Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮದುವೆಗೂ ಮೊದಲೇ ತಾಯಿಯಾಗೋದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಯಾಕೆ?
ಜಗತ್ತು ಮುಂದುವರಿದಂತೆ ಜನ ಕೂಡ ಬದಲಾಗುತ್ತಿದ್ದಾರೆ. ಹಿಂದೆಯೆಲ್ಲಾ ಮದುವೆಯಾದ ಮೇಲೆ ಮಕ್ಕಳು ಮಾಡಿಕೊಳ್ಳುತ್ತಿದ್ರು. ಆದ್ರೆ ಇತ್ತೀಚಿನ ದಿನಗಳಲ್ಲಿ ಮಗು ಹುಟ್ಟಿದ ಮೇಲೆ ಮದುವೆಯಾಗುತ್ತಾರೆ. ಕೆಲವರು ಗರ್ಭಿಣಿಯಾಗಿರೋವಾಗಲೇ ಮದುವೆಯಾಗುತ್ತಾರೆ. ಹೊರ ದೇಶಗಳಲ್ಲಿ ಇದೆಲ್ಲಾ ಕಾಮನ್ ಅನ್ನುವಂತಾಗಿದೆ. ಆದರೆ ಭಾರತದಲ್ಲಿ ಜನ ಈ ಪದ್ಧತಿಗೆ ಒಪ್ಪಿಕೊಳ್ಳಲು ಸಿದ್ಧರಾಗಿಲ್ಲ.
ಅದ್ರಲ್ಲೂ ಭಾರತದಲ್ಲಿ ಮದುವೆಗೂ ಮೊದಲು ತಾಯಿಯಾಗೋದು ಬಹು ದೊಡ್ಡ ಚಾಲೆಂಜ್ ಅಂತಾನೇ ಹೇಳಬಹುದು. ಇನ್ನೂ ಕೆಲವು ಸಾರಿ ಪ್ರೀತಿಸಿದ ಹುಡುಗ ಮೋಸ ಮಾಡಿ ಓಡಿ ಹೋಗುತ್ತಾನೆ. ಇದರಿಂದ ಕೂಡ ಮಹಿಳೆ ಸಮಸ್ಯೆ ಎದುರಿಸುತ್ತಾಳೆ. ಅಷ್ಟಕ್ಕು ಮದುವೆಗೂ ಮೊದಲು ಗರ್ಭಿಣಿಯಾಗೋದ್ರಿಂದ ಯಾವ ರೀತಿ ಸಮಸ್ಯೆಗಳು ಎದುರಾಗುತ್ತೆ ಅನ್ನೋದನ್ನು ತಿಳಿಯೋಣ.

1. ಸಮಾಜವನ್ನು ಎದುರಿಸೋದು ಕಷ್ಟವಾಗುತ್ತದೆ
ಮದುವೆಗೂ ಮೊದಲು ಕೆಲವೊಂದು ಮಹಿಳೆಯರು ತಾಯಿಯಾಗುತ್ತಾರೆ. ಕೆಲವೊಂದು ಸಲ ಇದು ಇಬ್ಬರ ಇಚ್ಛೆಯಿಂದ ನಡೆದಿರಬಹುದು. ಇನ್ನೂ ಕೆಲವು ಸಲ ಅವರ ಅರಿವಿಗೆ ಬಾರದಂತೆ ನಡೆದು ಹೋಗಿರಬಹುದು. ಇಂತಹ ಸಮಯದಲ್ಲಿ ಸಂಗಾತಿಗಳ ಮಧ್ಯೆ ಜಗಳ, ಮನಸ್ಥಾಪಗಳು ಎದುರಾಗೋದು ಸಾಮಾನ್ಯ. ಪರಿಸ್ಥಿತಿ ಯಾವ ಸ್ಥಿತಿಗೆ ತಲುಪಿ ಬಿಡುತ್ತೆ ಎಂದರೆ ಮದುವೆಯಾಗಲೇಬೇಕು ಅನ್ನೋ ಒತ್ತಡ ಇವರ ಮೇಲೆ ಹೆಚ್ಚಾಗುತ್ತದೆ. ಪೋಷಕರಂತೂ ಇದಕ್ಕೆ ಸುತಾರಾಂ ಒಪ್ಪೋದಿಲ್ಲ. ಹೊಟ್ಟೆ ಕಾಣಿಸಿಕೊಳ್ಳುವ ಮೊದಲೇ ಮದುವೆಯಾಗಬೇಕೆಂದು ಒತ್ತಡ ಹೇರುತ್ತದೆ. ಹೀಗಾಗಿ ಕೆಲವೊಂದು ಸಾರಿ ಸಮಾಜಕ್ಕೆ ಹೆದರಿ ತರಾತುರಿಯಲ್ಲಿ ಮದುವೆಯಾಗಿ ಬಿಡುತ್ತಾರೆ.
