Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಗರ್ಭಿಣಿಯಾಗಿದ್ದಾಗ ಗರ್ಭಚೀಲ ಬೇರ್ಪಡುವುದು ( Placental Abruption) ಎಂದರೇನು? ಹೀಗಾದರೆ ಮಗು, ತಾಯಿಗೆ ಅಪಾಯಕಾರಿ ಏಕೆ?
ಹೆರಿಗೆ ಎಂಬುವುದು ಸ್ತ್ರೀಗೆ ಮರುಜನ್ಮವಿದ್ದಂತೆ ಎಂದು ಹೇಳಲಾಗುವುದು. ಗರ್ಭಾವಸ್ಥೆಯಲ್ಲಿ ಕಾಡುವ ಗಂಭೀರ ಸಮಸ್ಯೆಗಳಲ್ಲಿ ಗರ್ಭಚೀಲ ಒಡೆಯುವುದು ಕೂಡ ಆಗಿದೆ.
ಗರ್ಭಚೀಲ ಒಡೆಯುವುದು ಅಥವಾ ಬೇರ್ಪಡುವುದು ಈ ರೀತಿ ಸಂಭವಿಸುವುದು ತುಂಬಾನೇ ವಿರಳ, ಒಂದು ವೇಳೆ ಗರ್ಭಚೀಲ ಒಡೆದರೆ ಅಥವಾ ಬೇರ್ಪಟ್ಟರೆ ತಾಯಿ ಹಾಗೂ ಮಗುವಿನ ಪ್ರಾಣಕ್ಕೆ ಕುತ್ತು ತರಬಹುದು. ಗರ್ಭಚೀಲ ಗರ್ಭಕೋಶಕ್ಕೆ ಜೋಡಣೆಯಾದಂತೆ ಇರುತ್ತದೆ. ಇದರಿಂದ ಮಗುವಿಗೆ ಅವಶ್ಯಕವಾದ ಪೋಷಕಾಂಶ ಹಾಗೂ ಆಮ್ಲಜನಕ ದೊರೆಯುವುದು.
ಆದರೆ ಮೂರನೇ ತ್ರೈಮಾಸಿಕದಲ್ಲಿ ಕೆಲವರಲ್ಲಿ ಗರ್ಭಚೀಲ ಹಾಗೂ ಗರ್ಭಕೋಶ ಬೇರೆ-ಬೇರೆಯಾಗುತ್ತದೆ, ಈ ರೀತಿ ಇದ್ದಕ್ಕಿದ್ದಂತೆ ಸಂಭವಿಸುವುದರಿಂದ ಈ ರೀತಿಯಾಗಬಹುದೆಂಬ ಯಾವ ಅಂದಾಜು ವೈದ್ಯರಿಗೂ ಇರುವುದಿಲ್ಲ. ಈ ರೀತಿಯಾದಗ ಮಗುವಿಗೆ ಪೋಷಕಾಂಶ ಹಾಗೂ ಆಮ್ಲಜನಕ ಪೂರೈಕೆಯಾಗುವುದಿಲ್ಲ, ತಾಯಿಯಲ್ಲಿ ಅತ್ಯಧಿಕ ರಕ್ತಸ್ರಾವ ಉಂಟಾಗುವುದು.
ಈ ರೀತಿಯಾದಾಗ ಕೂದಲೇ ಚಿಕಿತ್ಸೆ ದೊರೆಯದಿದ್ದರೆ ತಾಯಿ ಮಗು ಬದುಕುವ ಸಾಧ್ಯತೆ ತುಂಬಾನೇ ಕಡಿಮೆ, ಅಷ್ಟು ಗಂಭೀರವಾದ ಸಮಸ್ಯೆಯಿದು. ಇದರ ಕುರಿತ ಹೆಚ್ಚಿನ ಮಾಹಿತಿ ಈ ಲೇಖನದ ಮೂಲಕ ತಿಳಿಯೋಣ:

