ಗರ್ಭಿಣಿಯರು ಮಾವಿನಹಣ್ಣು ತಿನ್ನುತ್ತಿದ್ದೀರಾ ? ಹಾಗಾದರೆ ಸ್ವಲ್ಪ ಇಲ್ಲಿ ಕೇಳಿ

ಈಗಂತೂ ಮಾವಿನ ಹಣ್ಣಿನ ಸೀಸನ್. ಎಲ್ಲಿ ನೋಡಿದರೂ ಬರೀ ಮಾವಿನದೇ ಕಾರುಬಾರು . ಪಕ್ಕದ ಅಂಗಡಿಯ ಮಾವಿನ ಹಣ್ಣಿನ ಗಮ ರಸ್ತೆ ಬದಿ ಹಾಗೆ ಸುಮ್ಮನೆ ಹಾದು ಹೋಗುತ್ತಿರುವ ನಮ್ಮ ಮೂಗಿಗೆ ಬಡಿಯದೇ ಇರದು . ಅರ್ಧಂಬರ್ಧ ಹಣ್ಣಾಗಿರುವ ಮಾವಿನಿಂದ ಪೂರಾ ಹಣ್ಣಾಗಿರುವ ಮಾವೂ ಸಿಗುತ್ತದೆ . ನೋಡಿದರೆ ನಮಗೇ ತೆಗೆದುಕೊಂಡು ತಿನ್ನಬೇಕೆಂಬ ಆಸೆ ಬಂದಿರುವಾಗ ಮೊದಲೇ ಬಯಕೆಗಳನ್ನು ಹೊತ್ತು ಜೀವನ ಸಾಗಿಸುತ್ತಿರುವ ಗರ್ಭಿಣಿ ಹೆಂಗಸರಿಗೆ ತಿನ್ನಲು ಇಷ್ಟವಾಗದೇ ಇರುತ್ತದೆಯೇ ? ಮೊದಲೇ ಹುಳಿ ಸಿಹಿಯ ಮಿಶ್ರಣ ಬೇರೆ .

mango

ಅಷ್ಟೇ ಅಲ್ಲದೆ , ಮಾವಿನ ಹಣ್ಣಿನಲ್ಲಿ ಅಗಾಧ ವಾದ ಪೋಷಕಾಂಶಗಳೂ ಸೇರಿವೆ . ಕಬ್ಬಿಣದ ಅಂಶ , ಖನಿಜಾಂಶ , ಪೊಟ್ಯಾಸಿಯಂ , ಮೆಗ್ನೀಷಿಯಂ ಮತ್ತು ವಿಟಮಿನ್ ಗಳಾದ ವಿಟಮಿನ್ ' ಎ ' , ವಿಟಮಿನ್ ' ಬಿ ೬ ' , ವಿಟಮಿನ್ ' ಬಿ ೯ ' ಮತ್ತು ವಿಟಮಿನ್ ' ಸಿ ' . ಇವೆಲ್ಲವೂ ಒಂದು ಅರ್ಥದಲ್ಲಿ ಗರ್ಭಿಣಿಯರಿಗೆ ಮತ್ತು ಬೆಳೆಯುತ್ತಿರುವ ಮಗುವಿಗೆ ಅತ್ಯವಶ್ಯಕ. ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಂಡುಬರುವ ವಾಕರಿಕೆಯನ್ನು ಸಹ ಈ ಮಾವಿನ ಹಣ್ಣು ಕಡಿಮೆ ಮಾಡುತ್ತದೆ . ಮಾವಿನ ಹಣ್ಣು ಮತ್ತು ಗರ್ಭಧಾರಣೆಗೂ ಇರುವ ಆತ್ಮೀಯ ಸಂಬಂಧ.

