Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಚಿಕ್ಕಂದಿನಲ್ಲೇ ಮಕ್ಕಳಿಗೆ ಸಹಾಯ ಮಾಡೋ ಗುಣಗಳನ್ನು ಕಲಿಸೋದು ಹೇಗೆ?
ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸುವುದು ತುಂಬಾನೇ ಮುಖ್ಯ. ನಾವು ಚಿಕ್ಕಂದಿನಲ್ಲೇ ಕಲಿಸಿದ ಮೌಲ್ಯಗಳು ಅವರ ಜೀವನವನ್ನು ಕಟ್ಟೋದಕ್ಕೆ, ಭವಿಷ್ಯದ ಹಾದಿಗೆ ತುಂಬಾನೇ ಸಹಾಯಕಾರಿಯಾಗುತ್ತದೆ. ಆ ಮೌಲ್ಯಗಳಲ್ಲಿ ಮತ್ತೊಬ್ಬರಿಗೆ ಸಹಾಯ ಮಾಡುವ ಮೌಲ್ಯವು ಕೂಡ ತುಂಬಾನೇ ಮುಖ್ಯ. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವ ಹಾಗೆ ಚಿಕ್ಕವಯಸ್ಸಿನಲ್ಲಿಯೇ ಅವರಿಗೆ ಸಹಾಯ ಮಾಡೋ ಗುಣವನ್ನು ರೂಢಿಸುಕೊಳ್ಳುವಂತೆ ಮಾಡುವುದು ಪೋಷಕರ ಕರ್ತವ್ಯ. ಅಷ್ಟಕ್ಕು ಮಕ್ಕಳಲ್ಲಿ ಸಹಾಯ ಮಾಡೋ ಗುಣ ಬೆಳೆಸಿಕೊಳ್ಳುವಂತೆ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್
1. ಮಕ್ಕಳು ಜೀವನದ ವಾಸ್ತವಿಕ ದೃಷ್ಟಿಕೋನ ಪಡೆಯುತ್ತಾರೆ
ನಿಮ್ಮ ಮಕ್ಕಳನ್ನು ನೀವು ತುಂಬಾನೇ ಮುದ್ದು ಮಾಡಿ, ಕಾಳಜಿಯಿಂದ ಸಾಕಿರುತ್ತೀರಿ. ಅವರ ಬೇಕು ಬೇಡಗಳನ್ನೆಲ್ಲಾ ವಿಚಾರಿಸಿ, ಅವರು ಇಂತಹದ್ದು ಬೇಕು ಅನ್ನೋ ಮೊದಲೇ ಅವರಿಗೆ ಸಿಗುವಂತೆ ಮಾಡಿರುತ್ತೀರಿ. ಹೀಗಿದ್ದಾಗ ಮಕ್ಕಳಿಗೆ ಕಷ್ಟ ಏನು ಅನ್ನೋದು ಗೊತ್ತಿರೋದಿಲ್ಲ. ಅದರ ಅರಿವು ಕೂಡ ಅವರಿಗೆ ಇರೋದಿಲ್ಲ. ಆದರೆ ವಾಸ್ತವಿಕ ಜೀವನದ ಅರಿವನ್ನು ಮಕ್ಕಳಿಗೆ ಮಾಡಿಸುವುದು ಪೋಷಕರಾದವರ ಕರ್ತವ್ಯವಾಗಿದೆ.

ವಿಶೇಷವಾಗಿ ನಿಮ್ಮ ಮಕ್ಕಳ ಹುಟ್ಟು ಹಬ್ಬವನ್ನು ಬೇರೆಲ್ಲೋ ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ ಮಾಡುವ ಬದಲು ಅವರನ್ನು ಅನಾಥಾಶ್ರಮ, ವೃದ್ಧಾಶ್ರಮಕ್ಕೆ ಕರೆದುಕೊಂಡು ಹೋಗಿ. ಒಂದು ಇಡೀ ದಿನ ಅಲ್ಲಿ ಕಳೆಯಲಿ. ಅಲ್ಲಿ ಹೋದಾಗ ನಿಮ್ಮ ಮಕ್ಕಳಿಗೆ ವಾಸ್ತವದ ಅರಿವಾಗುತ್ತದೆ. ನೀವು ಮಾಡೋ ಸಹಾಯವನ್ನು ನಿಮ್ಮ ಮಗುವಿನ ಕೈಯಿಂದ ಮಾಡಿಸಿ. ಖಂಡಿತ ಅವರಲ್ಲಿ ಸಹಾಯ ಮಾಡುವ ಗುಣ ಬಂದೇ ಬರುತ್ತದೆ.
