For Quick Alerts
ALLOW NOTIFICATIONS  
For Daily Alerts

ಗರ್ಭದಲ್ಲಿರುವ ಭ್ರೂಣದ ಆರೋಗ್ಯ-ಅನಾರೋಗ್ಯದ ಬಗ್ಗೆ ತಿಳಿಯುವುದು ಹೇಗೆ? ಇಲ್ಲಿದೆ ಸೂಚನೆಗಳು

|

ಗರ್ಭದಲ್ಲಿರುವ ಮಗು ಆರೋಗ್ಯವಂತವಾಗಿ ಬೆಳೆದು ಸುಖಕರ ಹೆರಿಗೆಯಾಗಲಿ ಎಂದೇ ಪ್ರತಿ ತಾಯಿಯೂ ಬಯಸುತ್ತಾಳೆ. ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣದ ಬೆಳವಣಿಗೆಯ ಯಾವುದೇ ಹಂತದಲ್ಲಿ ಕೊಂಚವೂ ತೊಂದರೆಯಾದರೆ ಮಗು ಮತ್ತು ತಾಯಿಯ ಆರೋಗ್ಯಕ್ಕೆ ಅಪಾಯವಾಗಬಹುದು ಹಾಗೂ ಅನಿವಾರ್ಯವಾಗಿ ಗರ್ಭವನ್ನು ತೆಗೆಸಬೇಕಾಗಿ ಬರುವ ಅತಿ ದುಃಖಕರ ನಿರ್ಣಯವನ್ನು ಕೈಗೊಳ್ಳಬೇಕಾಗಿ ಬರಬಹುದು.

ಆದರೆ ಹೀಗಾಗುವ ಮುನ್ನವೇ ತಾಯಿಯ ದೇಹದಲ್ಲಿ ಕೆಲವಾರು ಸೂಚನೆಗಳು ಕಂಡುಬರುತ್ತವೆ. ಈ ಸೂಚನೆಗಳ ಬಗ್ಗೆ ಅರಿವಿಲ್ಲದೇ ಇದ್ದರೆ ಅಥವಾ ಕಡೆಗಣಿಸಿದರೆ ಅಪಾಯ ಹೆಚ್ಚುತ್ತಲೇ ಹೋಗಿ ಕಡೆಗೆ ಭಾರೀ ನಿರಾಶೆ ಎದುರಾಗಬಹುದು. ಸಾಮಾನ್ಯವಾಗಿ ಗರ್ಭ ನಿಂತ ಇಪ್ಪತ್ತು ವಾರಗಳ ಒಳಗೇ ಈ ಸೂಚನೆಗಳು ಕಂಡುಬರುತ್ತವೆ ಹಾಗೂ ಈ ಅವಧಿಯಲ್ಲಿ ಗರ್ಭಿಣಿ ಅತಿ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗಿ ಬರುತ್ತದೆ. ಗರ್ಭದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಸೂಚಿಸುವ ಕೆಲವು ಪ್ರಮುಖ ಸೂಚನೆಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ.

ಅದಕ್ಕೂ ಮೊದಲು ಗರ್ಭದಲ್ಲಿರುವ ಭ್ರೂಣ ಆರೋಗ್ಯಕರ ಬೆಳವಣಿಗೆಯನ್ನು ಪಡೆಯುತ್ತಿದೆ ಎಂಬುದರ ಸೂಚನೆಗಳು ಯಾವುವು ಎಂಬುದನ್ನು ನೋಡೋಣ:

ಪ್ರತಿ ಪೋಷಕರರೂ ಆರೋಗ್ಯವಂತ ಮಗುವನ್ನು ಪಡೆಯಲು ಬಯಸುತ್ತಾರೆ ಮತ್ತು ಅದಕ್ಕಾಗಿ ಹೆಚ್ಚಿನ ಪ್ರಯತ್ನ ಮಾಡುತ್ತಾರೆ. ಆದರೆ, ಮಾಹಿತಿಯ ಕೊರತೆಯು ಕೆಲವೊಮ್ಮೆ ಅನಿರೀಕ್ಷಿತ ಫಲಿತಾಂಶಕ್ಕೆ ಕಾರಣವಾಗಬಹುದು. ಆದ್ದರಿಂದ, ಆರೋಗ್ಯಕರ ಭ್ರೂಣದ ಚಿಹ್ನೆಗಳನ್ನು ಅರ್ಥಮಾಡಿಕೊಳ್ಳುವುದು ನಿರ್ಣಾಯಕವಾಗುತ್ತದೆ. ಗರ್ಭಧಾರಣೆಯ ಆರಂಭಿಕ ಹಂತಗಳಲ್ಲಿ ಆರೋಗ್ಯವಂತ ಮಗುವಿನ ಸೂಚನೆಗಳು ಹೀಗಿರುತ್ತವೆ:

1. ಚಲನೆ

1. ಚಲನೆ

ಗರ್ಭದಲ್ಲಿ ಮಗುವಿನ ಚಲನೆ ಸುಮಾರು ಐದನೆಯ ತಿಂಗಳ ಬಳಿಕ ಅನುಭವಕ್ಕೆ ಬರುತ್ತದೆ. ವೈದ್ಯಕೀಯವಾಗಿ ಮೊದಲ ಚಲನೆಯನ್ನು ಕ್ವಿಕನಿಂಗ್ ಎಂದು ಕರೆಯುತ್ತಾರೆ. ಆರು ತಿಂಗಳ ಬಳಿಕ ಈ ಚಲನೆ ಹೆಚ್ಚು ಸ್ಪಷ್ಟವಾಗುತ್ತದೆ. ಏಳನೆಯ ತಿಂಗಳಲ್ಲಿ ಶಿಶು ಬೆಳಕು, ಶಬ್ದ ಹಾಗೂ ನೋವುಗಳಿಗೆ ಸ್ಪಂದಿಸುವುದನ್ನು ತಾಯಿಯು ಅನುಭವಿಸುತ್ತಾಳೆ. ಎಂಟನೆಯ ತಿಂಗಳಲ್ಲಿ ಮಗು ಕೊಂಚವೇ ಮಗ್ಗುಲು ಬದಲಿಸುವುದು ಹಾಗೂ ಕಾಲನ್ನು ಒದೆಯುವುದು ಮಾಡುವುದರ ಅನುಭವವನ್ನೂ ಪಡೆಯುತ್ತಾಳೆ. ಒಂಭತ್ತನೆಯ ತಿಂಗಳಲ್ಲಿ ಮಗುವಿನ ಗಾತ್ರ ಹೆಚ್ಚಾಗಿರುವ ಕಾರಣ ಅಷ್ಟು ಹೆಚ್ಚಾದ ಚಲನೆಯ ಅನುಭವವಾಗುವುದಿಲ್ಲ. ಈ ಸೂಚನೆಗಳು ಕಂಡುಬಂದರೆ ಗರ್ಭದಲ್ಲಿರುವ ಭ್ರೂಣ ಆರೋಗ್ಯಕರ ಬೆಳವಣಿಗೆ ಪಡೆಯುತ್ತಿದೆ ಎಂದು ತಿಳಿದುಕೊಳ್ಳಬಹುದು.

2. ಸಾಮಾನ್ಯ ಬೆಳವಣಿಗೆ

2. ಸಾಮಾನ್ಯ ಬೆಳವಣಿಗೆ

ಭ್ರೂಣದ ಬೆಳವಣಿಗೆಯನ್ನು ಅಳೆಯಲು ಕೆಲವಾರು ಮಾರ್ಗಗಳಿವೆ. ನಿಮ್ಮ ಮಗುವಿನ ಆರೋಗ್ಯ ಮತ್ತು ಬೆಳವಣಿಗೆಯನ್ನು ಗಮನದಲ್ಲಿರಿಸಲು ನಿಮ್ಮ ವೈದ್ಯರು ಅಲ್ಟ್ರಾಸೌಂಡ್ ಮಾಡುತ್ತಾರೆ. ಸಾಮಾನ್ಯವಾಗಿ, ಭ್ರೂಣವು ಪ್ರತಿ ತಿಂಗಳೂ 2 ಇಂಚುಗಳಷ್ಟು ಬೆಳೆಯುತ್ತದೆ. ಆದ್ದರಿಂದ, ಏಳನೇ ತಿಂಗಳ ಹೊತ್ತಿಗೆ, ನಿಮ್ಮ ಮಗುವಿನ ಗಾತ್ರ ಸುಮಾರು 14 ಇಂಚು ಪಡೆದಿರುತ್ತದೆ. ಮೂರನೇ ತ್ರೈಮಾಸಿಕದಲ್ಲಿ, ಆರೋಗ್ಯಕರ ಭ್ರೂಣವು ಪ್ರತಿ ವಾರ 700 ಗ್ರಾಂಗಳಷ್ಟು ಭಾರ ಹೆಚ್ಚಿಸಿಕೊಳ್ಳುತ್ತದೆ. ಸಾಮಾನ್ಯವಾಗಿ, ಒಂಬತ್ತನೇ ತಿಂಗಳ ಹೊತ್ತಿಗೆ, ಭ್ರೂಣವು ಸುಮಾರು 3 ಕಿಲೋಗ್ರಾಂಗಳಷ್ಟು ತೂಗುತ್ತದೆ ಮತ್ತು 18 ರಿಂದ 20 ಇಂಚು ಉದ್ದವಿರುತ್ತದೆ. ಇವೆಲ್ಲವೂ ಗರ್ಭದಲ್ಲಿರುವ ಆರೋಗ್ಯಕರ ಭ್ರೂಣದ ಲಕ್ಷಣಗಳಾಗಿವೆ.

3. ಹೃದಯದ ಬಡಿತ

3. ಹೃದಯದ ಬಡಿತ

ಗರ್ಭಧಾರಣೆಯ ಐದನೇ ವಾರದಲ್ಲಿ ಮಗುವಿನ ಹೃದಯ ಬಡಿಯಲು ಪ್ರಾರಂಭಿಸುತ್ತದೆ. ಇಂದಿನ ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳ ಮೂಲಕ ಭ್ರೂಣದ ಪರೀಕ್ಷೆಯನ್ನು ಮೊದಲ ತ್ರೈಮಾಸಿಕದ ಕೊನೆಯಲ್ಲಿ ನಡೆಸಲಾಗುತ್ತದೆ. ನಿಮ್ಮ ಮಗುವಿನ ಹೃದಯ ಆರೋಗ್ಯವನ್ನು ದೃಢೀಕರಿಸಲು, ನಿಮ್ಮ ವೈದ್ಯರು ಒತ್ತಡರಹಿತ ಪರೀಕ್ಷೆಯನ್ನು ನಡೆಸಬಹುದು. ಈ ಪರೀಕ್ಷೆಯಲ್ಲಿ ಭ್ರೂಣದ ಹೃದಯ ಬಡಿತವನ್ನು ಪತ್ತೆ ಮಾಡಲಾಗುತ್ತದೆ ಮತ್ತು ಏನಾದರೂ ಇರುವ ಸಂಭವವಿದ್ದರೆ ಎದುರಾಗುವ ಅಪಾಯಗಳ ಮುನ್ಸೂಚನೆಯನ್ನು ನೀಡುತ್ತದೆ. ಪರ್ಯಾಯವಾಗಿ, ಕೆಲವು ವೈದ್ಯರು ನಿಮ್ಮ ಹೊಟ್ಟೆಯನ್ನು ಸ್ಪರ್ಶಿಸುವ ಮೂಲಕ ಹೃದಯ ಬಡಿತವನ್ನು ಎಣಿಸಬಹುದು. ಆರೋಗ್ಯಕರ ಹೃದಯ ಬಡಿತವು ನಿಮಿಷಕ್ಕೆ 110 ರಿಂದ 160 ಬಡಿತಗಳವರೆಗೆ ಇರುತ್ತದೆ.