ಮಾವಿನ ಹಣ್ಣು ಅನೀಮಿಯಾ ವನ್ನು ದೂರ ಮಾಡುತ್ತದೆ

ಮಾವಿನ ಹಣ್ಣು ಅನೀಮಿಯಾ ವನ್ನು ದೂರ ಮಾಡುತ್ತದೆ

ಗರ್ಭಿಣಿಯರಿಗೆ ಗರ್ಭಾವಸ್ಥೆಯ ಸಮಯದಲ್ಲಿ ಕೆಂಪು ರಕ್ತ ಕಣಗಳು ಬಹಳ ಮುಖ್ಯ . ದೇಹದಲ್ಲಿ ಅವುಗಳ ಸಂಖ್ಯೆ ಕಡಿಮೆ ಆಗದಂತೆ ನೋಡಿಕೊಳ್ಳಬೇಕು . ಒಂದು ವೇಳೆ ಕಡಿಮೆ ಆದರೆ ಅದನ್ನೇ ವೈದ್ಯರು ' ಅನೀಮಿಯಾ ' ಎಂದು ಹೇಳುತ್ತಾರೆ . ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಜಾಸ್ತಿ ಮಾಡಿಕೊಳ್ಳಲು ಕಬ್ಬಿಣ ಅಂಶ ಇರುವ ಆಹಾರದ ಸೇವನೆ ಅತ್ಯಗತ್ಯ . ಇದಕ್ಕೆ ಬೇರೆಲ್ಲೋ ಯಾಕೆ ಹುಡುಕುತ್ತೀರಿ , ಪ್ರತಿ ದಿನ ಎರಡು ಮಾವಿನ ಹಣ್ಣು ತಿನ್ನಿ ಸಾಕು.

ಮಾವಿನ ಹಣ್ಣಿನಲ್ಲಿರುವ ' ಫೋಲಿಕ್ ಆಸಿಡ್ ' ಅಂಶ ಭ್ರೂಣದ ಬೆಳವಣಿಗೆಯಲ್ಲಿ ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ

ಮಾವಿನ ಹಣ್ಣಿನಲ್ಲಿರುವ ' ಫೋಲಿಕ್ ಆಸಿಡ್ ' ಅಂಶ ಭ್ರೂಣದ ಬೆಳವಣಿಗೆಯಲ್ಲಿ ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ

ಗರ್ಭಿಣಿಯರ ಆರೋಗ್ಯದ ವಿಚಾರದಲ್ಲಿ ಮಾವಿನ ಹಣ್ಣಿನ ವಿಶೇಷತೆಯೇ ಇದು . ಬೆಳೆಯುತ್ತಿರುವ ಭ್ರೂಣದ ಬೆಳವಣಿಗೆಯಲ್ಲಿ ತನ್ನದೇ ಆದ ಕೊಡುಗೆ ನೀಡಿದೆ . ಮಾವಿನ ಹಣ್ಣಿನಲ್ಲಿ ಕೇವಲ ಕಬ್ಬಿಣದ ಅಂಶ ಅಷ್ಟೇ ಅಲ್ಲದೆ , ಫೋಲಿಕ್ ಆಸಿಡ್ ಅಂಶ ಕೂಡ ಇದೆ . ಇದರಿಂದ ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ ಬೆಳೆಯುತ್ತಿರುವ ಮಗುವಿನ ಭ್ರೂಣದಲ್ಲಿ ಮೆದುಳು ಮತ್ತು ನರಮಂಡಲದ ಸರಿಯಾದ ಬೆಳೆಯುವಿಕೆಗೆ ಸಹಾಯಕವಾಗುತ್ತದೆ .

ಮಾವಿನ ಹಣ್ಣು ಮಲಬದ್ಧತೆಯನ್ನು ನಿವಾರಿಸುತ್ತದೆ

ಮಾವಿನ ಹಣ್ಣು ಮಲಬದ್ಧತೆಯನ್ನು ನಿವಾರಿಸುತ್ತದೆ

ಗರ್ಭಿಣಿ ಹೆಂಗಸರು ಸಾಮಾನ್ಯವಾಗಿ ಈ ಮಲಬದ್ಧತೆಯ ಸಮಸ್ಯೆ ಎದುರಿಸುತ್ತಿರುತ್ತಾರೆ . ಸರಿಯಾಗಿ ಜೀರ್ಣ ಕ್ರಿಯೆ ಆಗದ ಕಾರಣ ಈ ಸಮಸ್ಯೆ ತಲೆದೋರಿರುತ್ತದೆ . ಆದರೆ ಮಾವಿನ ಹಣ್ಣು ಈ ಸಮಸ್ಯೆಗೆ ಮುಕ್ತಿ ಹಾಡುತ್ತದೆ . ಮಾವಿನ ಹಣ್ಣಿನಲ್ಲಿ ಜೀರ್ಣ ಕ್ರಿಯೆಗೆ ಬೇಕಾದ ಅಗತ್ಯವಾದ ಫೈಬರ್ ಅಂಶ ಇರುವುದರಿಂದ ಇದನ್ನು ತಿಂದರೆ ಜೀರ್ಣಾಂಗ ಸರಿಯಾಗಿ ಕೆಲಸ ಮಾಡುತ್ತದೆ . ಆದರೆ ಅತಿಯಾದ ಮಾವಿನ ಹಣ್ಣಿನ ಸೇವನೆ ಬೇಡ . ಏಕೆಂದರೆ ಇದರಿಂದ ಗ್ಯಾಸ್ಟ್ರಿಕ್ ಆಗುವ ಸಮಸ್ಯೆ ಎದುರಾಗುತ್ತದೆ .

