Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್
ಗರ್ಭಿಣಿಯರು ಕಡಲೆ ತಿಂದರೆ ದೊರೆಯುವ ಪ್ರಯೋಜನಗಳು ಹಾಗೂ ಯಾವಾಗ ತಿನ್ನಬಾರದು?
ಗರ್ಭಿಣಿ ಮಹಿಳೆಯರಿಗೆ ಈ ಆಹಾರ ತಿನ್ನು, ಇದನ್ನು ತಿನ್ನಬೇಡ ಎಂದು ಮನೆಯವರು, ಸ್ನೇಹಿತರು ಸಲಹೆ ನೀಡುತ್ತಾರೆ. ವೈದ್ಯರು ಕೂಡ ಯಾವ ಆಹಾರಗಳನ್ನು ತೆಗೆದುಕೊಳ್ಳಬೇಕು, ಯಾವುದನ್ನು ತಿನ್ನದಿರುವುದು ಸೂಕ್ತ ಎಂಬ ಮಾಹಿತಿ ನೀಡುತ್ತಾರೆ. ಏಕೆಂದರೆ ಗರ್ಭಿಣಿ ಮಹಿಳೆಯರ ಆಹಾರಕ್ರಮ ಗರ್ಭದಲ್ಲಿ ಬೆಳೆಯುತ್ತಿರುವ ಮಕ್ಕಳ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಗರ್ಭಿಣಿಯರು ಪೌಷ್ಟಿಕಾಂಶಗಳಿರುವ ಆಹಾರವನ್ನು ತೆಗೆದುಕೊಳ್ಳುವುದರಿಂದ ಮಗು ಆರೋಗ್ಯಕರವಾಗಿ ಬೆಳೆಯುತ್ತದೆ. ಆದ್ದರಿಂದ ಕಾಳುಗಳನ್ನು ತಿನ್ನುವಂತೆ ಹೇಳುತ್ತಾರೆ.
ಕಾಳುಗಳಲ್ಲಿ ಒಂದು ಬಗೆಯಾದ ಚೆನ್ನಾ ಕೂಡ ಗರ್ಭಿಣಿಯರಿಗೆ ಸೇವಿಸಲು ಸೂಕ್ತವಾದ ಆಹಾರವಾಗಿದ್ದು ಇದನ್ನು ತಿನ್ನುವುದರಿಂದ ಪ್ರೊಟೀನ್, ನಾರಿನಂಶ, ಫೋಲೆಟ್, ಕಬ್ಬಿಣದಂಶ, ಮೆಗ್ನಿಷ್ಯಿಯಂ, ಪೊಟಾಷ್ಯಿಯಂ ದೊರೆಯುತ್ತದೆ.

ಇಲ್ಲಿ ನಾವು ಕಡಲೆಕಾಳು(ಚೆನ್ನಾ) ತಿನ್ನುವುದರಿಂದ ದೊರೆಯುವ ಪ್ರಯೋಜನಗಳು, ಅದನ್ನು ಯಾವಾಗ ತಿನ್ನಬಾರದು ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:
ಗರ್ಭಿಣಿಯರು ಕಡಲೆ ತಿಂದರೆ ದೊರೆಯುವ ಪ್ರಯೋಜನಗಳು
1. ರಕ್ತಹೀನತೆ ತಡೆಗಟ್ಟುತ್ತದೆ
ಗರ್ಭಿಣಿ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚು. ಇದನ್ನು ತಡೆಗಟ್ಟಲು ಪೋಷಕಾಂಶವಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. ರಕ್ತಹೀನತೆ ಸಮಸ್ಯೆ ಉಂಟಾದರೆ ಭ್ರೂಣದಲ್ಲಿರುವ ಮಗುವಿಗೆ ಆಮ್ಲಜನಕ ಸಾಕಷ್ಟು ಪ್ರಮಾಣದಲ್ಲಿ ದೊರೆಯದೆ ತೊಂದರೆಯುಂಟಾಗತ್ತದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ ಕಬ್ಬಿಣನಂಶವಿರುವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ಕಡಲೆ ತಿಂದರೆ ದೇಹದಲ್ಲಿ ಕಬ್ಬಿಣದಂಶ ಹೆಚ್ಚಾಗುವುದು, ಇದರಿಂದ ದೇಹದಲ್ಲಿ ಹೀಮೋಗ್ಲೋಬಿನ್ ಹೆಚ್ಚಾಗುವುದು, ದೇಹದಲ್ಲಿ ಕಬ್ಬಿಣದಂಶದ ಕೊರತೆ ಉಂಟಾದರೆ ಮಗು ಅವಧಿಪೂರ್ವ ಹುಟ್ಟುವ ಸಾಧ್ಯತೆ ಇದೆ.
