Latest Updates
-
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!
ಗರ್ಭಿಣಿಯರು ಹಾಗಾಲಕಾಯಿ ತಿಂದರೆ ಈ ಪ್ರಯೋಜನಗಳಿವೆ ನೋಡಿ
ಗರ್ಭಾವಸ್ಥೆಯ ಎಲ್ಲಾ ಹಂತಗಳಲ್ಲಿ ದೇಹದಲ್ಲಿ ಹಲವಾರು ಬದಲಾವಣೆಗಳಾಗುತ್ತವೆ. ಸಹಜವಾಗಿ ಆಹಾರಕ್ರಮವೂ ಬದಲಾಗುತ್ತದೆ. ಇತರ ಸಮಯಕ್ಕಿಂತಲೂ ಗರ್ಭಾವಸ್ಥೆಯಲ್ಲಿ ಗರ್ಭಿಣಿ ಸೇವಿಸುವ ಆಹಾರಕ್ಕೆ ಹೆಚ್ಚಿನ ಮಹತ್ವವಿದೆ. ಕೆಲವು ಆಹಾರಗಳ ಸೇವನೆಯನ್ನು ನೀವು ಹೆಚ್ಚಿಸಬೇಕು ಮತ್ತು ಕೆಲವನ್ನು ನಿಮಗೆ ಇಷ್ಟವಿದ್ದರೂ ಸರಿ, ವರ್ಜಿಸಲೇ ಬೇಕು.

ಅದೂ ಅಲ್ಲದೇ ಗರ್ಭಾವಸ್ಥೆಯಲ್ಲಿ ಕಣ್ಣೆತ್ತಿ ನೋಡಲೂಬಾರದ ಕೆಲವು ಆಹಾರಗಳಿವೆ. ಉದಾಹರಣೆಗೆ ಹಸಿ ಪೊಪ್ಪಾಯಿ. ಹಾಗಾಗಿ, ನೀವು ಯಾವ ಆಹಾರ ಸೇವಿಸಬೇಕಿದ್ದರೂ ಇದು ನಿಮಗೆ ಮತ್ತು ನಿಮ್ಮ ಮಗುವಿಗೆ ಸುರಕ್ಷಿತ ಎಂದು ಹಿರಿಯರಿಂದ ಅಥವಾ ವೈದ್ಯರಿಂದ ಖಚಿತಪಡಿಸಿಕೊಂಡೇ ತಿನ್ನಬೇಕು. ಒಟ್ಟಾರೆ ನಿಮ್ಮ ಆಹಾರ ಆರೋಗ್ಯಕರ ಮತ್ತು ಸಮತೋಲನ ಕಾಯ್ದುಕೊಳ್ಳುವ ಪೌಷ್ಟಿಕ ಆಹಾರವಾಗಿರುವುದು ಅಗತ್ಯ.
ಹಾಗಲಕಾಯಿ ಕಹಿಯಾಗಿರುವ ಕಾರಣ ಹೆಚ್ಚಿನವರು, ವಿಶೇಷವಾಗಿ ಮಹಿಳೆಯರು ಇದನ್ನು ತಿನ್ನಲು ಇಷ್ಟಪಡುವುದಿಲ್ಲ. ನಿಮ್ಮ ನಾಲಿಗೆಗೆ ಕಹಿ ಇದ್ದರೂ ಇದು ವಾಸ್ತವದಲ್ಲಿ ಅತಿ ಆರೋಗ್ಯಕರ ತರಕಾರಿಯಾಗಿದೆ. ಹಾಗಾಗಿ ಈ ಪೌಷ್ಟಿಕ ತರಕಾರಿಯ ಕಹಿಯಾದ ರುಚಿ ಇದರ ಅಪಾರ ಪ್ರಯೋಜನಗಳನ್ನು ಪಡೆಯುವುದರಿಂದ ವಂಚಿತರಾಗಿಸದೇ ಇರಲಿ.
ಹಾಗಲಕಾಯಿಯನ್ನು ಮೊದಲು ಉಪ್ಪು ಹಾಕಿ ಬೇಯಿಸಿ ತೊಳೆದು ಮತ್ತೆ ಬೆಲ್ಲದೊಂದಿಗೆ ಚೆನ್ನಾಗಿ ಬೇಯಿಸಿ ಖಾದ್ಯ ತಯಾರಿಸಿದರೆ ಕಹಿ ಹೆಚ್ಚಿನಾಂಶ ಇಲ್ಲವಾಗಿ ಅದು ತುಂಬಾ ರುಚಿಯಾಗಿರುತ್ತದೆ. ವಾಸ್ತವದಲ್ಲಿ ಕಹಿ ಎನ್ನುವುದು ಮಾನಸಿಕವಾಗಿ ಇಷ್ಟವಾಗದ ರುಚಿಯಷ್ಟೇ ಹೊರತು ಇನ್ನೇನೂ ಅಲ್ಲ.
ಮೆಣಸು, ಖಾರವಲ್ಲವೇ, ಖಾರ ಎಂದೇ ನಾವು ಇಷ್ಟಪಟ್ಟು ತಿನ್ನುವಾಗ ಖಾರವೂ ಇಷ್ಟವಾಗುತ್ತದೆ. ಅದೇ ರೀತಿ ಕಹಿಯನ್ನೇ ನಿರೀಕ್ಷಿಸಿ ಹಾಗಲಕಾಯಿಯ ಖಾದ್ಯವನ್ನು ಇಷ್ಟಪಟ್ಟು ತಿಂದರೆ ಇದು ನಿಜಕ್ಕೂ ಭಿನ್ನವಾದ ರುಚಿಯನ್ನು ನೀಡುತ್ತದೆ. ಈ ಹಸಿರು ತರಕಾರಿಯಿಂದ ನಿರೀಕ್ಷಿಸಬೇಕಾದ ಕೆಲವು ಪ್ರಯೋಜನಗಳು ಇಲ್ಲಿವೆ:

1. ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ
ಗರ್ಭಾವಸ್ಥೆಯಲ್ಲಿ ಸಣ್ಣ ಕಾಯಿಲೆಗಳಿಂದ ಕೂಡ ಬಹಳಷ್ಟು ಸಮಸ್ಯೆಗಳು ಎದುರಾಗಬಹುದು. ಸಾಮಾನ್ಯ ಜ್ವರ, ಶೀತ ಅಥವಾ ಕೆಮ್ಮು ನಿಮ್ಮ ದೇಹದ ಮೇಲೆ ನಿಜವಾಗಿಯೂ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಗರ್ಭಾವಸ್ಥೆಯಲ್ಲಿ ನೀವು ನಿಜವಾಗಿಯೂ ಹೆಚ್ಚಿಸಬೇಕಾಗಿದೆ ಮತ್ತು ಹಾಗಲಕಾಯಿಯಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಇರುತ್ತದೆ. ವಿಟಮಿನ್ ಸಿ ಅದರ ಆಂಟಿ ಆಕ್ಸಿಡೆಂಟ್ ಅಥವಾ ಉತ್ಕರ್ಷಣ ನಿರೋಧಕ ಗುಣಗಳಿಗೆ ಹೆಸರುವಾಸಿಯಾಗಿದೆ. ಈ ಗುಣವು ಸಾಮಾನ್ಯ ಕಾಯಿಲೆಗಳನ್ನು ಎದುರಿಸಲು ನಿಮಗೆ ನೆರವಾಗುತ್ತದೆ.