4. ಹೆರಿಗೆಗೆ ಮುನ್ನ ಭ್ರೂಣದ ಸ್ಥಾನ

4. ಹೆರಿಗೆಗೆ ಮುನ್ನ ಭ್ರೂಣದ ಸ್ಥಾನ

ಒಂಭತ್ತನೆಯ ತಿಂಗಳಲ್ಲಿ ಮಗುವಿನ ಚಲನೆ ಹೆಚ್ಚೂ ಕಡಿಮೆ ಇಲ್ಲವಾಗುತ್ತಾ ಕಡೆಯ ದಿನಗಳಲ್ಲಿ ನಿಂತೇ ಹೋಗುತ್ತದೆ. ಸಾಮಾನ್ಯವಾಗಿ ಆರೋಗ್ಯಕರ ಮಗು ತಲೆ ಮೊದಲಾಗಿ ಹೊರಬರುವ ಸ್ಥಿತಿಯಲ್ಲಿ ಪವಡಿಸಿರುತ್ತದೆ.

5. ಗರ್ಭಿಣಿಯ ತೂಕದಲ್ಲಿ ಹೆಚ್ಚಳ ಮತ್ತು ಉಬ್ಬುವ ಹೊಟ್ಟೆ

5. ಗರ್ಭಿಣಿಯ ತೂಕದಲ್ಲಿ ಹೆಚ್ಚಳ ಮತ್ತು ಉಬ್ಬುವ ಹೊಟ್ಟೆ

ಗರ್ಭಾವಸ್ಥೆಯಲ್ಲಿ ತೂಕ ನಿಧಾನವಾಗಿ ಏರುತ್ತಾ ಹೋಗುವುದು ಆರೋಗ್ಯಕರ ಬೆಳವಣಿಗೆಯ ಲಕ್ಷಣವಾಗಿದೆ. ತೂಕದಲ್ಲಿ ಏರಿಕೆ ಗರ್ಭಧಾರಣೆಯ 12-15 ನೇ ವಾರಗಳ ಬಳಿಕವೇ ಕಾಣಿಸಿಕೊಳ್ಳತೊಡಗುತ್ತದೆ. ಗರ್ಭಿಣಿಯ ದೇಹದ ತೂಕವನ್ನು ನಿಯಮಿತವಾಗಿ ಪರಿಶೀಲಿಸಿ ದಾಖಲಿಸಿಕೊಳ್ಳುವ ಮೂಲಕ ವೈದ್ಯರು ಮಗುವಿನ ಬೆಳವಣಿಗೆಯ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಅಲ್ಲದೇ ತಿಂಗಳುಗಳು ಕಳೆದಂತೆ ಹೊಟ್ಟೆಯ ಗಾತ್ರವೂ ಹೆಚ್ಚುತ್ತಾ ಹೋಗುವುದು ಆರೋಗ್ಯಕರ ಬೆಳವಣಿಗೆಯ ಸ್ಪಷ್ಟ ಲಕ್ಷಣವಾಗಿದೆ.

ಅನಾರೋಗ್ಯಕರ ಭ್ರೂಣದ ಲಕ್ಷಣಗಳು

ಅನಾರೋಗ್ಯಕರ ಭ್ರೂಣದ ಲಕ್ಷಣಗಳು

ಸುಮಾರು ಐದನೇ ತಿಂಗಳಲ್ಲಿ, ಭ್ರೂಣವು ಧ್ವನಿ, ಬೆಳಕು ಮತ್ತು ನೋವಿನ ಕಡೆಗೆ ಹೆಚ್ಚು ಪ್ರತಿಕ್ರಿಯಾತ್ಮಕವಾಗುತ್ತದೆ. ಇದು ನೇರವಾಗಿ ಅಥವಾ ಪರೋಕ್ಷವಾಗಿ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಬಹುದಾದ ವಿವಿಧ ಬೆದರಿಕೆಗಳಿಗೆ ಒಡ್ಡಿಕೊಳ್ಳುವ ಅವಧಿಯಾಗ���ದೆ. ಸಮಸ್ಯೆಗಳು ಬಾಹ್ಯವಾಗಿ ಗೋಚರಿಸಿದರೆ, ಅವುಗಳನ್ನು ಎದುರಿಸಲು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಬಹುದು. ಆದರೆ ನಿಮ್ಮ ಗರ್ಭದೊಳಗಿನ ಅನಾರೋಗ್ಯಕರ ಭ್ರೂಣವನ್ನು ನೀವು ಹೇಗೆ ಗುರುತಿಸುತ್ತೀರಿ?

ಉತ್ತರ ಸರಳವಾಗಿದೆ, ದೇಹವೇ ಕೆಲವು ಸೂಚನೆಗಳನ್ನು ನೀಡುತ್ತದೆ. ಇವುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಅಷ್ಟೇ.

