ಗರ್ಭಾವಸ್ಥೆಯ ಪರೀಕ್ಷೆಯ ಬಗ್ಗೆ ಮಹಿಳೆಯರು ತಿಳಿದಿರಬೇಕಾದ ಸಂಗತಿಗಳು

Subscribe to Boldsky

ಗರ್ಭಾವಸ್ಥೆ ಎಂಬುದು ಹೆಣ್ಣಿನ ಜೀವನದಲ್ಲಿ ಬರುವ ಅತ್ಯಮೂಲ್ಯ ಕ್ಷಣವಾಗಿದೆ. ಈ ಸಮಯದಲ್ಲಿ ಗರ್ಭಿಣಿಯ ದೇಹವು ಸೂಕ್ಷ್ಮವಾಗಿದ್ದು ಮನೆಯವರ ಅಕ್ಕರೆ, ಆರೈಕೆ ಕಾಳಜಿ ಅತಿಮುಖ್ಯವಾಗಿರುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ಸ್ತ್ರೀಯರು ಹೆಚ್ಚಿನ ಕಾಳಜಿಯನ್ನು ಹೊಂದಿದಲ್ಲಿ ಹೆರಿಗೆಯ ಸಮಯದಲ್ಲಿ ಬಂದೊದಗುವ ಅಪಾಯಗಳನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ ಎಂಬುದು ವೈದ್ಯ ಲೋಕ ಹಾಗೂ ಹಿರಿಯರು ತಿಳಿಸುವ ಅಭಿಪ್ರಾಯವಾಗಿದೆ. ನೀವು ಗರ್ಭವತಿ ಹೌದೇ ಅಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈಗ ಹಲವಾರು ಪರೀಕ್ಷೆಗಳನ್ನು ನಡೆಸಬಹುದಾಗಿದೆ. ವೈದ್ಯರ ಬಳಿಗೆ ಹೋಗುವುದಕ್ಕಿಂತ ಮುಂಚೆ ನೀವು ಗರ್ಭ ಪರೀಕ್ಷಕ ಕಿಟ್‌ಗಳನ್ನು ಬಳಸಿಕೊಂಡು ನಿಮ್ಮ ಗರ್ಭಾವಸ್ಥೆಯನ್ನು ಅರಿತುಕೊಳ್ಳಬಹುದಾಗಿದೆ.

ಆದರೆ ಈಗ ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಕಿಟ್‌ಗಳು ಕೂಡ ಲಭ್ಯವಿದೆ. ದುಬಾರಿ ಬೆಲೆಯ ಕಿಟ್‌ನಿಂದ ಫಲಿತಾಂಶ ಖಚಿತವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಏನಿದ್ದರೂ ಖಚಿತವಾದ ಪರೀಕ್ಷೆಯನ್ನು ನಡೆಸಿ ಅದರ ಮೂಲಕ ಗರ್ಭಾವಸ್ಥೆಯ ಸ್ಥಿತಿಗತಿಗಳನ್ನು ತಿಳಿದುಕೊಳ್ಳಬಹುದಾಗಿದೆ. ಹಿಂದೆ ಎಲ್ಲಾ ಗರ್ಭಿಣಿ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರಿಗೆ ಬರುತ್ತಿದ್ದ ವಾಂತಿ, ಮುಟ್ಟಿನ ತಿಂಗಳಿನ ತ್ಯಜಿಸುವಿಕೆ ಮೊದಲಾದ ದೈಹಿಕ ಬದಲಾವಣೆಗಳಿಂದ ತಿಳಿದುಕೊಳ್ಳಬಹುದಾಗಿತ್ತು. ಆದರೆ ಈಗ ಒಮ್ಮೊಮ್ಮೆ ಈ ದೈಹಿಕ ಬದಲಾವಣೆಗಳು ಕೂಡ ಗರ್ಭಾವಸ್ಥೆಯನ್ನು ಖಚಿತಪಡಿಸುವುದಿಲ್ಲ. ಒಮ್ಮೊಮ್ಮೆ ಪರೀಕ್ಷೆಗಳನ್ನು ನಡೆಸಿಕೊಂಡೇ ಇದನ್ನು ಅರಿತುಕೊಳ್ಳಬೇಕಾಗಿದೆ. ಹಾಗಿದ್ದರೆ ಗರ್ಭಾವಸ್ಥೆಯನ್ನು ನೀವು ಪರೀಕ್ಷಿಸಿಕೊಳ್ಳುತ್ತಿದ್ದೀರಿ ಎಂದಾದಲ್ಲಿ ತೆಗೆದುಕೊಳ್ಳಬೇಕಾದ ಭದ್ರತಾ ಸುರಕ್ಷತಾ ಕ್ರಮಗಳೇನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

