Latest Updates
-
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ!
ಇಂತಹ ಲಕ್ಷಣಗಳಿಂದ ಗರ್ಭಿಣಿಯಾಗಿದ್ದನ್ನು ಮುಟ್ಟು ನಿಲ್ಲುವ ಮುನ್ನವೇ ತಿಳಿಯಬಹುದು!
ಮಹಿಳೆಯೋರ್ವಳು ಗರ್ಭಿಣಿಯಾಗಿ ತಾಯಿಯಾಗುವ ಸಮಯ ಆಕೆಯ ಜೀವನದ ಸ್ಮರಣೀಯ ಕಾಲಘಟ್ಟವಾಗಿರುತ್ತದೆ. ಮಹಿಳೆ ಗರ್ಭಿಣಿಯಾದಾಗ ದೈಹಿಕವಾಗಿ ಸಹಜವಾಗಿಯೇ ಹಲವಾರು ಬದಲಾವಣೆಗಳಾಗುತ್ತವೆ.

ಯಾವೆಲ್ಲ ಪೂರ್ವ ಮುನ್ಸೂಚನೆಗಳಿಂದ ಗರ್ಭಿಣಿಯಾಗಿರುವುದನ್ನು ಅರಿತು ಕೊಳ್ಳಬಹುದು ಎಂಬ ಬಗ್ಗೆ ಹಾಗೂ ಮುಟ್ಟು ನಿಲ್ಲುವ ಮೊದಲೇ ಕಾಣಿಸಿಕೊಳ್ಳುವ ಯಾವ ಲಕ್ಷಣಗಳಿಂದ ಗರ್ಭಿಣಿಯಾಗಿರುವ ಬಗ್ಗೆ ತಿಳಿಯಬಹುದು ಎಂಬ ಬಗ್ಗೆ ಈ ಅಂಕಣದಲ್ಲಿ ತಿಳಿಸಿದ್ದೇವೆ.

ಗರ್ಭಿಣಿಯಾಗಿರುವ ಈ ಲಕ್ಷಣಗಳನ್ನು ಪರಿಶೀಲಿಸಿ
ಸಾಮಾನ್ಯವಾಗಿ ಮುಟ್ಟು ನಿಲ್ಲುವಿಕೆಯನ್ನು ಗರ್ಭಿಣಿಯಾಗಿರುವ ಪ್ರಥಮ ಲಕ್ಷಣವಾಗಿ ಪರಿಗಣಿಸಲಾಗುತ್ತದೆ. ಕೆಲ ಬಾರಿ ಗರ್ಭ ಧರಿಸಿರುವಿಕೆಯನ್ನು ಖಚಿತ ಪಡಿಸಲು ಸಂಪೂರ್ಣ ಒಂದು ತಿಂಗಳವರೆಗೆ ಕಾಯಬೇಕಾಗುತ್ತದೆ. ಇಂಥ ಸಂದರ್ಭ ಅನಿರೀಕ್ಷಿತವಾಗಿ ಎದುರಾದಲ್ಲಿ ತಾಯಿಯಾಗುವ ಹೆಣ್ಣು ಮಗಳು ಕೆಲಕಾಲ ಆತಂಕ ಮತ್ತು ಒತ್ತಡಗಳನ್ನು ಅನುಭವಿಸುವಂತಾಗುತ್ತದೆ. ಆದರೆ ಮುಟ್ಟು ನಿಲ್ಲುವ ಮೊದಲೇ ಕಾಣಿಸಿಕೊಳ್ಳುವ ಕೆಲ ಲಕ್ಷಣಗಳಿಂದ ನೀವು ತಾಯಿಯಾಗುತ್ತಿರುವಿರಿ ಎಂಬುದನ್ನು ತಿಳಿಯಬಹುದು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹೌದು, ಇದು ನಿಜ. ಈ ಕೆಳಗೆ ತಿಳಿಸಲಾದ ಪ್ರಮುಖ ಲಕ್ಷಣಗಳ ಮೂಲಕ ನೀವು ಗರ್ಭಿಣಿಯಾಗಿರುವುದನ್ನು ತಿಳಿಯಬಹುದು

