Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಲಂಚ್‌ಗೆ ಫುಡ್ ತಾನೇ ತಯಾರಿಸಿದ ಪುಟಾಣಿ: ಪೇರೆಂಟಿಂಗ್ ಅಂದ್ರೆ ಹೀಗಿರಬೇಕು ನೋಡಿ
ಪೋಷಕರಲ್ಲಿ ಎರಡು ವಿಧ, ಒಂದು ತುಂಬಾ ಮುದ್ದು ಮಾಡಿ ಸಾಕುವ ಪೋಷಕರು, ಮತ್ತೊಂದು ಮಕ್ಕಳಿಗೆ ಜೀವನದ ಪಾಠ ಕಲಿಸುತ್ತಾ ಬೆಳೆಸುವ ಪೋಷಕರು. ಎರಡನೇ ಪೇರೆಂಟಿಂಗ್ ಇದೆಯಲ್ಲಾ ಅದು ತುಂಬಾ ಮುಖ್ಯ, ಅಲ್ಲದೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು ಕೂಡ. ಕಾಲೇಜು ತಲುಪಿದರೂ ಬಾಯಿಗೆ ಕೊಟ್ಟರೆ ತಿನ್ನುವ ಮಕ್ಕಳು ತುಂಬಾ ಇದ್ದಾರೆ, ಆದರೆ ಇಲ್ಲೊಂದು ಮಗು ನೋಡಿದರೆ 10 ವರ್ಷದೊಳಗಿರಬಹುದು, ಅವನು ತನಗೆ ಬೇಕಾದ ಲಂಚ್ ತಾನೇ ಪ್ರಿಪೇರ್ ಮಾಡಿ ಕೊಂಡೊಯ್ಯುವ ವೀಡಿಯೋ ನೆಟ್ಟಿಗರ ಮನಗೆದ್ದಿದೆ.

ಎರಡು ಬಾಲಕರು ಇಂಥ ಹಲವಾರು ವೀಡಿಯೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಾದ life_of_two_boysನಲ್ಲಿ ಹಂಚಿಕೊಳ್ತಾ ಇರ್ತಾರೆ, ಅವರಿಗೆ ತುಂಬಾ ಫಾಲೋವರ್ಸ್ ಕೂಡ ಇದ್ದಾರೆ, ಕ್ಯೂಟ್ ಮಕ್ಕಳು ತಮಗೆ ಬೇಕಾದ ತಿಂಡಿ-ತಿನಿಸು ತಾವೇ ಮಾಡುವ ವೀಡಿಯೋ ಅಪ್‌ಲೋಡ್ ಮಾಡ್ತಾರೆ, ಇದು ವೀಕ್ಷಕರ ಗಮನ ಸೆಳೆದಿದೆ. ಈ ಮಕ್ಕಳು ಮಾಡುವ ಅಡುಗೆಯನ್ನು ತುಂಬಾ ಜನ ಮೆಚ್ಚಿಕೊಂಡಿದ್ದಾರೆ, ಗ್ಯಾಸ್ ಸ್ಟೌಟ್ ಬಳಿ ಜೋಪಾನ ಅಂತ ಕಮೆಂಟ್ ಮಾಡ್ತಾ ಇದ್ದಾರೆ.
