Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ಗರ್ಭಧಾರಣೆ ವೇಳೆ ಕಂಡುಬರುವ ಸಂಕೋಚನಗಳು
ಗರ್ಭಧಾರಣೆ ಎನ್ನುವುದು ವಿಶೇಷ ಅನುಭವವಾದರೂ ಈ ವೇಳೆ ಆಗುವಂತಹ ಕೆಲವು ದೈಹಿಕ ಹಾಗೂ ಮಾನಸಿಕ ಬದಲಾವಣೆ ಬಗ್ಗೆ ಗಮನಹರಿಸಬೇಕು. ಅದರಲ್ಲೂ ಮೊದಲ ಸಲ ಗರ್ಭಧಾರಣೆ ಮಾಡುವವರು ಕೆಲವೊಂದು ಎಚ್ಚರಿಕೆ ವಹಿಸಬೇಕು. ಇದರಲ್ಲಿ ಪ್ರಮುಖವಾಗಿ ಸಂಕೋಚನ. ಹೆರಿಗೆ ನೋವಿಗೆ ಮೊದಲು ಈ ಸಂಕೋಚನವು ಕಾಣಿಸಿಕೊಳ್ಳುವುದು. ಆದರೆ ಗರ್ಭಧಾರಣೆ ವೇಳೆ ಕೂಡ ನಿಮಗೆ ಕೆಲವೊಂದು ಸಲ ಸಂಕೋಚನದ ಅನುಭವವಾಗುವುದು. ಆದರೆ ಇದು ನಿಜವಾಗಿಯೂ ಹೆರಿಗೆಗೆ ಮೊದಲು ಬರುವಂತಹ ಸಂಕೋಚನವಲ್ಲ.
ಆದರೆ ನಿಜವಾದ ಸಂಕೋಚನ ಯಾವುದು ಎಂದು ನೀವು ತಿಳಿಯುವುದು ಅತೀ ಅಗತ್ಯ. ಯಾಕೆಂದರೆ ಕೆಲವೊಂದು ಸಲ ಅಕಾಲಿಕ ಹೆರಿಗೆಯಾಗುವ ಸಂಭವಿರುವ ಕಾರಣದಿಂದ ನೀವು ವೈದ್ಯರನ್ನು ಸಂಪರ್ಕಿಸಬಹುದು. ಅದರಲ್ಲೂ ಮೊದಲ ಸಲ ಗರ್ಭಧಾರಣೆ ಮಾಡುವವರಿಗೆ ಇದು ಅತೀ ಅಗತ್ಯ. ಈ ಲೇಖನದಲ್ಲಿ ವಿವಿಧ ರೀತಿಯ ಸಂಕೋಚನದ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಗರ್ಭಧಾರಣೆಯ ವಿವಿಧ ಹಂತದಲ್ಲಿ ಇದು ಕಂಡುಬರುವುದು. ಇದನ್ನು ತಿಳಿಯಲು ಮುಂದೆ ಓದುತ್ತಾ ಸಾಗಿ....
ಮೊದಲು ತ್ರೈಮಾಸಿಕದಲ್ಲಿ ಸಂಕೋಚನ
ಮೊದಲ ತ್ರೈಮಾಸಿಕದಲ್ಲಿ ನಿಮಗೆ ಲಘು ಸಂಕೋಚನದ ಅನುಭವವಾಗುವುದು. ಋತುಚಕ್ರದ ವೇಳೆ ಆಗುವಂತಹ ಸೆಳೆತದಂತಹ ಅನುಭವ ಈ ಸಂಕೋಚನ ವೇಳೆ ಆಗಬಹುದು. ಗರ್ಭಕಂಠದ ಬಳಸದೆ ಇರುವ ಪದರವನ್ನು ತೆಗೆದು ಮುಂದಿನ ತಿಂಗಳಿಗೆ ಗರ್ಭಕೋಶವನ್ನು ತಯಾರು ಮಾಡುವ ಕಾರಣ ಋತುಚಕ್ರದ ವೇಳೆ ಸೆಳೆತ ಉಂಟಾಗುವುದು. ಮೊದಲ ತ್ರೈಮಾಸಿಕದಲ್ಲಿ ಕುಗ್ಗುವಿಕೆ ಉಂಟಾದಾಗ ನೀವು ಬಯಬೀಳಬಹುದು. ಇದು ಗರ್ಭಪಾತವೆಂದು ನಿಮಗನಿಸಬಹುದು. ಆದರೆ ಬೆಳೆಯುತ್ತಿರುವ ಭ್ರೂಣಕ್ಕಾಗಿ ಗರ್ಭವು ಹಿಗ್ಗುವ ಕಾರಣದಿಂದಾಗಿ ಇಂತಹ ಸೆಳೆತ ಉಂಟಾಗುವುದು. ಇದು ಗರ್ಭಕೋಶದ ಅಸ್ಥಿರಜ್ಜುಗಳು ಎಳೆಯಲ್ಪಡುವ ಕಾರಣ ಹೀಗೆ ಆಗುವುದು.