2. ಹುಟ್ಟಿದ ಮಕ್ಕಳು ಇದರಿಂದ ಸಮಸ್ಯೆ ಎದುರಿಸುತ್ತಾರೆ
ಇತ್ತೀಚಿಗೆ ಮದುವೆಗೆ ಮೊದಲು ಗರ್ಭಿಣಿಯಾಗೋದು ವಿದೇಶಗಳಲ್ಲಿ ಒಂದು ರೀತಿಯ ಟ್ರೆಂಡ್ ಆಗ್ಬಿಟ್ಟಿದೆ. ಸೆಲೆಬ್ರಿಟಿಗಳು ಕೂಡ ಇದನ್ನೇ ಫಾಲೋ ಮಾಡ್ತಿದ್ದಾರೆ. ಆದರೆ ಕೆಲ ಪಾಪದ ಹುಡುಗಿಯರು ಪ್ರೀತಿಸಿದ ಹುಡುಗನ ಮೋಸದ ಜಾಲಕ್ಕೆ ಬಿದ್ದು ಗರ್ಭಿಣಿಯಾಗುತ್ತಾರೆ. ಇಂತಹ ಸಂದರ್ಭದಲ್ಲಿ ಇತ್ತ ಹುಡುಗಿಯ ಮನೆಯವರು ಕೈ ಚೆಲ್ಲುತ್ತಾರೆ. ಹೀಗಾಗಿ ಆ ಮಹಿಳೆಯೊಬ್ಬಳೇ ಮಗುವನ್ನು ಸಾಕುವ ಜವಾಬ್ದಾರಿಯನ್ನು ಹೊತ್ತು ಕೊಳ್ಳಬೇಕಾಗುತ್ತದೆ. ಆಕೆ ದುಡಿಯುವ ಸಂಭಳಕ್ಕೆ ಮಗುವಿಗೆ ಉತ್ತಮ ಭವಿಷ್ಯ ಕಲ್ಪಿಸೋದಕ್ಕೆ ಸಾಧ್ಯವಾಗೋದಿಲ್ಲ.
ಮತ್ತೊಂದು ಪ್ರಕರಣದಲ್ಲಿ ಮದುವೆಗೆ ಮೊದಲು ಗರ್ಭಿಣಿಯಾದರೆ ಹುಡುಗಿಯ ಮನೆಯವರು ಅದೇ ಹುಡುಗನ ಜೊತೆಗೆ ಮದುವೆ ಮಾಡಿಸಿ ಕೊಡುತ್ತಾರೆ. ಆದರೆ ಹುಡುಗನಿಗೆ ಸರಿಯಾದ ಕೆಲಸ ಇರೋದಿಲ್ಲ. ಆರ್ಥಿಕವಾಗಿ ಸದೃಢರಾಗಿರೋದಿಲ್ಲ. ಕುಟುಂಬ ಸದಸ್ಯರು ಕೂಡ ಇವರ ಸಹಾಯಕ್ಕೆ ಬಾರದಿದ್ದಾಗ ಆ ಜೋಡಿಗೆ ಸಂಸಾರದ ಬಂಡಿಯನ್ನು ಸಾಗಿಸೋದೇ ಕಷ್ಟವಾಗಿ ಬಿಡುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಮೂಲ ಸೌಕರ್ಯಗಳನ್ನು ಕೊಡಿಸೋದಕ್ಕೂ ಸಾಧ್ಯವಾಗೋದಿಲ್ಲ.
3. ಭದ್ರತೆ ಇರೋದಿಲ್ಲ
ಮದುವೆಗೂ ಮೊದಲೇ ಗರ್ಭಿಣಿಯಾಗೋದು ಇತ್ತೀಚಿನ ದಿನಗಳಲ್ಲಿ ಒಂದು ರೀತಿ ಟ್ರೆಂಡ್ ಆಗ್ಬಿಟ್ಟಿದೆ. ಕೆಲವರಂತೂ ಬಯಸಿ ಬಯಸಿ ಮದುವೆಗೂ ಮೊದಲು ತಾಯಿಯಾಗುತ್ತಾರೆ. ಅವರ ಸಂಗಾತಿಯು ಇದಕ್ಕೆ ಒಪ್ಪುತ್ತಾನೆ ಹಾಗೂ ಪೋಷಕರು ಎಲ್ಲಾ ರೀತಿಯ ಸಹಾಯ ಮಾಡುತ್ತಾರೆ. ಆದರೆ ಕೆಲವು ಪ್ರಕರಣಗಳಲ್ಲಿ ಮದುವೆಗೂ ಮೊದಲು ತಾಯಿಯಾಗಿ ಸಾಕಷ್ಟು ನೋವು ತಿಂದವರನ್ನೂ ನಾವು ನೋಡಿರ್ತೀವಿ. ಅಂತಹ ಮಹಿಳೆಗೆ ಭದ್ರತೆ ಅನ್ನೋದು ಇರೋದಿಲ್ಲ.
