Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮಗು ಬೆಳಗ್ಗೆ ಬೇಗ ಏಳುತ್ತಿದ್ಯಾ? ಹಾಗಾದ್ರೆ ಈ ಸೂಚನೆ ಇರಬಹುದು!
ಮನೆಯಲ್ಲಿ ಮಕ್ಕಳಿದ್ದರೆ ಚಂದ. ಮಗುವಿನ ಮುಖ ನೋಡಿ ಎಲ್ಲಾ ದುಃಖಗಳನ್ನು ಮರೆಯುತ್ತೇವೆ. ಮನೆಯಲ್ಲಿರುವ ಮುದ್ದಾದ ಕಂದ ನಮ್ಮ ಪ್ರಪಂಚವಾಗಿ ಬದಲಾಗುತ್ತದೆ. ಆದರೆ ಕೆಲವೊಂದು ಸಲ ಮಕ್ಕಳಿಗಾಗಿ ಕೆಲವೊಂದು ತ್ಯಾಗಗಳನ್ನು ನಾವು ಮಾಡಲೇಬೇಕಾಗುತ್ತದೆ. ಅದ್ರಲ್ಲೂ ಪ್ರಮುಖವಾಗಿ ತಾಯಿ ಮಗುವಿಗಾಗಿ ಆಕೆಯ ನಿದ್ದೆ ತ್ಯಾಗ ಮಾಡಬೇಕಾಗುತ್ತದೆ.
ಕೆಲ ಮಕ್ಕಳು ಮಲಗೋದಕ್ಕೆ ಹಠ ಮಾಡ್ತಾರೆ. ಆದ್ರೆ ಇನ್ನೂ ಕೆಲವೊಂದು ಸಲ ಮಕ್ಕಳು ಬೇಗನೆ ಮಲಗುತ್ತಾರೆ. ಆದರೆ ಬೆಳಗ್ಗೆಯಾಗೋ ಮೊದಲೇ ಎದ್ದು ಅಳೋದಕ್ಕೆ ಶುರು ಮಾಡ್ತಾರೆ. ಹೀಗಾಗಿ ಆ ತಾಯಿಗೆ ಮಗುವನ್ನು ಸಮಾಧಾನ ಮಾಡೋದ್ರಲ್ಲಿ ಸುಸ್ತಾಗಿ ಹೋಗ್ತಾಳೆ. ಆಕೆಗೂ ಸರಿಯಾಗಿ ನಿದ್ರೆ ಬರೋದಿಲ್ಲ. ಹಾಗಾದ್ರೆ ಮಕ್ಕಳು ಬೇಗನೆ ಏಳೋದಕ್ಕೆ ಕಾರಣ ಏನು ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ.

ಮಗು ಬೆಳಗ್ಗೆ ಬೇಗ ಎದ್ದರೆ ಏನರ್ಥ?
ಹೆಚ್ಚಿನ ಮಕ್ಕಳು ಬೆಳಗ್ಗೆ ಆರರಿಂದ ಎಂಟು ಗಂಟೆಯ ಸಮಯದಲ್ಲಿ ಏಳುತ್ತಾರೆ. ಇನ್ನೂ ಕೆಲವು ಮಕ್ಕಳು ಅದಕ್ಕಿಂತ ಬೇಗನೇ ಏಳುತ್ತಾರೆ. ನಿಮ್ಮ ಮಗು ದಿನ ಕಳೆದಂತೆ ಬೇಗನೇ ಎದ್ದೇಳುವುದನ್ನು ನೀವೇನಾದರೂ ಗಮನಿದ್ದರೆ ಮಕ್ಕಳಿಗೆ ಕೆಲವೊಂದು ಸಮಸ್ಯೆಗಳಾಗಿದೆ ಎಂದರ್ಥ. ಇಲ್ಲದಿದ್ದರೆ ಅವರ ದೇಹದಲ್ಲಿ ಕೆಲ ಬದಲಾವಣೆಗಳು ಆಗುತ್ತಿದೆ ಎನ್ನಬಹುದು.
