Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಗರ್ಭಿಣಿಗೆ ಬೇಧಿ ಸಮಸ್ಯೆ ಉಂಟಾದರೆ ಮನೆಮದ್ದೇನು?
ಗರ್ಭಿಣಿಯರು ಆರೋಗ್ಯದ ಕಡೆಗೆ ತುಂಬಾನೇ ಹುಷಾರಾಗಿರಬೇಕು, ಏನಾದರೂ ಚಿಕ್ಕ ಆರೋಗ್ಯ ಸಮಸ್ಯೆಯಿದ್ದರೂ ನಿರ್ಲಕ್ಷ್ಯ ಮಾಡಲೇಬಾರದು, ಏಕೆಂದರೆ ಗರ್ಭಾವಸ್ಥೆಯಲ್ಲಿದ್ದಾಗ ಆ್ಯಂಟಿ ಬಯೋಟಿಕ್, ಇತರ ಔಷಧಗಳನ್ನು ತೆಗೆದುಕೊಂಡರೆ ಅದು ಮಗುವಿನ ಆರೋಗ್ಯದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರಬಹುದು.

ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ತಲೆಸುತ್ತು, ಸುಸ್ತು, ಬೇಧಿ ಈ ರೀತಿಯ ಸಮಸ್ಯೆಗಳು ಕಂಡು ಬರುತ್ತಿರುತ್ತದೆ. ಗರ್ಭಿಣಿಯಾಗಿದ್ದಾಗ ಬೇಧಿ ಸಮಸ್ಯೆ ಉಂಟಾದಾಗ ತುಂಬಾ ಆತಂಕವೇನೂ ಬೇಡ, ಕೆಲವರಲ್ಲಿ ಈ ಬಗೆಯ ಸಮಸ್ಯೆ ಕಂಡು ಬರುತ್ತದೆ, ಈ ರೀತಿಯಾದಾಗ ಏನು ಮಾಡಬೇಕು ಎಂದು ನೋಡೋಣ ಬನ್ನಿ:
ಗರ್ಭಿಣಿಗೆ ಬೇಧಿ ಉಂಟಾಗಲು ಕಾರಣವೇನು?
ಹಲವಾರ ಕಾರಣಗಳಿಂದ ಬೇಧಿ ಉಂಟಾಗಬಹುದು. ಹೊರಗಿನ ಆಹಾರ ತಿಂದಾಗ ಅಥವಾ ಹೊಟ್ಟೆಯ ಸೋಂಕು, ಫಡ್ ಪಾಯಿಸನ್ ಮುಂತಾದ ಕಾರಣಗಳಿಂದ ಈ ಬಗೆಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದ್ದರಿಂದಲೇ ಗರ್ಭಿಣಿಯರಿಗೆ ಹೊರಗಡೆಯ ಆಹಾರ ಸೇವಿಸದಂತೆ ಸಲಹೆ ನೀಡಲಾಗುವುದು.
ಗರ್ಭಾವಸ್ಥೆಯಲ್ಲಿ ಬೇಧಿ ಉಂಟಾದಾಗ ಏನು ಮಾಡಬೇಕು?
1. ಸಾಕಷ್ಟು ನೀರು ಕುಡಿಯಬೇಕು: ಬೇಧಿಯಾದಾಗ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ದೇಹದಲ್ಲಿ ನೀರಿನಂಶ ತುಂಬಾ ಕಡಿಮೆಯಾದಾಗ ಮಗುವಿಗೆ ತೊಂದರೆಯಾಗುವುದು, ಆದ್ದರಿಂದ ನೀರಿನಂಶ ತುಂಬಾ ಕಡಿಮೆಯಾಗಲು ಬಿಡಬೇಡಿ. ನೀರು, ಜ್ಯೂಸ್, ಗಂಜಿಗೆ ಉಪ್ಪು ಹಾಕಿ ಕುಡಿಯುವುದು ಮಾಡಿ. ನಿಂಬು ಪಾನೀಯ, ಎಳನೀರು ಕುಡಿಯಿರಿ.
2. ಪ್ರೊಬಯೋಟಿಕ್ ತೆಗೆದುಕೊಳ್ಳಿ
ಪ್ರೊಬಯೋಟಿಕ್ ಆರೋಗ್ಯಕರ ಬ್ಯಾಕ್ಟಿರಿಯಾ ಹಾಗೂ ಯೀಸ್ಟ್ ಮಿಶ್ರಣವಾಗಿರುವುದರಿಂದ ದೇಹಕ್ಕೆ ತುಂಬಾ ಒಳ್ಳೆಯದು, ಅಲ್ಲದೆ ಬೇಧಿ ಕೂಡ ಕಡಿಮೆಯಾಗುವುದು. ಮಜ್ಜಿಗೆ, ಮೊಸರು ಸೇವಿಸಿ.
3. ಆ್ಯಂಟಿಬಯೋಟಿಕ್
ಮೇಲೆ ಹೇಳಿದ ಮನೆಮದ್ದುಗಳೇನೂ ಕೆಲಸ ಮಾಡದಿದ್ದರೆ ಆ್ಯಂಟಿ ಬಯೋಟಿಕ್ ತೆಗೆದುಕೊಳ್ಳಬೇಕಾಗುತ್ತದೆ.. ನೀವೇ ಸ್ವ ಚಿಕಿತ್ಸೆ ಮಾಡಬೇಡಿ, ವೈದ್ಯರು ಸೂಚಿಸಿದಂತೆಯೇ ತೆಗೆದುಕೊಳ್ಳಬೇಕು.
ಆದಷ್ಟು ಹೊರಗಿನ ಆಹಾರ ಸೇವಿಸಲು ಹೋಗಬೇಡಿ, ಮನೆಯಲ್ಲಿಯೇ ಮಾಡಿದ ಆಹಾರ ಸೇವಿಸಿ. ಸೂಪ್, ಜ್ಯೂಸ್ ಸೇವಿಸಿ.



Click it and Unblock the Notifications