ಹೆಚ್ಚು ಪಾವತಿಸುವುದು ಎಂದರೆ ಉತ್ತಮ ಫಲಿತಾಂಶ ಎಂದಲ್ಲ

ಹೆಚ್ಚು ಪಾವತಿಸುವುದು ಎಂದರೆ ಉತ್ತಮ ಫಲಿತಾಂಶ ಎಂದಲ್ಲ

ದುಬಾರಿ ಬೆಲೆಯ ಪರೀಕ್ಷಕವನ್ನು ನೀವು ಬಳಸುತ್ತಿದ್ದೀರಿ ಎಂದಾದರೆ ನೀವು ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ ಎಂದಲ್ಲ. ಇದು ಕೂಡ ಕೆಲವೊಂದು ಋಣಾತ್ಮಕ ಅಂಶಗಳನ್ನು ಒಳಗೊಂಡಿರುತ್ತವೆ. ಅದನ್ನು ಅರಿತುಕೊಂಡು ಪರೀಕ್ಷೆಯನ್ನು ನಡೆಸಬೇಕಾಗುತ್ತದೆ. ನೀವು ಖರೀದಿಸಿರುವ ಕಿಟ್‌ ದಿನಾಂಕ ಕಾಲಾವಧಿಯನ್ನು ಮೀರಿದೆಯೇ ಎಂಬುದನ್ನು ಕಂಡುಕೊಳ್ಳಿ. ಅಂತೆಯೇ ಕಿಟ್‌ನಲ್ಲಿ ನಮೂದಿಸಿರುವ ಸೂಚನೆಗಳನ್ನು ಸರಿಯಾಗಿ ಓದಿ.

ವಿಶ್ರಾಂತಿ ಅತ್ಯಗತ್ಯ

ವಿಶ್ರಾಂತಿ ಅತ್ಯಗತ್ಯ

ನಿಮ್ಮ ಮುಂಜಾನೆಯ ಮೂತ್ರಶಂಕೆಯ ಸಮಯದಲ್ಲಿ ಈ ಪರೀಕ್ಷೆಯನ್ನು ನಡೆಸಿಕೊಳ್ಳಿ. ನಿಮ್ಮ ಮೊದಲನೆಯ ಮೂತ್ರಶಂಕೆಯ ಸಮಯದಲ್ಲಿ ಈ ಪರೀಕ್ಷೆಯನ್ನು ನಡೆಸುವುದು ನಿಖರವಾಗಿರುತ್ತದೆ. ಆದ್ದರಿಂದ ನೀವು ಪರೀಕ್ಷೆಯನ್ನು ನಡೆಸುವ ಮೊದಲು ನಿಮ್ಮ ಮೊದಲನೆಯ ಮೂತ್ರಶಂಕೆ ಇದಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

Most Read: ಗರ್ಭಿಣಿಯರು ಅತಿಯಾಗಿ ಆಲೂಗಡ್ಡೆ ಚಿಪ್ಸ್ ತಿನ್ನಬಾರದು, ಆರೋಗ್ಯಕ್ಕೆ ತುಂಬಾ ಅಪಾಯಕಾರಿ