ಸ್ತನಗಳ ದೈಹಿಕ ಲಕ್ಷಣಗಳ ಬದಲಾವಣೆ
ಯಾವುದೇ ಚಿಕ್ಕ ಸ್ಪರ್ಶಕ್ಕೂ ಸ್ತನಗಳು ಅತಿ ಸೂಕ್ಷ್ಮವಾಗಿ ಸ್ಪಂದಿಸಲಾರಂಭಿಸಿದರೆ ಇದು ಗರ್ಭಿಣಿಯಾಗಿರುವ ಲಕ್ಷಣವಾಗಿರುತ್ತದೆ. ಗರ್ಭ ಧರಿಸುವಿಕೆ ಆರಂಭದ ಹಂತದಲ್ಲಿ ಸ್ತನಗಳ ಜೀವಕೋಶಗಳಲ್ಲಿ ಹೆಚ್ಚು ಪ್ರಮಾಣದ ರಕ್ತ ಪರಿಚಲನೆಯಿಂದ ಜೀವಕೋಶಗಳಲ್ಲಿ ಸೆನ್ಸಿಟಿವಿಟಿ (ಸಂವೇದನೆ) ಹೆಚ್ಚಾಗುತ್ತದೆ ಹಾಗೂ ಸ್ತನಗಳ ಗಾತ್ರ ಹೆಚ್ಚಾಗುತ್ತದೆ. ಅಲ್ಲದೆ ಇವು ಮೊದಲಿಗಿಂತ ಹೆಚ್ಚು ಮೃದುವಾಗುತ್ತವೆ ಹಾಗೂ ಕೆಲವೊಮ್ಮೆ ನೋವು ಸಹ ಕಾಣಿಸಿಕೊಳ್ಳಬಹುದು.

ಬದಲಾಗುವ ಆಹಾರ ಕ್ರಮ
ಒಮ್ಮೆಲೇ ಆಹಾರ ಕ್ರಮದಲ್ಲಿ ಬದಲಾವಣೆ ಕಂಡುಬಂದಲ್ಲಿ ಅದು ಗರ್ಭಿಣಿಯಾಗುತ್ತಿರುವ ಲಕ್ಷಣವಾಗಿರಬಹುದು. ಈ ಹಂತದಲ್ಲಿ ದೇಹದಲ್ಲಿ ಓಸ್ಟ್ರೋಜೆನ್ ಎಂಬ ಹಾರ್ಮೋನ್ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತದೆ. ಇದರಿಂದ ರುಚಿ ಗ್ರಹಿಸುವ ಅಂಗಗಳಲ್ಲಾಗುವ ಬದಲಾವಣೆಯಿಂದ ಆಹಾರ ಶೈಲಿಯೂ ಬದಲಾಗುತ್ತದೆ. ಕೆಲ ರೀತಿಯ ಆಹಾರ ಪದಾರ್ಥಗಳು ವಾಕರಿಕೆ ತರಿಸಬಹುದು, ಇನ್ನು ಕೆಲ ಆಹಾರಗಳು ಇಷ್ಟವಾಗಬಹುದು ಹಾಗೂ ಹಸಿವು ಹೆಚ್ಚಾಗಿ ಕೆಲ ನಿರ್ದಿಷ್ಟ ಆಹಾರವನ್ನು ಸೇವಿಸುವ ಬಯಕೆಗಳುಂಟಾಗುತ್ತವೆ. ಮುಟ್ಟು ನಿಲ್ಲುವ ಮೊದಲೇ ರುಚಿ ಗ್ರಹಿಕೆಯಲ್ಲಿ ವ್ಯತ್ಯಾಸಗಳುಂಟಾಗುತ್ತವೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಲಾಗದಿದ್ದರೂ ಈ ಬದಲಾವಣೆಗಳು ಗರ್ಭ ಧರಿಸುವಿಕೆಯನ್ನು ಪುಷ್ಟೀಕರಿಸುತ್ತವೆ. ಇಂಥ ಬದಲಾವಣೆಗಳು ಕಂಡುಬಂದಲ್ಲಿ ಅವು ಇನ್ನೇನು ಮುಟ್ಟು ನಿಲ್ಲುವ ಲಕ್ಷಣಗಳಾಗಿರಬಹುದು.