ಮಗು ಬೇಗ ಏಳಲು ಈ ಕಾರಣಗಳು ಇರಬಹುದು
1. ಹಲ್ಲು ಬೆಳೆಯುತ್ತಿರಬಹುದು
ಮಕ್ಕಳು ಹಲ್ಲು ಬೆಳೆಯುವ ಸಂದರ್ಭದಲ್ಲಿ ಬೇಗನೆ ನಿದ್ದೆಯಿಂದ ಏಳುವ ಸಾಧ್ಯತೆಗಳು ಇರುತ್ತದೆ. ಈ ಸಮಯದಲ್ಲಿ ಕೊಂಚ ನೋವನ್ನು ನಿಮ್ಮ ಮಗು ಅನುಭವಿಸುತ್ತದೆ. ಈ ವೇಳೆ ಮಗುವಿಗೆ ತುಂಬಾನೇ ಕಿರಿ ಕಿರಿ ಅನುಭವವಾಗುತ್ತದೆ. ನಿದ್ದೆ ಮಾಡೋದಕ್ಕೆ ಆಗೋದಿಲ್ಲ. ಆದರೆ ಮಕ್ಕಳಿಗೆ ಇದನ್ನು ವ್ಯಕ್ತ ಪಡಿಸೋದಕ್ಕೆ ಆಗದ ಕಾರಣ ಮಕ್ಕಳು ಬೇಗನೆ ಎದ್ದು ಅಳಲು ಶುರು ಮಾಡುತ್ತದೆ.
2. ವಾತಾವರಣದಲ್ಲಾಗುವ ಚಟುವಟಿಕೆಯಿಂದ
ಶಿಶು ಅಥವಾ ಸ್ವಲ್ಪ ದೊಡ್ಡ ಮಕ್ಕಳಿರಬಹುದು ಅವರು ಮಲಗಿರುವಾಗ ಕೊಂಚ ಶಬ್ದವಾದರೂ ಬೇಗನೆ ಎದ್ದೇಳುತ್ತಾರೆ. ಮಕ್ಕಳು ಬೆಳಗ್ಗೆ ಬೇಗ ಏಳಲು ವಾತಾವರಣದಲ್ಲಾಗುವ ಶಬ್ಧಗಳು ಕಾರಣ ಇರಬಹುದು. ಹೊರಗೆ ಹಕ್ಕಿಗಳ ಚಿಲಿಪಿಲಿ, ವಾಹನ ಶಬ್ಧ, ಸೂರ್ಯನ ಬೆಳಕು ಅಥವಾ ಮನೆಯಲ್ಲಿ ಉಂಟಾಗುವ ಕಿರಿ ಕಿರಿ ಇವುಗಳೆಲ್ಲಾ ಕಾರಣ ಇರಬಹುದು. ಹೀಗಾಗಿ ಮಕ್ಕಳು ಮಲಗಿರುವಾಗ ಶಬ್ದ ಮಾಡೋದಕ್ಕೆ ಹೋಗಬೇಡಿ. ಆದಷ್ಟು ಎಚ್ಚರ ವಹಿಸಿ.
3. ಸರಿಯಾಗಿ ನಿದ್ದೆ ಇಲ್ಲದಿರುವುದು
ಮೂರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಕಣ್ಣು ತುಂಬಾ ನಿದ್ದೆಯ ಅವಶ್ಯಕತೆ ಇರುತ್ತದೆ. ರಾತ್ರಿ ಮಲಗಿದರಷ್ಟೇ ಸಾಲೋದಿಲ್ಲ. ಬೆಳಗ್ಗೆ ಕೂಡ ಚೆನ್ನಾಗಿ ನಿದ್ದೆ ಮಾಡಬೇಕು. ಆದ್ರೆ ಕೆಲ ಮಕ್ಕಳು ಸರಿಯಾಗಿ ನಿದ್ದೆ ಮಾಡೋದಿಲ್ಲ. ಬೆಳಗ್ಗಿನ ಹಾಗೂ ರಾತ್ರಿಯ ನಿದ್ದೆಯ ಅವಶ್ಯಕತೆ ಇರುತ್ತದೆ. ಹೀಗಾಗಿ ಅವರ ನಿದ್ರಾ ಚಕ್ರವೇ ಸರಿಯಾಗಿ ಇಲ್ಲದ ಕಾರಣ ಏಕಾಏಕಿ ನಿದ್ದೆಯಿಂದ ಬೇಗನೇ ಏಳುತ್ತಾರೆ.