1. ಅಸಹಜ ಗರ್ಭಾಶಯದ ಗಾತ್ರ

1. ಅಸಹಜ ಗರ್ಭಾಶಯದ ಗಾತ್ರ

ಗರ್ಭಿಣಿಯ ಗರ್ಭಾಶಯವು ಸಹಜಗತಿಯಲ್ಲಿ ಬೆಳೆಯುತ್ತಿದೆಯೇ ಎಂಬುದನ್ನು ವೈದ್ಯರು ಕೆಲವು ಸರಳ ಪರೀಕ್ಷೆಗಳ ಮೂಲಕ ಪರೀಕ್ಷಿಸುತ್ತಾರೆ. ಇದರಲ್ಲಿ ಮುಖ್ಯವಾದುದು ಫಂಡಲ್ ಹೈಟ್ (fundal height) ಅಥವಾ ಗರ್ಭಾಶಯದ ಎತ್ತರ. ಇದನ್ನು ಅಳೆಯಲು ವೈದ್ಯರು ನಿಮ್ಮನ್ನು ಮಲಗಲು ಕೇಳಿಕೊಳ್ಳುತ್ತಾರೆ ಮತ್ತು ಟೇಪ್ ಅಳತೆಯನ್ನು ಬಳಸಿ, ಗರ್ಭಾಶಯದ ಮೇಲ್ಭಾಗದಿಂದ ಕಿಬ್ಬೊಟ್ಟೆಯ ಮೂಳೆಯವರೆಗೆ ಉದ್ದವನ್ನು ಅಳೆಯಲಾಗುತ್ತದೆ. ಸಾಮಾನ್ಯವಾಗಿ, 16 ವಾರಗಳ ಗುರುತಿಸುವಿಕೆಯ ಬಳಿಕ ಮೂಲಭೂತ ಎತ್ತರವು ಗರ್ಭಧಾರಣೆಯ ಪ್ರಗತಿಗೆ ಹೊಂದಿಕೆಯಾಗುತ್ತದೆ. ಒಂದು ವೇಳೆ ನಿಮ್ಮ ಗರ್ಭಾಶಯದ ಎತ್ತರವು ಅದು ಇರಬೇಕಾದಷ್ಟು ಇಲ್ಲದಿದ್ದರೆ, ಅದು ನಿಮ್ಮ ಗರ್ಭಧಾರಣೆಯ ಸಮಸ್ಯೆಯನ್ನು ಸೂಚಿಸುತ್ತದೆ. ಕಾರಣ ಆಮ್ನಿಯೋಟಿಕ್ ದ್ರವ ಅಥವಾ ಗರ್ಭಾಶಯವನ್ನು ಸುತ್ತುವರೆದಿರುವ ದ್ರವ ಹೆಚ್ಚು ಅಥವಾ ಕಡಿಮೆ ಇರಬಹುದು. ಕೆಟ್ಟ ಪರಿಸ್ಥಿತಿಯಲ್ಲಿ ಭ್ರೂಣವು ಸರಿಯಾದ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿಲ್ಲ ಎಂದು ವೈದ್ಯರು ತೀರ್ಮಾನಿಸುತ್ತಾರೆ..

2. ಹೃದಯದ ಬಡಿತ ಕ್ಷೀಣವಾಗಿರುವುದು ಅಥವಾ ಇಲ್ಲದೇ ಇರುವುದು

2. ಹೃದಯದ ಬಡಿತ ಕ್ಷೀಣವಾಗಿರುವುದು ಅಥವಾ ಇಲ್ಲದೇ ಇರುವುದು

ಐದನೆಯ ವಾರದಲ್ಲಿ ಭ್ರೂಣದ ಹೃದಯದ ಬಡಿತ ಕ್ಷೀಣವಾಗಿಯಾದರೂ ಸರಿ, ಪ್ರಾರಂಭಗೊಳ್ಳಬೇಕು. ಹತ್ತನೆಯ ವಾರದಲ್ಲಿ ಈ ಬಡಿತ ಹೆಚ್ಚು ಸ್ಪಷ್ಟವಾಗುತ್ತದೆ ಹಾಗೂ ಗುರುತಿಸುವಿಕೆ ಸುಲಭವಾಗುತ್ತದೆ. ಇಂದು ಆಧುನಿಕ ಉಪಕರಣಗಳ ನಿಖರ ವಿವರಗಳನ್ನು ಪಡೆಯಬಹುದು. ಇಲ್ಲದಿದ್ದರೆ ವೈದ್ಯರೂ ಸ್ಪರ್ಶ ಹಾಗೂ ಸರಳ ಉಪಕರಣದಿಂದ ಬಡಿತದ ಗತಿಯನ್ನು ಗುರುತಿಸಬಹುದು. ಕೆಲವೊಮ್ಮೆ, ಭ್ರೂಣದ ಸ್ಥಾನ ಬದಲಾಗಿದ್ದರೆ ಅಥವಾ ಮಾಸುವಿನ ತೊಂದರೆ ಇದ್ದರೆ ಹೃದಯದ ಬಡಿತವಿದ್ದರೂ ಇದು ಗ್ರಹಿಕೆಗೆ ಬಾರದೇ ಹೋಗಬಹುದು. ಈ ಸಂದರ್ಭದಲ್ಲಿ ವೈದ್ಯರು ಕಾದು ನೋಡುವ ಕ್ರಮವನ್ನು ಕೈಗೊಂಡು ಮುಂದಿನ ದಿನಾಂಕದಂದು ಬರಹೇಳುತ್ತಾರೆ. ಆ ಭೇಟಿಯಲ್ಲಿಯೂ ಬಡಿತ ಕಾಣಿಸಿಕೊಳ್ಳದೇ ಇದ್ದರೆ ಅಲ್ಟ್ರಾಸೌಂಡ್ ವಿಧಾನವನ್ನು ಬಳಸಲಾಗುತ್ತದೆ. ಈ ವಿಧಾನದಲ್ಲಿ ಎಷ್ಟೇ ಕ್ಷೀಣವಾಗಿದ್ದರೂ ಸರಿ ಹೃದಯದ ಬಡಿತವಿರುವುದು ತಿಳಿಯುತ್ತದೆ. ಒಂದು ವೇಳೆ ಬಡಿತ ಇಲ್ಲದೇ ಇದ್ದರೆ ಇದು ಸಹಜ ಬೆಳವಣಿಗೆ ಪಡೆದಿಲ್ಲ ಅಥವಾ ಅತ್ಯಪರೂಪದ ಸಂದರ್ಭಗಳಲ್ಲಿ ಭ್ರೂಣದಲ್ಲಿ ಪ್ರಾಣವಿರುವುದಿಲ್ಲ ಎಂದು ವೈದ್ಯರಿಗೆ ತಿಳಿಯುತ್ತದೆ. ಮುಂದಿನ ಕ್ರಮವನ್ನು ವೈದ್ಯರೇ ನಿರ್ಧರಿಸುತ್ತಾರೆ.

