Latest Updates
-
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ
ಗರ್ಭಿಣಿಯಾಗಿದ್ದಾಗ ಸೆಕ್ಸ್ ಸುರಕ್ಷಿತವೇ? ನಿಮ್ಮ ಪ್ರಶ್ನೆಗಳಿಗೆ ಉತ್ತರ
ಗರ್ಭಿಣಿಯಾದಾಗ ಖುಷಿಯ ಜೊತೆಗೆ ಒಂದು ರೀತಿಯ ಭಯ ಇದ್ದೇ ಇರುತ್ತದೆ. ಈ ಸಮಯದಲ್ಲಿ ತುಂಬ ನಾಜೂಕಾಗಿರಬೇಕೆಂದು ಹಿರಿಯರು ಸಲಹೆ ನೀಡುತ್ತಾರೆ. ಜೋರಾಗಿ ಓಡ ಬೇಡ, ಜೋರಾಗಿ ನಡೆಯಬೇಡ, ಸ್ಕೂಟಿ ಓಡಿಸಬೇಡ, ಕಾರು ಡ್ರೈವ್ ಮಾಡುವಾಗ ಹುಷಾರು ಹೀಗೆ ನಾನಾ ಸಲಹೆ ನೀಡುತ್ತಾರೆ.
ಆದರೆ ಗರ್ಭಿಣಿಯಾದ ಬಳಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದೇ? ಎಷ್ಟು ತಿಂಗಳವರೆಗೆ ಲೈಂಗಿಕ ಕ್ರಿಯೆ ಸುರಕ್ಷಿತ ಎಂಬ ಸಂಶಯ ಚೊಚ್ಚಲ ಗರ್ಭಿಣಿಯರಲ್ಲಿ ಇರುತ್ತದೆ, ಇದರ ಬಗ್ಗೆ ಹಿರಿಯರಲ್ಲಿ ಕೇಳಲು ಒಂಥರಾ ಮುಜುಗರ, ಇನ್ನು ಸ್ನೇಹಿತೆಯರ ಬಳಿ ಕೆಲವರಷ್ಟೇ ಈ ಕುರಿತು ಚರ್ಚಿಸುತ್ತಾರೆ, ಮತ್ತೆ ಕೆಲವರಿಗೆ ಹಿಂಜರಿಕೆ. ಗರ್ಭಿಣಿಯಾದಾಗ ತಮ್ಮದೇ ಆದ ಖಾಸಗಿ ಕ್ಷಣವನ್ನು ಕಳೆಯಬಹುದೇ, ಇದರಿಂದ ಗರ್ಭದಲ್ಲಿರುವ ಮಗುವಿಗೆ ತೊಂದರೆಯಾಗಬಹುದೇ ಎಂಬ ಆತಂಕ ಇರುತ್ತದೆ.
ಕೆಲವರಿಗೆ ಸ್ತ್ರೀರೋಗ ತಜ್ಞರು ಮೊದಲ ತ್ರೈ ಮಾಸಿಕದಲ್ಲಿ ಗಂಡ-ಹೆಂಡತಿ ಸೇರಬೇಡಿ ಎಂಬ ಸಲಹೆ ಮಾಡುತ್ತಾರೆ. ಅವರ ಆರೋಗ್ಯ ಸ್ಥಿತಿಯ ಮೇಲೆ ವೈದ್ಯರು ಈ ರೀತಿಯ ಸಲಹೆ ನೀಡಿರುತ್ತಾರೆ. ಅಲ್ಲದೆ ಗರ್ಭಾವಸ್ಥೆಯಲ್ಲಿ ಮಿಲನಕ್ರಿಯೆಯಲ್ಲಿ ಮೊದಲಿನಂತೆ ನಡೆಸಲು ಕಷ್ಟವಾಗುವುದು. ಅಲ್ಲದೆ ಈ ಸಮಯದಲ್ಲಿ ಕೆಲವರಿಗೆ ಲೈಂಗಿಕ ಆಸಕ್ತಿ ಕಡಿಮೆಯಾಗುವುದು, ಇನ್ನು ಕೆಲವರಿಗೆ ಲೈಂಗಿಕ ಆಸಕ್ತಿ ಹೆಚ್ಚುವುದು. ಆದರೆ ಈ ಸಮಯದಲ್ಲಿ ಲೈಂಗಿಕ ಕ್ರಿಯೆ ಎಷ್ಟು ಸುರಕ್ಷಿತ ಎಂಬ ಭಯ ಕೆಲವರಲ್ಲಿರುತ್ತದೆ.
ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ಇದರ ಬಗ್ಗೆ ಬಗ್ಗೆ ನಿಮ್ಮಲ್ಲಿ ಅನೇಕ ಪ್ರಶ್ನೆಗಳಿರುತ್ತದೆ, ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ:

