Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಡೌನ್‌ಸಿಂಡ್ರೋಮ್ ಮಗುವನ್ನು ಹೇಗೆ ಬೆಳೆಸಿದರೆ ಆ ಮಗುವಿನ ಭವಿಷ್ಯಕ್ಕೆ ಒಳ್ಳೆಯದು?
ಅಕ್ಟೋಬರ್ 21ಅನ್ನು ಇಂಟರ್‌ನ್ಯಾಷನಲ್ ಡೌನ್ ಸಿಂಡ್ರೋಮ್ ದಿನವನ್ನಾಗಿ ಆಚರಿಸಲಾಗುವುದು.
1079ರಿಂದ 2003ರ ಅಂಕಿ ಅಂಶದ ಪ್ರಕಾರ ಮಕ್ಕಳಲ್ಲಿ ಡೌನ್ ಸಿಂಡ್ರೋಮ್ ಶೇ. 30ರಷ್ಟು ಅಧಿಕವಾಗಿದೆ. ಮಗು ಹುಟ್ಟಿದಾಗ ಪೋಷಕರಿಗೆ ತುಂಬಾನೇ ಖುಷಿಯಾಗುವುದು, ಆದರೆ ಕೆಲವು ತಿಂಗಳು ಕಳೆದ ಮೇಲೆ ಮಗುವಿಗೆ ಡೌನ್ ಸಿಂಡ್ರೋಮ್ ಎಂದು ತಿಳಿದಾಗ ಸಿಡಿಲು ಬಡಿದಂತಾಗುವುದು.
ಡೌನ್ ಸಿಂಡ್ರೋಮ್ ಎಂದು ಗೊತ್ತಾದಾಗ ಆ ಮಗುವನ್ನು ಬೆಳೆಸುವಲ್ಲಿ ಪೋಷಕರ ಪಾತ್ರ ತುಂಬಾನೇ ಮುಖ್ಯವಾಗಿರುತ್ತದೆ. ನಮ್ಮ ಮಗುವಿಗೆ ಹೀಗಾಯ್ತಲ್ಲ ಎಂದು ಕೊರಗುವ ಬದಲಿಗೆ ಆ ಮಗು ಈ ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಬದುಕಲು ಬೇಕಾದ ವಾತಾವರಣವನ್ನು ಪೋಷಕರು ನಿರ್ಮಿಸಬೇಕು. ಆ ಮಗುವಿನಲ್ಲಿ ಏನಾದರೂ ಕೌಶಲ್ಯವಿದ್ದರೆ ಅದನ್ನು ಪೋಷಿಸುವಲ್ಲಿ ಗಮನಹರಿಸಬೇಕು.

ಇತರ ಮಕ್ಕಳಿಗೆ ಹೋಲಿಸಿದರೆ ದೈಹಿಕ, ಮಾನಸಿಕ ಬೆಳವಣಿಗೆ ತುಂಬಾನೇ ನಿಧಾನವಾಗುವುದು
ಡೌನ್ ಸಿಂಡ್ರೋಮ್ ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆ ತುಂಬಾ ನಿಧಾನವಾಗುವುದು. ಮಗು ಜನಸಿದ 4-5 ತಿಂಗಳಿನಲ್ಲಿ ಮಗುಚಿ ಬೀಳುತ್ತವೆ, ನಂತರ ಅಂಬೆಕಾಲಿನಲ್ಲಿ ಹೋಗುವುದು ಅಥವಾ ಹಾಗೆಯೇ ರೌಂಡ್ ಹೊಡೆದು