ನಿರ್ಜಲೀಕರಣದಿಂದ ಕುಗ್ಗುವಿಕೆ
ಗರ್ಭಧಾರಣೆ ಸಂದರ್ಭದಲ್ಲಿ ಹೆಚ್ಚು ನೀರು ಕುಡಿಯಬೇಕು ಎನ್ನುವುದು ಹೊಸ ವಿಚಾರವೇನಲ್ಲ. ಇದು ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಮಾತ್ರವಲ್ಲದೆ ನಿಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುವುದು. ದೇಹವು ನಿರ್ಜಲೀಕರಣಕ್ಕೆ ಒಳಗಾದರೆ ಆಗ ಗರ್ಭಕೋಶದ ಸ್ನಾಯುಗಳು ಕುಗ್ಗಲು ಆರಂಭವಾಗುವುದು. ಗರ್ಭಧಾರಣೆಯ ಆರಂಭದಲ್ಲಿ ನಿಮಗೆ ಸಂಕೋಚನದ ಅನುಭವವಾಗಿದ್ದರೆ ಆಗ ಇದು ನಿರ್ಜಲೀಕರಣದಿಂದ ಆಗಿರಬಹುದು. ನೀರು ಹೆಚ್ಚಿಗೆ ಕುಡಿದು ಸಮಸ್ಯೆ ಬಗೆಹರಿಯುತ್ತದೆಯಾ ನೋಡಿ. ಕೆಫಿನ್ ಮತ್ತು ಸಕ್ಕರೆ ಜಾಸ್ತಿ ಇರುವ ಪಾನೀಯ ಸೇವನೆ ಮಾಡಬೇಡಿ. ಇದು ನಿರ್ಜಲೀಕರಣ ಹೆಚ್ಚಿಸುವುದು.

ಮಲಬದ್ಧತೆಯಿಂದ ಸಂಕೋಚನ
ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಹೆಚ್ಚಿನ ಮಹಿಳೆಯರಿಗೆ ಮಲಬದ್ಧತೆಯು ಕಾಣಿಸಿಕೊಳ್ಳುವುದು. ಮಲಬದ್ಧತೆಯಿಂದಾಗಿ ಗ್ಯಾಸ್ ನಿಂದ ಸಂಕೋಚನವು ನೋವಿನಿಂದ ಕೂಡಿರುವುದು. ತರಕಾರಿ, ಹಣ್ಣುಗಳನ್ನು ಹೆಚ್ಚು ಸೇವಿಸಿ ಮತ್ತು ಸರಿಯಾಗಿ ನೀರು ಕುಡಿಯಿರಿ. ಮಲಬದ್ಧತೆಯು ನಿಮಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಲಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ನೆರವು ಪಡೆಯಿರಿ.
