Latest Updates
-
ಬಿಸಿಗಾಳಿಯ ಅಬ್ಬರ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ! -
ಹೊಸ ಜೀವನ ಆರಂಭಿಸುವ ಮುನ್ನ ಎಚ್ಚರ: ವಿಚ್ಛೇದನ ಮತ್ತು ಕಾನೂನು ಹಕ್ಕುಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು? -
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ! -
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ!
ಗರ್ಭ ಧರಿಸಬೇಕಿದ್ದರೆ ಈ ಸಮಯದಲ್ಲಿ ಸೆಕ್ಸ್‌ನಲ್ಲಿ ತೊಡಗಿ!
ನಿಮ್ಮ ಕುಟುಂಬಕ್ಕೆ ಮತ್ತೊಬ್ಬ ಸದಸ್ಯರನ್ನು ಸೇರಿಸಿಕೊಳ್ಳಬೇಕೆಂಬ ಆಸೆಯು ನಿಮ್ಮ ಚಿಗುರೊಡೆದಿದೆಯಾ? ಹಾಗಾದರೆ ನೀವು ಗರ್ಭಧಾರಣೆ ಮಾಡಲು ಸಜ್ಜಾಗಿದ್ದೀರಿ ಎಂದು ಹೇಳಬಹುದು. ಗರ್ಭಧಾರಣೆ ಎನ್ನುವುದು ಹಲವಾರು ಸವಾಲುಗಳನ್ನು ಎದುರಿಸ ಬೇಕಾದ ಸಮಯವಾಗಿದೆ. ಇದು ನಿಮ್ಮ ದೇಹದಲ್ಲಿ ಹಲವಾರು ಬದಲಾವಣೆ ತರುವುದರ ಜತೆಗೆ ಮಾನಸಿಕವಾಗಿಯೂ ನಿಮ್ಮ ಮೇಲೆ ಕೆಲವು ಪರಿಣಾಮ ಬೀರುವುದು. ಆದರೆ ಗರ್ಭ ಧರಿಸುವ ಮೊದಲು ನೀವು ಕೆಲವೊಂದು ವಿಚಾರಗಳನ್ನು ತಿಳಿಯಬೇಕು. ಯಾಕೆಂದರೆ ಗರ್ಭಧಾರಣೆ ಎನ್ನುವುದು ಅಷ್ಟು ಸುಲಭವಾಗಿ ಆಗಲ್ಲ. ಫಲವತ್ತತೆ ಸಮಯದಲ್ಲಿ ಲೈಂಗಿಕ ಕ್ರಿಯೆಗೆ ಒಳಗಾದರೆ ಮಾತ್ರ ಇಂತಹ ಸಾಧ್ಯತೆಯು ಇರುವುದು. ಇದಕ್ಕಾಗಿ ನೀವು ಋತುಚಕ್ರದ ಸಮಯ, ಫಲವತ್ತತೆ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕು. ಆಗ ಮಾತ್ರ ಗರ್ಭ ಧರಿಸಲು ಸಾಧ್ಯವಾಗಿರುವುದು. ಇದು ಹೇಗೆ ಎಂದು ನೀವು ಮುಂದೆ ಓದಿಕೊಳ್ಳಿ...

ನೀವು ಗರ್ಭ ಧರಿಸುವ ಸಾಧ್ಯತೆಯು ಹೆಚ್ಚಾಗಿರುವುದು ಯಾವಾಗ?
ಮೊದಲನೇಯದಾಗಿ ನೀವು ಋತುಚಕ್ರದ ಆವರ್ತನವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಇದಕ್ಕಾಗಿ ನೀವು ಕ್ಯಾಲೆಂಡರ್ ಬಳಸಿಕೊಂಡು ಲೆಕ್ಕ ಹಾಕಬಹುದು ಅಥವಾ ಇದನ್ನು ಗಮನಿಸಲು ನೀವು ಒಂದು ಆ್ಯಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಇಂದಿನ ದಿನಗಳಲ್ಲಿ ಇದಕ್ಕಾಗಿ ಹಲವಾರು ಆ್ಯಪ್ ಗಳು ಇವೆ. ಇದರಿಂದಾಗಿ ನೀವು ಋತುಚಕ್ರ ಆವರ್ತನವನ್ನು ತುಂಬಾ ನಿಖರವಾಗಿ ತಿಳಿಯಬಹುದು.