ಫಲಿತಾಂಶ ಸುಳ್ಳಾಗಿರಬಹುದು

ಫಲಿತಾಂಶ ಸುಳ್ಳಾಗಿರಬಹುದು

ಗರ್ಭಾವಸ್ಥೆಯ ಪರೀಕ್ಷೆಗಳು 97 ಶೇಕಡಾದಿಂದ 99 ಶೇಕಡಕ್ಕೆ ನಿಖರವಾಗಿರುತ್ತವೆ, ಉಳಿದ ಮೂರು ರಿಂದ ಒಂದು ಶೇಕಡಾ ದೋಷವನ್ನು ಸಂಭಾವ್ಯ ಅಂಚು ಎಂದು ತಪ್ಪಾಗಿ ಧನಾತ್ಮಕ ಅಥವಾ ಸುಳ್ಳು ಋಣಾತ್ಮಕವಾಗಿರುತ್ತದೆ. ನೀವು ಕೆಲವು ವಿಧದ ಔಷಧಿಗಳಾದ ಟ್ರಾನ್ಕ್ವಿಲೈಜರ್ಸ್, ಫಲವತ್ತತೆ ಔಷಧಗಳು ಅಥವಾ ವಿರೋಧಿ ಕಾವಲುಕಲ್ಲುಗಳು ಇರುವಾಗ ಈ ಸಂದರ್ಭಗಳು ಆಗಿರಬಹುದು. ನೀವು 'ರಾಸಾಯನಿಕ ಗರ್ಭಧಾರಣೆಯನ್ನು' ಹೊಂದಿದ್ದರೆ, ಇದು ವೀರ್ಯ ತಾಂತ್ರಿಕವಾಗಿ ಮೊಟ್ಟೆಯನ್ನು ಫಲವತ್ತಾಗಿಸುತ್ತದೆ ಎಂದು ಅರ್ಥೈಸಬಹುದು, ಆದರೆ ಗರ್ಭಧಾರಣೆ ಮುಂದುವರೆಯುವುದಿಲ್ಲ. ಇದು ಮೊದಲ ಬಾರಿಗೆ ಗರ್ಭಧಾರಣೆಯ 50 ರಿಂದ 60 ರಷ್ಟು ಸಂಭವಿಸುತ್ತದೆ.

ನಿಮ್ಮ ಮಗುವಿನ ಲಿಂಗವನ್ನು ತಿಳಿಸುವುದಿಲ್ಲ

ನಿಮ್ಮ ಮಗುವಿನ ಲಿಂಗವನ್ನು ತಿಳಿಸುವುದಿಲ್ಲ

ನಿಮ್ಮ ಮೂತ್ರಶಂಕೆಯ ಸಮಯದಲ್ಲಿ ಮಾಡುವ ಪರೀಕ್ಷೆಯನ್ನು ನಿಮ್ಮ ಗರ್ಭದಲ್ಲಿರುವುದು ಹೆಣ್ಣೇ ಗಂಡೇ ಎಂಬುದನ್ನು ತಿಳಿಯಲು ಸಾಧ್ಯವಿಲ್ಲ. ಅದಾಗ್ಯೂ ಪರೀಕ್ಷೆಯನ್ನು ಅನುಸರಿಸಿಕೊಂಡು ಕೆಲವೊಂದು ಬಣ್ಣಗಳನ್ನು ತಿಳಿಸುತ್ತಾರೆ. ಆದರೆ ಇದನ್ನು ನಂಬಬೇಡಿ.

ಅವಧಿ ಮುಗಿಯಬಹುದು

ಅವಧಿ ಮುಗಿಯಬಹುದು

ಇತರ ಪರೀಕ್ಷಕಗಳಂತೆಯೇ ಇದು ಕೂಡ ಅವಧಿ ಮೀರುತ್ತದೆ. ಇದರಲ್ಲಿ ಬಳಸಿರುವ ರಸಾಯನಿಕ ಹೆಚ್ಚು ಸಮಯ ಇರುವುದಿಲ್ಲ. ಆದ್ದರಿಂದ ಕಿಟ್ ಅನ್ನು ಖರೀದಿಸುವ ಮುನ್ನ ಅದರಲ್ಲಿ ನಮೂದಿಸಿರುವ ದಿನಾಂಕವನ್ನು ಕಂಡುಕೊಳ್ಳಿ.

ಸಾಕಷ್ಟು ನೀರು ಕುಡಿಯದಿರುವುದು

ಸಾಕಷ್ಟು ನೀರು ಕುಡಿಯದಿರುವುದು

ಗರ್ಭಾವಸ್ಥೆ ಪರೀಕ್ಷೆಯನ್ನು ನಡೆಸುವ ಮುನ್ನ ಸಾಕಷ್ಟು ನೀರು ಕುಡಿಯದಿರಿ. ಇದರಿಂದ ನಿಮ್ಮ ಪರೀಕ್ಷೆ ನಶಿಸಿ ಹೊಗಬಹುದು ಮತ್ತು ನಿಖರ ಫಲಿತಾಂಶಗಳನ್ನು ನೀಡದಿರಬಹುದು.

