Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಿಣಿಯರು ಜೋಳ ತಿಂದರೆ ಸಿಗುವ 5 ಪ್ರಮುಖ ಪ್ರಯೋಜನಗಳು
ಜೋಳ ಆರೋಗ್ಯಕರವಾದ ಆಹಾರವಾಗಿದೆ. ಇದನ್ನು ಗರ್ಭಿಣಿಯರು ಕೂಡ ತಿನ್ನಬಹುದಾಗಿದ್ದು, ಇದನ್ನು ತಿನ್ನುವುದರಿಂದ ಗರ್ಭಿಣಿಯರು ಪ್ರಮುಖ 6 ಪ್ರಯೋಜನಗಳನ್ನು ಪಡೆಯಬಹುದು. ಜೋಳದಲ್ಲಿ ಫಾಲಿಕ್ ಆಮ್ಲ, ನಾರಿನಂಶ, ವಿಟಮಿನ್ ಬಿ1, ಬಿ5 ಮತ್ತು ಸಿ ಇರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ.
ಗರ್ಭಿಣಿಯರು ತಮ್ಮ ಆಹಾರಕ್ರಮದಲ್ಲಿ ಜೋಳವನ್ನು ಸೇರಿಸುವುದರಿಂದ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:

1. ಮಲಬದ್ಧತೆ ಹೋಗಲಾಡಿಸುತ್ತದೆ
ಗರ್ಭಿಣಿಯರಲ್ಲಿ ಮಲಬದ್ಧತೆ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಗರ್ಭಿಣಿಯಾಗಿದ್ದಾಗ ಶರೀರದಲ್ಲಿ ಹಾರ್ಮೋನ್‌ಗಳ ಬದಲಾವಣೆಯಾಗುತ್ತದೆ ಹಾಗೂ ಜೀರ್ಣಕ್ರಿಯೆ ನಿಧಾನವಾಗಿ ನಡೆಯುವುದು, ಇದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಇದನ್ನು ಹೋಗಲಾಡಿಸುವಲ್ಲಿ ಜೋಳ ಸಹಕಾರಿಯಾಗಿದೆ. ಜೋಳದಲ್ಲಿ ನಾರಿನಂಶ ಅಧಿಕವಿರುವುದರಿಂದ ಗರ್ಭಿಣಿಯರು ಜೋಳವನ್ನು ತಿನ್ನುವುದು ಒಳ್ಳೆಯದು.
ಜೋಳದಲ್ಲಿರುವ ಪೋಷಕಾಂಶಗಳು
| ಪೋಷಕಾಂಶ | ಪ್ರಮಾಣ |
| ನೀರು | 75.96% ಗ್ರಾಂ |
| ಕ್ಯಾಲೋರಿ | 86KCal |
| ಕಾರ್ಬೋಹೈಡ್ರೇಟ್ಸ್ | 19.02ಗ್ರಾಂ |
| ಪ್ರೊಟೀನ್ | 3.22ಗ್ರಾಂ |
| ನಾರಿನಂಶ | 2.7ಗ್ರಾಂ |
| ಕೊಬ್ಬಿನಂಶ | 1.18ಗ್ರಾಂ |
| ಸಕ್ಕರೆ | 3.22ಗ್ರಾಂ |
2.ಮಗುವಿನ ಆರೋಗ್ಯಕ್ಕೆ ಒಳ್ಳೆಯದು
ಜೋಳದಲ್ಲಿ zeaxanthin ಎಂಬ ಅಂಶವಿದ್ದು ಇದು ಮ್ಯಾಕ್ಯೂಲರ್ ಡಿಜನರೇಷನ್ ಎಂಬ ಕಣ್ಣಿನ ಸಮಸ್ಯೆ ಉಂಟಾಗದಂತೆ ತಾಯಿಯನ್ನು ಹಾಗೂ ಮುಂದೆ ಮಗುವಿಗೆ ಕಣ್ಣಿನ ಸಮಸ್ಯೆ ಉಂಟಾಗದಂತೆ ತಡೆಯುತ್ತದೆ.
3. ಮಗುವಿಗೆ ದೈಹಿಕ ನ್ಯೂನ್ಯತೆ ಉಂಟಾಗದಂತೆ ತಡೆಯುತ್ತದೆ
ಇದರಲ್ಲಿ ಫಾಲಿಕ್ ಆಮ್ಲ ಇರುವುದರಿಂದ ಮೂಳೆಯಾರೋಗ್ಯಕ್ಕೆ ಒಳ್ಳೆಯದು, ಹಾಗೂ ಮಗುವಿಗೆ ದೈಹಿಕ ನ್ಯೂನತೆ ಉಂಟಾಗದಂತೆ ತಡೆಯುತ್ತದೆ.