ಗರ್ಭಾವಸ್ಥೆಯಲ್ಲಿ ಸೆಕ್ಸ್ ಸುರಕ್ಷಿತವೇ?
ಗರ್ಭಾವಸ್ಯೆಯಲ್ಲಿ ಸೆಕ್ಸ್ ಸುರಕ್ಷಿತವೇ ಎಂದು ಕೇಳುವುದಾದರೆ ಹೌದು, ಆದರೆ ಅದಕ್ಕೆ ನಿಮ್ಮ ವೈದ್ಯರಿಂದ ಗ್ರೀನ್ ಸಿಗ್ನಲ್ ಸಿಗಬೇಕು, ಕೆಲವರಿಗೆ ಕಾಂಪ್ಲಿಕೇಟ್ ಇರುತ್ತದೆ, ಅಂಥವರಿಗೆ ಈ ಸಮಯದಲ್ಲಿ ಸೆಕ್ಸ್‌ಲೈಫ್ ಬೇಡ ಎಂದು ನಿಮ್ಮ ಡಾಕ್ಟರ್ ಸಲಹೆ ನೀಡಬಹುದು. ಈ ಹಿಂದೆ ಗರ್ಭಪಾತವಾಗಿದ್ದರೆ, ಒಂದಕ್ಕಿಂತ ಹೆಚ್ಚು ಬಾರಿ ಗರ್ಭಪಾತವಾಗಿದ್ದರೆ ವೈದ್ಯರು ಮೊದಲ ಕೆಲ ತಿಂಗಳು ನಿಮ್ಮ ಸಂಗಾತಿ ಜೊತೆ ಸೇರಬೇಡಿ ಎಂದು ಹೇಳಬಹುದು.
ಆಮ್ನಿಯೋಟಿಕ್ ಚೀಲ (ಗರ್ಭ ಚೀಲ)ದಲ್ಲಿ ಮಗು ಸುರಕ್ಷಿತವಾಗಿದ್ದರೂ ಕೆಲವೊಮ್ಮೆ ಸಂಗಾತಿ ಏನಾದರೂ ಸೋಂಕು ಉಂಟಾಗಿದ್ದರೆ (chlamydia, gonorrhea, HIV)ಲೈಂಗಿಕ ಕ್ರಿಯೆ ನಡೆಸಿದಾಗ ಸೋಂಕು ಹರಡುವ ಸಾಧ್ಯತೆ ಇದೆ. ಅಂಥ ಅಪಾಯದ ಭಯ ಇದ್ದರೆ ನಿಮ್ಮ ವೈದ್ಯರ ಬಳಿ ಈ ಕುರಿತು ಕೇಳಿ. ಅಲ್ಲದೆ ಸೆಕ್ಸ್ ಟಾಯ್ಸ್ ಬಳಸುವುದಾದರೆ ಅವುಗಳನ್ನು ಸೋಪು ಹಚ್ಚಿ ತೊಳೆದು ಸ್ವಚ್ಛಗೊಳಿಸಿರಬೇಕು.

ಓರಲ್ ಸೆಕ್ಸ್ ಮಾಡಬಹುದೇ?
ಗರ್ಭಿಣಿಯಾದಾಗ ಓರಲ್ ಸೆಕ್ಸ್ ನಿಮಗೂ, ಮಗುವಿಗೂ ಅಪಾಯಕಾರಿಯಾಗಿದೆ. ಗರ್ಭಿಣಿಯ ಜನನೇಂದ್ರೀಯಗೆ ಗಾಳಿ ಊದುವುದರಿಂದ ಮಗುವಿಗೂ, ತಾಯಿಗೂ ತೊಂದರೆ ಉಂಟಾಗುವುದು. ಇದರಿಂದ ಉಸಿರಾಟದ ತೊಂದರೆ, ಸ್ಟ್ರೋಕ್, ಹೃದಯಾಘಾತ ಮುಂತಾದ ಅಪಾಯ ಉಂಟಾಗುವ ಸಾಧ್ಯತೆ ಇದೆ. ಆದರೆ ಗರ್ಭಿಣಿಯರು ಓರಲ್ ಸೆಕ್ಸ್ ಮಾಡುವುದು ಅಪಾಯಕಾರಿಯಾಗಿದೆ.

