖ, ನೋವು, ಹತಾಶೆ, ಆತಂಕಕ್ಕೂ ಒಳಗಾದ ಅನೇಕ ಸಂದರ್ಭಗಳಿದೆ.
ಮಕ್ಕಳನ್ನು ಸಾಕುವ ಹಂತದಲ್ಲಿ ಕೆಲವೊಂದು ಸಾರಿ ಒತ್ತಡಕ್ಕೂ ಒಳಗಾಗುತ್ತಾರೆ. ಅಷ್ಟಕ್ಕು ನಿಮ್ಮ ಈ ಮಕ್ಕಳನ್ನು ಪೋಷಿಸುವ ಹಂತ ಒತ್ತಡ ಮುಕ್ತವಾಗಿರಬೇಕೆಂದರೆ ಏನು ಮಾಡಬೇಕು? ಈ ಟಿಪ್ಸ್ ಫಾಲೋ ಮಾಡಿ

1. ನಿಮ್ಮ ಮಕ್ಕಳ ಜೊತೆಗೆ ಉತ್ತಮವಾದ ಭಾಂದವ್ಯವನ್ನು ಬೆಳೆಸಿಕೊಳ್ಳಿ
ಪೋಷಕರು ಮಕ್ಕಳನ್ನು ಇಡೀ ದಿನ ಶಿಸ್ತು ಶಿಸ್ತು ಎಂದು ಗದರಿಸಬಾರದು. ಆಗ ನಿಮ್ಮ ಮನದಲ್ಲಿ ಯಾವಾಗಲೂ ಒಂದು ಭಯ ಇದ್ದೇ ಇರುತ್ತಾರೆ. ಮಕ್ಕಳು ಏನು ಮಾಡುತ್ತಾರೋ, ಎಲ್ಲಿ ಹಾಳಾಗಿ ಬಿಡುತ್ತಾರೋ ಎಂದು. ಅವರ ಬಗ್ಗೆ ಚಿಂತಿಸೋದ್ರಿಂದಾನೇ ನಿಮ್ಮ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ.
ಈ ಭಯ ಬಿಟ್ಟು ಮಕ್ಕಳ ಜೊತೆಗೆ ಪೋಷಕರು ಒಂದು ಉತ್ತಮವಾದ ಬಾಂಧವ್ಯವನ್ನು ಬೆಳಸಬೇಕು. ಆಗ ನಿಮ್ಮ ಮೇಲಿನ ಒತ್ತಡ ತನ್ನಿಂದ ತಾನೇ ಕಡಿಮೆಯಾಗುತ್ತದೆ. ಇದ್ರಿಂದ ನೀವು ನಿಮ್ಮ ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನೂ ಕಳೆಯಬಹುದು. ಮಕ್ಕಳ ಜೊತೆಗೆ ಕೆಲವೊಂದು ಚಟುವಟಿಕೆಗಳನ್ನು ಕೈಗೊಳ್ಳಿ, ಅವರೊಂದಿಗೆ ಎಂಜಾಯ್ ಮಾಡಿ, ಈ ಕ್ಷಣ ಏನಿದೆ ಅದನ್ನು ಒಟ್ಟಾಗಿ ಅನುಭವಿಸಿ. ಈ ರೀತಿ ಸಂಬಂಧ ನಿಮ್ಮ ಮಕ್ಕಳ ಜೊತೆಗೆ ಇದ್ದರೆ ಒತ್ತಡ ಅನ್ನೋದು ತನ್ನಿಂದ ತಾನೇ ಕಡಿಮೆಯಾಗುತ್ತದೆ.
2. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳಿ
ಮಕ್ಕಳನ್ನು ಪೋಷಣೆ ಮಾಡೋದಂದ್ರೆ ಸುಮ್ಮನೆ ಅಲ್ಲ. ಈ ನೀವು ಮಕ್ಕಳನ್ನು ಸಾಕುವ ಪಯಣದಲ್ಲಿ ಆಶ್ಚರ್ಯಗಳು ಹಾಗೂ ಅನಿರೀಕ್ಷಿತ ಸವಾಲುಗಳಿರುತ್ತದೆ. ಈ ಪರಿಸ್ಥಿತಿಗೆ ನೀವು ಯಾವ ರೀತಿ ಹೊಂದಿಕೊಳ್ಳುತ್ತೀರಿ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಕೆಲವೊಂದು ಸಲ ಮಗುವಿನ ಅಗತ್ಯತೆಗೆ ಅನುಗುಣವಾಗಿ ನಿಮ್ಮ ಪಾಲನಾ ವಿಧಾನವನ್ನು ಹೊಂದಾಣಿಕೆ ಮಾಡಬೇಕಾಗುತ್ತದೆ.
ಅನೇಕ ಪೋಷಕರು ಮಕ್ಕಳನ್ನು ನಿಯಂತ್ರಿಸೋದಕ್ಕೆ ಸಾಧ್ಯವಾಗುತ್ತಿಲ್ಲವೆಂದು ಒತ್ತಡಕ್ಕೆ ಒಳಗಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಮಕ್ಕಳ ದಾರಿಗೆ ಹೋಗಿ ಅವರನ್ನು ಹಿಡಿಯೋದು ಒಳ್ಳೆಯದು. ನಿಮ್ಮ ಮಗುವಿನ ವ್ಯಕ್ತಿತ್ವ ಅಥವಾ ಬೆಳವಣಿಗೆಗೆ ಸರಿಹೊಂದುವಂತೆ ನಿಮ್ಮ ಪೋಷಣಾ ಶೈಲಿಯನ್ನು ಬದಲಾಯಿಸಿಕೊಂಡರೆ ಉತ್ತಮ.
3. ಸಮಸ್ಯೆ ಬಗ್ಗೆ ಚಿಂತಿಸಬೇಡಿ, ಪರಿಹಾರ ಕಂಡುಕೊಳ್ಳಿ
ಈಗಿನ ಪೋಷಕರಂತೂ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾರೆ. ಹಾಗೆ ಅವರಿಗೆ ಒಂಚೂರು ನೋವಾದರೂ ಕೂಡ ಪೋಷಕರು ಖಂಡಿತ ಸಹಿಸೋದಿಲ್ಲ. ಇನ್ನೂ ಮಕ್ಕಳಿಂದ ಎದುರಾಗುವ ಚಿಕ್ಕ ಚಿಕ್ಕ ಸಮಸ್ಯೆಗಳನ್ನು ಕೂಡ ಇವರು ಬಹು ದೊಡ್ಡದು ಎಂಬಂತೆ ಬಿಂಬಿಸುತ್ತಾರೆ. ಅದರ ಬಗ್ಗೆ ಚಿಂತಿಸುತ್ತಾರೆ. ನಮ್ಮ ಪ್ರಕಾರ ಚಿಂತಿಸುವ ಬದಲು ಅದಕ್ಕೆ ಪರಿಹಾರ ಕಂಡುಕೊಳ್ಳಿ. ಹಾಗೂ ನಿಮ್ಮ ಮಕ್ಕಳಿಗೆ ಖುದ್ದು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಕಲಿಸಿ. ಆಗ ನಿಮ್ಮ ಮೇಲಿನ ಒತ್ತಡ ಖಂಡಿತ ಕಡಿಮೆಯಾಗುತ್ತದೆ.