ನಿಮ್ಮ ಋತುಚಕ್ರದ ಆವರ್ತನ
ಪ್ರತಿಯೊಬ್ಬ ಮಹಿಳೆಗೆ ಕೂಡ ಋತುಚಕ್ರದ ಆವರ್ತನವು ಭಿನ್ನವಾಗಿರುವುದು ಮತ್ತು ಇದು ಸಮಯದಿಂದ ಸಮಯಕ್ಕೆ ಬದಲಾಗುತ್ತಾ ಇರುವುದು. ನೀವು ಮಗು ಬೇಕೆಂದು ಬಯಸುತ್ತಾ ಇದ್ದರೆ ನೀವು ಅಂಡೋತ್ಪತ್ತಿ ಮಾಡುವುದು ಯಾವಾಗ ಎಂದು ಸರಿಯಾಗಿ ತಿಳಿಯಬೇಕು.

ಗರ್ಭ ಧರಿಸಲು ಅತ್ಯುತ್ತಮ ಸಮಯ ಯಾವುದು?
ಅಂಡೋತ್ಪತ್ತಿ ಆದ ಒಂದೆರಡು ದಿನಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಗರ್ಭ ಧರಿಸಬಹುದು.

ಅಂಡೋತ್ಪತ್ತಿ ಎಂದರೇನು?
ಅಂಡೋತ್ಪತ್ತಿ ಎಂದರೆ ಗರ್ಭಕೋಶದಲ್ಲಿ ಮೊಟ್ಟೆಗಳು ಬಿಡುಗಡೆಯಾಗುವುದು. ಇದು ಋತುಚಕ್ರದ ಆವರ್ತನದ ಒಂದು ಭಾಗ ಮತ್ತು ಋತುಚಕ್ರಕ್ಕೆ 14 ದಿನಗಳ ಮೊದಲು ಅಂಡೋತ್ಪತ್ತಿ ಆಗುವುದು.

ಅಂಡೋತ್ಪತ್ತಿ ಆಗುತ್ತಿದೆ ಎಂದು ತಿಳಿಯುವುದು ಹೇಗೆ?
ನಿಮಗೆ ಗರ್ಭ ಧರಿಸಬೇಕು ಎಂದು ಇದ್ದರೆ ಆಗ ನೀವು ಅಂಡೋತ್ಪತ್ತಿ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಅಂಡೋತ್ಪತ್ತಿಯ ದಿನಗಳನ್ನು ತಿಳಿಯಲು ನೀವು ಹಲವು ಆ್ಯಪ್ ಗಳನ್ನು ಬಳಸಿಕೊಳ್ಳಬಹುದು. ಇದರಿಂದ ಅಂಡೋತ್ಪತ್ತಿ ಬಗ್ಗೆ ನಿಮಗೆ ತಿಳಿಯಲು ಸಾಧ್ಯವಾಗುವುದು. ಇದರ ಕೆಲವು ಲಕ್ಷಣಗಳನ್ನು ನೀವು ತಿಳಿಯಿರಿ.

ಸ್ತನಗಳಲ್ಲಿ ನೋವು
ಅಂಡೋತ್ಪತ್ತಿ ವೇಳೆ ಕೆಲವು ಮಹಿಳೆಯರಿಗೆ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳುವುದು ಅಥವಾ ಸ್ತನಗಳು ಮೆತ್ತಗೆ ಆಗುವುದು.

ಕಾಮಾಸಕ್ತಿ ಹೆಚ್ಚಾಗುವುದು
ನಿಮಗೆ ಕಾಮಾಸಕ್ತಿಯು ಹೆಚ್ಚಾಗುತ್ತಲಿದ್ದರೆ ಆಗ ನಿಮ್ಮ ದೇಹದಲ್ಲಿ ಅಂಡೋತ್ಪತ್ತಿಯು ನಡೆಯುತ್ತಿದೆ ಎಂದು ಹೇಳಬಹುದು.