3. ಗರ್ಭಶಯದೊಳಗಿನ ಬೆಳವಣಿಗೆಗೆ ಅಡ್ಡಿ ( Intrauterine Growth Restriction (IUGR)

3. ಗರ್ಭಶಯದೊಳಗಿನ ಬೆಳವಣಿಗೆಗೆ ಅಡ್ಡಿ ( Intrauterine Growth Restriction (IUGR)

ಗರ್ಭಾಶಯದ ಬೆಳವಣಿಗೆಯ ನಿರ್ಬಂಧವು ಭ್ರೂಣದ ಬೆಳವಣಿಗೆಗೆ ಅಡ್ಡಿಪಡಿಸುತ್ತದೆ. ನೀವು ಐಯುಜಿಆರ್ ‌ಗೆ ಪರೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶ ಪಡೆದರೆ, ನಿಮ್ಮ ಭ್ರೂಣವು ಅದರ ಗರ್ಭಾವಸ್ಥೆಯ ವಯಸ್ಸುಗಿಂತ 10% ಚಿಕ್ಕದಾಗಿದೆ ಎಂದು ಇದು ಸೂಚಿಸುತ್ತದೆ. ನೀವು ಐಯುಜಿಆರ್ ನಿಂದ ಬಳಲುತ್ತಿದ್ದರೆ, ಉಸಿರಾಟದ ತೊಂದರೆ, ಅಧಿಕ ರಕ್ತದ ಸಕ್ಕರೆ ಮತ್ತು ಅಧಿಕ ದೇಹದ ಉಷ್ಣತೆಯಂತಹ ತೊಂದರೆಗಳು ಉದ್ಭವಿಸಬಹುದು ಮತ್ತು ಹೆರಿಗೆಯ ನಂತರವೂ ಮುಂದುವರಿಯಬಹುದು. ಆದ್ದರಿಂದ, ಈ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವ ಅವಶ್ಯಕತೆಯಿದೆ. ಅವಳಿ ಮಕ್ಕಳ ಸಂದರ್ಭದಲ್ಲಿಯೂ ಇದು ಕಾಣಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ಒಂದು ಮಗು ಐಯುಜಿಆರ್ ನಿಂದ ಬಳಲುತ್ತಿದ್ದರೆ ಇನ್ನೊಂದು ಮಗು ಆರೋಗ್ಯಕರ ಬೆಳವಣಿಗೆ ಪಡೆಯುತ್ತದೆ.

4. ಕಡಿಮೆ hCG ಮಟ್ಟ

4. ಕಡಿಮೆ hCG ಮಟ್ಟ

ಗರ್ಭಾವಸ್ಥೆಯಲ್ಲಿ ಗರ್ಭಾಶಯದ ಮಾಸು (ಪ್ಲಾಸೆಂಟಾ) hCG ಎಂದು ಕರೆಯಲಾಗುವ ಒಂದು ಬಗೆಯ ರಸದೂತವನ್ನು ಉತ್ಪಾದಿಸುತ್ತದೆ. ಪ್ರತಿ ತ್ರೈಮಾಸಿಕದಲ್ಲಿ ಈ ರಸದೂತದ ಪ್ರಮಾಣ ಹೆಚ್ಚು ಕಡಿಮೆಯಾಗುತ್ತಿರುತ್ತದೆ. ಸಾಮಾನ್ಯವಾಗಿ ಒಂಭತ್ತರಿಂದ ಹದಿನಾರು ವಾರದಲ್ಲಿ ಅತಿ ಹೆಚ್ಚು ಇರುತ್ತದೆ. ಈ ಮಟ್ಟ ಪ್ರತಿ ಗರ್ಭಿಣಿಗೂ ಬೇರೆಯೇ ಇರುತ್ತದೆ. ಹಾಗಾಗಿ ಈ ಮಟ್ಟ ಕಡಿಮೆ ಇದೆ ಎಂದಾಕ್ಷಣ ಆತಂಕ ಪಡಬೇಕಾಗಿಲ್ಲ. ಆದರೂ, ಕಡಿಮೆ ಪ್ರಮಾಣವಿರುವವರಲ್ಲಿ ಗರ್ಭಾಪಾತ, ರೋಗಪೀಡಿತ ಅಂಡಾಣು ಅಥವಾ ಅಪಸ್ಥಾನೀಯ ಗರ್ಭಧಾರಣೆಯನ್ನು ಸೂಚಿಸಬಹುದು. ಈ ಅಪಾಯಗಳು ನಿಮ್ಮ ಗರ್ಭಧಾರಣೆಯ ಕನಸನ್ನು ನನಸಾಗಿಸದೇ ಹೋಗಬಹುದು.

