Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಕಾಲಿಕವಾಗಿ ಜನಿಸಿದ ಮಗುವಿನ ಆರೈಕೆ ಮಾಡುವಾಗ ಈ ಅಂಶಗಳು ನೆನಪಿರಲಿ
ಅವಧಿಪೂರ್ವ ಮಗುವಿನ ಆರೈಕೆ ಸುಲಭವಾಗಿರುವುದಿಲ್ಲ. ಒಂಬತ್ತು ತಿಂಗಳು ತುಂಬುವ ಮುನ್ನವೇ, ಹುಟ್ಟುವ ಮಕ್ಕಳನ್ನು ಅವಧಿಪೂರ್ವ ಅಥವಾ ಅಕಾಲಿಕವಾಗ ಹುಟ್ಟಿದ ಶಿಶು ಎನ್ನುತ್ತೇವೆ, ಅದು ಕೆಲವು ಏಳು ತಿಂಗಳು, ಎಂಟು ತಿಂಗಳು ಹೀಗೆ ದಿನಗಳು ವಿಭಿನ್ನವಾಗಿರುತ್ತವೆ. ಇಂತಹ ಸಮಯದಲ್ಲಿ ಸಾಕಷ್ಟು ಸವಾಲುಗಳನ್ನು ಪೋಷಕರು ಎದುರಿಸಬೇಕಾಗುವುದು.
ಅವಧಿಪೂರ್ವವಾಗಿ ಹುಟ್ಟಿದ ನವಜಾತ ಶಿಶುಗಳನ್ನು ಸಾಮಾನ್ಯವಾಗಿ ನವಜಾತ ತೀವ್ರ ನಿಗಾ ಘಟಕದಲ್ಲಿ ಕೆಲವು ದಿನಗಳ ಕಾಲ ಇಡುತ್ತಾರೆ. ಈ ಸುರಕ್ಷತೆಯಿಂದ ಮನೆಗೆ ಕರೆದೊಯ್ಯುಲು ಪೋಷಕರು ಉತ್ಸುಕರಾಗಿರುವುದು ಮಾತ್ರವಲ್ಲ, ಆತಂಕವೂ ಅವರ ಜೊತೆಗಿರುತ್ತದೆ. ಆದರೆ, ಚಿಂತಿಸಬೇಕಾಗಿಲ್ಲ. ಕೆಳಗೆ ನೀಡಿರುವ ಕೆಲವು ಸಲಹೆಗಳನ್ನು ಪಾಲಿಸಿದರೆ, ನಿಮ್ಮ ಅವಧಿಪೂರ್ವವಾಗಿ ಹುಟ್ಟಿದ ಮಗು ಆರೋಗ್ಯವಾಗಿ ಹಾಗೂ ಸುರಕ್ಷಿತವಾಗಿರುವುದು.

ಡಿಸ್ಚಾರ್ಜ್ ಮಾಡುವ ಮೊದಲು ವೈದ್ಯರ ಬಳಿ ಈ ಬಗ್ಗೆ ವಿಚಾರಿಸಿ:
ರೇಡಿಯಂಟ್ ವಾರ್ಮರ್ ಅಥವಾ ಇನ್ಕ್ಯುಬೇಟರ್ ಇಲ್ಲದೆ ಸಾಮಾನ್ಯ ಕೋಣೆಯನ್ನು ಮಗುವನ್ನು ಬಿಡಬಹುದೇ?
ಮಗುವಿಗೆ ಸ್ತನ್ಯಪಾನ ಮಾಡಿಸಬಹುದೇ?
ಮಗುವಿನ ತೂಕವನ್ನು ಸ್ಥಿರವಾಗಿ ಹೆಚ್ಚಿಸಬಹುದೇ?

ಇದರ ಜೊತೆಗೆ ಅವಧಿಪೂರ್ವ ಹುಟ್ಟಿದ ಮಕ್ಕಳನ್ನು ನೋಡಿಕೊಳ್ಳುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಚಾರಗಳು ಇಲ್ಲಿವೆ:
ಸರಿಯಾದ ತಾಪಮಾನ:
ನಿಮ್ಮ ಮಗು ಆರಾಮದಾಯಕ ಮತ್ತು ಸುರಕ್ಷಿತ ತಾಪಮಾನದಲ್ಲಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಇದನ್ನು ಮಾಡಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಬಟ್ಟೆಯ ಪದರಗಳನ್ನು ಮಗುವಿಗೆ ಹೊದಿಸುವುದು ಅಥವಾ ಅಗತ್ಯವಿದ್ದಾಗ ಅವುಗಳನ್ನು ತೆಗೆದುಹಾಕುವುದು. ಹಾಸಿಗೆಯನ್ನು ಹೊದಿಕೆಗಳೊಂದಿಗೆ ಓವರ್ಲೋಡ್ ಮಾಡದಿರಲು ಪ್ರಯತ್ನಿಸಿ ಏಕೆಂದರೆ ಅದು ಮಗುವಿಗೆ ಕಷ್ಟವಾಗುತ್ತದೆ. ಕೋಣೆಯಲ್ಲಿ ಸರಿಯಾದ ತಾಪಮಾನ, ಮಂದ ಬೆಳಕು ಇದೆ ಎಂಬುದನ್ನು ಪರಿಶೀಲಿಸಿ.

