Latest Updates
-
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್!
ದಿನಕ್ಕೊಂದು ಎಳೆನೀರು ಕುಡಿದರೂ ಸಾಕು, ಫಲವತ್ತತೆ ಹೆಚ್ಚಾಗುತ್ತದೆಯಂತೆ!
ಬೇಸಿಗೆ ಬರುತ್ತಿರುವಂತೆ ಎಳನೀರಿಗೆ ಬೇಡಿಕೆ ಕೂಡ ಹೆಚ್ಚಾಗುವುದು. ಎಳನೀರಿನಲ್ಲಿ ಇರುವಂತಹ ಪೋಷಕಾಂಶಗಳು ಬೇರೆ ಯಾವುದೇ ಪಾನೀಯದಲ್ಲೂ ಸಿಗದು ಎನ್ನಲಾಗುತ್ತದೆ. ಇದು ಒಂದು ರೀತಿಯಲ್ಲಿ ಮಾನವನ ದೇಹಕ್ಕೆ ಗ್ಲೂಕೋಸ್ ರೀತಿಯಲ್ಲಿ ಕೆಲಸ ಮಾಡುವುದು. ಇಂದಿನ ದಿನಗಳಲ್ಲಿ ಎಳನೀರಿನ ಮಹತ್ವದ ಬಗ್ಗೆ ತಿಳಿದುಕೊಂಡ ಪರಿಣಾಮ ಪ್ರತಿಯೊಬ್ಬರು ಇದನ್ನು ಬಳಕೆ ಮಾಡಲು ಮುಂದಾಗುತ್ತಿದ್ದಾರೆ ಮತ್ತು ಆರೋಗ್ಯ ಕಾಪಾಡಿಕೊಳ್ಳುತ್ತಿರುವರು.
ಇದು ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಪ್ರತಿಯೊಬ್ಬರಿಗೂ ತುಂಬಾ ಒಳ್ಳೆಯದು. ಗರ್ಭಿಣಿ ಮಹಿಳೆಯರು ಎಳನೀರು ಸೇವನೆ ಮಾಡಿದರೆ ಆಗ ಗರ್ಭದಲ್ಲಿರುವ ಮಗುವಿನ ಫಲವತ್ತತೆಯು ಹೆಚ್ಚಾಗುವುದು ಎಂದು ತಜ್ಞರು ಹೇಳುತ್ತಾರೆ. ಇಂದಿನ ದಿನಗಳಲ್ಲಿ ಪುರುಷರಲ್ಲಿ ಫಲವತ್ತತೆಯು ಕಡಿಮೆ ಆಗುತ್ತಿರುವ ಕಾರಣ ಎಳನೀರು ಮಹತ್ವದ ಪಾತ್ರ ನಿರ್ವಹಿಸಬಹುದು.

ಅಧ್ಯಯನಗಳ ಪ್ರಕಾರ
ಗರ್ಭಿಣಿಯರು ಸೇವನೆ ಮಾಡುವಂತಹ ಉನ್ನತ ಮಟ್ಟದ ಕೊಬ್ಬಿನ ಆಹಾರವನ್ನು ಎಳನೀರು ಹಿಮ್ಮುಖವಾಗುವಂತೆ ಮಾಡುವುದು. ಗರ್ಭಧಾರಣೆ ವೇಳೆ ಹೆಚ್ಚು ಕೊಬ್ಬಿನ ಆಹಾರ ತಿಂದರೆ ಅದರಿಂದ ಹುಟ್ಟುವ ಮಗು ಬಾಲ್ಯದಲ್ಲೇ ಬೊಜ್ಜಿಗೆ ಗುರಿಯಾಗುವ ಸಾಧ್ಯತೆಯು ಇರುವುದು ಅಥವಾ ಹದಿ ಹರೆಯದಲ್ಲೂ ಬೊಜ್ಜು ಕಾಣಿಸಿಕೊಳ್ಳಬಹುದು ಎಂದು ಅಧ್ಯಯನಗಳು ಹೇಳಿವೆ. ಎಳನೀರು ಹಸಿರು ಹೊದಿಕೆಯನ್ನು ಹೊಂದಿದ್ದು, ಒಳಗಡೆ ತುಂಬಾ ಶುಭ್ರವಾಗಿರುವ ನೀರು ಇರುವುದು. ಇದನ್ನು ತೆಂಗಿನ ಹಾಲು ಎಂದು ಗೊಂದಲ ಮಾಡಿಕೊಳ್ಳಬಾರದು. ಯಾಕೆಂದರೆ ತೆಂಗಿನ ಕಾಯಿಯ ನೀರು ಮತ್ತು ತೆಂಗಿನಕಾಯಿ ಬಳಸಿಕೊಂಡು ತೆಂಗಿನ ಹಾಲನ್ನು ತಯಾರಿಸಲಾಗುತ್ತದೆ. ಆದರೆ ಎಳನೀರಿನ ನೀರು ಶೇ. 95ರಷ್ಟು ನೀರು ಆಗಿರುವುದು.