5. ಗರ್ಭಾವಸ್ಥೆಯಲ್ಲಿ ಅತಿ ಹೆಚ್ಚು ಕಾಡುವ ನೋವು

5. ಗರ್ಭಾವಸ್ಥೆಯಲ್ಲಿ ಅತಿ ಹೆಚ್ಚು ಕಾಡುವ ನೋವು

ಗರ್ಭಧಾರಣೆಯಲ್ಲಿ ಎಷ್ಟು ಸಂತೋಷವಿದೆಯೋ ಅಷ್ಟೂ ನೋವೂ ಇದೆ. ಆದರೂ, ಮಾಸಿಕ ದಿನಗಳಲ್ಲಿ ಎದುರಾಗುವ ಸೆಳೆತದಂತೆ ಭಾಸವಾಗುವ ತೀವ್ರ ನೋವು ಮತ್ತೊಂದು ಎಚ್ಚರಿಕೆಯ ಸಂಕೇತವಾಗಿದೆ. ಗರ್ಭಧಾರಣೆಯ ಆರಂಭದಲ್ಲಿ, ಇದು ರಕ್ತದ ಹರಿವಿನಿಂದಾಗಿ ಉಂಟಾಗಬಹುದು ಆದರೆ ಅದು ಮುಂದುವರಿದರೆ, ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕಾಗಬಹುದು.

6. ಗರ್ಭಾವಸ್ಥೆಯಲ್ಲೂ ಕಾಡುವ ರಕ್ತಸ್ರಾವ

6. ಗರ್ಭಾವಸ್ಥೆಯಲ್ಲೂ ಕಾಡುವ ರಕ್ತಸ್ರಾವ

ಗರ್ಭಾವಸ್ಥೆಯಲ್ಲಿಯೂ ಇತರ ದಿನಗಳಂತೆ ರಕ್ತಸ್ರಾವವಾಗುವುದು ಸಹಜ. ಆದರೆ ಈ ಪ್ರಮಾಣ ಹೆಚ್ಚಾದರೆ ಮಾತ್ರ ಕಾಳಜಿ ವಹಿಸಬೇಕಾಗುತ್ತದೆ. ಕೆಲವೊಮ್ಮೆ ಗರ್ಭಾಪಾತವಾಗಲಿರುವ, ರಸದೂತಗಳ ಪ್ರಭಾವದಿಂದ ಅಥವಾ ಗರ್ಭಾಶಯದ ಒಳಗಿನ ಸ್ರಾವದ ಸೂಚನೆಯನ್ನೂ ಈ ಸ್ರಾವ ಪ್ರಕಟಿಸಬಹುದು.

7. ಅತಿಯಾದ ಬೆನ್ನು ನೋವು

7. ಅತಿಯಾದ ಬೆನ್ನು ನೋವು

ಗರ್ಭಾವಸ್ಥೆಯಲ್ಲಿ ಬೆನ್ನು ನೋವು ಅನುಭವಿಸುವುದು ಸಾಮಾನ್ಯವಾಗಿದೆ ಏಕೆಂದರೆ ಬೆಳೆಯುತ್ತಿರುವ ಮಗು ಬೆನ್ನುಮೂಳೆಯ ಮೇಲೆ ಮತ್ತು ಕೆಳ ಬೆನ್ನಿನ ಮೇಲೆ ಸಾಕಷ್ಟು ಒತ್ತಡವನ್ನುಂಟು ಮಾಡುತ್ತದೆ. ಅವಳಿ ಮಕ್ಕಳನ್ನು ನಿರೀಕ್ಷಿಸುವಾಗ ಈ ಭಾವನೆ ಇನ್ನಷ್ಟು ಹದಗೆಡುತ್ತದೆ. ಬೆನ್ನಿನ ಮಂದ ನೋವಿಗೆ ವಿರುದ್ಧವಾಗಿ ತೀವ್ರವಾದ ಬೆನ್ನು ನೋವನ್ನು ಗಮನಿಸಿ. ಅಲ್ಲದೆ, ಇದು ನಿಮ್ಮ ದೇಹದ ಮುಂಭಾಗದಿಂದ ಪ್ರಾರಂಭಿಸಿ ಹಿಂಭಾಗಕ್ಕೆ ಸಾಗಿದರೆ, ಅದು ಉತ್ತಮ ಸಂಕೇತವಲ್ಲ. ನೀವು ತಕ್ಷಣ ನಿಮ್ಮ ವೈದ್ಯರನ್ನು ಭೇಟಿ ಮಾಡಬೇಕು.

8. ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಬಿಳಿಸೆರಗು

8. ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಬಿಳಿಸೆರಗು

ಗರ್ಭಾವಸ್ಥೆಯಲ್ಲಿಯೂ ಮಹಿಳೆಯರಲ್ಲಿ ಬಿಳಿಸೆರಗು ಕಾಣಿಸಿಕೊಳ್ಳಬಹುದು. ದಿನಗಳು ಮುಂದುವರೆದಂತೆ ಸ್ರಾವವೂ ಹೆಚ್ಚಬಹುದು. ಸಾಮಾನ್ಯವಾಗಿ ಇದು ಪಾರದರ್ಶಕ, ಅಥವಾ ತಿಳಿಬಣ್ಣದಲ್ಲಿದ್ದು ವಾಸನಾರಹಿತವಾಗಿರುತ್ತದೆ. ಒಂದು ವೇಳೆ ಇದು ಹಳದಿಮಿಶ್ರಿತ ಹಸಿರು ಬಣ್ಣದಲ್ಲಿದ್ದರೆ ಹಾಗೂ ಕೆಟ್ಟ ವಾಸನೆಯಿಂದ ಕೂಡಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಸಾಮಾನ್ಯವಾಗಿ ಇದು ಗರ್ಭಕಂಠದ ಉರಿಯೂತದ ಕಾರಣದಿಂದ ಅಥವಾ ಗರ್ಭಾಪಾತದ ಮುನ್ಸೂಚನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.