ಸ್ನಾನ ಮಾಡಿಸುವಾಗ ಸುರಕ್ಷಿತವಾಗಿರಿ:
ನೀರು ಬಿಸಿಯಾಗಿರಬಾರದು, ಬದಲಿಗೆ ಬೆಚ್ಚಗಿರಬೇಕು. ಮಗುವಿನ ಕೂದಲನ್ನು ಸರಳ ನೀರಿನಿಂದ ಮಾತ್ರ ತೊಳೆಯಿರಿ. ಸ್ನಾನದ ನೀರಿಗೆ ಯಾವುದೇ ಕ್ಲೆನ್ಸಿಂಗ್ ಲಿಕ್ವಿಡ್ ಸೇರಿಸಬೇಡಿ. ಮೊದಲ ತಿಂಗಳಲ್ಲಿ ನಿಮ್ಮ ಮಗುವಿನ ಚರ್ಮಕ್ಕೆ ಸರಳ ನೀರು ಉತ್ತಮವಾಗಿದೆ. ಮಗು 2.5 ಕೆಜಿ ತಲುಪುವವರೆಗೆ ಸ್ಪಾಂಜ್ ಸ್ನಾನ ಮಾಡಿಸಿ. ನಿಮ್ಮ ಮಗುವಿಗೆ ಕನಿಷ್ಠ ಒಂದು ತಿಂಗಳಾಗುವವರೆಗೆ ಯಾವುದೇ ಲೋಷನ್ ಅಥವಾ ತೈಲಗಳನ್ನು ಬಳಸುವುದನ್ನು ತಪ್ಪಿಸಿ.

ಸಂದರ್ಶಕರನ್ನು ಮಿತಗೊಳಿಸಿ:
ಮಗು ತುಂಬಾ ಸೂಕ್ಷ್ಮವಾಗಿರುವುದರಿಂದ, ಸೋಂಕಿಗೆ ಬೇಗ ಒಳಗಾಗುತ್ತವೆ. ಆದ್ದರಿಂದ ಕೆಲವು ವಾರಗಳವರೆಗೆ ಕ್ಲಿನಿಕ್/ಆಸ್ಪತ್ರೆಗಾಗಿ ಮಾತ್ರ ಮಗುವನ್ನು ಕರೆದೊಯ್ಯಬೇಕು. ನಿಮ್ಮ ಮಗು ಸಮಯಕ್ಕೆ ಸರಿಯಾಗಿ ಎಲ್ಲಾ ರೋಗನಿರೋಧಕಗಳನ್ನು ಪಡೆಯುತ್ತದೆ ಎಂದು ಖಚಿತಪಡಿಸಿಕೊಳ್ಳಿ. ಆಸ್ಪತ್ರೆ/ಕ್ಲಿನಿಕ್‌ಗೆ ಅನಗತ್ಯ ಭೇಟಿಗಳನ್ನು ತಪ್ಪಿಸಲು ಸಾಧ್ಯವಿರುವಲ್ಲಿ ನಿಮ್ಮ ವೈದ್ಯರಿಂದ ದೂರಸಂಪರ್ಕವನ್ನು ಪಡೆದುಕೊಳ್ಳಿ.
ಜೊತೆಗೆ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಿ. ನಿಮ್ಮ ಮನೆಗೆ ಭೇಟಿ ನೀಡುವವರ ಸಂಖ್ಯೆಯನ್ನು ಮಿತಿಗೊಳಿಸಿ, ವಿಶೇಷವಾಗಿ ಅನಾರೋಗ್ಯ ಹೊಂದಿರುವವರ ಜೊತೆಗ ಮಗುವನ್ನು ಬಿಡಬೇಡಿ. ಎಲ್ಲಾ ಅತಿಥಿಗಳು ಮಾಸ್ಕ್ ಧರಿಸಬೇಕು ಮತ್ತು ಮಗುವನ್ನು ಮುಟ್ಟುವ ಮೊದಲು ತಮ್ಮ ಕೈಗಳನ್ನು ತೊಳೆಯಬೇಕು.