ಅಧ್ಯಯನಗಳ ಪ್ರಕಾರ
ಅಧ್ಯಯನದ ಪ್ರಕಾರ ಎಳನೀರಿನಲ್ಲಿ ಇರುವ ಕೊಬ್ಬು ತಗ್ಗಿಸುವಂತಹ ಹೈಪೋಲಿಪಿಡೆಮಿಕ್ ಎನ್ನುವ ಅಂಶವು ಗರ್ಭದಲ್ಲಿರುವ ಇಲಿ ಮರಿಗಳ ಕೊಬ್ಬನ್ನು ಗಣನೀಯವಾಗಿ ತಗ್ಗಿಸಿದೆ ಎಂದು ತಿಳಿದುಬಂದಿದೆ. ಇದು ಗರ್ಭ ಧರಿಸಿರುವ ಇಲಿಗಳಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿದೆ ಎಂದು ಎಳನೀರಿನ ಆಹಾರ ಪಥ್ಯವನ್ನು ಇಲಿಗಳ ಮೇಲೆ ಪ್ರಯೋಗ ಮಾಡಿದ ಸಂದರ್ಭದಲ್ಲಿ ತಿಳಿದುಬಂದಿದೆ. 2017ರಲ್ಲಿ ಉಬಾದಾನ್ ನ ವಿಶ್ವವಿದ್ಯಾನಿಲಯವು ನಡೆಸಿರುವಂತಹ ಅಧ್ಯಯನದಲ್ಲಿ ಇದನ್ನು ಕಂಡುಕೊಳ್ಳಲಾಗಿದೆ. ಎಳನೀರಿನ ಸೇವನೆ ಮಾಡಿದರೆ ಆಗ ಗರ್ಭದಲ್ಲಿರುವ ಮಗುವಿನ ಕೊಬ್ಬು ಕಡಿಮೆ ಆಗುವುದು ಎಂದು ಸಂಶೋಧನೆಗಳಿಂದ ಕಂಡುಕೊಳ್ಳಲಾಗಿದೆ ಎಂದು ವರದಿಗಳು ಹೇಳಿವೆ.