ಇತರ ಅಂಶಗಳು ಪರೀಕ್ಷೆಗೆ ಹಾನಿ ಮಾಡಬಹುದು

ಇತರ ಅಂಶಗಳು ಪರೀಕ್ಷೆಗೆ ಹಾನಿ ಮಾಡಬಹುದು

ಫಲವತ್ತತೆ ಔಷಧಗಳನ್ನುಮಹಿಳೆಯರು ತೆಗೆದುಕೊಂಡಾಗ ಅದರಲ್ಲಿ ಎಚ್‌ಸಿಜಿ ಇರುತ್ತದೆ ಅಂತೆಯೇ ಸಾಮಾನ್ಯ ಔಷಧ, ಜನನ ನಿಯಂತ್ರಣ ಮಾತ್ರೆಗಳು ಮತ್ತು ಮದ್ಯ ಪರೀಕ್ಷೆಯ ಮೇಲೆ ಪರಿಣಾಮ ಬೀರುವುದಿಲ್ಲ.

ಮಸುಕಾದ ರೇಖೆಗಳು ತಪ್ಪು ಎಂದರ್ಥವಲ್ಲ

ಮಸುಕಾದ ರೇಖೆಗಳು ತಪ್ಪು ಎಂದರ್ಥವಲ್ಲ

ಎರಡು ರೇಖೆಗಳನ್ನು ಹೊಂದಿರುವ ಟ್ಯೂಬ್‌ನಲ್ಲಿ ಒಂದು ಮಸುಕಾಗಿದ್ದರೆ ಅದು ಗೊಂದಲವನ್ನುಂಟು ಮಾಡಬಹುದು. ಮಸುಕಾದ ರೇಖೆ ಕೂಡ ಗರ್ಭಾವಸ್ಥೆಯನ್ನು ಸೂಚಿಸುತ್ತದೆ ಅಂತೆಯೇ ಈ ಸಮಯದಲ್ಲಿ ನಿಮ್ಮ ಮಹಿಳಾ ತಜ್ಞರನ್ನು ಭೇಟಿ ಮಾಡಿಕೊಳ್ಳಿ.

Most Read: ಗರ್ಭಿಣಿಯರ ಹೊಟ್ಟೆಯ ಮೇಲೆ ಕಾಣಿಸಿಕೊಳ್ಳುವ ಕಪ್ಪು ರೇಖೆ! ಯಾಕೆ ಹೀಗೆ?

ಎಚ್‌ಸಿಜಿ ಎಂದರೇನು?

ಎಚ್‌ಸಿಜಿ ಎಂದರೇನು?

ನೀವು ಗರ್ಭಿಣಿಯಾಗಿದ್ದಾಗ ನಿಮ್ಮ ದೇಹವು ಬಿಡುಗಡೆ ಮಾಡುವ ಹಾರ್ಮೋನ್ ಇದಾಗಿದೆ. ನೀವು ಗರ್ಭಿಣಿಯಾದಾಗ ಇದು ಮೂತ್ರ ಮತ್ತು ರಕ್ಷ ಪರೀಕ್ಷೆಯಲ್ಲಿ ತಿಳಿದುಕೊಳ್ಳ ಬಹುದು. ಪ್ಲಸೆಂಟಾದಲ್ಲಿ ರಚನೆಯಾದ ಸೆಲ್‌ಗಳಿಂದ ಎಚ್‌ಸಿಜಿ ನಿರ್ಮಾಣವಾಗಿದೆ. ಇದು ಫಲವತ್ತಾದ ನಂತರ ಗರ್ಭಾಶಯದ ಗೋಡೆಗೆ ಅಂಟಿಕೊಂಡಿರುವ ಮೊಟ್ಟೆಯನ್ನು ಪೋಷಿಸುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    Things women should know about pregnancy tests

    The first sign was, obviously, the missed periods, which could also be due to many other reasons. This shot in the dark changed as technology evolved. Having changed from critical tests and ultrasounds to a mini test kit, the latter is all that you need now to know whether you are pregnant or not. But how accurate are these pregnancy test kits? How safe is it to rely on them? To solve these confusions, here are certain important things you should know about pregnancy tests
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more