Latest Updates
-
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್!
ಮೊದಲನೇ ಬಾರಿಗೆ ತಾಯಿಯಾಗುತ್ತಿದ್ದೀರಾ? ಹಾಗಾದ್ರೆ ಈ ವಿಚಾರಗಳು ಗೊತ್ತಿರಲಿ!
ತಾಯಿಯಾಗಬೇಕೆಂಬ ಆಸೆ ಪ್ರಪಂಚದಲ್ಲಿರುವ ಪ್ರತಿಯೊಬ್ಬ ಹೆಣ್ಣಿಗೂ ಇದ್ದೇ ಇರುತ್ತದೆ. ಅದ್ರಲ್ಲೂ ಮೊದಲ ಬಾರಿಗೆ ತಾಯಿಯಾಗುವಾಗ ಅದರ ಅನುಭವವೇ ವಿಶೇಷ. ಆ ಅನುಭವವನ್ನು ಪದಗಳಲ್ಲಿ ವಿವರಿಸುವುದು ಕಷ್ಟ. ಮೊದಲ ಬಾರಿಗೆ ತಾಯಿಯಾಗೋವಾಗ ನಮಗೆ ತುಂಬಾ ವಿಚಾರಗಳ ಬಗ್ಗೆ ಮಾಹಿತಿ ಇರೋದಿಲ್ಲ. ಹೀಗಾಗಿ ನಮ್ಮಿಂದ ತಪ್ಪುಗಳು ಆಗುವ ಸಾಧ್ಯತೆ ಇರುತ್ತದೆ. ಇದರಿಂದ ಮಗುವಿಗೆ ತೊಂದರೆ ಆಗಲೂಬಹುದು. ಅಷ್ಟಕ್ಕು ಮೊದಲ ಬಾರಿಗೆ ತಾಯಿಯಾಗುವಾಗ ನಮಗೆ ಯಾವೆಲ್ಲಾ ವಿಚಾರಗಳು ಗೊತ್ತಿರಲೇಬೇಕು ಅನ್ನೋದನ್ನು ತಿಳಿಯೋಣ.
1. ಈ ಸೂಚನೆಗಳ ಬಗ್ಗೆ ತಿಳಿದಿರಿ
ಯಾವುದಾದರೂ ತಿಂಗಳಲ್ಲಿ ನಿಮ್ಮ ಋತುಚಕ್ರ ತಪ್ಪಿ ಹೋದರೆ ತಕ್ಷಣವೇ ವೈದ್ಯರ ಬಳಿ ಹೋಗಿ ಪರೀಕ್ಷಿಸಿ. ಇನ್ನೂ ಮೂಡ್ ಸ್ವಿಂಗ್, ಬೆನ್ನು ನೋವು, ಊದಿಕೊಂಡ ಸ್ತನಗಳು, ಬೆಳಗ್ಗೆ ಆದ ತಕ್ಷಣ ಹುಷಾರಿಲ್ಲದಂತಾಗುವುದು, ಏನಾದರೂ ತಿನ್ನಬೇಕು ಅನ್ನೋ ಬಯಕೆ ಶುರುವಾಗುತ್ತದೆ. ಈ ಎಲ್ಲಾ ಲಕ್ಷಗಳು ನೀವು ಗರ್ಭವತಿ ಆಗಿದ್ದೀರಿ ಎಂದು ಸೂಚಿಸುತ್ತದೆ.

2. ವೈದ್ಯರ ಬಳಿ ಬೇಟಿ ನೀಡಿ
ನೀವು ಗರ್ಭವತಿ ಎಂದು ತಿಳಿದ ಮೇಲೆ ತಿಂಗಳಿಗೊಮ್ಮೆ ವೈದ್ಯರ ಬಳಿ ಭೇಟಿ ನೀಡುವುದು ತುಂಬಾನೇ ಮುಖ್ಯವಾಗುತ್ತದೆ. ಗಂಡ-ಹೆಂಡತಿ ಇಬ್ಬರೂ ಕೂಡ ವೈದ್ಯರ ಬಳಿ ಭೇಟಿ ನೀಡಿ ಮಗುವಿನ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕಾಗುತ್ತದೆ. ಯಾಕಂದ್ರೆ ಒಂದು ವೇಳೆ ಏನಾದರೂ ಸಮಸ್ಯೆ ಇದ್ದರೆ ಆರಂಭದಲ್ಲೇ ತಿಳಿಯುತ್ತದೆ.
