Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಹಸ್ತಸಾಮುದ್ರಿಕೆಯ ಪ್ರಕಾರ ಗರ್ಭಾವಸ್ಥೆಯಲ್ಲಿ ಕಂಡುಬರುವ ತೊಂದರೆಗಳನ್ನು ಮುನ್ಸೂಚಿಸುವ ಸೂಚನೆಗಳು
ಹಸ್ತಗಳ ರೇಖೆಗಳನ್ನು ಓದಬಲ್ಲ ವ್ಯಕ್ತಿಗಳು ಹಸ್ತದ ಹೆಬ್ಬೆರಳಿನ ಉಬ್ಬಿನಲ್ಲಿರುವ ಶುಕ್ರರೇಖೆ (Mount of Venus) ಯನ್ನು ಗಮನಿಸಿ ಈ ವ್ಯಕ್ತಿಗಳಿಗೆ ದೊರಕುವ ಪ್ರೀತಿ ಮತ್ತು ಅಪ್ಯಾಯತೆಯನ್ನು ಗುರುತಿಸುತ್ತಾರೆ. ಈ ರೇಖೆಯ ವಕ್ರತೆ, ಸ್ಪಷ್ಟತೆ, ಎಷ್ಟು ಆಳವಾಗಿದೆ ಮೊದಲಾದ ಅಂಶಗಳನ್ನು ಪರಿಗಣಿಸಿ ಈ ವ್ಯಕ್ತಿ ಎಷ್ಟು ಕ್ರಿಯಾತ್ಮಕರಾಗಿದ್ದಾರೆ, ಎಷ್ಟು ಪ್ರಣಯಿಗಳಾಗಿದ್ದಾರೆ ಹಾಗೂ ಎಷ್ಟು ಸೂಕ್ಷ್ಮ ಸಂವೇದಿ ವ್ಯಕ್ತಿಗಳು ಎಂಬ ವಿವರಗಳನ್ನು ಜ್ಯೋತಿಷಿಗಳು ಮತ್ತು ಹಸ್ತಸಾಮುದ್ರಿಕರು ನೀಡಬಲ್ಲರು....

ಮಹಿಳೆಯರಲ್ಲಿ ಬಂಜೆತನ
ಕೆಲವರಲ್ಲಿ ಹೆಬ್ಬೆರಳಿನ ಉಬ್ಬಿನ ಭಾಗದಲ್ಲಿ ಕೆಲವಾರು ಗೆರೆಗಳಿರಬಹುದು ಹಾಗೂ ಇವು ಆ ವ್ಯಕ್ತಿಯ ಲೈಂಗಿಕ ಜೀವನ ಮತ್ತು ಕುಟುಂಬ ಜೀವನವನ್ನು ಮತ್ತು ಸಂತತಿಯ ವಿವರಗಳನ್ನು ಪ್ರತಿನಿಧಿಸುತ್ತವೆ. ಶುಕ್ರರೇಖೆಯ ಭಾಗದ ನಡುವೆ, ಮೇಲೆ ಮತ್ತು ಕೆಳಗೆ ಮತ್ತು ಶುಕ್ರರೇಖೆಯ ಒಳಗೂ ಈ ರೇಖೆಗಳಿರಬಹುದು.

ಹಸ್ತದಲ್ಲಿರುವ ಈ ರೇಖೆಗಳು
ಈ ರೇಖೆಗಳು ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಭಿನ್ನವಾದ ವ್ಯಾಖ್ಯಾನವನ್ನು ಹೊಂದಿವೆ. ಈ ರೇಖೆ ಮಹಿಳೆಯರಲ್ಲಿ ಮತ್ತು ಪುರುಷರಿಲ್ಲಿರುವ ಯಾವವಿಷಯಗಳನ್ನು ಪ್ರತಿನಿಧಿಸುತ್ತವೆ, ನೋಡೋಣ: ಮೊದಲಿಗೆ ಮಹಿಳೆಯರಲ್ಲಿರುವ ಈ ರೇಖೆಗಳೇನು ಹೇಳುತ್ತವೆ ನೋಡೋಣ...

ಹಸ್ತದಲ್ಲಿರುವ ಈ ರೇಖೆಗಳು
*ಬಲೆಯ ಆಕೃತಿಯಲ್ಲಿದ್ದರೆ-ಇದು ಗರ್ಭಪಾತದ ಸೂಚನೆಯನ್ನು ನೀಡುತ್ತದೆ.
*ಶುಕ್ರರೇಖೆಯ ತೀರಾ ಕೆಳಗೆ, ಅಂದರೆ ಹಸ್ತ ಕೊನೆಯಾಗಿ ಮಣಿಕಟ್ಟು ಪ್ರಾರಂಭವಾಗುವ ಗೆರೆಯಲ್ಲಿ ನೀರಿನ ತೊಟ್ಟು ಹೊರಬೀಳುವಂತೆ ತೋರುವ
ವೃತ್ತಾಕಾರದ ದ್ವೀಪದಂತಿದ್ದರೆ ಇದು ಸಂತತಿ ಕಳೆದುಕೊಳ್ಳುವ/ಕಳೆದುಕೊಂಡಿರುವ ಸಂಕೇತವಾಗಿದೆ.
*ಒಂದು ವೇಳೆ ಇದೇ ಭಾಗದಲ್ಲಿರುವ ರೇಖೆ ಮೇಲ್ಮುಖ ಕಮಾನಿನಾಕೃತಿಯಲ್ಲಿದ್ದರೆ ಈ ಮಹಿಳೆಯರಿಗೆ ಗರ್ಭಧರಿಸುವ ಸಾಧ್ಯತೆಯ ತೊಂದರೆ ಇರುತ್ತದೆ
ಹಾಗೂ ತಡವಯಸ್ಸಿನಲ್ಲಿ ಇವರಿಗೆ ಸಂತಾನಪ್ರಾಪ್ತಿಯಾಗುತ್ತದೆ.