ಗರ್ಭಧಾರಣೆ ವೇಳೆ
ಅಲ್ಲದೆ ಗರ್ಭಧಾರಣೆ ವೇಳೆ ಪೋಷಕಾಂಶ ಮೌಲ್ಯಗಳು ತಾಯಿ ಹಾಗೂ ಮಗುವಿನ ಆರೋಗ್ಯದ ಮೇಲೆ ತೀವ್ರ ಪರಿಣಾಮವನ್ನು ಬೀರುವುದು. ಬೊಜ್ಜು ಮತ್ತು ಕೆಟ್ಟ ಪೋಷಕಾಂಶಗಳನ್ನು ಹೊಂದಿರುವ ಆಹಾರದಿಂದಾಗಿ ಭವಿಷ್ಯದಲ್ಲಿ ಮಹಿಳೆಯಲ್ಲಿ ಫಲವತ್ತತೆ ಸಮಸ್ಯೆಯು ಕಂಡುಬರಬಹುದು. ಅತಿಯಾದ ಬೊಜ್ಜು ಮತ್ತು ಕಡಿಮೆ ಪೋಷಕಾಂಶಗಳನ್ನು ಹೊಂದಿರುವ ಆಹಾರ ಕ್ರಮದಿಂದಾಗಿ ಮಹಿಳೆಯರಲ್ಲಿ ಅಂಡೋತ್ಪತ್ತಿ ಮೇಲೆ ಪರಿಣಾಮ ಬೀರಬಹುದು. ಇದರಿಂದಾಗಿ ಭವಿಷ್ಯದಲ್ಲಿ ಇದು ಹೆಣ್ಣು ಮಕ್ಕಳಲ್ಲಿ ಫಲವತ್ತತೆ ಸಮಸ್ಯೆಯು ಗಂಭೀರ ಮಟ್ಟಕ್ಕೆ ತಲುಪಬಹುದು ಎಂದು ಅಧ್ಯಯನಗಳು ತಿಳಿಸಿವೆ. ಗರ್ಭದಲ್ಲಿರುವ ಮಗುವಿನ ಕೊಬ್ಬನ್ನು ತಗ್ಗಿಸುವ ಸಲುವಾಗಿ ಎಳನೀರನ್ನು ಆಹಾರ ಕ್ರಮದಲ್ಲಿ ಸೇರಿಸುವ ಬಗ್ಗೆ ಅಧ್ಯಯನಗಳು ನಡೆಯುತ್ತಲಿದೆ ಎಂದು ತಿಳಿದುಬಂದಿದೆ.

ಸಂಶೋಧನೆಗಳು ಕಂಡುಕೊಂಡಿರುವ ಪ್ರಕಾರ
ಸಂಶೋಧನೆಗಳು ಕಂಡುಕೊಂಡಿರುವ ಪ್ರಕಾರ ಈ ಬಗ್ಗೆ ನಡೆಸಿರುವಂತಹ ಅಧ್ಯಯನಗಳು ತುಂಬಾ ಬದಲಾವಣೆಗಳನ್ನು ಉಂಟು ಮಾಡಲಿದೆ ಎಂದಿದ್ದಾರೆ. ಪ್ರತಿಯೊಬ್ಬ ಸಂಶೋಧಕನು ವೈಯಕ್ತಿಕವಾಗಿ ಯಾವ ರೀತಿಯ ಜ್ಞಾನವನ್ನು ಪಡೆಯುತ್ತಾನೆ ಎನ್ನುವುದನ್ನು ಇಲ್ಲಿ ಒಟ್ಟು ಸೇರಿಸಿಕೊಂಡು ಅದನ್ನು ಮಂಡಿಸಲು ಒಂದು ರೀತಿಯ ವೇದಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಯುಸಿಎಚ್ ನ ಮುಖ್ಯ ವೈದ್ಯಕೀಯ ನಿರ್ದೇಶಕ ಟೆಮಿಟೊಪೆ ಅಲೊಗ್ನೆ ಅವರು ಹೇಳುವ ಪ್ರಕಾರ ಯುಸಿಎಚ್ ವೈದ್ಯಕೀಯ ಕಾಲೇಜುಗಳಿಂದ ಸಂಪರ್ಕವನ್ನು ಕಡಿದುಕೊಂಡಿಲ್ಲ. ಸಂಶೋಧನೆಗಳ ವರದಿಯು ವಿಶ್ವವಿದ್ಯಾನಿಲಯಗಳಲ್ಲಿ ಹೆಚ್ಚು ಅನುವಾದ ಆಗಬೇಕು. ಇದರಿಂದಾಗಿ ಸಂಶೋಧನೆಗಳಿಂದ ಪಡೆದಿರುವ ಸರಿಯಾದ ಮಾಹಿತಿಗಳು ಹಂಚಿಕೊಳ್ಳಲು ಸಹಕಾರಿಯಾಗುವುದು.