ಮಾವಿನಹಣ್ಣಿನಲ್ಲಿರುವ ವಿಟಮಿನ್ ' ಸಿ ' ಒಂದು ಆಂಟಿ ಆಕ್ಸಿಡಾಂಟ್ ಕೂಡ ಹೌದು

ಮಾವಿನಹಣ್ಣಿನಲ್ಲಿರುವ ವಿಟಮಿನ್ ' ಸಿ ' ಒಂದು ಆಂಟಿ ಆಕ್ಸಿಡಾಂಟ್ ಕೂಡ ಹೌದು

ನಾವಿರುವ ಪರಿಸರ ದಲ್ಲಿ ನಮಗೆ ದೇಹದಲ್ಲಿ ಫ್ರೀ ರಾಡಿಕಲ್ ನ ಸಮಸ್ಯೆ ಎದುರಾಗುತ್ತದೆ . ಇವು ಸೂರ್ಯನ ವಿಕಿರಣಗಳಿಂದಲೋ , ಸಿಗರೆಟ್ ಹೊಗೆಯಿಂದಲೋ ಅಥವಾ ಇನ್ನಾವುದೇ ಕೆಮಿಕಲ್ ವಸ್ತುಗಳಿಂದಲೋ ಉಂಟಾಗಬಹುದು . ಇವು ದೇಹದಲ್ಲಿ ರಕ್ತ ಕಣಗಳ ಜೊತೆ ಇಡೀ ದೇಹವನ್ನೇ ಸಂಚರಿಸುತ್ತವೆ ಮತ್ತು ಇದರಿಂದ ಕ್ಯಾನ್ಸರ್ ಉಂಟಾಗುವ ಲಕ್ಷಣ ಕೂಡ ಕಂಡು ಬರುತ್ತದೆ . ಇದರಿಂದ ಬೆಳೆಯುತ್ತಿರುವ ಭ್ರೂಣದ ಮೇಲೆ ನೇರವಾದ ಪ್ರಭಾವ ಬೀರುತ್ತದೆ . ವಿಟಮಿನ್ 'ಸಿ ' ಮೊದಲೇ ಹೇಳಿದಂತೆ ಒಂದು ಆಂಟಿ ಆಕ್ಸಿಡಾಂಟ್ ಆಗಿದ್ದು ಈ ಎಲ್ಲಾ ಸಮಸ್ಯೆಯಿಂದ ಕಾಪಾಡುತ್ತದೆ . ಬೆಳೆಯುತ್ತಿರುವ ಮಗುವನ್ನು ಒಂದು ರಕ್ಷಾ ಕವಚದಂತೆ ನೋಡಿಕೊಳ್ಳುತ್ತದೆ . ಅಲ್ಲದೆ ವಿಟಮಿನ್ ' ಸಿ ' ಪ್ರಸವಪೂರ್ವ ಹೊಟ್ಟೆನೋವನ್ನು ತಡೆಯುತ್ತದೆ .

ಮಾವಿನ ಹಣ್ಣಿನಲ್ಲಿ ಅಡಗಿದೆ ವಿಟಮಿನ್ ' ಎ '

ಮಾವಿನ ಹಣ್ಣಿನಲ್ಲಿ ಅಡಗಿದೆ ವಿಟಮಿನ್ ' ಎ '

ವಿಟಮಿನ್ ' ಎ ' ನ ಮಹತ್ವ ತಿಳಿಯಬೇಕೆಂದರೆ ಇದೊಂದು ಬಹಳ ಮುಖ್ಯವಾದ ವಿಟಮಿನ್ ಆಗಿದ್ದು ಮಗುವಿನ ದೇಹ ಬೆಳವಣಿಗೆಯಲ್ಲಿ ತನ್ನದೇ ಆದ ಪಾತ್ರ ವಹಿಸುತ್ತದೆ . ಮಗುವಿನ ಮೂಳೆಗಳು , ಹಲ್ಲುಗಳು , ರೋಗ ನಿರೋಧಕ ಶಕ್ತಿ ಮತ್ತು ಕಣ್ಣಿನ ದೃಷ್ಟಿ ಬೆಳೆಯಬೇಕೆಂದರೆ ವಿಟಮಿನ್ ' ಎ ' ಬೇಕೇಬೇಕು . ನೀವು ತಿನ್ನುವ ಮಾವಿನ ಹಣ್ಣಿನಲ್ಲಿ ಇಂತಹದೊಂದು ಶಕ್ತಿ ಅಡಗಿ ಕುಳಿತಿದೆ .