ಮೊದಲ ತ್ರೈಮಾಸಿಕದ ಸಂಕೋಚನ
ಮೊದಲು ತ್ರೈಮಾಸಿಕದಲ್ಲಿ ಸಂಕೋಚನವು ರಕ್ತಸ್ರಾವದೊಂದಿಗೆ ಆಗುತ್ತಲಿದ್ದರೆ ಆಗ ನೀವು ಎಚ್ಚರಿಕೆ ವಹಿಸಬೇಕು. ಇದರ ಬಗ್ಗೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಮಾತನಾಡಬೇಕು. ಅಲ್ಪ ಪ್ರಮಾಣದಲ್ಲಿ ರಕ್ತಸ್ರಾವವಾಗುವುದು ಸಾಮಾನ್ಯ. ಆದರೆ ಇದು ಅತಿಯಾದರೆ ಆಗ ನೀವು ಎಚ್ಚರಿಕೆ ವಹಿಸಬೇಕು ಮತ್ತು ಇದು ಗರ್ಭಪಾತದ ಲಕ್ಷಣವಾಗಿರಬಹುದು.
ಬ್ರಾಕ್ಸ್ಟನ್ ಹಿಕ್ಸ್ ಸಂಕೋಚನಗಳು
ಮೊದಲ ತ್ರೈಮಾಸಿಕದ ಬಳಿಕ ನಿಮಗೆ ಬ್ರಾಕ್ಸ್ಟನ್ ಹಿಕ್ಸ್ ಸಂಕೋಚನಗಳು ಕಾಣಿಸಿಕೊಳ್ಳುವುದು. ಈ ಸಂಕೋಚನವು ಹೊಟ್ಟೆಯನ್ನು ಹೊಟ್ಟೆಯನ್ನು ಬಿಗಿತಗೊಳಿಸುವುದು ಮತ್ತು ಸಂಕೋಚನವು ತೀವ್ರವಾದಾಗ ಬಿಗಿತ ಕಡಿಮೆಯಾಗುವುದು. ಇದು ನೋವಿಲ್ಲದ್ದು ಮತ್ತು ಎರಡನೇ ತ್ರೈಮಾಸಿಕದಲ್ಲಿ ಲಘುವಾಗಿ ಕಂಡುಬರುವುದು. ಗರ್ಭಧಾರಣೆ ಸಮಯ ಸಾಗಿದಂತೆ ಇದರ ತೀವ್ರತೆ ಹೆಚ್ಚಾಗುವುದು. ನೈಜ ಸಂಕೋಚನ ಮತ್ತು ಈ ಸಂಕೋಚನಕ್ಕೆ ಇರುವ ವ್ಯತ್ಯಾಸವೆಂದರೆ ಇದು ಮನಬಂದಂತೆ ಬರುವುದು ಮತ್ತು ನಿಯಮಿತವಾಗಿ ಇರಲ್ಲ.
ಸೆಕ್ಸ್ ಬಳಿಕದ ಸಂಕೋಚನ
ವೈದ್ಯರು ಕಡೆಗಣಿಸಲು ಸೂಚಿಸಿರುವ ಹೊರತಾಗಿ ಗರ್ಭಧಾರಣೆ ವೇಳೆ ನೀವು ಸೆಕ್ಸ್ ನಲ್ಲಿ ತೊಡಗಿಕೊಳ್ಳಬಾರದೇನೆಂದಿಲ್ಲ. ಆದರೆ ಸೆಕ್ಸ್ ಬಳಿಕ ಸಂಕೋಚನ ಉಂಟಾಗುವುದು ಎಂದು ತಿಳಿಯಬೇಕು. ವೀರ್ಯದಲ್ಲಿ ಇರುವಂತಹ ಪ್ರೊಸ್ಟಗ್ಲಾಂಡಿನ್ ಇದಕ್ಕೆ ಕಾರಣವಾಗುವುದು. ಇದರ ಬಗ್ಗೆ ಚಿಂತೆ ಮಾಡಬಾರದು. ಇದು ಕಡಿಮೆಯಾಗಲು ನೀವು ಸ್ವಲ್ಪ ಆರಾಮ ಮಾಡಿ.