ತುಂಬಾ ಮನೆಯಲ್ಲಿ ಮಕ್ಕಳು ಚಿಕ್ಕ ಪ್ರಾಯದಲ್ಲಿ ಅಡುಗೆ ಮಾಡ್ತಾರೆ, ಮನೆ ಕೆಲಸಕ್ಕೆ ಸಹಾಯ ಮಾಡ್ತಾರೆ
ಈ ಮಕ್ಕಳು ಮಾಡಿರುವ ವೀಡಿಯೋ ತುಂಬಾ ಕ್ಯೂಟ್ ಆಗಿದೆ, ಆದರೆ ಈ ಮಕ್ಕಳು ಏನೋ ದೊಡ್ಡ ಕಾರ್ಯ ಮಾಡಿದ್ದಾರೆ ಎಂದು ನಾವು ಹೇಳುತ್ತಿಲ್ಲ, ಎಷ್ಟೋ ಮನೆಗಳಲ್ಲಿ 10 ವರ್ಷದೊಳಗಿನ ಮಕ್ಕಳು ಎಲ್ಲಾ ಕೆಲಸ ಮಾಡ್ತಾರೆ. ಒರೆಸುವುದು, ಬಟ್ಟೆ ಮಡಚಿಡುವುದು, ಅಡುಗೆ ಮಾಡುವುದು ಎಲ್ಲಾ ಮಾಡ್ತಾರೆ, ಕೆಲವು ಮಕ್ಕಳು ಸ್ವತಃ ಆಸಕ್ತಿಯಿಂದ ಈ ರೀತಿ ತಮ್ಮ ಕೆಲಸ ತಾವೇ ಮಾಡಲು ಕಲಿತರೆ ಇನ್ನ ಕೆಲವು ಮಕ್ಕಳಿಗೆ ಪರಿಸ್ಥಿತಿ ಅವರನನ್ನು ಕಲಿಯುವಂತೆ ಮಾಡಿರುತ್ತದೆ.
ಬೀದಿ ಬದಿಯಲ್ಲಿ ಬಲೂನ್ ಮಾರುವ ಪುಟಾಣಿಗಳನ್ನು ಅಥವಾ ರೋಡ್ ಕೆಲಸ, ಬಿಲ್ಡಿಂಗ್ ಕಟ್ಟುವ ಕೆಲಸಕ್ಕೆ ಬರುವ ಪುಟಾಣಿಗಳನ್ನು
ನೋಡಿ ತಮ್ಮನೋ-ತಂಗಿನೋ ಅವರ ಕಂಕುಳದಲ್ಲಿರುತ್ತದೆ, ಇವರೇ ಪುಟಾಣಿಗಳು ಆದರೂ ಈ ಚಿಕ್ಕ ಮಗುವಿನ ಜವಾಬ್ದಾರಿ ಇವರ ಮೇಲಿರುತ್ತದೆ, ಅಪ್ಪ-ಅಮ್ಮ ಕೆಲಸ ಮಾಡುವಾಗ ಮಕ್ಕಳನ್ನು ನೋಡಿಕೊಳ್ಳುತ್ತವೆ, ನೀರು ತುಂಬಿಸುತ್ತವೆ, ರೊಟ್ಟಿ, ಚಪಾತಿ ಅಡುಗೆ ಕೂಡ ಕಟ್ಟಿಗೆ ಒಲೆಯಲ್ಲಿ ಮಾಡುತ್ತವೆ,ಹಾಗಾಗಿ ಕೆಲವೊಂದು ಪರಿಸ್ಥಿತಿ ಕೂಡ ಬದುಕಿನ ಪಾಠ ಕಲಿಸುತ್ತದೆ.
ಮನೆಯಲ್ಲಿ ಅನುಕೂಲವಿದ್ದರೆ ಮಕ್ಕಳು ಹದಿಹರೆಯದ ಪ್ರಾಯಕ್ಕೆ ಬರುವಾಗ ಅವರಿಗೆ ಮನೆಯ ಕೆಲ ಜವಾಬ್ದಾರಿಯನ್ನು ನೀಡಿ
