ನಿಮ್ಮ ಮಗು ಅತಿಯಾಗಿ ಮಲಗುತ್ತಾ? ಹಾಗಾದ್ರೆ ಈ ರೋಗದ ಲಕ್ಷಣ ಇರಬಹುದು!

ಸಾಮಾನ್ಯ ಜನರಿಗೆ ಹೋಲಿಕೆ ಮಾಡಿದ್ರೆ ನವಜಾತ ಶಿಶುಗಳು ಅತಿ ಹೆಚ್ಚು ನಿದ್ರಿಸುತ್ತಾರೆ. ಯಾಕಂದ್ರೆ ಗರ್ಭಾಶಯದ ಒಳಗಿರುವಾಗ ಮಕ್ಕಳು ಅತೀ ಹೆಚ್ಚು ಕಾಲ ನಿದ್ದೆ ಮಾಡೋದ್ರಿಂದ ಹೊರಗೆ ಬಂದಾಗ ಈ ಹೊರಗಿನ ಪ್ರಪಂಚಕ್ಕೆ ಒಗ್ಗಿಕೊಳ್ಳುವುದು ಕೊಂಚ ಕಷ್ಟವಾಗುತ್ತದೆ. ಹೀಗಾಗಿ ನವಜಾತ ಶಿಶು ಅತೀ ಹೆಚ್ಚು ಸಮಯ ನಿದ್ದೆ ಮಾಡುತ್ತದೆ.

ಆದರೆ ಕೊಂಚ ದೊಡ್ಡದಾಗುತ್ತಾ ಹೋದಂತೆ ಅವರು ನಿದ್ದೆ ಮಾಡುವ ಸಮಯ ಕಡಿಮೆಯಾಗುತ್ತದೆ. ಬೆಳಗ್ಗೆ ಹಾಗೂ ರಾತ್ರಿಯ ವ್ಯತ್ಯಾಸವನ್ನು ಮಕ್ಕಳು ತಿಳಿದುಕೊಳ್ಳುತ್ತಾರೆ. ಆದರೆ ಕೆಲವೊಂದು ಸಾರಿ ಮಕ್ಕಳು ಅತೀ ಕಡಿಮೆ ನಿದ್ದೆ ಮಾಡುತ್ತದೆ. ಇನ್ನೂ ಕೆಲವು ಸಾರಿ ಅತ್ಯಂತ ಹೆಚ್ಚು ಸಮಯ ನಿದ್ದೆ ಮಾಡುತ್ತಾರೆ. ಈ ರೀತಿಯ ಸಮಸ್ಯೆಗಳು ಮಕ್ಕಳನ್ನು ಕಾಡುತ್ತದೆ.

Reasons Why Newborns and Babies Sleep a Lot: Things Parents Should Know About it in Kannada

ಮಕ್ಕಳು ಎಷ್ಟು ಗಂಟೆಗಳ ಕಾಲ ಮಲಗಬೇಕು?
ಮಕ್ಕಳಿಗೆ ನಾಲ್ಕು ತಿಂಗಳು ತುಂಬುವವರೆಗೂ ಕಡಿಮೆ ಅಂದ್ರು 14 ರಿಂದ 17 ಗಂಟೆಗಳ ಕಾಲ ನಿದ್ದೆಯ ಅವಶ್ಯಕತೆಯಿದೆ. ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು 12 ರಿಂದ15 ಗಂಟೆಗಳ ಕಾಲ ಮಲಗುತ್ತಾರೆ. ಏಳು ತಿಂಗಳಿಗಿಂತ ಚಿಕ್ಕ ಮಕ್ಕಳು ಸುಮಾರು 19 ಗಂಟೆಗಳ ಕಾಲ ಮಲಗುತ್ತಾರೆ. ಹೆಚ್ಚಿನ ಮಕ್ಕಳು ಇದೇ ರೀತಿ ಇರುತ್ತಾರೆ. ಇನ್ನೂ ಅವರ ಆಹಾರ ಸಂಗ್ರಹಣಾ ಸಾಮರ್ಥ್ಯ ಕಡಿಮೆ ಇರೋದ್ರಿಂದ ಪ್ರತಿ ಎರಡು ಗಂಟೆಗಳಿಗೊಮ್ಮೆ ಮಕ್ಕಳು ನಿದ್ದೆಯಿಂದ ಎದ್ದೇಳುತ್ತಾರೆ.