ಎದ್ದು ಕೂರಲು ಪ್ರಯತ್ನಿಸುವುದು ಹೀಗೆ ಮಗುವಿನಲ್ಲಿ ದಿನದಿಂದ ದಿನಕ್ಕೆ ಏನಾದರೂ ಹೊಸ ಚಟುವಟಿಕೆಯನ್ನು ಪೋಷಕರು ಗಮನಿಸಬಹುದು, ಆದರೆ ಡೌನ್ ಸಿಂಡ್ರೋಮ್ ಮಕ್ಕಳಲ್ಲಿ ಈ ರೀತಿಯ ಚಟುವಟಿಕೆಗಳು ತುಂಬಾ ನಿಧಾನವಾಗುವುದು. ಮಗು 7-8 ತಿಂಗಳಿನಲ್ಲಿ ಅಂಬೆಗಾಲಿನಲ್ಲಿ ಚಲಿಸಲು ಪ್ರಾರಂಭಿಸುತ್ತದೆ. ಆದರೆ ಡೌನ್ ಸಿಂಡ್ರೋಮ್ ಮಗು ಅಂಬೆಗಾಲಿನಲ್ಲಿ ಹೋಗಲು 18 ತಿಂಗಳು ಅಥವಾ ಅಧಿಕ್ಕಿಂತ ಅಧಿಕ ಸಮಯ ತೆಗೆದುಕೊಳ್ಳಬಹುದು. ಡೌನ್ ಸಿಂಡ್ರೋಮ್ ಮಕ್ಕಳು ನಡೆಯಲು 2 ವರ್ಷಕ್ಕಿಂತ ಅಧಿಕ ಸಮಯ ತೆಗೆದುಕೊಳ್ಳಬಹುದು. ಅವರು ನಡೆಯಲು, ಮಾತನಾಡುವುದು ಎಲ್ಲಾ ತುಂಬಾ ನಿಧಾನವಾಗುವುದು. ಇದನ್ನು ಪೋಷಕರು ಗಮನಿಸಿದರೆ ಫಿಸಿಕಲ್ ಥೆರಪಿಸ್ಟ್ ಬಳಿ ಕರೆದುಕೊಂಡು ಹೋದರೆ ಅವರ ಸಲಹೆಗಳು ಮಗು ಸ್ವಲ್ಪ ಬೇಗ ನಡೆದಾಡುವಂತಾಗಲು ಸಹಾಯವಾಗುವುದು.
ಕಲಿಕೆ ತುಂಬಾ ನಿಧಾನ
ಡೌನ್ ಸಿಂಡ್ರೋಮ್ ಮಕ್ಕಳು ಕಲಿಕೆ ತುಂಬಾ ನಿಧಾನವಾಗುವುದು. ಡೌನ್ ಸಿಂಡ್ರೋಮ್ ಮಕ್ಕಳ ಬುದ್ಧಿಶಕ್ತಿ ತುಂಬಾ ಕಡಿಮೆ ಇರುತ್ತದೆ. ಇಂಥ ಮಕ್ಕಳು ಹೈಸ್ಕೂಲ್ ವಯಸ್ಸಿನವರಾದರೂ ಪ್ರೈಮರಿ ಮಕ್ಕಳ ಬುದ್ಧಿ ಮಾತ್ರ ಅವರಿಗಿರುತ್ತದೆ. ಇಂಥ ಮಕ್ಕಳಿಗೆ ಹೇಳಿಕೊಟ್ಟರೆ ಕಲಿಯುವುದಿಲ್ಲ, ಆದರೆ ನೋಡಿ ಕಲಿಯುತ್ತವೆ. ಈ ಮಕ್ಕಳಿಗೆ ಸ್ಪಷ್ಟವಾಗಿ ಮಾತನಾಡಲು ಕಷ್ಟವಾಗುವುದು, ಸಂಖ್ಯೆಗಳನ್ನು ಹೇಳುವುದು ಕಷ್ಟವಾಗುವುದು, ನೆನಪಿನ ಶಕ್ತಿ ಕಡಿಮೆ ಇರುವುದರಿಂದ ಕಲಿಕೆಯಲ್ಲಿ ತುಂಬಾನೇ ಹಿಂದೆ ಬೀಳುತ್ತಾರೆ.