ಮಾವಿನಹಣ್ಣು ಮಗುವಿನ ಮೆದುಳು ಮತ್ತು ನರಮಂಡಲವನ್ನು ಬೆಳೆಯುವಂತೆ ಮಾಡುತ್ತದೆ

ಹುಟ್ಟುತ್ತಿರುವ ಮಗುವಿಗೆ ಬುದ್ಧಿ ಶಕ್ತಿ ಮತ್ತು ಜ್ಞಾಪಕ ಶಕ್ತಿ ಸಂವಹನ ಮತ್ತು ಸಂಚಲನ ಶಕ್ತಿ ಇರಬೇಕೆಂದರೆ ಮೆದುಳು ಮತ್ತು ಅದರಿಂದ ಇಡೀ ದೇಹಕ್ಕೆ ಬೆಂಬಲವಾಗಿ ಇರುವಂತಹ ನರ ಮಂಡಲ ಅತ್ಯಗತ್ಯ . ಮಾವಿನ ಹಣ್ಣು ಈ ವಿಷಯದಲ್ಲಿ ಬಹಳ ಸಹಾಯ ಮಾಡುತ್ತದೆ.

ಮಾವಿನ ಹಣ್ಣು ಟಾಕ್ಸಿಕೋಸಿಸ್ ಸಮಸ್ಯೆಯನ್ನು ತಡೆಯುತ್ತದೆ

ಮಾವಿನ ಹಣ್ಣು ಟಾಕ್ಸಿಕೋಸಿಸ್ ಸಮಸ್ಯೆಯನ್ನು ತಡೆಯುತ್ತದೆ

ಗರ್ಭಿಣಿಯರಲ್ಲಿ ದೇಹದಲ್ಲಾಗುವ ಬದಲಾವಣೆಯಿಂದ ಅಥವಾ ಹಾರ್ಮೋನ್ ಬದಲಾವಣೆಯಿಂದ ಅಥವಾ ಒತ್ತಡದ ಸಂಧರ್ಭದಿಂದ ರಕ್ತದ ಒತ್ತಡ ಹೆಚ್ಚಾಗುತ್ತದೆ . ಇದರಿಂದ ಹೊಟ್ಟೆಯಲ್ಲಿ ಶ್ವಾಸನಾಳದ ತೊಂದರೆ ಹೆಚ್ಚಾಗುತ್ತದೆ . ಮಾವಿನ ಹಣ್ಣಿನಲ್ಲಿ ಮೆಗ್ನೀಷಿಯಂ ಅಂಶ ಈ ಸಮಸ್ಯೆಗೆ ತೆರೆ ಎಳೆಯುತ್ತದೆ .

ಮಾವಿನ ಹಣ್ಣು ಅನಾರೋಗ್ಯ ಪಿಡುಗನ್ನು ನಿವಾರಿಸುತ್ತದೆ

ಮಾವಿನ ಹಣ್ಣು ಅನಾರೋಗ್ಯ ಪಿಡುಗನ್ನು ನಿವಾರಿಸುತ್ತದೆ

ಗರ್ಭಿಣಿಯರಿಗೆ ಬೆಳ ಬೆಳಗ್ಗೆ ಏನೋ ಒಂದು ತರ ಆಯಾಸ. ಯಾವ ಕೆಲಸ ಕಾರ್ಯದಲ್ಲೂ ಆಸಕ್ತಿಯೇ ಇಲ್ಲದಂತೆ ಭಾಸವಾಗುತ್ತದೆ . ಮಾವಿನ ಹಣ್ಣಿನಲ್ಲಿ ಹುಳಿ ಮತ್ತು ಸಿಹಿ ಯ ಮಿಶ್ರಣವಿರುವುದರಿಂದ ಮತ್ತು ವಿಟಮಿನ್ ' ಬಿ 6 ಇರುವುದರಿಂದ ನಿಮ್ಮನ್ನು ಚಿಲ್ ಮಾಡುತ್ತದೆ ಮತ್ತು ದಿನ ಪೂರ್ತಿ ಸಕ್ರೀಯ ವಾಗುವಂತೆ ದೇಹಕ್ಕೆ ಶಕ್ತಿ ಮತ್ತು ನವೋಲ್ಲಾಸ ಕೊಡುತ್ತದೆ . ಮಾವಿನ ಹಣ್ಣು ತಿನ್ನಿ . ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯ ಕಾಪಾಡಿಕೊಳ್ಳಿ .

English summary

Is mango good for a pregnant woman?

Mango is a favorite fruit of pregnant women, as it has a slightly sour and, at the same time, sweet taste. Mango reduces the feeling of nausea that pregnant women often face. Besides, it is recommended to eat this fruit, because the mango is very rich in vitamins, minerals, such as iron, vitamins B6, C, A, B9, potassium, and magnesium.
X
Desktop Bottom Promotion