ಮಕ್ಕಳು ಅತೀ ಹೆಚ್ಚು ಹೊತ್ತು ಮಲಗೋದು ಯಾಕೆ?
ನವಜಾತ ಶಿಶುಗಳು ಹೆಚ್ಚು ನಿದ್ದೆ ಮಾಡೋದ್ರಿಂದ ಆರೋಗ್ಯ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಮೆದುಳಿನ ಬೆಳವಣಿಗೆ, ನರಮಂಡಲದ ನಿರ್ಮಾಣ ಮತ್ತು ಮಗುವಿನ ನಡವಳಿಕೆಯ ರಚನೆಯನ್ನು ಉತ್ತೇಜಿಸುತ್ತದೆ. ಇದು ಶಿಶುವಿನ ಗಣನೀಯ ಬೆಳವಣಿಗೆಯ ಅವಧಿಯಾಗಿರುವುದರಿಂದ ಶಿಶುಗಳು ತಮ್ಮ ಹೆಚ್ಚಿನ ಸಮಯವನ್ನು ನಿದ್ರೆಯಲ್ಲಿ ಕಳೆಯುತ್ತಾರೆ. ಈ ಕೆಳಗಿನ ಕೆಲವು ಅಂಶಗಳು ನವಜಾತ ಶಿಶುಗಳು ಹೆಚ್ಚು ನಿದ್ರಿಸಲು ಕಾರಣವಾಗುತ್ತದೆ.

1. ಬೆಳವಣಿಗೆಯ ವೇಗ ಉತ್ತಮವಾಗುತ್ತದೆ
ಮಗು ಮಲಗಿರುವಾಗ ಮಗುವಿನ ಮೆದುಳು ಮಾನವ ಬೆಳವಣಿಗೆಯ ಹಾರ್ಮೋನ್ (HGH) ಅನ್ನು ಉತ್ಪಾದಿಸುತ್ತದೆ. ಆದ್ದರಿಂದ ಮಗು ಹಗಲಿನಲ್ಲಿ ಆಗಾಗ್ಗೆ ನಿದ್ದೆ ಮಾಡಿದರೆ ಮತ್ತು ರಾತ್ರಿಯಲ್ಲಿ ಹೆಚ್ಚು ಕಾಲ ನಿದ್ರಿಸಿದರೆ ಅವರ ಬೆಳವಣಿಗೆಯ ವೇಗ ಹೆಚ್ಚಿರುತ್ತದೆ ಎಂದು ಅಧ್ಯಯನದಿಂದ ಸಾಭೀತಾಗಿದೆ. ಆದ್ದರಿಂದ ಮಕ್ಕಳು ಹೆಚ್ಚು ಮಲಗಿರುತ್ತಾರೆಂದು ಚಿಂತಿಸಬೇಡಿ.

2. ಅನಾರೋಗ್ಯದ ಕಾರಣದಿಂದ
ಚಿಕ್ಕದಿರುವಾಗ ಮಕ್ಕಳ ಪ್ರತಿಯೊಂದು ಚಟುವಟಿಕೆಯ ಮೇಲೆ ಕಣ್ಣಿಡುವುದು ಪೋಷಕರ ಕರ್ತವ್ಯವಾಗಿದೆ. ನಿಮ್ಮ ಮಗು ನಿರಂತರವಾಗಿ ನಿದ್ರಿಸುತ್ತಿದ್ದರೆ, ದೀರ್ಘಕಾಲ ಮಲಗಿದ ನಂತರವೂ ಅರೆನಿದ್ರಾವಸ್ಥೆ ಅಥವಾ ಆಲಸ್ಯದ ಲಕ್ಷಣಗಳನ್ನು ತೋರಿಸುತ್ತಿದ್ದರೆ, ಆಹಾರ ಸೇವಿಸುವುದಕ್ಕೆ ಕಡಿಮೆ ಆಸಕ್ತಿಯನ್ನು ತೋರಿಸದರೆ ಖಂಡಿತ ಮಗುವಿಗೆ ಯಾವುದಾದರೂ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂದರ್ಥ. ಇಂತಹ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಿ.

3. ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುವುದು
ನಿಮ್ಮ ಮಗು ಹೆಚ್ಚಿ ನಿದ್ರಿಸುತ್ತಿದ್ದರೆ, ಮಗುವಿನಲ್ಲಿ ಶಕ್ತಿಯ ಕೊರತೆ ಇದ್ದರೆ, ಶಿಶುವು ಜಡ ತೋರುತ್ತಿದ್ದರೆ ಶಿಶುವಿನ ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆಯಾಗಿದೆ ಎಂದರ್ಥ. ಸಾಮಾನ್ಯವಾಗಿ ಮಕ್ಕಳು ಜೋರಾಗ ಶಬ್ಧವಾದರೇ ಅಥವಾ ಮತ್ಯಾವುದೇ ಕಾರಣಕ್ಕಾಗಿ ಅವರು ಎದ್ದೇಳುವುದಿಲ್ಲ. ಇನ್ನೂ ಅವರಿಗೆ ಹಸಿವಾದರೂ ಕೂಡ ಎದ್ದೇಳುವುದಕ್ಕೆ ಕಷ್ಟ ಆಗುತ್ತದೆ.

4. ಕಾಮಾಲೆ ರೋಗ
ಚಿಕ್ಕ ಮಕ್ಕಳಿಗೆ ಬಹು ಬೇಗನೆ ರೋಗಗಳು ವಕ್ಕರಿಸುತ್ತದೆ. ಹೀಗಾಗಿ ಈ ಬಗ್ಗೆ ಪೋಷಕರು ಗಮನ ಹರಿಸಬೇಕು. ಮಕ್ಕಳಿಗೆ ಕಾಮಾಲೆ ರೋಗ ಉಂಟಾದಾಗ ಬೈಲರುಬಿನ್ ಮಟ್ಟ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಶಿಶುಗಳು ಹೆಚ್ಚು ನಿದ್ರಿಸುತ್ತದೆ, ಅವರಿಗೆ ದಣಿವು ಹೆಚ್ಚಾಗುತ್ತದೆ. ಮತ್ತು ತಿನ್ನಲು ಕಡಿಮೆ ಆಸಕ್ತಿಯನ್ನು ತೋರುತ್ತದೆ.

5 ಸೋಂಕು/ಅನಾರೋಗ್ಯ ಉಂಟಾದಾಗ
ಸಾಮಾನ್ಯವಾಗಿ ಶಿಶುಗಳು ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ. ಹಾಗೂ ಇದರಿಂದ ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚಿದೆ. ಮಗುವಿಗೆ ಜ್ವರ, ಕೆಮ್ಮು ಅಥವಾ ಚರ್ಮದ ಬಣ್ಣ ಬದಲಾದರೆ ಅಥವಾ ಹೆಚ್ಚು ನಿದ್ದೆ ಮಾಡಿದರೆ ಮತ್ತು ಕಡಿಮೆ ಆಹಾರ ಸೇವಿಸಿದರೆ ಅವರು ಸೋಂಕಿಗೆ ಒಳಗಾಗಿರಬಹುದು ಎಂದರ್ಥ.

6. ಮಗುವಿಗೆ ಹಾಲಿನ ಕೊರತೆಯಾದಾಗ
ನಿಮ್ಮ ಮಗು ಮಲಗಲು ಹೆಚ್ಚು ಸಮಯ ತೆಗೆದುಕೊಂಡರೆ ಅಥವಾ ಬಹು ಬೇಗನೇ ಮಲಗಿದರೆ ಅವರಿಗೆ ಸಾಕಷ್ಟು ಹಾಲು ಸಿಕ್ಕಿಲ್ಲ ಎಂದರ್ಥ. ಇದರಿಂದ ಅವರು ಒಂದೇ ಸಮನೆ ಎಚ್ಚರವಾಗದಂತೆ ನಾಲ್ಕು ಗಂಟೆಗಿಂತ ಹೆಚ್ಚು ಸಮಯ ಮಲಗಬಹುದು. ಹಾಗೂ ಮೈ ತುಂಬಾ ಜಡ ತುಂಬಿರಬಹುದು.

ಒಟ್ಟಿನಲ್ಲಿ ಮಕ್ಕಳ ಚಟುವಟಿಕೆಯಲ್ಲಿ ಕೊಂಚ ವ್ಯತ್ಯಾಸವಾದರೂ ಅದರ ಬಗ್ಗೆ ಗಮನ ಹರಿಸುವುದು ಪೋಷಕರ ಕರ್ತವ್ಯ. ಇಲ್ಲವಾದರೆ ಭವಿಷ್ಯದಲ್ಲಿ ಬಹು ದೊಡ್ಡ ಸಮಸ್ಯೆ ಎದುರಿಸಬೇಕಾಗಬಹುದು.

English summary

Reasons Why Newborns and Babies Sleep a Lot: Things Parents Should Know About it in Kannada

These are the Reasons Why Newborns and Babies Sleep a Lot Read More.
Story first published: Monday, May 15, 2023, 13:20 [IST]
X
Desktop Bottom Promotion