2. ಹಂಚಿ ತಿನ್ನೋದ್ರ ಮೌಲ್ಯದ ಅರಿವಾಗುತ್ತದೆ
ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಮನೆಯಿಂದಲೇ ಕಲಿಸಿದರೇ ಒಳ್ಳೆಯದು. ದೇವರು ಕೆಲವರಿಗೆ ಏಳು ಜನ್ಮ ಕೂತು ಉಂಡರು ಕರಗದಷ್ಟು ಆಸ್ತಿಯನ್ನು ನೀಡಿರುತ್ತಾನೆ. ಇನ್ನೂ ಕೆಲವರಿಗೆ ಏನನ್ನೂ ನೀಡಿರೋದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮಲ್ಲಿ ಇರೋದನ್ನು ಇಲ್ಲದವರ ಜೊತೆಗೆ ಹಂಚಿಕೊಳ್ಳುವ ಗುಣವನ್ನು ಮಕ್ಕಳಿಗೆ ಕಲಿಸಿ.
ಮೊದಲಿಗೆ ಮನೆಯಲ್ಲಿ ಏನನ್ನಾದರೂ ತಿನ್ನುವ ಮೊದಲು ಅಕ್ಕ-ಪಕ್ಕದವರಿಗೆ ಕೊಟ್ಟು ನಂತರ ತಿನ್ನಬೇಕು ಅನ್ನೋದನ್ನು ಕಲಿಸಿ. ಇದರಿಂದ ಜೀವನದಲ್ಲಿ ಅವರು ಮತ್ತಷ್ಟು ಉತ್ತಮ ಪಾಠಗಳನ್ನು ಕಲಿಯೋದಕ್ಕೆ ಸಹಾಯವಾಗುತ್ತದೆ. ಹಂಚಿಕೊಂಡು ತಿನ್ನುವುದರ ಮಹತ್ವವನ್ನು ಅವರು ಖಂಡಿತ ಕಲಿತುಕೊಳ್ಳುತ್ತಾರೆ.
3. ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ಬೆಳೆಸಿ
ಶ್ರೀಮಂತರ ಮಕ್ಕಳು ಹಾಳಾಗೋದಕ್ಕೆ ಕಾರಣ ಕೈ ತುಂಬಾ ದುಡ್ಡು ಹಾಗೂ ಐಷಾರಾಮಿ ಜೀವನ. ಕೈ ತುಂಬಾ ದುಡ್ಡಿದ್ದಾಗ ಮನುಷ್ಯನಿಗೆ ಏನು ಮಾಡಬೇಕು, ಎಷ್ಟು ಖರ್ಚು ಮಾಡಬೇಕು ಅನ್ನೋದು ಗೊತ್ತಿರೋದಿಲ್ಲ. ಇದರಿಂದ ಮಕ್ಕಳು ಕೆಟ್ಟ ಚಟಗಳ ಗೀಳು ಹತ್ತಿಸಿಕೊಂಡು ಬಿಡುತ್ತಾರೆ. ಆದರೆ ಅದೇ ದುಡ್ಡನಲ್ಲಿ ಬಡವರಿಗೆ ಒಂದು ಹೊತ್ತಿನ ಊಟ ಕೊಡಿಸೋದನ್ನು ಕಲಿಸಿ. ಅದರಲ್ಲಿ ಸಿಗುವ ಸುಖ ಬಹುಶಃ ಬೇರ್ಯಾವುದರಲ್ಲೂ ಸಿಗುವುದಿಲ್ಲ ಅನ್ನಿಸುತ್ತೆ.
