Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಆಕರ್ಷಕ, ಆರೋಗ್ಯಕರ ಮೈ ಮಾಟಕ್ಕಾಗಿ ಗರ್ಭಿಣಿಯರಿಗೆ ಗರ್ಭಿಣಿಯರಿಗೆ ಸೋನಂ ಕಪೂರ್ ನೀಡಿರುವ ಈ ಟಿಪ್ಸ್ ತುಂಬಾನೇ ಹೆಲ್ಪ್ ಆಗಬಹುದು
ಯಾವಾಗಲೂ ಸೆಲೆಬ್ರಿಟಿಗಳು ವಿಷಯ ತಿಳಿದುಕೊಳ್ಳಲು ಸಾಮಾನ್ಯ ಜನರಿಗೆ ತುಂಬಾನೇ ಕುತೂಹಲ ಇರುತ್ತದೆ. ಅದರಲ್ಲೂ ಎಷ್ಟೋ ಸೆಲೆಬ್ರಿಟಿಗಳು ಮಗುವಾದ ಮೇಲೂ ತಮ್ಮ ಮೈ ಮಾಟ ಕಾಪಾಡಿಕೊಂಡು ಬಂದಿರುವುದರಿಂದ ಅವರನ್ನೆಲ್ಲಾ ನೋಡುವಾಗ ಅವರ ಆಹಾರ ಶೈಲಿ ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ.

ಏಕೆಂದರೆ ಹೆರಿಗೆಯ ಬಳಿಕ ಹೆಚ್ಚಿನವರು ಮೊದಲಿನ ಮೈ ಮಾಟ ಕಳೆದುಕೊಳ್ಳುತ್ತಾರೆ, ಏನೇ ಮಾಡಿದರೂ ಈ ಹೊಟ್ಟೆ ಕರಗುತ್ತಿಲ್ಲ ಎಂದ ಹೇಳುತ್ತಾರೆ. ಇನ್ನು ಕೆಲವರು ದಪ್ಪಗಾಗುತ್ತೇನೆ ಎಂದು ಸರಿಯಾಗಿ ಊಟ ಮಾಡುವುದಿಲ್ಲ, ಅದು ತಪ್ಪು, ಏಕೆಂದರೆ ನಾವು ಮಗುವಿಗೆ ಎದೆ ಹಾಲುಣಿಸುವುದರಿಂದ ಹೆಚ್ಚಿನ ಪೌಷ್ಠಿಕಾಂಶದ ಆಹಾರ ಬೇಕಾಗಿರುತ್ತದೆ, ಆದ್ದರಿಂದ ಪೋಷಕಾಂಶವಿರುವ ಆಹಾರ ಸೇವಿಸಬೇಕು.
ಇದೀಗ ಬಾಲಿವುಡ್ ಸೆಲೆಬ್ರಿಟಿ ಸೋನಂ ಕಪೂರ್ ತಮ್ಮ ಗರ್ಭಾವಸ್ಥೆಯಲ್ಲಿ ಪಾಲಿಸಿದ ಆಹಾರ ಶೈಲಿ ಹಾಗೂ ದೇಹದ ಆರೈಕೆ ಬಗ್ಗೆ ತುಂಬಾ ವಿವರವಾಗಿ ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದು ಅವರ ಸಲಹೆ ನಿಮಗೂ ಸಹಕಾರಿಯಾಗಬಹುದು ನೋಡಿ:

ಮಲಬದ್ಧತೆ ಸಮಸ್ಯೆಯಿದ್ದರೆ
ಗರ್ಭಾವಸ್ಥೆಯಲ್ಲಿ ಫಾಲಿಕ್ ಆಮ್ಲ, ಕಬ್ಬಿಣದಂಶ, ಕ್ಯಾಲ್ಸಿಯಂ, ವಿಟಮನ್ ಡಿ, ಒಮೆಗಾ 3, ವಿಟಮಿನ್ ಬಿ ಮತ್ತು ವಿಟಮಿನ್ ಸಿ ಹಾಗೂ ಅತ್ಯುತ್ತಮವಾದ ಪ್ರೊಬಯೋಟಿಕ್ ಅವಶ್ಯಕ.
ಅಲ್ಲದೆ ಗರ್ಭಾವಸ್ಥೆಯಲ್ಲಿ ಮಲಬದ್ಧತೆ ಸಮಸ್ಯೆ ಕಾಡುತ್ತದೆ, ಆದ್ದರಿಂದ ನಾರಿನಂಶದ ಆಹಾರದ ಜೊತೆಗೆ ಆಯುರ್ವೇದ ಬಾಲಾದಿ ಚೂರ್ಣ ತೆಗೆದುಕೊಳ್ಳುತ್ತಿದ್ದರು. ಇದನ್ನು ಹಾಲು ಅಥವಾ ತುಪ್ಪದ ಜೊತೆಗೆ ಸಂಜೆ ಸೇವಿಸುತ್ತಿದ್ದರು. ಇದನ್ನು ಹಿಂದಿನ ಕಾಲದಿಂದಲೂ ಜನರು ಬಳಸುತ್ತಿದ್ದಾರೆ.
ಬೆಳಗ್ಗೆ ಬಿಸಿ ನೀರಿಗೆ ಒಂದು ಚಮಚ ಶುದ್ಧ ತುಪ್ಪ ಹಾಕಿ, ನಿಂಬೆ ರಸ ಸೇರಿಸಿ ಕುಡಿಯುತ್ತಿದ್ದರು.