ದೇಹದ ಭಾಗಗಳಲ್ಲಿ ಬಿಗಿತ ಕಂಡು ಬರುವಿಕೆ
ಮುಟ್ಟಾಗುವ ಸಂದರ್ಭದಲ್ಲಿ ಮಾತ್ರ ದೇಹದ ಕೆಲ ಭಾಗಗಳಲ್ಲಿ ಬಿಗಿತ ಕಂಡುಬರುತ್ತದೆ ಎಂಬ ಗ್ರಹಿಕೆ ತಪ್ಪಾಗಿದೆ. ಬಿಗಿತ ಉಂಟಾದರೆ ಅದು ಗರ್ಭಿಣಿಯಾಗುತ್ತಿರುವ ಪ್ರಥಮ ಲಕ್ಷಣವಾಗಿರಬಹುದು. ಗರ್ಭಾಶಯದಲ್ಲಿ ಭ್ರೂಣದ ಬೆಳವಣಿಗೆಯಿಂದ ಸಹ ದೇಹದಲ್ಲಿ ಬಿಗಿತದ ಅನುಭವವಾಗಬಹುದು.

ರಕ್ತಸ್ರಾವ
ಗರ್ಭ ಧರಿಸುವಿಕೆಯ ಆರಂಭದ ಹಂತದಲ್ಲಿ ಕೆಲ ಬಾರಿ ಮೂತ್ರದೊಂದಿಗೆ ಅಲ್ಪ ಪ್ರಮಾಣದ ರಕ್ತ ಹೋಗಬಹುದು. ಅಂಡಾಣು ಫಲವತ್ತಾಗುವ ಸಮಯದಲ್ಲಿ ಅದು ಗರ್ಭಕೋಶಕ್ಕೆ ತನ್ನನ್ನು ತಾನು ಬೆಸೆದುಕೊಳ್ಳುವುದರಿಂದ ಅಲ್ಪ ಪ್ರಮಾಣದ ರಕ್ತ ಹೋಗುವಿಕೆ ಅತ್ಯಂತ ಸಹಜವಾದ ಪ್ರಕ್ರಿಯೆಯಾಗಿದೆ. ಮುಟ್ಟಿನ ಸಮಯದಲ್ಲಿ ಹೋಗುವ ರಕ್ತಕ್ಕಿಂತಲೂ ಇದು ಕಡಿಮೆ ಗಾಢ ವರ್ಣದ್ದಾಗಿರುತ್ತದೆ.

ಆಯಾಸವಾಗುವಿಕೆ
ಗರ್ಭಿಣಿಯಾದಾಗ ಆಯಾಸ ಹಾಗೂ ಸುಸ್ತು ಕಾಣಿಸಿಕೊಳ್ಳುವುದು ಸಾಮಾನ್ಯ. ಹಾರ್ಮೋನ್‌ಗಳ ಬಿಡುಗಡೆಯ ವ್ಯತ್ಯಾಸದ ಮೂಲಕ ಮುಂದಿನ ಗರ್ಭಧಾರಣೆಯ ಕಾಲಾವಧಿಯ ಸಲುವಾಗಿ ದೇಹ ತನ್ನನ್ನು ತಾನು ಸಜ್ಜುಗೊಳಿಸಲಾರಂಭಿಸುತ್ತದೆ. ದೇಹದಲ್ಲಿ ಪ್ರೊಜೆಸ್ಟಿರೋನ್ ಹಾರ್ಮೋನ್ ಪ್ರಮಾಣ ಹೆಚ್ಚಾಗುವುದರಿಂದ ಆಯಾಸ ಹಾಗೂ ಸುಸ್ತು ಅನುಭವವಾಗುತ್ತದೆ.

ವಾಕರಿಕೆ
ವಾಕರಿಕೆ ಬಂದಂತಾಗುವುದು ಗರ್ಭಧಾರಣೆಯ ಅತ್ಯಂತ ಸಾಮಾನ್ಯ ಲಕ್ಷಣವಾಗಿದೆ. ಗರ್ಭಧಾರಣೆಯ 6ನೇ ವಾರದ ಆಸುಪಾಸಿನಲ್ಲಿ ಹೆಣ್ಣುಮಕ್ಕಳು ವಾಕರಿಕೆ ಮತ್ತು ಬೆಳಗ್ಗಿನ ಆಯಾಸ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಆದಾಗ್ಯೂ ತಾಯಿಯಾಗಲಿರುವವಳಿಗೆ ಈ ಅವಧಿಗೆ ಮುನ್ನ ಸಹ ವಾಕರಿಕೆಯ ಅನುಭವವಾಗಬಹುದು.



Click it and Unblock the Notifications