ಆನಲ್ ಸೆಕ್ಸ್ ಮಾಡಬಹುದೇ?
ಗರ್ಭಾವಸ್ಥೆಯಲ್ಲಿ ಆನಲ್ ಸೆಕ್ಸ್ ಅಂದರೆ ಗುದದ್ವಾರದ ಮೂಲಕ ಸೆಕ್ಸ್ ಸುರಕ್ಷಿತವಾಗಿದೆ, ಆದರೆ ಹೆಮೋರಾಯ್ಡ್ಸ್ ಸಮಸ್ಯೆಯಿದ್ದರೆ ತೊಂದರೆ ಉಂಟಾಗುವುದು. ಆನಲ್ ಮಾಡಿ ನಂತರ ಜನನೇಂದ್ರೀಯದಲ್ಲಿ ಮಾಡಬೇಡಿ, ಹಾನಿಕಾರಕ ಬ್ಯಾಕ್ಟಿರಿಯಾ ಇದ್ದರೆ ಮಗು ಹಾಗೂ ತಾಯಿಗೆ ಅಪಾಯ ಉಂಟಾಗುವುದು.

ಗರ್ಭಾವಸ್ಥೆಯಲ್ಲಿ ಇರುವಾಗ ಯಾವಾಗ ಸೆಕ್ಸ್ ಸುರಕ್ಷಿತವಲ್ಲ?
ಕೆಲವೊಂದು ಪರಿಸ್ಥಿತಿಯಲ್ಲಿ ಸೆಕ್ಸ್ ಸುರಕ್ಷಿತವಲ್ಲ, ಕೆಲವರಿಗೆ ಕೆಲವು ತಿಂಗಳವರೆಗೆ ಸೆಕ್ಸ್ ಮಾಡಬಾರದು ಎಂದು ನಿಮ್ಮ ಡಾಕ್ಟರ್ ತಿಳಿಸಿದರೆ ಇನ್ನು ಕೆಲವರಿಗೆ 9 ತಿಂಗಳವರೆಗೆ ಸೆಕ್ಸ್ ಸುರಕ್ಷಿತವಲ್ಲ. ನಿಮ್ಮ ಆರೋಗ್ಯ ಸ್ಥಿತಿ ನೋಡಿ ವೈದ್ಯರು ಸಲಹೆ ನೀಡುತ್ತಾರೆ. ಸಾಮಾನ್ಯವಾಗಿ ಈ ಸಮಸ್ಯೆ ಇರುವವರಿಗೆ ಗರ್ಭಿಣಿಯಾಗಿದ್ದಾಗ ಸೆಕ್ಸ್ ಸುರಕ್ಷಿತವಲ್ಲ:
* ಅವಧಿಪೂರ್ವ ಮಗು ಈ ಮೊದಲು ಜನಿಸಿದ್ದರೆ
* ಗರ್ಭಕೋಶ ಅಥವಾ ಜರಾಯುವಿನಲ್ಲಿ ಏನಾದರೂ ಸಮಸ್ಯೆಯಿದ್ದರೆ
* ರಕ್ತಸ್ರಾವ, ಕಿಬ್ಬೊಟ್ಟೆ ನೀವು ಈ ರೀತಿಯ ಸಮಸ್ಯೆ ಇದ್ದರೆ
ಅವಳಿ ಅಥವಾ ತ್ರಿವಳಿ ಮಕ್ಕಳಿದ್ದಾಗ

ಗರ್ಭಿಣಿಯಾಗಿದ್ದಾಗ ಸೆಕ್ಸ್ ಮಾಡಿದರೆ ಮಗುವಿಗೆ ನೋವಾಗುವುದೇ?
ಗರ್ಭಾವಸ್ಥೆಯಲ್ಲಿ ಸೆಕ್ಸ್ ಸುರಕ್ಷಿತವಾಗಿದೆ. ಅಲ್ಲದೆ ಸೆಕ್ಸ್ ಬಳಿಕ ಮಗು ಒದ್ದಂತೆ ಅನಿಸಿದರೆ ಅದು ನಿಮ್ಮಿಬ್ಬರ ಚಟುವಟಿಕೆಯಿಂದ ಅಲ್ಲ, ಸಾಮಾನ್ಯವಾಗಿ ಕಿಕ್ ಮಾಡುವಂತೆ ಮಾಡಿರುತ್ತದೆ, ಆದ್ದರಿಂದ ಈ ಬಗ್ಗೆ ಆತಂಕ ಬೇಡ.