9. ಗರ್ಭಾವಸ್ಥೆಯ ವಾಕರಿಕೆ (Morning Sickness) ಒಮ್ಮೆಲೇ ಇಲ್ಲವಾಗುವುದು

9. ಗರ್ಭಾವಸ್ಥೆಯ ವಾಕರಿಕೆ (Morning Sickness) ಒಮ್ಮೆಲೇ ಇಲ್ಲವಾಗುವುದು

ಗರ್ಭಿಣಿಯ ಬಯಕೆ ಎಂದೇ ಕರೆಯಲಾಗುವ ಈ ವಾಕರಿಕೆ ಹೆಚ್ಚಿನ ಸಂದರ್ಭದಲ್ಲಿ ಮೊದಲ ತ್ರೈಮಾಸಿಕದಲ್ಲಿ ಎದುರಾಗುತ್ತದೆ ಹಾಗೂ ಎಲ್ಲರಿಗೂ ಸಂತೋಷವನ್ನೇ ನೀಡುತ್ತದೆ. ಈ ಅವಧಿ ಕೊನೆಗೊಂಡಂತೆ ಅಥವಾ ಅದಕ್ಕೂ ಮುಂಚೆಯೇ ಈ ವಾಕರಿಕೆ ನಿಧಾನವಾಗಿ ಇಲ್ಲವಾಗುತ್ತದೆ. ಒಂದು ವೇಳೆ ಈ ವಾಕರಿಕೆ ಪ್ರತಿ ದಿನ ಇದ್ದಂತೆ ಒಮ್ಮೆಲೇ ಮರುದಿನ ಇಲ್ಲವಾಗಿದ್ದರೆ ಇದನ್ನು ಗಂಭೀರಸೂಚನೆಯಾಗಿ ಪರಿಗಣಿಸಬೇಕು. ಏಕೆಂದರೆ ಇದು ಕಡಿಮೆ hCG ಮಟ್ಟದ ಸೂಚನೆ ನೀಡುತ್ತದೆ ಹಾಗೂ ಗರ್ಭಾಪಾತವಾಗುವ ಸೂಚನೆಯೂ ಆಗಿದೆ. ತಕ್ಷಣವೇ ತಜ್ಞರನ್ನು ಕಂಡು ಸೂಕ್ತ ಸಲಹೆ ಮತ್ತು ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.

10. ಗರ್ಭಾವಸ್ಥೆಯಲ್ಲಿ ಎದುರಾಗುವ ಜ್ವರ

10. ಗರ್ಭಾವಸ್ಥೆಯಲ್ಲಿ ಎದುರಾಗುವ ಜ್ವರ

ಈ ಅವಧಿಯಲ್ಲಿ ಎದುರಾಗುವ ಜ್ವರವನ್ನು ಅಲ್ಲಗಳೆಯಲಾಗದು. ಏಕೆಂದರೆ ಇದು ಬ್ಯಾಕ್ಟೀರಿಯಾ ಅಥವಾ ವೈರಸ್ ನ ಧಾಳಿಯ ಸಂಕೇತವಾಗಿದ್ದು ಗರ್ಭದಲ್ಲಿರುವ ಭ್ರೂಣಕ್ಕೂ ಮಾರಕವಾಗಬಲ್ಲುದು.

11. ಸ್ತನಗಳ ಗಾತ್ರ ಕುಗ್ಗುವುದು

11. ಸ್ತನಗಳ ಗಾತ್ರ ಕುಗ್ಗುವುದು

ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹದಲ್ಲಿ ನೂರಾರು ರಸದೂತಗಳಿಂದಾಗುವ ಪರಿಣಾಮದಿಂದ ಕೆಲವಾರು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ದೇಹದ ತೂಕ ಹೆಚ್ಚುತ್ತಿದ್ದಂತೆಯೇ ಸ್ತನಗಳು ಹೆಚ್ಚು ಹೆಚ್ಚು ಸೂಕ್ಷ್ಮಸಂವೇದಿಯಾಗತೊಡಗುತ್ತವೆ. ಅಲ್ಲದೇ ಹೆಚ್ಚು ತುಂಬಿಕೊಂಡು ಗರ್ಭಾವಸ್ಥೆಯ ಕಡೆಯ ದಿನಗಳಲ್ಲಿ ಗರಿಷ್ಟ ಗಾತ್ರವನ್ನು ಪಡೆಯುತ್ತವೆ. ಮಗುವಿಗೆ ಊಡಿಸಬೇಕಾದ ಹಾಲು ತುಂಬಿಕೊಳ್ಳುವುದೇ ಈ ಹೆಚ್ಚಳಕ್ಕೆ ಕಾರಣವಾಗಿದೆ. ಒಂದು ವೇಳೆ ಹೀಗೆ ಹೆಚ್ಚುತ್ತಿದ್ದ ಗಾತ್ರ ಏಕಾಏಕಿ ಕಡಿಮೆಯಾದರೆ ಇದು ಗರ್ಭಾಪಾತದ ಸೂಚನೆಯಾಗಿರಬಹುದು.