ಕೇವಲ ಖರ್ಚು ಮಾಡುವುದಷ್ಟೇ ಜೀವನ ಅಲ್ಲ. ಅದರಾಚೆಗೂ ಜೀವನ ಇದೆ ಅನ್ನೋದನ್ನು ತೋರಿಸಿ. ಸ್ಲಮ್ ಗಳಲ್ಲಿರುವ ವಾಸಿಸುತ್ತಿರುವ ಜನರ ಜೀವನವನ್ನು ನಿಮ್ಮ ಮಗವಿಗೂ ಪರಿಚಯ ಮಾಡಿ ಕೊಡಿ. ಸಾಧ್ಯವಾದರೇ ಒಂದು ದಿನ ಅಲ್ಲೇ ಕಳೆಯಲಿ. ಆಗ ವಾಸ್ತವದ ಅರಿವಾಗುತ್ತದೆ. ಈ ಎಲ್ಲಾ ಸತ್ಯಗಳ ಅರಿವಿರುವವನು ಎಂದಿಗೂ ತಪ್ಪು ಮಾಡೋದಿಲ್ಲ. ಜೊತೆಗೆ ಒರ್ವ ಸದೃಢ ವ್ಯಕ್ತಿಯಾಗಿ ಬೆಳೆಯೋದ್ರಲ್ಲಿ ಅನುಮಾನವೇ ಇಲ್ಲ.
4. ಮನುಷ್ಯತ್ವ ಬೆಳೆಯುತ್ತದೆ
ಅನೇಕ ಜನರಿಗೆ ಮನುಷ್ಯತ್ವ ಅನ್ನೋದು ಏನು ಅನ್ನೋದೇ ಗೊತ್ತಿರೋದಿಲ್ಲ. ತಮಗಿಂತ ಕೆಳಗಿರೋರನ್ನು ಕೀಳಾಗಿ ನಡೆಸಿಕೊಳ್ಳುತ್ತಾರೆ. ನಿಮ್ಮ ಮಗುವಿನಲ್ಲೂ ನೀವು ಈ ಗುಣಗಳನ್ನು ನೋಡಿರ್ಬಹುದು. ಕೆಲಸದವರ ಜೊತೆಗೆ ಅವರು ಎಷ್ಟು ನಿಷ್ಠುರವಾಗಿ ನಡೆದುಕೊಳ್ಳುತ್ತಾರೆ ಎಂದು. ಮಕ್ಕಳು ಇದನ್ನೆಲ್ಲಾ ನಿಮ್ಮನ್ನು ನೋಡಿಯೇ ಕಲಿತಿರುತ್ತಾರೆ.
ನಿಮ್ಮ ಮನೆಯ ಕೆಲಸಕ್ಕೆ ಬರುತ್ತಾರೆ ಅಂದಾಕ್ಷಣ ಅವರನ್ನು ಕೀಳಾಗಿ ನಡೆಸಿಕೊಳ್ಳುವುದು ಖಂಡಿತ ಸರಿಯಲ್ಲ. ಅವರ ಜೊತೆಗೂ ಗೌರವದಿಂದ ಮಾತನಾಡಿಸಿ. ಕಷ್ಟ ಕಾಲದಲ್ಲಿ ಹಣ ಸಹಾಯ ಮಾಡಿ. ನಿಮ್ಮ ಮಕ್ಕಳಿಗೂ ಇದನ್ನೇ ಹೇಳಿ ಕೊಡಿ ಕೆಲಸದವರನ್ನು ನಿಮ್ಮ ಮನೆಯವರಲ್ಲಿ ಒಬ್ಬರಂತೆ ಕಾಣಲು ಹೇಳಿ. ಇದಕ್ಕೆ ಮನುಷ್ಯತ್ವ ಅಂತ ಹೇಳೋದು. ಈ ಗುಣಗಳು ನಿಮ್ಮ ಮಗುವಿನಲ್ಲೂ ಬೆಳೆಸಿ.
ಮತ್ತೊಬ್ಬರಿಗೆ ಸಹಾಯ ಮಾಡೋದು ಕೂಡ ಮನುಷ್ಯನಲ್ಲಿರುವ ಒಂದು ಉತ್ತಮ ಮೌಲ್ಯವೇ ಸರಿ. ನಿಮ್ಮ ಮಗುವಿನ ಭವಿಷ್ಯ ನಿಮ್ಮ ಕೈಯಲ್ಲಿದೆ ಈಗಿನಿಂದಾನೇ ಸಾಧ್ಯವಾದಷ್ಟು ಉತ್ತಮ ಮೌಲ್ಯಗಳನ್ನ ಮಕ್ಕಳಿಗೆ ಕಲಿಸಿದರೆ ಉತ್ತಮ.



Click it and Unblock the Notifications