ಗರ್ಭಕಂಠದ ಲೋಳೆಯಲ್ಲಿ ಬದಲಾವಣೆ
ಯೋನಿಯಲ್ಲಿ ಆಗುವಂತಹ ಡಿಸ್ಚಾರ್ಜ್ ಅಂಡೋತ್ಪತ್ತಿ ವೇಳೆಯಲ್ಲಿ ನಿರಂತರವಾಗಿ ಬದಲಾವಣೆ ಆಗುವುದು. ಇದು ತುಂಬಾ ಜಾರುವ, ಹೆಚ್ಚು ಮತ್ತು ನೀರಿನಂತೆ(ಹಸಿ ಮೊಟ್ಟೆಯ ಬಿಳಿಯ ಲೋಳೆಯಂತೆ) ಇರಬಹುದು. ನೀವು ಇದನ್ನು ಪರೀಕ್ಷೆ ಮಾಡಲು ಯೋನಿಯ ಒಳಗಡೆ ಕೈಬೆರಳನ್ನು ಹಾಕಬೇಕು. ಒಂದು ಟಿಶ್ಯೂ ತೆಗೆದುಕೊಂಡು ಯೋನಿಯನ್ನು ಒರೆಸಿಕೊಂಡರೂ ನಿಮಗೆ ಇದು ತಿಳಿದುಬರುವುದು.

ಬೆನ್ನು ಅಥವಾ ಹೊಟ್ಟೆಯ ಕೆಳಭಾಗದಲ್ಲಿ ನೋವು
ನಿಮ್ಮ ಹೊಟ್ಟೆ ಅಥವಾ ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಾ ಇದ್ದರೆ, ಅದು ನಿಮ್ಮ ಋತುಚಕ್ರಕ್ಕೆ 14 ದಿನಗಳ ಇರುವ ವೇಳೆಯಲ್ಲಿ ಈ ರೀತಿಯ ನೋವು ಕಾಣಿಸುತ್ತಿದ್ದರೆ ಆಗ ಅಂಡೋತ್ಪತ್ತಿ ಆಗುತ್ತಿದೆ ಎಂದು ಹೇಳಬಹುದು. ನೋವು ಹೊಟ್ಟೆ ಅಥವಾ ಬೆನ್ನಿನ ಒಂದು ಭಾಗದಲ್ಲಿ ಮಾತ್ರ ಇರಬಹುದು.

ವಾಸನೆಯ ಗ್ರಹಿಕೆ ವೃದ್ಧಿಸುವುದು
ಅಂಡೋತ್ಪತ್ತಿಯ ವೇಳೆ ಹೆಚ್ಚಿನ ಮಹಿಳೆಯರಿಗೆ ವಾಸನೆಯ ಗ್ರಹಿಕೆಯು ಹೆಚ್ಚಾಗುವುದು. ಈ ಅವಧಿಯಲ್ಲಿ ಮಹಿಳೆಯರು ಅಧಿಕ ವಾಸನೆ ಗ್ರಹಿಸುವರು.

ಕೊನೆಯ ಮಾತು
ಕೇವಲ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಕಾರಣದಿಂದ ಗರ್ಭ ಧರಿಸುವರು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅಂಡೋತ್ಪತ್ತಿ ವೇಳೆ ನೀವು ಒಂದೆರಡು ದಿನ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಆಗ ಇದರ ಸಾಧ್ಯತೆಯು ಹೆಚ್ಚಾಗುವುದು. ಅಂಡೋತ್ಪತ್ತಿಯ ಐದು ದಿನಗಳ ಮೊದಲು ನಿಮ್ಮ ಫಲವತ್ತತೆಯು ಆರಂಭವಾಗುವುದು ಮತ್ತು ಅಂಡೋತ್ಪತ್ತಿ ದಿನ ಕೂಡ. ಋತುಚಕ್ರದ ಆವರ್ತನವು ಅನಿಯಮಿತವಾಗಿರುವುದು ಮತ್ತು ಈ ಕಾರಣದಿಂದಾಗಿ ಅಂಡೋತ್ಪತ್ತಿ ಸಮಯವನ್ನು ಕಂಡುಹಿಡಿಯುವುದು ತುಂಬಾ ಕಠಿಣವಾಗಬಹುದು. ಇದರಿಂದ ನೀವು ಯೋನಿಯ ಡಿಸ್ಚಾರ್ಜ್ ನ್ನು ನೋಡಿಕೊಂಡು ಸರಿಯಾಗಿ ತಿಳಿದುಕೊಳ್ಳಬಹುದು.



Click it and Unblock the Notifications