3. ಆರಂಭದಲ್ಲಿ ರಕ್ತಸ್ರಾವ ಕಂಡು ಬರುತ್ತದೆ
ಸಾಮಾನ್ಯವಾಗಿ ಗರ್ಭವತಿ ಆದ ಸಂದರ್ಭದಲ್ಲಿ ಋತುಚಕ್ರ ತಪ್ಪಿ ಹೋಗುತ್ತದೆ. ಆದರೆ ಕೆಲವು ಮಹಿಳೆಯರಿಗೆ ಗರ್ಭಾವಸ್ಥೆಯ ಆರಂಭಿಕ ಹಂತಗಳಲ್ಲಿ ರಕ್ತಸ್ರಾವವಾಗುತ್ತದೆ. ಇದು ಮುಟ್ಟಿನ ವೇಳೆ ಉಂಟಾಗುವ ರಕ್ತ ಸ್ರಾವನಾ ಎಂದು ಗೊಂದಲವುಂಟು ಮಾಡುತ್ತದೆ.
ಆದರೆ ಇದನ್ನು ಗುರುತಿಸೋದು ಸುಲಭ. ಯಾಕಂದ್ರೆ ಋತುಸ್ರಾವವಾದಾಗ ರಕ್ತ ಕೆಂಪುಬಣ್ಣದಿಂದ ಕೂಡಿರುತ್ತದೆ. ಆದರೆ ಗರ್ಭವತಿಯಾದಾಗ ಆಗುವ ರಕ್ತ ಸ್ರಾವವು ಕಂದು ಅಥವಾ ಗುಲಾಬಿ ಬಣ್ಣದಲ್ಲಿ ಇರುತ್ತದೆ. ಆದರೆ ಯಾವುದಕ್ಕೂ ವೈದ್ಯರನ್ನು ಸಂಪರ್ಕಿಸೋದು ಉತ್ತಮ.
4. ತೂಕ ಏರಿಕೆ
ಗರ್ಭವತಿಯಾದ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ತೂಕ ಹೆಚ್ಚಳವಾಗುವ ಭಯ ಇದ್ದೇ ಇರುತ್ತದೆ. ಯಾಕಂದ್ರೆ ಮಗು ಆದ ನಂತರ ಆ ತೂಕವನ್ನು ಕರಗಿಸೋದು ಕಷ್ಟ. ಹಾಗಂತ ನೀವು ಆಹಾರ ತಿನ್ನೋದನ್ನು ಕಡಿಮೆಗೊಳಿಸಬಾರದು. ವೈದ್ಯರ ಸಲಹೆಯಂತೆ ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವನೆ ಮಾಡ್ಬೇಕು. ಈ ಸಮಯದಲ್ಲಿ ನೀವು ಮಗುವಿನ ಬೆಳವಣಿಗೆ ಬಗ್ಗೆ ಕಾಳಜಿ ಮಾಡಬೇಕು.
5. ಏನು ತಿನ್ನಬೇಕು? ಏನು ತಿನ್ನಬಾರದು?
ಗರ್ಭವತಿಯಾದ ಸಂದರ್ಭದಲ್ಲಿ ನಾವು ತಿನ್ನುವ ಆಹಾರದ ಬಗ್ಗೆ ತುಂಬಾನೇ ಕಾಳಜಿ ಮಾಡಬೇಕಾಗುತ್ತದೆ. ವಿಟಮಿನ್ ಭರಿಯ ಪೌಷ್ಠಿಕ ಆಹಾರವನ್ನು ಮಾತ್ರ ಸೇವನೆ ಮಾಡಬೇಕು. ವೈದ್ಯರ ಸಲಹೆಯಂತೆ ಆಹಾರವನ್ನು ಸೇವನೆ ಮಾಡಬೇಕು. ಇನ್ನೂ ಕುಡಿತ, ಸಿಗರೇಟ್, ಕಾಫಿ, ಟೀ ಗಳಂತಹ ವಸಸ್ತುಗಳಿಂದ ದೂರ ಇದ್ದರೆ ಒಳ್ಳೆಯದು. ಇಲ್ಲದಿದ್ದರೆ ಮಗುವಿಗೆ ಸಮಸ್ಯೆ ಉಂಟಾಗುತ್ತದೆ.
