Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಈ ರೀತಿ ಮಾಡಿದ್ರೆ ಮಕ್ಕಳು ಖಂಡಿತ ಅಪ್ಪಂದಿರನ್ನೂ ಇಷ್ಟ ಪಡ್ತಾರೆ
ಪುಟ್ಟ ಮಕ್ಕಳು ಹೆಚ್ಚಾಗಿ ಹಚ್ಚಿಕೋಳ್ಳೋದು ಯಾರನ್ನು ಅನ್ನೋ ಪ್ರಶ್ನೆ ಬಂದರೆ ಅದಕ್ಕೆ ಉತ್ತರ ಅಮ್ಮಾ. ನೂರಕ್ಕೆ 90 ರಷ್ಟು ಮಕ್ಕಳು ಅಮ್ಮನನ್ನೇ ಪ್ರೀತಿ ಮಾಡುತ್ವೆ. ಒಂದು ವಯಸ್ಸು ಕಳೆಯೋವರೆಗೂ ಅಮ್ಮಾ ಬಿಟ್ಟರೆ ಬೇರೆ ಪ್ರಪಂಚ ಅವುಗಳಿಗೆ ಗೊತ್ತಿರೋದಿಲ್ಲ. ಅಪ್ಪನೊಂದಿಗೆ ಅವರ ಬಾಂಧವ್ಯ ಅಷ್ಟು ಚೆನ್ನಾಗಿ ಇರೋದಿಲ್ಲ. ಮಕ್ಕಳು ಅಪ್ಪಂದಿರಿಗೆ ಹತ್ತಿರವಾಗ್ಬೇಕು ಅಂದ್ರೆ ಏನು ಮಾಡ್ಬೇಕು? ಅಪ್ಪ ಹಾಗೂ ಮಗುವಿನ ಬಾಂಧವ್ಯ ಹೆಚ್ಚಿಸೋದು ಹೇಗೆ? ಇಲ್ಲಿದೆ ಟಿಪ್ಸ್.
1. ಮಗುವಿಗೆ ಬಾಟಲ್ ಹಾಲು ಕುಡಿಸಿ
ತಾಯಿ- ಮಗುವಿನ ಬಾಂಧವ್ಯಕ್ಕೆ ಬೆಲೆ ಕಟ್ಟೋದಿಕ್ಕೆ ಆಗೋದಿಲ್ಲ. ತಾಯಿ ಮಗುವಿನ ಪ್ರತಿಯೊಂದು ಆರೈಕೆಯನ್ನು ಮಾಡುತ್ತಾಳೆ. ಇನ್ನೂ ಎದೆಹಾಲು ಕುಡಿಸುವ ಸಂದರ್ಭದಲ್ಲಿ ತಾಯಿ- ಮಗುವಿನ ಬಾಂಧವ್ಯ ಮತ್ತಷ್ಟು ಹೆಚ್ಚಾಗುತ್ತದೆ. ಅದೇ ರೀತಿ ತಂದೆಯೊಂದಿಗೆ ಮಗುವಿನ ಬಾಂಧವ್ಯ ಹೆಚ್ಚಾಗಬೇಕೆಂದರೆ ಬಾಟಲ್ ಹಾಲನ್ನು ಸಾಧ್ಯವಿರುವಾಗಲೆಲ್ಲಾ ತಂದೆಯೇ ಕುಡಿಸಬೇಕು. ಆಗ ಮಗುವಿನ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು. ನಿಧಾನಿವಾಗಿ ಮಗು ನಿಮ್ಮ ಜೊತೆಗೆ ಆಪ್ತವಾದ ಬಾಂಧವ್ಯ ಬೆಳೆಸಿಕೊಳ್ಳುತ್ತದೆ.

2. ರಾತ್ರಿ ಮಗುವಿನ ಕಾಳಜಿ ಮಾಡಿ
ಮಕ್ಕಳು ಕೆಲವೊಂದು ಸಲ ರಾತ್ರಿಯೆಲ್ಲಾ ಮಲಗೋದಿಲ್ಲ. ಯಾವಾಗೆಂದರೆ ಆವಾಗ ಎದ್ದು ಅಳೋದಕ್ಕೆ ಶುರು ಮಾಡುತ್ತದೆ. ಇಂತಹ ಸಮಯದಲ್ಲಿ ತಾಯಿ ಮಗುವಿನ ಆರೈಕೆ ಮಾಡುತ್ತಾಳೆ. ಈ ವೇಳೆ ತಂದೆಯೂ ಕೂಡ ಎದ್ದು ಕೊಂಚ ಹೊತ್ತು ಮಗುವನ್ನು ನೋಡಿಕೊಳ್ಳಬೇಕು. ಆಗ ತಾಯಿಯಾದವಳಿಗೆ ಸಹಾಯವಾಗುತ್ತದೆ. ಜೊತೆಗೆ ಮಗುವಿನೊಂದಿಗೆ ಅಪ್ಪನ ಬಾಂಧವ್ಯ ವೃದ್ಧಿಯಾಗುತ್ತೆ.