2. ಮಲಬದ್ದತೆ ಮತ್ತು ಮೂಲವ್ಯಾಧಿಗಳು ಎದುರಾಗದಂತೆ ತಡೆಯುತ್ತದೆ
ಮಲಬದ್ಧತೆ ಮತ್ತು ಮೂಲವ್ಯಾಧಿ ಗರ್ಭಿಣಿಯರಿಗೆ ಎದುರಾಗುವ ಸಾಮಾನ್ಯವಾದ ಸಮಸ್ಯೆಗಳಾಗಿವೆ. ಹಾಗಲಕಾಯಿಯಲ್ಲಿ ಹೆಚ್ಚಿನ ಕರಗದ ಮತ್ತು ಕರಗುವ ನಾರಿನಂಶವಿದೆ. ಇದರ ಹೆಚ್ಚಿನ ಭಾಗ ಸಿಪ್ಪೆಯಲ್ಲಿ ಅಂದರೆ ಹೊರಗಿನ ಮೃದುವಾದ ಮುಳ್ಳುಗಳಲ್ಲಿ ಇರುತ್ತದೆ.
ಹಾಗಾಗಿ ಈ ಮುಳ್ಳುಗಳನ್ನು ನಿವಾರಿಸಬಾರದು. ಮೂಲವ್ಯಾಧಿ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ತಡೆಯಲು ಕರಗದ ನಾರು ಅತಿ ಅಗತ್ಯವಾಗಿದೆ. ಹಾಗಾಗಿ ನೀವು ಮಾಡಬೇಕಾಗಿರುವುದು ಏನೆಂದರೆ ನಿಮ್ಮ ಆಹಾರದಲ್ಲಿ ಸ್ವಲ್ಪ ಹಾಗಲಕಾಯಿ ಸೇರಿಸಿ ಮತ್ತು ಈ ಮುಜುಗರ ತರುವ ಸಮಸ್ಯೆಗಳನ್ನು ತಪ್ಪಿಸಿಕೊಂಡು ಗರ್ಭಾವಸ್ಥೆಯ ಮಾಧುರ್ಯವನ್ನು ಸವಿಯಿರಿ.

3. ಆರೋಗ್ಯಕರ ತೂಕವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ
ಗರ್ಭಾವಸ್ಥೆಯಲ್ಲಿ ಪ್ರತಿ ಗರ್ಭವತಿಯ ತೂಕ ಹೆಚ್ಚುತ್ತದೆ, ಹೆಚ್ಚಲೂಬೇಕು. ಆದರೆ ತೂಕವನ್ನು ಹೆಚ್ಚಿಸಿಕೊಳ್ಳುವುದು ಎಂದರೆ ನೀವು ಅನಾರೋಗ್ಯಕರ ಆಹಾರಗಳನ್ನು ಸೇವಿಸಿ ಸ್ಥೂಲಕಾಯ ಪಡೆಯುವುದು ಎಂದಲ್ಲ. ನೀವು ನಿಜವಾದ ಅಂದರೆ ಕೇವಲ ಗರ್ಭಾವಸ್ಥೆಗೆ ಪೂರಕವಾದ ಮತ್ತು ಆರೋಗ್ಯಕರ ತೂಕವನ್ನು ಮಾತ್ರ ಪಡೆಯಬೇಕು.
ಹಾಗಲಕಾಯಿಯಲ್ಲಿರುವ ಕರಗುವ ಮತ್ತು ಕರಗದ ನಾರುಗಳು ಹೆಚ್ಚಿನ ಪ್ರಮಾಣದಲ್ಲಿವೆ. ಈ ನಾರಿನಂಶ ಪೂರ್ಣವಾಗಿ ಜೀರ್ಣವಾಗದೇ ಹೊಟ್ಟೆಯನ್ನು ಹೆಚ್ಚಿನ ಅವಧಿಯಲ್ಲಿ ತುಂಬಿರುವ ಭಾವನೆ ಮೂಡಿಸಲು ನೆರವಾಗುತ್ತವೆ.
ಜೊತೆಗೇ ಹಾಗಲಕಾಯಿಯ ಪೋಷಕಾಂಶಗಳು ನಿಮ್ಮ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಪೂರೈಸುತ್ತದೆ. ಹಾಗಾಗಿ ಕಣ್ಣಿಗೆ ಕಂಡಿದ್ದೆಲ್ಲಾ ತಿನ್ನುವ ಮನಸ್ಸಾಗುವುದರಿಂದ ತಡೆದು ಅನಗತ್ಯ ಆಹಾರ ಸೇವನೆ ತಡೆಯುತ್ತದೆ. ಹಾಗಾಗಿ ತೂಕವನ್ನು ಹೆಚ್ಚಿಸಲು ನೀವು ಹೆಚ್ಚಿನ ಕ್ಯಾಲೋರಿ ಇರುವ ಆಹಾರವನ್ನು ಸೇವಿಸುವ ಅಗತ್ಯವೇ ಎದುರಾಗುವುದಿಲ್ಲ.