ಗರ್ಭಾವಸ್ಥೆಯಲ್ಲಿ ತೆಗೆದುಕೊಳ್ಳುತ್ತಿದ್ದ ಆಹಾರಗಳು
ತರಕಾರಿಗಳು: ಕ್ಯಾರೆಟ್, ಸಿಹಿ ಗೆಣಸು, ಸಿಹಿ ಕುಂಬಳಕಾಯಿ, ಪಾಲಾಕ್, ಬಟಾಣಿ, ಕೆಂಪು ದುಂಡು ಮೆಣಸು, ಟೊಮೆಟೊ ಇವುಗಳನ್ನು ಬೇಯಿಸಿ ಸೇವಿಸುತ್ತಿದ್ದರು.
ಹಣ್ಣಣಗಳು: ಕ್ಯಾಂಟಾಲ್ಯೂಪೆ, ಹನಿಡಿವ್ಯೂ, ಮಾವಿನ ಹಣ್ಣು, ಬಾಳೆಹಣ್ಣು, ಏಪ್ರಿಕಾಟ್, ಕಿತ್ತಳೆಹಣ್ಣು, ದ್ರಾಕ್ಷಿ
ಹಾಲಿನ ಉತ್ಪನ್ನಗಳು
ಲೋ ಫ್ಯಾಟ್ ಹಾಲು, ಒಸರು, ಸೋಯಾ ಹಾಲು, ತೆಂಗಿನಕಾಯಿ ಹಾಲು, ಪನ್ನೀರ್, ಮಜ್ಜಿಗೆ ಈ ಬಗೆಯ ಆಹಾರ ಬಳಸುತ್ತಿದ್ದರು.
ಧಾನ್ಯಗಳು: ಗ್ಲುಟೇನ್ ಫ್ರೀ ಧಾನ್ಯಗಳನ್ನು ಬೇಯಿಸಿ ಸೇವಿಸುತ್ತಿದ್ದರು.
ಪ್ರೊಟೀನ್: ಬೀನ್ಸ್, ದಾಲ್, ನಟ್ಸ್, ಡ್ರೈ ಫ್ಯೂಟ್ಸ್, ಚಿಕನ್, ಕುರಿ ಮಾಂಸ, ಸಾಲಮೋನ್, ಬೂತಾಯಿ ಮುಂತಾದವುಗಳು
ದ್ರವ: ತುಂಬಾ ನೀರು ಕುಡಿಯುತ್ತಿದ್ದರು
ಗರ್ಭಿಣಿಯರು ಕೆಫೀನ್ ಪದಾರ್ಥಗಳಾದ ಟೀ ಕುಡಿಯುವುದು, ಮದ್ಯಪಾನ, ಧೂಮಪಾನ ಒಳ್ಳೆಯದಲ್ಲ ಎಂದು ಸಲಹೆ ನೀಡಿದ್ದಾರೆ.

ಪ್ರೀನಟಲ್ ಮಸಾಜ್
ಗರ್ಭಾವಸ್ಥೆಯಲ್ಲಿ ಪರಿಣಿತರ ಬಳಿ ಮಸಾಜ್ ಮಾಡಿಸುತ್ತಿದ್ದೆ.
ಪಾಟ್ಲಿ ಮಸಾಜ್, ಸ್ವೀಡಿಷ್, ಶಿರೋಧರಾ ಈ ಬಗೆಯ ಮಸಾಜ್ ಗರ್ಭಿಣಿಯರಿಗೆ ಒಳ್ಳೆಯದು.
ಅಲ್ಲದೆ ಪಿಗ್ಮೆಂಟೆಷನ್ ತಡೆಗಟ್ಟಲು ಹೊರಗಡೆ ಹೋಗುವಾಗ ಸನ್‌ಸ್ಕ್ರಿನ್ ಹಚ್ಚಿದರೆ ಒಳ್ಳೆಯದು ಎಂದು ಹೇಳಿದ್ದಾರೆ.

ಹಲ್ಲು ನೋವು
ಕೆಲವರಿಗೆ ಗರ್ಭಾವಸ್ಥೆಯಲ್ಲಿ ಹಲ್ಲುಗಳು ಸಡಿಲವಾಗುತ್ತೆ. ಈ ಸಮಸ್ಯೆ ಇರುವವರಿಗೆ ಆಯಿಲ್ ಪುಲ್ಲಿಂಗ್ ಮಾಡಿದರೆ ಒಳ್ಳೆಯದು ಎಂದು ಟಿಪ್ಸ್ ನೀಡಿದ್ದಾರೆ. ಸಾಸಿವೆಯೆಣ್ಣೆ, ತೆಂಗಿನೆಣ್ಣೆ, ಆಲೀವ್ ಎಣ್ಣೆ ಮಿಕ್ಸ್ ಮಾಡಿ ಆಯಿಲ್ ಪುಲ್ಲಿಂಗ್ ಮಾಡಿದರೆ ಒಳ್ಳೆಯದು ಎಂಬುವುದಾಗಿ ಹೇಳಿದ್ದಾರೆ.



Click it and Unblock the Notifications