ಗರ್ಭಚೀಲ ಒಡೆಯುತ್ತದೆ ಎಂದು ಸ್ಕ್ಯಾನಿಂಗ್‌ನಲ್ಲಿ ತಿಳಿಯುವುದೇ?
ನಿಯಮಿತ ತಪಾಸಣೆ ಮಾಡಿಸುತ್ತಿದ್ದರೂ ಗರ್ಭಚೀಲ ಬೇರ್ಪಡಬಹುದೆಂಬ ಯಾವ ಸೂಚನೆಯೂ ಇರುವುದಿಲ್ಲ, ಇದು ಇದ್ದಕ್ಕಿದ್ದಂತೆ ಉಂಟಾಗಬಹುದು. ಈ ರೀತಿಯಾದಾಗ ಈ ಲಕ್ಷಣಗಳು ಕಂಡು ಬರುತ್ತದೆ
* ರಕ್ತಸ್ರಾವ (ಕೆಲವರಲ್ಲಿ ಜನನೇಂದ್ರೀಯದಲ್ಲಿ ರಕ್ತಸ್ರಾವ ಉಂಟಾಗುವುದಿಲ್ಲ, ಇಂಟರ್ನಲ್ ಬ್ಲೀಡಿಂಗ್ ಆಗಿರುತ್ತದೆ)
* ತುಂಬಾ ಹೊಟ್ಟೆನೋವು
* ಸೊಂಟ ನೋವು
ಈ ರೀತಿಯಾದಾಗ ತುಂಬಾನೇ ರಕ್ತಸ್ರಾವವಾಗುವುದು, ಅಲ್ಲದೆ ಗರ್ಭಗೋಶದೊಳಗಡೆ ರಕ್ತ ಹೆಪ್ಪಗಟ್ಟುವ ಸಾಧ್ಯತೆ ಕೂಡ ಇದೆ. ಇದರ ಲಕ್ಷಣಗಳು ಎಲ್ಲರಲ್ಲೂ ಒಂದೇ ರೀತಿ ಇರುವುದಿಲ್ಲ, ಕೆಲವರಲ್ಲಿ ಗರ್ಭಚೀಲ ಸಂಪೂರ್ಣ ಬೇರ್ಪಟ್ಟಿದ್ದರೂ ಯಾವುದೇ ರಕ್ತಸ್ರಾವ ಇರುವುದಿಲ್ಲ.
ಕೆಲವರಲ್ಲಿ ಗರ್ಭಚೀಲ ನಿಧಾನಕ್ಕೆ ಬೇರ್ಪಡುತ್ತದೆ, ಆಗ ರಕ್ತಸ್ರಾವ ಕಂಡು ಬರುವುದು. ಮಗುವಿನ ಬೆಳವಣಿಗೆಯಲ್ಲಿ ತೊಂದರೆಯಿದ್ದರೆ, ಕಡಿಮೆ ನೀರಿನಾಂಶ (amniotic fluid)ಅಥವಾ ಇತರ ಅಂಶಗಳಿಂದಾಗಿ ಉಂಟಾಗುವುದು.