4. ಗರ್ಭಾವಸ್ಥೆಯಲ್ಲಿ ಎದುರಾಗುವ ತಾತ್ಕಾಲಿಕ ಮಧುಮೇಹದಿಂದ ರಕ್ಷಿಸುತ್ತದೆ.
ಕೆಲವು ಮಹಿಳೆಯರಿಗೆ ಇತರ ಸಮಯದಲ್ಲಿ ಇರದ ಮಧುಮೇಹ ಗರ್ಭಾವಸ್ಥೆಯಲ್ಲಿ ತಾತ್ಕಾಲಿಕವಾಗಿ ಎದುರಾಗುತ್ತದೆ. ಇದನ್ನು GESTATIONAL DIABETES ಎಂದು ವೈದ್ಯರು ಗುರುತಿಸುತ್ತಾರೆ. ಅದೃಷ್ಟವಶಾತ್, ಹಾಗಲಕಾಯಿಯಲ್ಲಿ ಈ ಸಮಸ್ಯೆಯನ್ನು ತಡೆಗಟ್ಟಲು ಮಾತ್ರವಲ್ಲದೆ ಚಿಕಿತ್ಸೆ ನೀಡಲೂ ಸೂಕ್ತ ಪೋಷಕಾಂಶಗಳಿವೆ.
ಇದು ರಕ್ತದಲ್ಲಿನ ಸಕ್ಕರೆ ಮಟ್ಟಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಪಾಲಿಪೆಪ್ಟೈಡ್-ಪಿ ಮತ್ತು ಶ್ಯೇರಂಟಿನ್ (polypeptide-P and charantin) ನಂತಹ ಪೋಷಕಾಂಶಗಳನ್ನು ಒಳಗೊಂಡಿದೆ.

5. ಫೊಲೇಟ್‌ಗಳ ಸಮೃದ್ಧ ಮೂಲವಾಗಿದೆ.
ಗರ್ಭಾವಸ್ಥೆಯಲ್ಲಿ ಫೋಲಿಕ್ ಆಮ್ಲ ಅಥವಾ ಫೋಲೇಟ್ ಅಗತ್ಯ ಇತರ ಸಮಯಕ್ಕಿಂತಲೂ ಹೆಚ್ಚಾಗಿರುತ್ತದೆ. ಹುಟ್ಟಲಿರುವ ಮಗುವಿನಲ್ಲಿನ ನರ ದೋಷಗಳನ್ನು ನಿವಾರಿಸಲು ಫೋಲೇಟ್‌ಗಳು ಅತಿ ಅಗತ್ಯವಾಗಿದೆ. ಹಾಗಲಕಾಯಿ ಫೋಲಿಕ್ ಆಮ್ಲದ ಸಮೃದ್ಧ ಮೂಲವಾಗಿದೆ ಮತ್ತು ನಿಮ್ಮ ದೈನಂದಿನ ಅವಶ್ಯಕತೆಯ ನಾಲ್ಕನೇ ಒಂದು ಭಾಗವನ್ನು ಪೂರೈಸಬಲ್ಲದು.

6. ಜೀರ್ಣಕ್ರಿಯೆಯ ತೊಂದರೆಗಳಿಂದ ರಕ್ಷಿಸುತ್ತದೆ
ಗರ್ಭಾವಸ್ಥೆಯಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವುದು ಸಾಮಾನ್ಯ ವಿಷಯವಾಗಿದೆ. ದೇಹದಲ್ಲಿ ಸ್ರವಿಸುವ ಹಲವಾರು ಹಾರ್ಮೋನುಗಳಲ್ಲಿನ ತೀವ್ರ ಏರಿಳಿತಗಳು ಮತ್ತು ಗರ್ಭಾಶಯದ ವಿಸ್ತರಣೆ, ವಾಯುಪ್ರಕೋಪ, ಹೊಟ್ಟೆಯುಬ್ಬರಿಕೆ, ಹೊಟ್ಟೆಯ ಉರಿ ಮುಂತಾದ ಸಮಸ್ಯೆಗಳು ಗರ್ಭವತಿಯರು ಎದುರಿಸುವ ಸಾಮಾನ್ಯ ತೊಂದರೆಗಳಾಗಿವೆ. ಹಾಗಲಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ನಾರಿನಂಶವಿರುವುದರಿಂದ ಜೀರ್ಣಕ್ರಿಯೆಗೂ ಒಳ್ಳೆಯದು.



Click it and Unblock the Notifications