ಹಸ್ತದಲ್ಲಿರುವ ಈ ರೇಖೆಗಳು
ಒಂದು ವೇಳೆ ಮಹಿಳೆಯ ಜೀವನರೇಖೆ ಮುಂದುವರೆಯುತ್ತಾ ನೇರವಾಗಿ ಶುಕ್ರರೇಖೆಯನ್ನು ಸಂಧಿಸಿದರೆ (ನಡುವೆ ತುಂಡು ತುಂಡಾಗಿರುವಂತಿದ್ದರೂ ಸರಿ) ಈಮಹಿಳೆಯರಿಗೆ ಗರ್ಭಧರಿಸಲು ಕೆಲವಾರು ತೊಡಕುಗಳಿರುತ್ತವೆ. ವಿಶೇಷವಾಗಿ ಗರ್ಭಾಶಯ, ಅಂಡಾಶಯ ಮತ್ತು ಮೂತ್ರನಾಳಗಳ ತೊಂದರೆ ಎದುರಾಗುತ್ತದೆ.

ಹಸ್ತದ ಇತರ ಭಾಗದಲ್ಲಿರುವ ರೇಖೆಗಳು
*ಲೈಂಗಿಕ ತೊಂದರೆ ಮತ್ತು ಸಂತತಿಯ ಬಗ್ಗೆ ಹಸ್ತದ ಇತರ ಭಾಗದಲ್ಲಿರುವ ರೇಖೆಗಳೂ ಕೆಲವಾರು ವಿವರಗಳನ್ನು ಒದಗಿಸುತ್ತವೆ:
*ಒಂದು ವೇಳೆ ನಡುಬೆರಳನಿನ ಬುಡದಿಂದ ಪ್ರಾರಂಭವಾದ ರೇಖೆಯೊಂದು ಕೆಳಮುಖ ಸಾಗುತ್ತಾ ವಕ್ರವಾಗಿ ಕಿರುಬೆರಳಿನ ಕೆಳಭಾಗದ ಹಸ್ತದ ಅಂಚಿನಲ್ಲಿಕೊನೆಗೊಂಡಿದ್ದರೆ ಈ ಮಹಿಳೆಯರಿಗೆ ಅಪಘಾತ ಮತ್ತು ಸಂತಾನರಹಿತರಾಗಿರುವ ಸಾಧ್ಯತೆ ಇದೆ.
*ಒಂದು ವೇಳೆ ನಡುಬೆರಳು ಮತ್ತು ಉಂಗುರ ಬೆರಳಿನ ಸ್ಥಾನಗಳ ನಡುವೆ ಎಕ್ಸ್ ಅಕ್ಷರದಂತೆ ಕತ್ತರಿ ಗೆರೆಗಳಿದ್ದರೆ ಈ ಮಹಿಳೆಯರಿಗೆ ನಪುಂಸಕತ್ವ ಕಾಡುತ್ತದೆ.

ಈಗ ಪುರುಷರ ಹಸ್ತದ ರೇಖೆಗಳ ಬಗ್ಗೆ ನೋಡೋಣ
*ಪುರುಷರ ಹಸ್ತದಲ್ಲಿರುವ ಈ ರೇಖೆಗಳು ಅವರ ಲೈಂಗಿಕ ಜೀವನ ಮತ್ತು ಸಂತತಿ ಮುಂದುವರೆಯಲು ಇವರ ಕೊಡುಗೆಯ ಬಗ್ಗೆ ತಿಳಿಸುತ್ತವೆ.
*ಹಸ್ತದ ಶುಕ್ರರೇಖೆ ಇರುವ ಭಾಗದಲ್ಲಿ ಎಲ್ಲಿಯೂ ಎಕ್ಸ್ ಅಕ್ಷರದಂತೆ ಕತ್ತರಿ ಗೆರೆಗಳಿದ್ದರೆ ಇವರಿಗೆ ಲೈಂಗಿಕ ಸಾಮರ್ಥ್ಯದ ಕೊರತೆ, ಕಡಿಮೆ ವೀರ್ಯಾಣು ಸಂಖ್ಯೆ ಹಾಗೂ ಪ್ರಾಸ್ಟೇಟ್ ಗ್ರಂಥಿಯ ಸಮಸ್ಯೆಗಳು ಎದುರಾಗುತ್ತವೆ.
*ಪುರುಷರಲ್ಲಿ, ಒಂದು ವೇಳೆ ಜೀವನರೇಖೆ ಶುಕ್ರರೇಖೆಯನ್ನು ಆವರಿಸಿಕೊಂಡು ಮುಂದುವರೆದಿದ್ದರೆ, ಅಂದರೆ ಈ ರೇಖೆ ಹೆಬ್ಬೆರಳಿನ ಬುಡದಿಂದ ಹೊರಟು ವೃತ್ತಾಕಾರದಲ್ಲಿ ಹಸ್ತದ ಬುಡಕ್ಕೆ ಅಂದರೆ ಮಣಿಕಟ್ಟಿನ ರೇಖೆಯ ಅಂಚನ್ನು ಸಂಧಿಸಿದರೆ ಈ ವ್ಯಕ್ತಿಗಳಲ್ಲಿ ನಪುಂಸಕತ್ವ ಮತ್ತು ಕೆಲವು ಸಮಯದಲ್ಲಿ ಲೈಂಗಿಕ ತೊಂದರೆಗಳೂ ಎದುರಾಗುತ್ತವೆ.



Click it and Unblock the Notifications