ಮದುವೆಯ ನಂತರ ಗರ್ಭಿಣಿಯಾದರೆ ಪೋಷಕರು ಇದನ್ನು ಒಪ್ಪಿಕೊಳ್ಳುತ್ತಾರೆ. ಹಾಗೂ ಗರ್ಣಿಣಿ ಮಹಿಳೆಯನ್ನು ಮನೆಯವರೆಲ್ಲಾ ಜೋಪಾನವಾಗಿ ನೋಡಿಕೊಳ್ಳುತ್ತಾರೆ. ಗಂಡ ಸೇರಿದಂತೆ ಪ್ರತಿಯೊಬ್ಬರು ಆಕೆಯ ಬೇಕು, ಬೇಡಗಳನ್ನು ವಿಚಾರಿಸುತ್ತಾರೆ. ಮಗು ಹುಟ್ಟಿದ ಮೇಲೂ ಕೂಡ ಮೊಮ್ಮಗುವಿನ ಕಾಳಜಿಯನ್ನು ಎಲ್ಲರೂ ವಹಿಸುತ್ತಾರೆ. ಆಗ ತಾಯಿಗೂ ಯಾವ ರೀತಿಯ ಒತ್ತಡ ಇರೋದಿಲ್ಲ. ಹುಟ್ಟಿದ ಮಗುವಿನ ಮೇಲೂ ಯಾವ ರೀತಿಯ ಪರಿಣಾಮ ಬೀರೋದಿಲ್ಲ.
4. ಅವಿವಾಹಿತ ಪೋಷಕರು ಕಾನೂನಿನ ಅಡೆತಡೆಗಳನ್ನು ಎದುರಿಸಬೇಕು
ಮದುವೆಗೂ ಮೊದಲೇ ಮಗು ಮಾಡಿಕೊಳ್ಳೋದು ಜೋಡಿಗಳ ಒಪ್ಪಿಗೆಯಿಂದ ನಡೆದಿರುತ್ತದೆ. ಕೆಲವು ಜೋಡಿಗಳು ಮಗುವಾದ ಮೇಲೆ ಮದುವೆಯಾಗುತ್ತಾರೆ. ಇನ್ನೂ ಕೆಲವು ಜೋಡಿಗಳು ಮದುವೆಯಾಗದೇ ಮಕ್ಕಳ ಜೊತೆಗೆ ಒಟ್ಟಾಗಿ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಕಾನೂನಿನ ಅಡೆತಡೆಗಳನ್ನು ಅವರು ಎದುರಿಸಬೇಕಾಗುತ್ತದೆ. ಕಾನೂನಿನ ನಿಯಮಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯದಲ್ಲಿ ಬೇರೆಯದ್ದೇ ಆಗಿರುತ್ತದೆ.
ಮದುವೆಯಾಗದೇ ಜೋಡಿಗಳು ಮಕ್ಕಳ ಜೊತೆಗೆ ಸಂಸಾರ ನಡೆಸುತ್ತಿದ್ದರೆ ಆದಾಯ ತೆರಿಗೆಯ ಮಾಹಿತಿ ದಾಖಲಿಸುವಾಗ ಸಮಸ್ಯೆ ಎದುರಾಗುತ್ತದೆ. ಮೆಡಿಕಲ್ ಇನ್ಶುರೆನ್ಸ್ ದಾಖಲಾತಿ ಮಾಡಿಸೋದು ಹೇಗೆ? ಮದುವೆಯಾಗದೇ ಇರುವುದರಿಂದ ಮಕ್ಕಳು ಹಾಗೂ ಹೆಂಡತಿಯನ್ನು ದಾಖಲು ಮಾಡೋದು ಹೇಗೆ? ಇನ್ನೂ ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಪೋಷಕರ ಮಾಹಿತಿಯನ್ನು ದಾಖಲು ಮಾಡೋದಕ್ಕೆ ಸಮಸ್ಯೆ ಉಂಟಾಗುತ್ತದೆ. ಒಟ್ಟಿನಲ್ಲಿ ಹೆಜ್ಜೆ ಹೆಜ್ಜೆಗೂ ಕಾನೂನಿನ ತೊಡಕುಗಳನ್ನು ಎದುರಿಸಬೇಕಾಗುತ್ತದೆ.
ಒಟ್ಟಿನಲ್ಲಿ ಮದುವೆಯಾಗದೇ ಗರ್ಭಿಣಿಯಾಗೋದು ಎಲ್ಲಾ ರೀತಿಯಿಂದಲೂ ಸಮಸ್ಯೆಯನ್ನುಂಟು ಮಾಡುತ್ತದೆ. ಅದ್ರಲ್ಲೂ ಭಾರತದಂತಹ ಸಂಪ್ರಾದಾಯಿಕ ರಾಷ್ಟ್ರದಲ್ಲಿ ಇಂತಹ ಪದ್ಧತಿಯನ್ನು ಜನ ಒಪ್ಪಿಕೊಳ್ಳೋದಿಲ್ಲ.



Click it and Unblock the Notifications