ತಾಯಿ ಹಾಗೂ ಮಗುವಿನ ಬೆಳವಣಿಗೆಗೆ ಸಹಕಾರಿ
ಹಿಂದೆ ನಡೆಸಿರುವಂತಹ ಕೆಲವೊಂದು ಅಧ್ಯಯನಗಳ ಪ್ರಕಾರ ಎಳನೀರು ಸೇವನೆ ಮಾಡುವುದು ತಾಯಿ ಹಾಗೂ ಮಗುವಿನ ಬೆಳವಣಿಗೆಗೆ ಸಹಕಾರಿಯಾಗಿರುವುದು. ಎಳನೀರು ಮಲಬದ್ಧತೆ ನಿವಾರಣೆ ಮಾಡುವುದು. ಇದು ನಾರಿನಾಂಶದಿಂದ ಸಮೃದ್ಧವಾಗಿದೆ ಮತ್ತು ಹೊಟ್ಟೆಯ ಕ್ರಿಯೆಗಳು ಸರಾಗವಾಗಿ ಆಗಲು ನೆರವಾಗು ವುದು. ಗರ್ಭಧಾರಣೆ ವೇಳೆ ಮಲಬದ್ಧತೆಯು ಒಂದು ದೊಡ್ಡ ಸಮಸ್ಯೆಯಾಗಿರುವುದು.

ವಾಕರಿಕೆ, ವಾಂತಿ ಇತ್ಯಾದಿ ಸಮಸ್ಯೆಗೆ ಎಳನೀರು ಬಹಳ ಒಳ್ಳೆಯದು
ಗರ್ಭಿಣಿಯರು ಇದೇ ವೇಳೆ ಬೆಳಗ್ಗಿನ ಸಮಸ್ಯೆ, ವಾಕರಿಕೆ, ವಾಂತಿ ಇತ್ಯಾದಿ ಸಮಸ್ಯೆಗಳನ್ನು ಎದುರಿಸುವರು. ಎಳನೀರು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವುದು. ಮತ್ತು ನಿಶ್ಯಕ್ತಿಯಿಂದಲೂ ಆರಾಮ ನೀಡುವುದು. ಯಾವುದೇ ವಿಧದಿಂದಲು ನೀರನ್ನು ಸೇವನೆ ಮಾಡಿದರೆ ಅದರಿಂದ ಮೂತ್ರನಾಳದ ಸೋಂಕಿನ ಸಮಸ್ಯೆಯು ಬಗೆಹರಿಯುವುದು. ಎಳನೀರಿನ ಸೇವನೆ ಮಾಡಿದರೆ ಅದರಿಂದ ಮೂತ್ರ ವಿಸರ್ಜನೆಯು ಸರಾಗವಾಗಿ ಆಗುವುದು. ಇದರಿಂದ ಮೂತ್ರನಾಳದ ಸೋಂಕಿನ ಸಮಸ್ಯೆಯು ಕಡಿಮೆಯಾಗುವುದು. ಗರ್ಭಿಣಿಯರಲ್ಲಿ ಮೂತ್ರನಾಳದ ಸೋಂಕಿನ ಸಮಸ್ಯೆಯು ಹೆಚ್ಚಾಗಿ ಕಂಡುಬರುವುದು. ಹಿಂದೆ ತಜ್ಞರು ಹೇಳುವ ಪ್ರಕಾರನ ಬಾಯಾರಿಕೆಯಾದಾಗ ಎಳನೀರು ಕುಡಿದರೆ ಆಗ ಅನಿಯಮಿತ ಋತುಚಕ್ರದ ಸಮಸ್ಯೆಯು ನಿವಾರಣೆ ಆಗುವುದು. ಎಳನೀರು ಸೆಕ್ಸ್ ಹಾರ್ಮೋನಿನಂತಹ ಚಟುವಟಿಕೆಯನ್ನು ಹೆಚ್ಚು ಮಾಡುವ ಕಾರಣದಿಂದಾಗಿ ಫಲವತ್ತತೆ ಬಲಪಡಿಸಲು ನೆರವಾಗುವುದು. ಯಾಕೆಂದರೆ ಇದು ಋತುಚಕ್ರದ ಆವರ್ತನದ ಮೇಲೆ ಪರಿಣಾಮ ಬೀರುವುದು.



Click it and Unblock the Notifications