ಕಾರಣಗಳೇನು?
ಗರ್ಭಚೀಲ ಬೇರ್ಪಡಲು ನಿಖರ ಕಾರಣವೇನು ಎಂಬುವುದು ವೈದ್ಯ ಲೋಕಕ್ಕೆ ಇದುವರೆಗೆ ತಿಳಿದು ಬಂದಿಲ್ಲ. ಹೊಟ್ಟೆಯ ಒಳಗಡೆ ಏನಾದರೂ ಸಮಸ್ಯೆಯಿದ್ದರೆ ಅಥವಾ ಬಿದ್ದರೆ , ಆಘಾತ ಉಂಟಾಗಿದ್ದರೆ ಅಥವಾ ಹೊಟ್ಟೆಯಲ್ಲಿ ನೀರಿನಂಶ ಕಡಿಮೆಯಾದರೆ ಈ ಹಿಂದೆ ಗರ್ಭಪಾತವಾಗಿದ್ದರೆ ಈ ರೀತಿ ಆಗುವ ಸಾಧ್ಯತೆ ಇದೆ. ಇನ್ನು 35 ವರ್ಷ ಮೇಲ್ಪಟ್ಟು ಗರ್ಭಧಾರಣೆಯಾಗಿದ್ದರೆ ಕೂಡ ಈ ರೀತಿ ಸಾಧ್ಯತೆ ಇದೆ.
ಯಾರಿಗೆ ಗರ್ಭಿಣಿಯಾಗಿದ್ದಾಗ ಈ ಸಮಸ್ಯೆಯ ಅಧಿಕ
* ಈ ಮೊದಲು ಗರ್ಭಧರಿಸಿದಾಗ ಗರ್ಭಚೀಲ ಬೇರ್ಪಟ್ಟಿದ್ದರೆ
* ಹೈಪರ್‌ಟೆನ್ಷನ್
* ಹೊಟ್ಟೆಗೆ ಪೆಟ್ಟಾಗಿದ್ದರೆ
* ಧೂಮಪಾನ
* ಗರ್ಭಧಾರಣೆವೇಳೆ ಕೊಕೈನ್ ಸೇವಿಸಿದ್ದರೆ
* ಗರ್ಭಕೋಶದ ಒಳಗಡೆ ಸೋಂಕು ಇದ್ದರೆ
* ವಯಸ್ಸಾಗಿ ಗರ್ಭಧಾರಣೆಯಾಗಿದ್ದರೆ

ಗರ್ಭಚೀಲ ಬೇರ್ಪಟ್ಟಿದ್ದರೆ
* ಅತ್ಯಧಿಕ ರಕ್ತಸ್ರಾವವಾಗುವುದು
* ರಕ್ತ ಹೆಪ್ಪುಗಟ್ಟುವುದು
* ಇವರಿಗೆ ಕೂಡಲೇ ರಕ್ತ ನೀಡಬೇಕು.
* ಕಿಡ್ನಿ ವೈಫಲ್ಯವಾಗಬಹುದು
* ಕೆಲವರಿಗೆ ರಕ್ತಸ್ರಾವ ನಿಲ್ಲುವುದೇ ಇಲ್ಲ

ಮಗುವಿಗೆ ಏನೆಲ್ಲಾ ತೊಂದರೆಯಾಗುವುದು
* ಮಗುವಿಗೆ ಪೋಷಕಾಂಶ ಮತ್ತು ಆಮ್ಲಜನಕ ದೊರೆಯುವುದಿಲ್ಲ
* ಅವಧಿಪೂರ್ವ ಹೆರಿಗೆಯಾಗುವುದು
* ಮಗು ಹುಟ್ಟುವಾಗಲೇ ಸಾವನ್ನಪ್ಪಿರುತ್ತದೆ.
ತಡೆಗಟ್ಟಬಹುದೇ?
ಗರ್ಭಚೀಲ ಬೇರ್ಪಡುವುದನ್ನು ತಡೆಗಟ್ಟಲು ಸಾಧ್ಯವಿಲ್ಲ. ಆದರೆ ಕೆಲವೊಂದು ಮುನ್ನೆಚ್ಚರಿಕೆವಹಿಸಿದರೆ ಈ ರೀತಿಯ ಅಪಾಯ ತಡೆಗಟ್ಟಬಹುದು. ಹೊಟ್ಟೆಗೆ ಪೆಟ್ಟಾಗಬಾರದು, ಬೈಕ್‌ನಲ್ಲಿ ಹೋಗುವಗ ಜಾಗ್ರತೆ.
ಈ ಮೊದಲು ಗರ್ಭಚೀಲ ಬೇರ್ಪಟ್ಟಿದ್ದರೆ ಮತ್ತೊಂದು ಗರ್ಭಧಾರಣೆಗೆ ಪ್ಲ್ಯಾನ್ ಮಾಡುವ ಮುನ್ನ ವೈದ್ಯರ ಸಲಹೆ ಪಡೆಯಿರಿ.



Click it and Unblock the Notifications