ತುಂಬಾ ಚಿಕ್ಕ ಪ್ರಾಯದಲ್ಲಿ ಕೆಲಸ ಮಾಡಿಸಬೇಕಾಗಿಲ್ಲ, ಆದರೆ ಹದಿಹರೆಯದ ಪ್ರಾಯಕ್ಕೆ ಬಂದಾಗ ಅವರ ಕೆಲಸವನ್ನು ಅವರಿಗೆ ಮಾಡಲು ಹೇಳಿ, ಅವರ ಬಟ್ಟೆ ಮಡಚಿಡುವುದು, ಮನೆಯನ್ನು ಸ್ವಚ್ಛವಾಗಿಡುವುದು, ನೀವು ಮನೆ ಕೆಲಸ ಮಾಡುವಾಗ ಅವರ ಸಹಾಯ ತೆಗೆದುಕೊಳ್ಳುವುದು ಮಾಡಬೇಕು. ಈ ರೀತಿ ಮಾಡುವುದರಿಂದ ಅವರಿಗೆ ಕೂಡ ನಿಮ್ಮ ಕಷ್ಟ ಅನುಭವಕ್ಕೆ ಬರುತ್ತದೆ, ಅಲ್ಲದೆ ಯಾವುದೋ ಕಾರಣಕ್ಕೆ ನೀವು ಮನೆಯಿಂದ ಒಂದೆರಡು ದಿನ ದೂರವಿದ್ದರೆ ಮಕ್ಕಳು ತಿಂದ್ರಾ? ಎಂದು ಆತಂಕ ಪಡಬೇಕಾದ ಅಗ್ಯತವಿಲ್ಲ, ಅವರಿಗೆ ಬೇಕಾಗಿರುವುದು ಅವರು ಮಾಡಿ ತಿನ್ನುತ್ತಾರೆ, ಅಲ್ಲದೆ ನೀವು ಕಲಿಸಿದ ಪಾಠಗಳು ಯೌವನಾವಸ್ಥೆಯಲ್ಲಿ ತುಂಬಾನೇ ಸಹಾಯಕ್ಕೆ ಬರುತ್ತದೆ, ಯಾರಿಗೂ ಡಿಪೆಂಡ್ ಆಗದೆ ಅವರ ಬದುಕು ಅವರು ಕಟ್ಟಿಕೊಳ್ಳುವುದನ್ನು ಕಲಿಯುತ್ತಾರೆ.
ಪೇಜ್, ಲೈಕ್ಸ್‌ಗೋಸ್ಕರ ಮಕ್ಕಳಿಂದ ಅಡುಗೆ ಮಾಡಿಸಬೇಡಿ
ಈಗೆಲ್ಲಾ ಸೋಷಿಯಲ್ ಮೀಡಿಯಾಗಳ ಕಾಲ, ಇದನ್ನು ನೋಡುತ್ತಾ ಒಂದಿಷ್ಟು ಮಂದಿ ಕಾಲ ಕಳೆದರೆ ಇನ್ನು ಕೆಲವರು ಇದರಿಂದ ಒಳ್ಳೆಯ ದುಡಿಮೆ ಮಾಡ್ತಾ ಇದ್ದಾರೆ, ಮಕ್ಕಳಿಗೆ ಲೈಕ್ಸ್, ಶೇರ್ ಸಿಗಲಿ ಅಂತ ಅಡುಗೆ ಮಾಡಲು ಬಿಡಬೇಡಿ, ಸ್ವಲ್ಪ ಹೆಚ್ಚು ಕಡಿಮೆಯಾದರೆ ಮೈ ಸುಟ್ಟುಕೊಳ್ಳುತ್ತಾರೆ, ಹಾಗಾಗಿ ಪೋಷಕರು ಜಾಗ್ರತೆವಹಿಸಬೇಕು. ಆದರೆ ಕೆಲ ಮಕ್ಕಳಿಗೆ ನಿಜವಾಗಲೂ ಚಿಕ್ಕ ಪ್ರಾಯದಲ್ಲಿ ಕೇಕ್, ಚಾಕೋಲೆಟ್ ಅಂತ ವಿಧ-ವಿಧ ಅಡುಗೆ ಮಾಡುವ ಕೌಶಲ್ಯವಿರುತ್ತದೆ, ಒಂದೊಂದು ಮಕ್ಕಳಿಗೆ ಒಂದೊಂದು ವಿಶೇಷ ಕೌಶಲ್ಯ ಇರುತ್ತದೆ ಅಲ್ವಾ? ಅದೇ ರೀತಿ ಕೆಲ ಮಕ್ಕಳಲ್ಲಿ ಅದ್ಭುತ ಅಡುಗೆ ಮಾಡುವ ಕಲೆ ಹಾಗೂ ಆಸಕ್ತಿ ಇರುತ್ತದೆ, ಇಂಥ ಮಕ್ಕಳಿಗೆ ಪ್ರೋತ್ಸಾಹ ನೀಡಿ...



Click it and Unblock the Notifications