3. ಅಳುವಾಗ ಸಮಾಧಾನ ಮಾಡಿ
ಸಾಮಾನ್ಯವಾಗಿ ಮಕ್ಕಳು ಅಳುವಾಗ ಅಮ್ಮಂದಿರೇ ಸಮಾಧಾನ ಮಾಡುತ್ತಾರೆ. ಮಕ್ಕಳ ಅಳು ನಿಲ್ಲಿಸೋದು ತಂದೆಯಾದ ನಿಮ್ಮ ಜವಾಬ್ದಾರಿಯೂ ಕೂಡ ಹೌದು. ಮಗುವಿಗಾಗಿ ಹಾಡು ಹಾಡಿ, ಅಥವಾ ಮಗುವನ್ನು ಹಿಡಿದುಕೊಂಡು ಹೊರಗಡೆ ಹೋಗಿ, ಆಟವಾಡಿಸಿ. ಆಗ ಮಕ್ಕಳು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ನಮ್ಮ ಬಯಕೆಗಳನ್ನು ಅಪ್ಪನೂ ಈಡೇರಿಸುತ್ತಾನೆ ಎಂದು. ಹೀಗಾಗಿ ಮಗು ಅತ್ತಾಗ ಸ್ಪಂದಿಸೋದು ಅಪ್ಪನ ಕರ್ತವ್ಯ.
4. ಮಗುವನ್ನು ಕರೆದುಕೊಂಡು ವಾಕಿಂಗ್‌ಗೆ ಹೋಗಿ
ಮಕ್ಕಳಿಗೆ ಫ್ರೆಶ್ ಗಾಳಿಯ ಅವಶ್ಯಕತೆ ಇದೆ. ಮನೆಯಲ್ಲೇ ಕೂತಿದ್ದರೆ ಅವರಿಗೆ ಒಂದು ರೀತಿ ಬೇಜಾರಾಗುತ್ತದೆ. ಹೀಗಿದ್ದಾಗ ತಂದೆ ಆದವನು ಮಗುವನ್ನು ಕರೆದುಕೊಂಡು ಹೊರಗಡೆ ವಾಕಿಂಗ್‌ಗೆ ಬರಬೇಕು. ಅದು ಬೆಳಗ್ಗೆ ಅಥವಾ ಸಂಜೆ ಕೂಡ ಆಗಿರಬಹುದು. ಇದರಿಂದ ಮಗುವಿಗೂ ಕೂಡ ಒಂದು ರೀತಿ ಹೊಸ ಅನುಭವ ಆಗುತ್ತದೆ. ಪ್ರತಿನಿತ್ಯ ಈ ರೀತಿ ಕರೆದುಕೊಂಡು ಬರೋದ್ರಿಂದ ಮಗು ಹಾಗೂ ನಿಮ್ಮ ಮಧ್ಯೆ ಉತ್ತಮ ಬಾಂಧವ್ಯ ವೃದ್ಧಿಯಾಗುತ್ತೆ.
5. ಮಗುವಿಗೆ ಮಸಾಜ್ ಮಾಡಿ
ಮಕ್ಕಳಿಗೆ ಕಿರಿ ಕಿರಿ ಆದ ಸಂದರ್ಭದಲ್ಲಿ ಮಾತ್ರ ಅವರು ಅಳೋದು. ಸಾಮಾನ್ಯ ಸಂದರ್ಭದಲ್ಲಿ ಅವುಗಳು ಖುಷಿಯಾಗಿರುತ್ತವೆ. ಇಂತಹ ಸಂದರ್ಭದಲ್ಲಿ ತಂದೆಯಾದವರು ಮಗುವಿಗೆ ಮಸಾಜ್ ಮಾಡಬೇಕು. ದಿನಕ್ಕೆ ಒಂದು ಬಾರಿ ಮಾಡಿದರೂ ಸಾಕು. 10 ರಿಂದ 15 ನಿಮಿಷಗಳ ಕಾಲ ಕೈ, ಕಾಲು, ಹೊಟ್ಟೆ ಹಾಗೂ ಕುತ್ತಿಗೆಯ ಭಾಗಕ್ಕೆ ಮೃದುವಾಗಿ ಮಸಾಜ್ ಮಾಡೋದ್ರಿಂದ ಮಕ್ಕಳಿಗೆ ಹಾಯಾದ ಅನುಭವ ಸಿಗುತ್ತದೆ.