ಗರ್ಭಾವಸ್ಥೆಯಲ್ಲಿ ಸೆಕ್ಸ್ ಮಾಡಿದರೆ ಅವಧಿ ಪೂರ್ವ ಮಗು ಜನಿಸುವುದೇ?
ನಿಮ್ಮ ವೈದ್ಯರು ನಿಮಗೆ ಅವಧಿ ಪೂರ್ವ ಮಗುವಾಗುವ ಸಾಧ್ಯತೆ ಇದೆ ಎಂದಾಗ ಸೆಕ್ಸ್ ಮಾಡುವುದು ಅಪಾಯಕಾರಿ. ಇಲ್ಲದಿದ್ದರೆ ಏನೂ ತೊಂದರೆಯಿಲ್ಲ. ಕೆಲ ತಜ್ಞರು ಕೊನೆಯ ತ್ರೈ ಮಾಸಿಕದಲ್ಲಿ ಸೆಕ್ಸ್ ಮಾಡುವುದು ಒಳ್ಳೆಯದು ಎಂದು ಸಲಹೆ ನೀಡುತ್ತಾರೆ.
ಸೆಕ್ಸ್ ಬಳಿಕ ರಕ್ತಸ್ರಾವ ಉಂಟಾದರೆ ಸಹಜವೇ?
ಸೆಕ್ಸ್ ಬಳಿಕ ರಕ್ತಸ್ರಾವ ಉಂಟಾದರೆ ನಿಮ್ಮ ವೈದ್ಯರ ಬಳಿ ಈ ಕುರಿತು ಹೇಳುವುದು ಒಳ್ಳೆಯದು, ಅವರು ನಿಮಗೆ ಸೂಕ್ತ ಚಿಕಿತ್ಸೆ ಹಾಗೂ ಸಲಹೆ ನೀಡುತ್ತಾರೆ.

ಗರ್ಭಾವಸ್ಥೆಯಲ್ಲಿ ಸೆಕ್ಸ್: ಇದರಿಂದ ದೊರೆಯುವ ಪ್ರಯೋಜನಗಳೇನು?
* ಇಬ್ಬರ ನಡುವೆ ಆತ್ಮೀಯತೆ ಮತ್ತಷ್ಟು ಹೆಚ್ಚಿಸುವುದು
* ನಿಮ್ಮ ದೈಹಿಕ ಆರೋಗ್ಯಕ್ಕೆ ಒಳ್ಳೆಯದು
* ನೋವು ಹಾಗೂ ಕಿರಿಕಿರಿ ಕಡಿಮೆ ಮಾಡುತ್ತದೆ.
* ಒಳ್ಳೆಯ ನಿದ್ದೆ ಬರುವುದು
* ನಿಮ್ಮ ಮೂಡ್ ಚೆನ್ನಾಗಿರುತ್ತದೆ.
* ಸಹಜ ಹೆರಿಗೆಗೆ ಸಹಾಯ ಮಾಡುವುದಾಗಿ ತಜ್ಞರು ಹೇಳುತ್ತಾರೆ.
* ಹೆರಿಗೆಯ ಬಳಿಕ ಬೇಗನೆ ಚೇತರಿಸಿಕೊಳ್ಳಲು ಸಹಕಾರಿ.
ಗರ್ಭಾವಸ್ಥೆಯಲ್ಲಿ ಯಾವ ಸೆಕ್ಸ್ ಭಂಗಿ ಒಳ್ಳೆಯದು?
* ಒಂದು ಬದಿಯಲ್ಲಿ ತಿರುಗಿ ಮಲಗಿ ಮಾಡುವ ಭಂಗಿ
* ಗರ್ಭಿಣಿ ಟಾಪ್‌ನಲ್ಲಿರುವ ಭಂಗಿ
* ಪರಸ್ಪರ ಹಸ್ತ ಮೈಥುನ
* ಆನಲ್ ಸೆಕ್ಸ್



Click it and Unblock the Notifications