6. ದೈಹಿಕ ಚಟುವಟಿಕೆಗಳನ್ನು ಮಾಡಬೇಕು
ಗರ್ಭಿಣಿಯರು ಈ ಸಮಯದಲ್ಲಿ ದೈಹಿಕ ಚಟುವಟಿಕೆಗೆ ತುಂಬಾನೇ ಮಹತ್ವ ನೀಡಬೇಕಾಗುತ್ತದೆ. ಯಾಕಂದ್ರೆ ದೈಹಿಕ ಚಟುವಟಿಕೆ ಮಾಡೋದ್ರಿಂದ ಇದು ನಿಮಗೆ ಹೆರಿಗೆಯ ಸಂದರ್ಭದಲ್ಲಿ ಸಹಾಯವಾಗುತ್ತದೆ. ಯೋಗ, ವ್ಯಾಯಾಮ ಜೊತೆಗೆ ನಡಿಗೆ ತುಂಬಾನೇ ಒಳ್ಳೆಯದು. ಆದರೆ ಇದನ್ನು ವೈದ್ಯರ ಸಲಹೆ ಪಡೆದು ಮಾಡಬೇಕು.
7. ಪ್ರಯಾಣ ಮಾಡುವುದು
ಗರ್ಭಿಣಿಯರು ಪ್ರಯಾಣ ಮಾಡುವುದರ ಬಗ್ಗೆ ವಿಶೇಷ ಗಮನ ಹರಿಸಬೇಕು. ನಮಗೆ ಇಷ್ಟ ಬಂದ ಹಾಗೆ ಬಸ್, ಕಾರು, ವಿಮಾನಗಳಲ್ಲಿ ಪ್ರಯಾಣ ಮಾಡಬಾರದು. ಇನ್ ಫ್ಯಾಕ್ಟ್ ಕೆಲವೊಂದು ವಿಮಾನಗಳು 36 ವಾರಗಳ ನಂತರ ಮಹಿಳೆಯರನ್ನು ವಿಮಾನದಲ್ಲಿ ಪ್ರಯಾಣ ಮಾಡೋದಕ್ಕೆ ಬಿಡೋದಿಲ್ಲ. ಇನ್ನೂ ನಿಮಗೆ ಬಿಪಿ, ಮಿಸ್ ಕ್ಯಾರೇಜ್, ಡಯಾಬಿಟಿಸ್, ಗರ್ಭವತಿಯಾದ ಸಂದರ್ಭದಲ್ಲಿ ರಕ್ತಸ್ರಾವದಂತಹ ಸಮಸ್ಯೆ ಇದ್ರೆ ಖಂಡಿತ ಪ್ರಯಾಣ ಮಾಡೋದನ್ನು ತಪ್ಪಿಸಬೇಕು.
8. ವೃತ್ತಿ ಜೀವನದ ಬಗ್ಗೆ ಹೆಚ್ಚು ತಲೆಕೆಡಿಸಿ ಕೊಳ್ಳಬೇಡಿ
ಗರ್ಭಿಣಿಯಾದ ಸಂದರ್ಭದಲ್ಲಿ ನಾವು ಖಂಡಿತ ವೃತ್ತಿ ಜೀವನದ ಬಗ್ಗೆ ಚಿಂತೆ ಮಾಡುತ್ತೀವಿ. ಮಕ್ಕಳಾದ ಮೇಲೆ ಮುಂದಿನ ಭವಿಷ್ಯ ಹೇಗಿರುತ್ತೋ ಏನೋ ಎಂಬ ಚಿಂತೆ ಕಾಡುವುದು ಸಹಜ. ಹಾಗಂತ ಮೂರು ಹೊತ್ತು ಈ ಬಗ್ಗೆ ಯೋಚಿಸುತ್ತಿದ್ದರೆ ಪ್ರಯೋಜನವಿಲ್ಲ. ಇದರಿಂದ ನಿಮ್ಮ ಹಾಗೂ ಮಗುವಿನ ಆರೋಗ್ಯಕ್ಕೆ ತೊಂದರೆ ಉಂಟಾಗುತ್ತದೆ. ಹೇಗೋ ಆರು ತಿಂಗಳು ಹೆರಿಗೆ ರಜೆ ಇರುತ್ತಲ್ಲ. ಈ ಸಮಯದಲ್ಲಿ ಯಾವುದೇ ರೀತಿ ಚಿಂತೆ ಇಲ್ಲದೇ ಆರಾಮಾಗಿರಿ. ಆ ಮೇಲೆ ಏನಾಗುತ್ತೆ ಎಂದು ನೋಡಿಕೊಂಡರಾಯ್ತು.
ಗರ್ಭವತಿಯಾದ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಚಿಕ್ಕ ಚಿಕ್ಕ ವಿಚಾರಗಳನ್ನು ನಿರ್ಲಕ್ಷ್ಯ ಮಾಡಬಾರದು. ಈ ಸಮಯದಲ್ಲಿ ಎರಡು ಜೀವದ ಕಾಳಜಿ ಮಾಡುವುದು ನಿಮ್ಮ ಕರ್ತವ್ಯ.



Click it and Unblock the Notifications