6. ಮಗುವಿನೊಂದಿಗೆ ಆಟವಾಡಿ, ಡಾನ್ಸ್ ಮಾಡಿ
ಸಾಮಾನ್ಯವಾಗಿ ಅಪ್ಪಂದಿರು ಆಫಿಸ್‌ಗೆ ಹೋಗೋದ್ರಿಂದ ಮಗುವಿನ ಜೊತೆಗೆ ಕಳೆಯೋದಕ್ಕೆ ಸಮಯ ಸಿಗೋದಿಲ್ಲ. ಆದರೆ ಆಫಿಸ್‌ನಿಂದ ಬಂದ ಮೇಲೆ ಮಗುವಿಗಾಗಿ ಸಮಯ ಮೀಸಲಿಡಿ. ಪ್ರತಿನಿತ್ಯ ಮಗುವಿನ ಜೊತೆಗೆ ಆಟವಾಡಿ ಹಾಗೂ ಹಾಡು ಹಾಕಿ ಅದನ್ನು ಡಾನ್ಸ್ ಮಾಡಿಸೋದಕ್ಕೆ ಪ್ರಯತ್ನಿಸಿ. ಪ್ರತಿನಿತ್ಯ ಇದೇ ಸಮಯ ಅಂತ ಫಿಕ್ಸ್ ಮಾಡಿ. ಮಗು ಆ ಸಮಯದಲ್ಲಿ ಅಪ್ಪನಿಗಾಗಿ ಕಾಯುತ್ತಿರುತ್ತದೆ.
7. ಡೈಪರ್ ಚೇಂಜ್ ಮಾಡಿ
ಮಗುವಿನ ಎಲ್ಲಾ ಕೆಲಸವನ್ನೂ ಅಮ್ಮನೇ ಮಾಡಬೇಕಾಗಿಲ್ಲ. ಸಮಯ ಸಿಕ್ಕಾಗ ಅಪ್ಪನೂ ಆ ಕೆಲಸವನ್ನು ಮಾಡಬಹುದು. ಮಗುವಿನ ಡೈಪರ್ ಬದಲಾಯಿಸುವ ಕೆಲಸವನ್ನು ಅಪ್ಪನೂ ಮಾಡಬಹುದು. ಈ ಸಂದರ್ಭದಲ್ಲಿ ಮಕ್ಕಳಿಗೆ ಕಿರಿ ಕಿರಿ ಉಂಟಾಗುತ್ತದೆ. ಆದರೆ ಮಗುವನ್ನೂ ಯಾವ ರೀತಿ ಸಂಭಾಳಿಸಬೇಕೆಂದು ಅಪ್ಪನಿಗೆ ಗೊತ್ತಿರಬೇಕು.
8. ಹುಷಾರಿಲ್ಲದಾಗ ಕಾಳಜಿ ವಹಿಸಿ
ಮಕ್ಕಳು ಹುಷಾರಿಲ್ಲದ ಸಮಯದಲ್ಲಿ ತುಂಬಾನೇ ಹಠ ಮಾಡುತ್ತಾರೆ. ಯಾರ ಮಾತನ್ನೂ ಅವರು ಕೇಳೋದಕ್ಕೆ ರೆಡಿ ಇರೋದಿಲ್ಲ. ಇಂತಹ ಸಂದರ್ಭದಲ್ಲಿ ಅಮ್ಮನ ಜವಾಬ್ದಾರಿಯೆಂದು ಸುಮ್ಮನಿರಬೇಡಿ. ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗೋದ್ರಿಂದ ಹಿಡಿದು ಮನೆಯಲ್ಲಿ ಮಗುವಿನ ಆರೈಕೆ ಮಾಡಿ. ಹೀಗೆ ಮಾಡಿದಾಗ ಅಪ್ಪನ ಜೊತೆಗೆ ಆ ಒಂದು ಬಾಂಧವ್ಯ ವೃದ್ಧಿಯಾಗುತ್ತದೆ.
ಈ ಎಲ್ಲಾ ಚಟುವಟಿಕೆಗಳು ಅಪ್ಪ ಹಾಗೂ ಮಗುವಿನ ಭಾಂದವ್ಯವನ್ನು ಮತ್ತಷ್ಟು ಗಟ್ಟಿ ಮಾಡುತ್ತಾ ಹೋಗುತ್ತದೆ. ಹೀಗಾದಾಗ ಮಕ್ಕಳು ಅಪ್ಪನೊಂದಿಗೂ ಆ ಒಂದು ಆಪ್ತತೆಯನ್ನು ಸೃಷ್ಟಿಸಿಕೊಳ್ಳುತ್ತವೆ.



Click it and Unblock the Notifications