12. ಭ್ರೂಣದ ಚಲನೆಯ ಅನುಭವವಾಗದಿರುವುದು

12. ಭ್ರೂಣದ ಚಲನೆಯ ಅನುಭವವಾಗದಿರುವುದು

ಭ್ರೂಣವು ಧ್ವನಿ, ಬೆಳಕು ಮತ್ತು ನೋವಿಗೆ ಪ್ರತಿಕ್ರಿಯಿಸಲು ಪ್ರಾರಂಭಿಸಿದಾಗ ಭ್ರೂಣದ ಚಲನೆಯನ್ನು 18 ವಾರಗಳ ಅವಧಿಯಲ್ಲಿ ಅನುಭವಿಸಬಹುದು. ಈ ಅವಧಿಯಲ್ಲಿ ಗರ್ಭಿಣಿ ಮಹಿಳೆ ಪ್ರತಿ ಎರಡು ಗಂಟೆಗಳಿಗೊಮ್ಮೆ ಸುಮಾರು 10 ಒದೆತಗಳನ್ನು ಅನುಭವಿಸಬೇಕು ಎಂದು ತಜ್ಞರು ಹೇಳುತ್ತಾರೆ. ಭ್ರೂಣವು ತೊಂದರೆಯಲ್ಲಿದ್ದರೆ, ಎಣಿಕೆ ಕುಸಿಯುತ್ತದೆ. ಸರಿಯಾದ ಚಿಕಿತ್ಸೆಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು ಎಂದು ಈ ಸೂಚನೆ ನೀಡುವ ಸ್ಪಷ್ಟ ಸಂಕೇತವಾಗಿದೆ. ವೈದ್ಯಕೀಯ ಸಹಾಯವನ್ನು ಪಡೆಯಲು ಯಾವುದೇ ವಿಳಂಬವು ದುರಾದೃಷ್ಟಕರ ಘಟನೆಗೆ ಕಾರಣವಾಗಬಹುದು.

13. ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಏರಿಕೆ

13. ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಏರಿಕೆ

ಗರ್ಭಾವಸ್ಥೆಯಲ್ಲಿ ರಕ್ತದಲ್ಲಿನ ಸಕ್ಕರೆ ಮತ್ತು ರಕ್ತದೊತ್ತಡದ ಮಟ್ಟಗಳು ಏರುವುದು ಸಾಮಾನ್ಯವಾಗಿದೆ. ವಾಸ್ತವವಾಗಿ, ನೀವು ಮೂರು ತ್ರೈಮಾಸಿಕಗಳಲ್ಲಿ ಈ ಮಟ್ಟವನ್ನು ಕಾಪಾಡಿಕೊಳ್ಳಬೇಕು. ಆದಾಗ್ಯೂ, ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಮತ್ತು ಹೆಚ್ಚಿನ ಏರಿಕೆ preeclampsia ಎಂಬ ಸ್ಥಿತಿ ಎದುರಾಗಬಹುದು ಹಾಗೂ ಪೂರ್ಣಾವಧಿ ಕಳೆಯುವ ಮುನ್ನವೇ ಹೆರಿಗೆಯಾಗುವ ಸಂಭವವಿರುತ್ತದೆ.

14. ಜರಾಯು (ಪ್ಲಾಸೆಂಟಾ) ಸ್ಥಾನದಲ್ಲಿನ ಬದಲಾವಣೆಗಳು

14. ಜರಾಯು (ಪ್ಲಾಸೆಂಟಾ) ಸ್ಥಾನದಲ್ಲಿನ ಬದಲಾವಣೆಗಳು

ಜರಾಯುವಿನ ಸ್ಥಾನದಲ್ಲಿನ ಬದಲಾವಣೆಯು ಅನಾರೋಗ್ಯಕರ ಗರ್ಭಧಾರಣೆಯ ಚಿಹ್ನೆಗಳಲ್ಲಿ ಒಂದಾಗಿದೆ. ಜರಾಯು ಗರ್ಭಾಶಯದಿಂದ ಅಕಾಲಿಕವಾಗಿ ಬೇರ್ಪಟ್ಟಾಗ, ಗರ್ಭಧಾರಣೆಯನ್ನು ಕೊನೆಗೊಳಿಸಲಾಗುತ್ತದೆ. ಆದ್ದರಿಂದ, ಯಾವಾಗಲೂ ನಿಮ್ಮ ಜರಾಯು ಸ್ಥಾನವನ್ನು ಪರೀಕ್ಷಿಸಿಕೊಳ್ಳುತ್ತಿರಬೇಕು.

ಮೇಲೆ ವಿವರಿಸಿದ್ದ ಸೂಚನೆಗಳಲ್ಲಿ ಒಂದಾದರೂ ನಿಮ್ಮ ಗಮನಕ್ಕೆ ಬಂದರೆ ನಿಮಗೆ ಸಣ್ಣ ಅನುಮಾನವಿದ್ದರೂ ಅಥವಾ ಏನಾದರೊಂದು ಆಗಬೇಕಾಗಿದ್ದುದು ಆಗಿದೆ ಎಂದೇ ನೀವು ಭಾವಿಸಿದ್ದರೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ನಿಮ್ಮ ಕಾಳಜಿ ಕೆಲವೊಮ್ಮೆ ವ್ಯರ್ಥವಾಗಬಹುದು ಆದರೆ ಪರೀಕ್ಷಿಸಿಕೊಂಡು ಇಲ್ಲ ಎಂಬ ಉತ್ತರ ಪಡೆದರೆ ನಿರಾಳರಾಗಿರಬಹುದು ಹಾಗೂ ಸುರಕ್ಷಿತವಾಗಿರುವುದು ಯಾವಾಗಲೂ ಒಳ್ಳೆಯದು.

English summary

Signs of a Healthy and Unhealthy Baby in the Womb

Every parent wants to have a healthy baby and goes to great lengths for the same. But, lack of information may, sometimes,lead to an unexpected outcome. Therefore, understanding the signs of a healthy foetus becomes crucial. Below are the signs of a healthy baby during the early stages of pregnancy.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more