4. ಹಸಿವು
ನಿಮ್ಮ ಮಗು ರಾತ್ರಿ ಬೇಗನೆ ಮಲಗಿದ್ದರೆ ಬೆಳಗ್ಗೆ ಬೇಗ ಏಳುತ್ತಾರೆ. ಅದಕ್ಕೂ ಒಂದು ಕಾರಣವಿದೆ. ರಾತ್ರಿ ಮಗುವಿಗೆ ಆಹಾರ ಕೊಟ್ಟು ಮಲಗಿಸಿರುತ್ತೀರಿ. ಆದರೆ ಅದು ಬೆಳಗಾಗುವಷ್ಟರಲ್ಲಿ ಕರಗಿರುತ್ತದೆ. ಮಕ್ಕಳಿಗೆ ನಿದ್ದೆಯಲ್ಲಿರಬೇಕಾದರೆ ಹಸಿವಿನ ಅನುಭವ ಹೆಚ್ಚಾಗುತ್ತದೆ. ಇಂತಹ ವೇಳೆ ಮಕ್ಕಳು ಬೆಳಗ್ಗೆ ಬೇಗ ಎದ್ದೂ ಅಳುತ್ತಾರೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಸರಿಯಾದ ಆಹಾರವನ್ನು ನೀಡಬೇಕು.
5. ಬೆಳಕು ಕಣ್ಣಿಗೆ ಬೀಳುವುದು
ಮಕ್ಕಳು ಸಾಮಾನ್ಯವಾಗಿ ಪೋಷಕರಿಗಿಂತ ತಡವಾಗಿ ಏಳುತ್ತಾರೆ. ಪೋಷಕರು ಕೆಲಸ ಮಾಡುವ ತರಾತುರಿಯಲ್ಲಿ ಕೋಣೆಗೆ ಬಂದು ಪದೇ ಪದೇ ಲೈಟ್ ಹಾಕುತ್ತಿರುತ್ತಾರೆ. ಜೊತೆಗೆ ಸ್ಕ್ರೀನ್ ತೆರೆದಿರುತ್ತದೆ. ಇಂತಹ ಸಂದರ್ಭದಲ್ಲಿ ಬೆಳಕು ನೇರವಾಗಿ ನಿಮ್ಮ ಮಗುವಿನ ಕಣ್ಣಿನ ಮೇಲೆ ಬೀಳುತ್ತದೆ. ಆಗ ಮಕ್ಕಳು ಎಚ್ಚರಗೊಳ್ಳುತ್ತಾರೆ. ಜೊತೆಗೆ ಪೋಷಕರು ಜೋರಾಗಿ ಮಾತನಾಡುತ್ತಾರೆ. ಈ ರೀತಿ ಮಾಡುವುದು ತಪ್ಪು. ಮಕ್ಕಳು ತುಂಬಾನೇ ಸೂಕ್ಷ್ಮ ಹೀಗಾಗಿ ಆದಷ್ಟು ಜಾಗರೂಕರಾಗಿರೋದು ಇರುವುದು ತುಂಬಾನೇ ಮುಖ್ಯ.
ಮಕ್ಕಳ ಆರೈಕೆ ನಾವು ಅಂದುಕೊಂಡಷ್ಟು ಸುಲಭವಲ್ಲ. ಮಕ್ಕಳ ಬೆಳವಣಿಗೆಯ ಪ್ರತಿ ಹಂತದಲ್ಲಿ ಪ್ರತಿಯೊಂದು ಸೂಕ್ಷ್ಮ ವಿಚಾರಗಳನ್ನು ಗಮನಿಸೋದು ತುಂಬಾನೇ ಮುಖ್ಯವಾಗುತ್ತದೆ.



Click it and Unblock the Notifications