ಹೆರಿಗೆ ಸಂಕೋಚನದ ಪೂರ್ವಲಕ್ಷಣ
ನಿಮ್ಮ ಹೆರಿಗೆಗೆ ದಿನವು ಹತ್ತಿರ ಬರುತ್ತಿರುವಾಗ ಮೂರನೇ ತ್ರೈಮಾಸಿಕದ ಕೊನೇ ಹಂತದಲ್ಲಿ ಹೆರಿಗೆ ಸಂಕೋಚನದ ಪೂರ್ವಲಕ್ಷಣದ ಸಂಕೋಚನವು ಕಾಣಿಸಿಕೊಳ್ಳುವುದು. ಈ ಸಂಕೋಚನವು ಗರ್ಭಕಂಠವನ್ನು ತೆಳುಗೊಳಿಸುವ ಕೆಲಸ ಮಾಡುವುದು ಮತ್ತು ಹೆರಿಗೆಗೆ ಸಜ್ಜುಗೊಳಿಸುವುದು. ಕೆಲವರಲ್ಲಿ ಇದು ಲಘುವಾಗಿ ಕಂಡುಬಂದರೆ ಇನ್ನು ಕೆಲವರಲ್ಲಿ ತೀವ್ರವಾಗಿರುವುದು. ಇದನ್ನೇ ಕೆಲವರು ನೈಜ ಸಂಕೋಚನ ಎಂದುಕೊಳ್ಳುವರು. ಇದು ಕೆಲವು ಗಂಟೆಗಳ ಕಾಲ ಅಥವಾ ಕೆಲವು ದಿನ ಇರಬಹುದು. ಹೆರಿಗೆ ಸಂಕೋಚನದ ಪೂರ್ವಲಕ್ಷಣವು ತೀವ್ರವಾಗಿರದೆ ಸ್ವಲ್ಪ ಸೆಳೆತ ಉಂಟು ಮಾಡುವುದು. ಇದಕ್ಕೆ ಯಾವುದೇ ಸ್ಪಷ್ಟತೆಯಿಲ್ಲ ಮತ್ತು ನಿಮಗೆ ಬೆನ್ನಿನಲ್ಲಿ ಒತ್ತಡ ಕಾಣಿಸಬಹುದು.
ಆರಂಭಿಕ ಹೆರಿಗೆ ಸಂಕೋಚನ
ಇದು ನಿಜವಾದ ಹೆರಿಗೆ ಸಂಕೋಚನದ ಲಕ್ಷಣವಾಗಿದೆ. ಇದು ತುಂಬಾ ತೀವ್ರ ಹಾಗೂ ನೋವಿನಿಂದ ಕೂಡಿರುವುದು. ಇದು ನಿಯಮಿತವಾಗಿರುವುದು ಮತ್ತು ಪ್ರತೀ ಸಂಕೋಚನದ ಸಮಯವು ಹೆಚ್ಚಾಗುತ್ತಾ ಹೋಗುವುದು. ಗುಲಾಬಿ ಬಣ್ಣದ ಡಿಸ್ಚಾರ್ಚ್ ಕೂಡ ಆಗಬಹುದು. ನಿಮ್ಮ ಹೆರಿಗೆ ಸಮಯ ಬಂದಿದೆ ಎಂದು ಇದು ತೋರಿಸುವುದು. ನೀವು ಆಸ್ಪತ್ರೆಯಲ್ಲಿ ವೈದ್ಯರನ್ನು ಕರೆಯಿರಿ ಮತ್ತು ಹೆರಿಗೆಗೆ ತಯಾರಾಗಿ. ಆಸ್ಪತ್ರೆಯಿಂದ ಹೊರಗಿದ್ದರೆ ನೀವು ಹೆಚ್ಚು ಸಮಯ ಕಾಯಬಾರದು.
ಸಕ್ರಿಯ ಹೆರಿಗೆ
ಈ ಹಂತದಲ್ಲಿ ಗರ್ಭಕಂಠವು ದುರ್ಬಲವಾಗುವುದು. ಸಂಕೋಚನವು ಈ ವೇಳೆ ಪ್ರಬಲ ಹಾಗೂ ದೀರ್ಘವಾಗಿರುವುದು. ನೋವಿನ ಕಡೆ ಗಮನಹರಿಸುವ ಬದಲು ನೀವು ಸರಿಯಾಗಿ ಉಸಿರಾಡಿ. ನಿಮ್ಮ ಸುತ್ತಲು ಏನಾಗುತ್ತದೆ ಎಂದು ನೋಡಿ, ವೈದ್ಯರು ಹೇಳುವ ಮಾತುಗಳನ್ನು ಕೇಳಿ. ಬೇಗನೆ ನೀವು ಮಗುವನ್ನು ಪಡೆಯಲಿದ್ದೀರಿ ಎಂದು ನೆನಪು ಮಾಡಿಕೊಳ್ಳಿ.