ಕಾಂಗರೂ ಆರೈಕೆಯನ್ನು ಅಭ್ಯಾಸ ಮಾಡಿ :
ಮನೆಯ ಬೆಚ್ಚಗಿನ ಕೋಣೆಯಲ್ಲಿ, ನಿಮ್ಮ ಮಗುವಿಗೆ ಡೈಪರ್‌ನಲ್ಲಿ ಮಾತ್ರ ಧರಿಸಿ, ನಿಮ್ಮ ಎದೆಯ ಮೇಲೆ ಮಲಗಿಸಿ, ನಿಧಾನವಾಗಿ ತಲೆಯನ್ನು ಸವರಿ. ಇದನ್ನು ಕಾಂಗರೂ ಆರೈಕೆ ಎನ್ನುವರು. ಈ ಕಾಂಗರೂ ಆರೈಕೆಯನ್ನು ಸಾಧ್ಯವಾದಷ್ಟು ಕಾಲ, ಆಗಾಗ್ಗೆ ಅಭ್ಯಾಸ ಮಾಡಿ. ಪ್ರಸವಪೂರ್ವ ಮಕ್ಕಳಲ್ಲಿ ಕಾಂಗರೂ ಆರೈಕೆಯು ಪೋಷಕರು-ಶಿಶುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ, ಹಾಲುಣಿಸುವಿಕೆಯನ್ನು ಉತ್ತೇಜಿಸುತ್ತದೆ. ಜೊತೆಗೆ ಶಿಶುವಿನ ಹೃದಯ ಮತ್ತು ಉಸಿರಾಟದ ದರವನ್ನು ಸ್ಥಿರಗೊಳಿಸುತ್ತದೆ, ಆಮ್ಲಜನಕವನ್ನು ಸುಧಾರಿಸುತ್ತದೆ, ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಸಂಶೋಧನೆ ತೋರಿಸಿದೆ.

ತುರ್ತು ಪರಿಸ್ಥಿತಿಗೆ ಸಿದ್ಧರಾಗಿರಿ:
ಸಾಮಾನ್ಯವಾಗಿ ಅವಧಿಪೂರ್ವವಾಗಿ ಜನಿಸಿದ ಮಕ್ಕಳಿಗೆ ಆಗಾಗ ಆಸ್ಪತ್ರೆಗೆ ಹೋಗಬೇಕಾದ ಸನ್ನಿವೇಶ ಎದುರಾಗುವುದು. ಆದ್ದರಿಂದ ಇಂತಹ ತುರ್ತು ಪರಿಸ್ಥಿತಿಗೆ ಯಾವಾಘಲೂ ಸಿದ್ಧರಾಗಿರಿ. ಮನೆಗೆ ಹತ್ತಿರದಲ್ಲಿರುವ ಆಸ್ಪತ್ರೆಯನ್ನು ನೋಡಿಕೊಂಡಿರಿ ಜೊತೆಗೆ ಮಗುವಿನ ಪರಿಸ್ಥಿತಿ ಹದಗೆಡುತ್ತಿದೆ ಎನ್ನುವ ತನಕ ಕಾಯದೇ, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಿರಿ. ಡಿಸ್ಚಾರ್ಜ್ ಮಾಡುವ ಮೊದಲು ಕೇರ್‌ಟೇಕರ್‌ಗಳು ಬೇಸಿಕ್ ಲೈಫ್ ಸಪೋರ್ಟ್ (BLS) ತರಬೇತಿಯನ್ನು ಪಡೆಯುವುದು ಸೂಕ್ತ.

ಟೇಕಿಂಗ್ ಆಫ್ ಯುವರ್ ಸೆಲ್ಫ್:
ತಮ್ಮ ಅವಧಿ ಪೂರ್ವ ಮಗುವಿನ ಆರೈಕೆಯಲ್ಲಿಯೇ ಹೆಚ್ಚಿನ ಸಮಯವನ್ನು ಮನೆಯಲ್ಲಿಯೇ ಪೋಷಕರು ಕಳೆದಿರುತ್ತಾರೆ. ಇದು ಕೆಲವೊಮ್ಮೆ ತುಂಬಾ ದಣಿವು ಉಂಟುಮಾಡಬಹುದು. ಆದ್ದರಿಂದ ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದೆ. ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿಡಲು ಪ್ರಯತ್ನಿಸಿ. ಕುಟುಂಬ ಸದಸ್ಯರ ಸಹಾಯವನ್ನು ತೆಗೆದುಕೊಳ್ಳಿ ಮತ್ತು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ.
ನೀವು ಅತಿಯಾಗಿ ಅಥವಾ ಖಿನ್ನತೆಗೆ ಒಳಗಾಗಿದ್ದರೆ, ನಿಮಗಾಗಿ ವೃತ್ತಿಪರ ಸಹಾಯವನ್ನು ಪಡೆಯಲು ಹಿಂಜರಿಯಬೇಡಿ ಇದರಿಂದ ನೀವು ನಿಮ್ಮ ನವಜಾತ ಶಿಶುವನ್ನು ಸಂಪೂರ್ಣವಾಗಿ ಆನಂದಿಸಬಹುದು.



Click it and Unblock the Notifications