ವಿಟಮಿನ್ಸ್
| ಫಾಲಿಕ್ ಆಮ್ಲ | 46mcg |
| ವಿಟಮಿನ್ ಬಿ3 | 1.7mg |
| ವಿಟಮಿನ್ ಬಿ2 | 0.06mg |
| ವಿಟಮಿನ್ ಬಿ6 | 0.055mg |
| ವಿಟಮಿನ್ ಬಿ1 | 0.2mg |
| ವಿಟಮಿನ್ ಎ | 1IU |
| ವಿಟಮಿನ್ ಸಿ | 6.8mg |
| ವಿಟಮಿನ್ ಇ | 0.07mg |
| ವಿಟಮಿನ್ ಕೆ | 0.3mg |
4. ಮಗುವಿನ ಮೆದುಳಿನ ಸಾಮರ್ಥ್ಯ ಹೆಚ್ಚಿಸುತ್ತದೆ
ಮಗುವಿನ ಮೆದುಳು ಸಾಮರ್ಥ್ಯ ಹೆಚ್ಚಿಸುವ ಆಹಾರದಲ್ಲಿ ಇದು ಕೂಡ ಒಂದಾಗಿದೆ. ಇದರಲ್ಲಿರುವ ಥಯಾಮೈನ್ ಮಗುವಿನ ಮೆದುಳಿನ ಬೆಳವಣಿಗೆಗೆ ಸಹಕಾರಿ.
5. ಮಗು ಹಾಗೂ ತಾಯಿಯಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ
ಇದರಲ್ಲಿ ಬೀಟಾ ಕೆರೊಟಿನ್ ಹಾಗೂ ವಿಟಮಿನ್ ಎ ಇದ್ದು ಇದು ಗರ್ಭಿಣಿಯರಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ ಹಾಗೂ ಮಗುವಿನ ಬೆಳವಣಿಗೆಗೆ ಸಹಕಾರಿ.
ಜೋಳದಲ್ಲಿರುವ ಖನಿಜಾಂಶಗಳು
| ಕ್ಯಾಲ್ಸಿಯಂ | 2mg |
| ಕಬ್ಬಿಣದಂಶ | 0.52mg |
| ರಂಜಕ | 89mg |
| ಮೆಗ್ನಿಷ್ಯಿಯಂ | 37mg |
| ಸತು | 0.45mg |
ಯಾವಾಗ ಜೋಳ ಒಳ್ಳೆಯದಲ್ಲ?
*ಜೋಳದಲ್ಲಿ ಅಧಿಕ ಕೊಬ್ಬಿನ ಆಮ್ಲವಿರುವುದರಿಂದ ಹೃದಯ ಸಮಸ್ಯೆ ಇರುವವರು ದಿನಾ ತಿನ್ನುವುದು ಒಳ್ಳೆಯದಲ್ಲ.
*ಅಜೀರ್ಣ ಸಮಸ್ಯೆಯಿದ್ದಾಗ ಜೋಳ ತಿನ್ನಬೇಡಿ.
ಮೈಕ್ರೋವೇವ್ ಜೋಳ ಒಳ್ಳೆಯದಾ?
ಮೈಕ್ರೋವೇವ್‌ನಲ್ಲಿ ಮಾಡಿದ ಪಾಪ್‌ಕಾರ್ನ್‌ನಲ್ಲಿ perfluorooctanoic ಆಮ್ಲವೆಂಬ ರಾಸಾಯನಿಕವಿರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಗರ್ಭಿಣಿಯರು ಮೈಕ್ರೋವೇವ್ ಪಾಪ್‌ಕಾರ್ನ್ ತಿನ್ನಬೇಡಿ.
ಸಾಮಾನ್ಯವಾಗಿ ಕೇಳಿ ಬರುವ ಪ್ರಶ್ನೆಗಳು
ಗರ್ಭಿಣಿಯರು ಅತಿಹೆಚ್ಚು ಜೋಳ ತಿಂದರೆ ಹಾನಿಕಾರಕವೇ?
ಯಾವ ವಸ್ತುವೇ ಆಗಿರಲಿ ಅತಿ ಹೆಚ್ಚು ತಿಂದರೆ ಒಳ್ಳೆಯದಲ್ಲ. ಇನ್ನು ಜೋಳ ರುಚಿ ಸಿಗಬೇಕಾದರೆ ಉಪ್ಪು ಬೇಕೇಬೇಕು. ಉಪ್ಪಿನಂಶ ಅಧಿಕ ತಿಂದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು. ಆದ್ದರಿಂದ ಜೋಳವನ್ನು ಮಿತಿಯಲ್ಲಿ ತಿನ್ನಿ.
ಬೇಯಿಸದೆ ಜೋಳ ತಿನ್ನಬಹುದೇ?
ಜೋಳವನ್ನು ಸಲಾಡ್‌ನಲ್ಲಿ ಬೇಯಿಸದೆಯೂ ತಿನ್ನಬಹುದು, ಆದರೆ ತುಂಬಾ ತಿನ್ನಬೇಡಿ.



Click it and Unblock the Notifications