ಪ್ರಸವದ ವೇಳೆ ಸಂಕೋಚನ
ಈ ವೇಳೆ ಸಂಕೋಚನವು ತುಂಬಾ ತೀವ್ರವಾಗಿರುವುದು. ಇದು ತುಂಬಾ ದೀರ್ಘವಾಗಿರಲ್ಲ ಮತ್ತು ಅರ್ಧಗಂಟೆಗಿಂತ ಹೆಚ್ಚಿರಲ್ಲ. ಗರ್ಭಕಂಠವು ಈ ವೇಳೆ ಸಂಪೂರ್ಣವಾಗಿ ಹಿಗ್ಗಿರುವುದು. ತಳ್ಳಲು ನೀವು ಹೆಚ್ಚು ಗಮನಹರಿಸಬೇಕು. ಪ್ರತೀ ಸಂಕೋಚನ ವೇಳೆ ನೀವು ತಳ್ಳಬೇಕು ಮತ್ತು ವೈದ್ಯರಲ್ಲಿ ಈ ಬಗ್ಗೆ ಕೇಳಿ. ತಕ್ಷಣ ಮಗು ಹೊರಗೆ ಬರುವುದು ಮತ್ತು ಹೆರಿಗೆ ಪೂರ್ಣವಾಗುವುದು.
ಹೆರಿಗೆ ಬಳಿಕದ ಸಂಕೋಚನ
ಮಗು ಹೊರಬರುತ್ತಲಿದ್ದರೂ ಕೆಲವೊಂದು ಸಲ ಸಂಕೋಚನ ಕಾಣಿಸಿಕೊಳ್ಳೂವುದು. ದೇಹದಿಂದ ಜರಾಯು ತೆಗೆದುಹಾಕಲು ನೆರವಾಗಲು ನೀವು ಸಂಕೋಚನ ಅನುಭವಿಸುವಿರಿ. ಮಗುವನ್ನು ತೆಗೆಯಲು ನರ್ಸ್ ಗಳು ನಿಮ್ಮ ಹೊಟ್ಟೆಗೆ ಮಸಾಜ್ ಮಾಡಬಹುದು. ಒಮ್ಮೆ ಹೊರಗೆ ಬಂದ ಬಳಿಕ ಜರಾಯು ಸರಿಯಾಗಿದೆಯಾ ಎಂದು ವೈದ್ಯರು ಪರೀಕ್ಷೆ ಮಾಡುವರು. ನೀವು ಮಗುವನ್ನೇ ನೋಡುತ್ತಿರುವ ಕಾರಣ ಇದೆಲ್ಲವೂ ನಿಮಗೆ ಕಾಣಿಸದು.
ನರ್ಸಿಂಗ್ ವೇಳೆ ಸಂಕೋಚನ
ಹೆರಿಗೆ ಪೂರ್ಣಗೊಂಡಿದೆ. ಆದರೆ ಗರ್ಭಕೋಶವು ಮೊದಲಿನ ಸಾಮಾನ್ಯ ಗಾತ್ರಕ್ಕೆ ಹೋಗಬೇಕು. ಇದಕ್ಕೆ ಸಂಕೋಚನವು ನೆರವಾಗುವುದು. ನರ್ಸಿಂಗ್ ವೇಳೆ ಬಿಡುಗಡೆಗೊಂಡ ಹಾರ್ಮೋನುಗಳು ಸಂಕೋಚನವನ್ನು ಉತ್ತೇಜಿಸುವುದು. ಇದು ನಿಮಗೆ ಋತುಚಕ್ರದ ಸೆಳೆತದಂತೆ ಆಗಬಹುದು ಮತ್ತು ನೋವಿನಿಂದ ಕೂಡಿರಬಹುದು.



Click it and Unblock the Notifications