2. ಗರ್ಭಾವಸ್ಥೆಯಲ್ಲಿ ಬರುವ ಮಧುಮೇಹ ತಡೆಗಟ್ಟುತ್ತದೆ
ಕೆಲ ಗರ್ಭಿಣಿಯರಿಗೆ ಮಧುಮೇಹ (gestational diabetes)ಬರುತ್ತದೆ, ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಕಡಿಮೆಯಾದಾಗ ಸಕ್ಕರೆಯಂಶ ಹೆಚ್ಚಾಗಿ ಮಧುಮೇಹ ಉಂಟಾಗುತ್ತದೆ. ರಕ್ತದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುವಲ್ಲಿ ಕಡಲೆ ಸಹಕಾರಿಯಾಗಿದೆ. ಇದರಲ್ಲಿರುವ ನಾರಿನಂಶ ಇನ್ಸುಲಿನ್ ಸಮತೋಲನದಲ್ಲಿರುವಂತೆ ಮಾಡುತ್ತದೆ.
3. ಮಗುವಿನ ಬೆಳವಣಿಗೆಗೆ ಸಹಕಾರಿ
ಗರ್ಭಿಣಿಯರಿಗೆ ಮಗುವಿನ ಬೆಳವಣಿಗೆ ಸರಿಯಾಗಿ ಆಗಲು ಫಾಲಿಕ್ ಮಾತ್ರೆಗಳನ್ನು ನೀಡುತ್ತಾರೆ. ಕಡಲೆಯಲ್ಲಿ ಫೋಲೆಟ್ ಅಂಶ ಅಧಿಕವಿದ್ದು ಅದರಲ್ಲಿರುವ ಖನಿಜಾಂಶಗಳು ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ.. ಅಲ್ಲದೆ ಕಡಲೆಯಲ್ಲಿರುವ ಖನಿಜಾಂಶಗಳು ನ್ಯೂರೆಲ್ ಟ್ಯೂಬ್ ಡಿಫೆಕ್ಟ್ ಅಂದರೆ ಮಗುವಿನ ಮೆದುಳು ಹಾಗೂ ಬೆನ್ನುಮೂಳೆಗೆ ಹಾನಿಯಾಗದಂತೆ ರಕ್ಷಣೆ ಮಾಡುತ್ತದೆ. ಈ ಸಮಸ್ಯೆ ಗರ್ಭಿಣಿಯಾದ ಮೊದಲ ತಿಂಗಳಿನಲ್ಲಿ ಕೆಲವರಲ್ಲಿ ಕಂಡು ಬರುತ್ತದೆ. ಇದನ್ನು ತಡೆಗಟ್ಟುವಲ್ಲಿ ಪೋಷಕಾಂಶಗಳಿರುವ ಇಂಥ ಆಹಾರಗಳು ಸಹಕಾರಿ.
4. ಮಲಬದ್ಧತೆ ತಡೆಗಟ್ಟುಯತ್ತದೆ
ಗರ್ಭಾವಸ್ಥೆಯಲ್ಲಿ ಮಲಬದ್ಧತೆ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ಕಡಲೆಯಲ್ಲಿ ನಾರಿನಂಶಗಳು ಅಧಿಕವಿರುವುದರಿಂದ ಮಲಬದ್ಧತೆ ಸಮಸ್ಯೆ ಹೋಗಲಾಡಿಸುವಲ್ಲಿ ಸಹಕಾರಿ.
5. ಮಗುವಿನ ತ್ವಚೆ, ಕೂದಲು, ಉಗುರಿನ ಬೆಳವಣಿಗೆಗೆ ಒಳ್ಳೆಯದು
ಮಗುವಿನ ಬೆಳವಣಿಗೆಗೆ ಈ ರೀತಿಯ ಕಾಳುಗಳನ್ನು ತಿನ್ನುವುದು ಒಳ್ಳೆಯದು. ಕಡಲೆಯಲ್ಲಿ ಪ್ರೊಟೀನ್ ಅಂಶವಿರುವುದರಿಂದ ಮಗುವಿನ ಅಂಗಾಗಗಳು, ತ್ವಚೆ, ಕೂದಲು ಹಾಗೂ ಉಗುರಿನ ಆರೋಗ್ಯವನ್ನು ಹೆಚ್ಚಿಸುತ್ತದೆ.
ಈ ಸಂದರ್ಭದಲ್ಲಿ ಕಡಲೆ ತಿನ್ನಬೇಡಿ
* ಅತಿಸಾರ(ಭೇದಿ) ಉಂಟಾದಾಗ ಕಡಲೆ ತಿನ್ನಬೇಡಿ
* ಇನ್ನು ಕೆಲವರಿಗೆ ಧಾನ್ಯಗಳನ್ನು ಸೇವಿಸಿದರೆ ಅಲರ್ಜಿ ಸಮಸ್ಯೆ ಉಂಟಾಗುತ್ತದೆ, ಅಂಥವರು ಸೇವಿಸಬೇಡಿ.
* ಕಡಲೆಯನ್ನು ಪ್ರತಿದಿನ ತಿಂದರೆ ಭೇದಿ ಉಂಟಾಗಬಹುದು. ವಾರದಲ್ಲಿ ಎರಡು ಬಾರಿ ಪಲ್ಯ ಅಥವಾ ಸಾರು ಮಾಡಿ ತಿನ್ನಿ.



Click it and Unblock the Notifications