ಡೌನ್ ಸಿಂಡ್ರೋಮ್ ಮಕ್ಕಳು ನೋಡಿ ಕಲಿಯುವುದು ಅಧಿಕ
ಈ ಮಕ್ಕಳು ತಾವು ಹೇಗಿರಬೇಕೆಂಬುವುದನ್ನು ನೋಡಿ ಕಲಿಯುತ್ತಾರೆ. ಶುಚಿತ್ವ ಬಗ್ಗೆಯಾಗಲಿ ಅಥವಾ ಸಾಮಾಜಿಕವಾಗಿ ಬೆರೆಯುವುದು ಇವೆಲ್ಲವನ್ನು ನೋಡಿ ಕಲಿಯುತ್ತಾರೆ. ಕೆಲ ಮಕ್ಕಳು ತಮ್ಮ ವಯಸ್ಸಿನ ಮಕ್ಕಳ ಜೊತೆ ಬೆರೆತು ಕಲಿಯುತ್ತಾರೆ, ಆದರೆ ಮಕ್ಕಳು ಸಾಮಾಜಿಕವಾಗಿ ಬೆರೆಯಲು ಪೋಷಕರು ಪ್ರಮುಖ ಪಾತ್ರವಹಿಸಬೇಕು. ಅವರು ಹೇಗಿರಬೇಕು ಎಂಬುವುದನ್ನು ಪೋಷಕರು ಕಲಿಸಬೇಕು. ಅವರು ಬದುಕು ನಡೆಸಿಕೊಂಡು ಹೋಗಲು ಅವಶ್ಯಕವಾದ ಕೆಲವೊಂದು ಕೌಶಲ್ಯವನ್ನೂ ಪೋಷಕರು ಕಲಿಸಬೇಕು.
ಹೊರಗಡೆ ಬಂದಾಗ ಹೇಗೆ ವರ್ತಿಸಬೇಕು, ಡ್ರೆಸ್ಸಿಂಗ್ ಮಾಡಿಕೊಳ್ಳುವುದು, ಸ್ವತಃ ಸ್ನಾನ ಮಾಡುವುದು, ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವುದು ಇವೆಲ್ಲಾ ಕಲಿಸಿದರೆ ಆ ಮಕ್ಕಳು ಇತರರಿಗೆ ತುಂಬಾ ಡಿಪೆಂಡ್ ಆಗುವುದಿಲ್ಲ.
ಸ್ಪೆಷಲ್ ಸ್ಕೂಲ್‌ಗೆ ಸೇರಿಸಿ
ಇಂಥ ಮಕ್ಕಳಿಗಾಗಿಯೇ ಕೆಲ ಸ್ಪೆಷಲ್ ಸ್ಕೂಲ್ ಇರುತ್ತದೆ, ಅಲ್ಲಿ ಅವರಿಗೆ ಲೈಫ್ ಸ್ಕಿಲ್ ಹೇಳಿಕೊಡಲಾಗುವುದು, ಇದರಿಂದ ಅವರು ಸ್ವತಂತ್ರ ಬದುಕು ನಡೆಸಲು ಕೂಡ ಸಹಾಯವಾಗುವುದು. ಡೌನ್ ಸಿಂಡ್ರೋಮ್ ಮಕ್ಕಳಿರುವ ಪೋಷಕರಿಗೆ ನಮ್ಮ ನಂತರ ನಮ್ಮ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಚಿಂತೆ ಕಾಡುವುದು. ಡೌನ್ ಸಿಂಡ್ರೋಮ್ ಮಕ್ಕಳನ್ನು ಆದಷ್ಟು ಅವರು ಅವರ ಕೆಲಸವನ್ನು ಸ್ವತಂತ್ರವಾಗಿ ಮಾಡಿಕೊಳ್ಳುವಂತೆ ಕಲಿಸಿ ಆ ಮಕ್ಕಳಿಗೆ ಆರ್ಥಿಕ ಭದ್ರೆತ ಕಲ್ಪಿಸಿ, ಇದರಿಂದ ಅವರ ಬದುಕು ಮತ್ತಷ್ಟು ಸಲೀಸಾಗುವುದು.



Click it and Unblock the Notifications