4. ಮಕ್ಕಳ ಮೇಲಿನ ಅತಿಯಾದ ನಿರೀಕ್ಷೇಯನ್ನು ಕಡಿಮೆಗೊಳಿಸಿ
ಅನೇಕ ಪೋಷಕರು ತಮ್ಮ ಮಕ್ಕಳ ಮೇಲೆ ಚಿಕ್ಕ ವಯಸ್ಸಿನಲ್ಲೇ ಅತಿಯಾದ ನಿರೀಕ್ಷೇ ಇಟ್ಟುಕೊಂಡಿರುತ್ತಾರೆ. ಅದು ಕೂಡ ಮಕ್ಕಳ ವಯಸ್ಸಿಗೆ ಮೀರಿದ ನಿರೀಕ್ಷೇಗಳು. ಯಾವಾಗ ಮಕ್ಕಳು ಅದನ್ನು ಪೂರೈಸೋದಿಲ್ಲವೋ ಆಗ ನಾವು ಮಕ್ಕಳ ಮೇಲೆ ಒತ್ತಡ ಹೇರೋದಕ್ಕೆ ಶುರು ಮಾಡುತ್ತೀವಿ. ದಿನ ಕಳೆದಂತೆ ನಮಗೆ ಗೊತ್ತಿಲ್ಲದ ಹಾಗೇ ಈ ಒತ್ತಡ ನಮ್ಮ ಮೇಲೆ ಬೀಳೋದಕ್ಕೆ ಶುರುವಾಗುತ್ತದೆ. ಹೀಗಾಗಿ ಮಕ್ಕಳ ಮೇಲೆ ಅತಿಯಾದ ನಿರೀಕ್ಷೇಗಳನ್ನು ಇಟ್ಟುಕೊಳ್ಳೋದು ಬೇಡ. ಬದಲಾಗಿ ಅವರಿಗೆ ಏನು ಇಷ್ಟವೋ ಅದನ್ನು ಸಾಧಿಸೋದಕ್ಕೆ ಅವಕಾಶ ಕೊಡಿ.
5. ತಾಳ್ಮೆ ಮತ್ತು ಸಾವಧಾನತೆಯನ್ನು ಮಕ್ಕಳಲ್ಲಿ ಬೆಳೆಸಿ
ಮಕ್ಕಳನ್ನು ಬೆಳೆಸುವ ಸಮಯದಲ್ಲಿ ಪೋಷಕರ ಒತ್ತಡ ಕಡಿಮೆಯಾಗಬೇಕೆಂದರೆ ಪೋಷಕರು ಚಿಕ್ಕಂದಿನಿಂದಲೇ ಕೆಲವೊಂದು ಗುಣಗಳನ್ನು ಮಕ್ಕಳಲ್ಲಿ ಬೆಳೆಸಬೇಕಾಗಿರೋದು ತುಂಬಾನೇ ಮುಖ್ಯ. ಅದ್ರಲ್ಲಿ ಮುಖ್ಯವಾಗಿ ತಾಳ್ಮೆ ಮತ್ತು ಸಾವಧಾನತೆ ತುಂಬಾನೇ ಮುಖ್ಯ.
* ಆಳವಾದ ಉಸಿರಾಟ ಅಥವಾ ಧ್ಯಾನವನ್ನು ಅಭ್ಯಾಸ ಮಾಡುವುದು
* ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಇರೋವಾಗ ಮನಸ್ಸನ್ನು ಬೇರೆಡೆಗೆ ತಿರುಗಿಸಿ
* ಪ್ರತಿನಿತ್ಯ ವ್ಯಾಯಾಮ ಮಾಡುವುದು
* ಮತ್ತೊಬ್ಬರಿಗೆ ಕೃತಜ್ಞತೆ ಸಲ್ಲಿಸುವುದು ಮತ್ತುಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವುದು
* ವಾಸ್ತವಿಕ ಗುರಿಗಳನ್ನು ಸೃಷ್ಟಿಸಲು ಪ್ರೇರೇಪಿಸುವುದು
ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ತುಂಬಿದರೆ ಖಂಡಿತ ಅವರು ಭವಿಷ್ಯದಲ್ಲಿ ಒರ್ವ ಉತ್ತಮ ವ್ಯಕ್ತಿಯಾಗಿ ಬೆಳೆಯದೇ ಇರೋದಿಲ್ಲ. ಸುಖಾ ಸುಮ್ಮನೇ ಮಕ್ಕಳ ಬಗ್ಗೆ ಯೋಚಿಸಿ ನಿಮ್ಮ ಮೇಲೆ ನೀವು ಒತ್ತಡ ಹಾಕೋದಕ್ಕೆ ಹೋಗಬೇಡಿ. ಮಕ್ಕಳ ಚಿಂತೆ ಬಿಟ್ಟು ನೀವು ನಿಮ್ಮಷ್ಟಕ್ಕೆ ಹಾಯಾಗಿರಿ.



Click it and Unblock the Notifications

