Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಬಂಜೆತನ ನಿವಾರಿಸಿ, ಗರ್ಭಧಾರಣೆಗೆ ಸಹಾಯ ಮಾಡುವ ಗಿಡಮೂಲಿಕೆಗಳಿವು
ಬಂಜೆತನ ಎಂಬುದು ಕೇವಲ ಹೆಂಗಸರನ್ನಷ್ಟೇ ಕಾಡುವುದಿಲ್ಲ. ಪುರುಷರು ಕೂಡ ಇದರಿಂದ ನರಳುತ್ತಿರುತ್ತಾರೆ. ದಂಪತಿಗಳಲ್ಲಿ ಯಾರಿಗಾದರೂ ಒಬ್ಬರಿಗೆ ಸಂತಾನೋತ್ಪತ್ತಿ ಸಮಸ್ಯೆ ಇದ್ದರೂ ಸಹ, ಗರ್ಭಧಾರಣೆ ಅಸಾಧ್ಯ. ಇವುಗಳಿಗೆ ನಾನಾ ಔಷಧಿಗಳನ್ನು ತೆಗೆದುಕೊಳ್ಳುವವರಿದ್ದಾರೆ. ಈ ಔಷಧಗಳ ಜೊತೆಗೆ ಕೆಲವೊಂದು ಗಿಡಮೂಲಿಕೆಗಳು ನಿಮ್ಮ ಸಂತಾನೋತ್ಪತ್ತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಇತ್ತೀಚಿನ ಅಧ್ಯಯನಗಳು ತಿಳಿಸಿವೆ. ಹಾಗಾದರೆ ಗರ್ಭಧಾರಣೆಗೆ ಸಹಾಯಕವಾಗಬಲ್ಲ ಅಂತಹ ಐದು ಗಿಡಮೂಲಿಕೆಗಳ ಪಟ್ಟಿ ಇಲ್ಲಿದೆ.
ಗರ್ಭಧಾರಣೆಗೆ ಸಹಾಯಕವಾಗಬಲ್ಲ ಅಂತಹ ಐದು ಗಿಡಮೂಲಿಕೆಗಳನ್ನು ಈ ಕೆಳಗೆ ನೀಡಲಾಗಿದೆ:

ಶತಾವರಿ:
ಶತಾವರಿಯನ್ನು ಸ್ತ್ರೀ ಸಂತಾನೋತ್ಪತ್ತಿಯ ಟಾನಿಕ್ ಎಂದು ಪರಿಗಣಿಸಲಾಗುತ್ತದೆ. ಹೆಸರೇ ಸೂಚಿಸುವಂತೆ, ಈ ಟಾನಿಕ್ ಫಲವತ್ತತೆ ಅಥವಾ ಸಂತಾನೋತ್ಪತ್ತಿಯ ಚೈತನ್ಯವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಈಸ್ಟ್ರೊಜೆನ್ ನ್ನು ಹೋಲುವ ಫೈಟೊಈಸ್ಟ್ರೊಜೆನ್ ಗಳನ್ನು ಸಮೃದ್ಧವಾಗಿ ಹೊಂದಿದ್ದು, ಸಂತಾನೋತ್ಪತ್ತಿ ಚಕ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಜೊತೆಗೆ ಸಂತಾನೋತ್ಪತ್ತಿಗೆ ಸಮಸ್ಯೆ ಉಂಟುಮಾಡುವ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಗರ್ಭಧಾರಣೆಗೆ ಸಹಾಯ ಮಾಡುತ್ತದೆ. ಮುಟ್ಟು ನಿಲ್ಲುವ ರೋಗಲಕ್ಷಣಗಳಿಗೆ ಮತ್ತು ಎದೆ ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಸಹ ಇದನ್ನು ಬಳಸಲಾಗುತ್ತದೆ.

ಅಶ್ವಗಂಧ:
ಪುರುಷರಲ್ಲಿ ಉಂಟಾಗುವ ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಅಶ್ವಗಂಧವನ್ನು ಸಾಂಪ್ರದಾಯಿಕವಾಗಿ ಬಳಸಲಾಗುತ್ತದೆ. ಇದು ವೀರ್ಯದ ಗುಣಮಟ್ಟ, ಉತ್ಪಾದನೆ ಮತ್ತು ವೀರ್ಯಾಣುಗಳ ಸಂಖ್ಯೆಯನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಪರುಷರಲ್ಲಿ ಉಂಟಾಗುವ ಸೈಕೋಜೆನಿಕ್ ದುರ್ಬಲತೆ ಮತ್ತು ಬಂಜೆತನದಂತಹ ಸಮಸ್ಯೆಗಳನ್ನು ನಿವಾರಿಸಲು ಮತ್ತು ಪುರುಷ ಲೈಂಗಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಚಾಸ್ಟೆಬೆರಿ:
ಕೆಲವು ಅಧ್ಯಯನಗಳು ಅಗ್ನಸ್ ಕ್ಯಾಸ್ಟಸ್ ಎಂಬ ವೈಜ್ಞಾನಿಕ ಹೆಸರುಳ್ಳ ಈ ಚಾಸ್ಟೆಬೆರಿಯು ಸಂತಾನೋತ್ಪತ್ತಿ ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ ಮತ್ತು ಋತುಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಸೂಚಿಸಿವೆ. ಅನಿಯಮಿತ ಮುಟ್ಟಿನ ಚಕ್ರವು ಅನೇಕ ಮಹಿಳೆಯರಿಗೆ ಗರ್ಭಿಣಿಯಾಗಲು ಕಷ್ಟವಾಗುತ್ತದೆ. ಆದ್ದರಿಂದ ಇದು ಮುಟ್ಟಿನ ಸಮಸ್ಯೆಗಳನ್ನು ದೂರಮಾಡಿ, ಗರ್ಭಧಾರಣೆಗೆ ಅನುಕೂಲ ಆಗುವಂತೆ ಮಾಡುವುದು.

ಕಪ್ಪು ಕೋಹೋಶ್:
ಈ ಸಸ್ಯವು ಸ್ತ್ರೀಯರ ಸಂತಾನೋತ್ಪತ್ತಿ ಸಮಸ್ಯೆಗಳನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಅಂಡಾಶಯವನ್ನು ಉತ್ತೇಜಿಸಿ, ಅಂಡೋತ್ಪತ್ತಿಗೆ ಉತ್ತೇಜನ ನೀಡುತ್ತದೆ.

ಚೀನೀ ಗಿಡಮೂಲಿಕೆಗಳು:
ಇವುಗಳಿಗೆ ಹೆಚ್ಚಿನ ಪುರಾವೆಗಳಿಲ್ಲ, ಆದರೆ ಚೀನೀ ಗಿಡಮೂಲಿಕೆಗಳನ್ನು ಇತರ ಸಂತಾನೋತ್ಪತ್ತಿ ಸುಧಾರಿಸುವ ಔಷಧಿಗಳೊಂದಿಗೆ ತೆಗೆದುಕೊಂಡಾಗ ಫಲವತ್ತತೆಯನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಅದನ್ನು ಒಂದನ್ನೇ ತೆಗೆದುಕೊಂಡಾಗ ಚೀನೀ ಗಿಡಮೂಲಿಕೆಗಳ ಫಲವತ್ತತೆಯ ಪರಿಣಾಮವನ್ನು ಇನ್ನೂ ಪರೀಕ್ಷಿಸಲಾಗಿಲ್ಲ ಮತ್ತು ಸಾಬೀತಾಗಿಲ್ಲ.



Click it and Unblock the Notifications
